ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಪ್ರೇಮಿಗಳೇ, ಮಂಡ್ಯದಲ್ಲಿ ಒಂದುವಾರ ಸರ್ವಜ್ಞನ ಪುಸ್ತಕ ಮೇಳ

By ಮೈಸೂರು ಪ್ರತಿನಿಧಿ
|
Google Oneindia Kannada News

ಮಂಡ್ಯ,ಏಪ್ರಿಲ್,01: 'ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ರಸಿಕನಲ್ಲದವನ ಬರಿಮಾತು ಕಿವಿಯೊಳ್ಕೂರ್ದಸಿಯು ಬಡಿದಂತೆ... ಮಾತು ಬಲ್ಲಾಂತಗೆ ಮಾತೊಂದು ಮಾಣಿಕವು, ಮಾತ ತಾನರಿಯದ ಅಧಮಗೆ ಮಾಣಿಕವು ತೂತು ಬಿದ್ದಂತೆ'...ಈ ಸಾಲುಗಳು ಯಾರದು ಎಂದು ನೆನಪಾಗಿರಬೇಕಲ್ವಾ? ನಿಜ ಇವು ಸರ್ವಜ್ಞನ ವಚನದ ಸಾಲು

ಪುಸ್ತಕ ಪ್ರೇಮಿ ಅಂಕೇಗೌಡ ಅವರು ತ್ರಿಪದಿಗಳ ಬ್ರಹ್ಮ ಸರ್ವಜ್ಞ ಅವರ ಜಯಂತಿ ಅಂಗವಾಗಿ ಮಂಡ್ಯದ ಪಾಂಡವಪುರದ ವಿಶ್ವೇಶ್ವರನಗರ ಬಡಾವಣೆಯಲ್ಲಿರುವ ತಮ್ಮ ಪುಸ್ತಕದ ಮನೆಯಲ್ಲಿ ಸರ್ವಜ್ಞರ ಕೃತಿಗಳ ಪ್ರದರ್ಶನ ಏರ್ಪಡಿಸಿದ್ದು, ಇಂದಿನಿಂದ ಒಂದು ವಾರ ಕಾಲ ಪುಸ್ತಕಗಳು ಲಭ್ಯವಾಗಲಿವೆ.[2014 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ]

Ankegowda arranges Sarvajna books exhibition in Mandya

ಅಂಕೇಗೌಡರು ಪುಸ್ತಕದ ಮೇಲೆ ಅಪಾರ ಪ್ರೀತಿಯುಳ್ಳವರು. ಜನರಿಗೂ ಜ್ಞಾನ ಭಂಡಾರ ನೀಡಬೇಕೆಂಬ ಹಂಬಲದವರಾದ ಇವರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪುಸ್ತಕ ಪ್ರದರ್ಶನ ಏರ್ಪಡಿಸಿ ಶ್ಲಾಘನೆಗೆ ಒಳಗಾಗಿದ್ದಾರೆ.

ಯಾವ ಯಾವ ಪುಸ್ತಕಗಳು ಲಭ್ಯವಾಗಲಿವೆ?

ವಚನಕಾರ ಸರ್ವಜ್ಞನ ಜೀವನ ಚರಿತ್ರೆ, ಸರ್ವಜ್ಞ ಅವರ ವಚನಗಳು, ಸರ್ವಜ್ಞ ಸಂಪದ, ಸಮಾಜ ಸುಧಾರಣೆ ಸರ್ವಜ್ಞ, ಬಸವ ವಚನ ಸಂಗ್ರಹ, ಸರ್ವಜ್ಞ ಕವಿ, ಸರ್ವಜ್ಞನ ಸಮಾಜ ದರ್ಶನ ಹಾಗೂ ಸಾಹಿತ್ಯ ಸತ್ವ, ಸರ್ವಜ್ಞ ವಚನಾಮೃತ, ಸರ್ವರ ಸರ್ವಜ್ಞ, ಸರ್ವಜ್ಞ ವಚನಗಳನ್ನು ತಮಿಳಿಗೆ ಅನುವಾದ ಮಾಡಿರುವ ಪುಸ್ತಕಗಳು, ಸರ್ವಜ್ಞನ ದೃಷ್ಠಿಯಲ್ಲಿ ಹೆಣ್ಣು ಎಂಬ ಪುಸ್ತಕಗಳು ಸೇರಿದಂತೆ ವಿವಿಧ ಮಾದರಿಯಲ್ಲಿ ಅನೇಕ ಲೇಖಕರು ಬರೆದಿರುವ ನೂರಾರು ಪುಸ್ತಕಗಳು ಪ್ರದರ್ಶನದಲ್ಲಿವೆ.[ಭಗವದ್ಗೀತೆಯಲ್ಲಿನ ತಾರತಮ್ಯದ ರೋಗದ ಗಡ್ಡೆ ಬಿಸಾಕಬೇಕಿದೆ: ದೇವನೂರು]

Ankegowda arranges Sarvajna books exhibition in Mandya

ಸರ್ವಜ್ಞನ ವಚನದ ಬಗ್ಗೆ ತಿಳಿಯದವರೇ ವಿರಳ. ಆದರೆ ಸರ್ವಜ್ಞ ಯಾರು ಆತನ ಹುಟ್ಟೂರು, ಇನ್ನಿತರೆ ವಿಷಯದ ಬಗ್ಗೆ ಗೊಂದಲವಿದೆ. ಸರ್ವಜ್ಞರ ಕುರಿತಂತೆ ಅನೇಕ ಕೃತಿಗಳು ಹೊರಬಂದಿದ್ದು, ಆ ಬಗ್ಗೆ ಸುಮಾರು 150ಕ್ಕೂ ಹೆಚ್ಚಿನ ಪುಸ್ತಕಗಳು ಪ್ರದರ್ಶನದಲ್ಲಿಡಲಾಗಿದೆ.

English summary
Ankegowda set stage for Sarvajna books echibition for one week at Vishweshwara Nagar, Pandavapura, Mandya. Sarvajna sampada, Samaja Sudharane Sarvajna, Basava Vachana Sangraha, Sarvajna Samaja Darshana and Sahitya Satva etc books available here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X