• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಕ್‌ ಡೌನ್‌: ಸರಕಾರದ ಪರವಾಗಿ ಗೋವು ಸಾಕುತ್ತಿರುವ ಗೋಶಾಲೆಗಳ ಆರ್ಥಿಕ ಸಮಸ್ಯೆ

|

ಮಂಗಳೂರು, ಏಪ್ರಿಲ್ 16: ದೇಶವ್ಯಾಪಿ ಲಾಕ್‌ ಡೌನ್‌ನಿಂದ ಸರಕಾರದ ಪರವಾಗಿ ಗೋವುಗಳನ್ನು ಸಾಕುತ್ತಿರುವ ಗೋಶಾಲೆಗಳು ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ.

ಈ ಬಗ್ಗೆ ಸಚಿವ ಪ್ರಭು ಚೌಹಾಣ್ ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಪಶು ಸಂಗೋಪನೆ ಬೋರ್ಡಿನ ಸದಸ್ಯರಾದ ವಿನಯ್ ಶೆಟ್ಟಿ, ಸರಕಾರದ ನೆರವನ್ನು ಕೋರಿದ್ದಾರೆ. ಅವರು ಬರೆದಿರುವ ಪತ್ರದ ಸಾರಾಂಸ ಇಂತಿದೆ:

ಕೊರೊನಾಗೆ ಲಾಕ್‌ಡೌನ್ ವಿರಾಮದ ಬಟನ್ ಅಷ್ಟೇ ಎಂದ ರಾಹುಲ್ ಗಾಂಧಿ

'ಲಾಕ್‌ ಡೌನ್‌ನಿಂದ ಜನರಿಗಾಗುತ್ತಿರುವ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿರುವ ಸರಕಾರಕ್ಕೆ ಅಭಿನಂದನೆಗಳು, ಹೈನುಗಾರರಿಗೆ ಆಗುತ್ತಿರುವ ಸಮಸ್ಯೆ ನೀಗಲು ಕೆಎಂಎಫ್ ನಿಂದ ಹಾಲು ಖರೀದಿಸುವುದು ಸ್ತುತ್ಯಾರ್ಹ.

"ಇದೇ ಸಂದರ್ಭದಲ್ಲಿ ಕೆಲವೊಂದು ಗೋಶಾಲೆಗಳು ತೀರ್ವ ಆರ್ಥಿಕ ಸಮಸ್ಯೆಯನ್ನು ಎದುರುಸುತ್ತಿರುವುದು ತಮ್ಮ ಗಮನಕ್ಕೆ ತರುತ್ತಾ, ಅದಕ್ಕೆ ಪರಿಹಾರ ಒದಗಿಸಲು ಮನವಿ ಮಾಡುತ್ತಿದ್ದೇನೆ. ಅಕ್ರಮ ಗೋಸಾಗಾಟದ ಸಂದರ್ಭದಲ್ಲಿ ಪೋಲಿಸರು ವಶಪಡಿಸಿದ ಗೋವುಗಳನ್ನು ನ್ಯಾಯಲಯಗಳು ಸರಕಾರದ ಪರವಾಗಿ ಸಾಕುವಂತೆ ಗೋಶಾಲೆಗಳಿಗೆ ಹಸ್ತಾಂತರಿಸಿದೆ".

"ಗೋಶಾಲೆಗಳಲ್ಲಿನ ಅಂತಹ ಗೋವುಗಳಿಗೆ ಸಂಪೂರ್ಣ ಜವಬ್ದಾರಿ ರಾಜ್ಯ ಸರ್ಕಾರದ್ದೆಂದು ಸುಪ್ರೀಂಕೋರ್ಟ್ ಕ್ರಿಮಿನಲ್ ಅಪೀಲ್ ನಂ.283-287/2002 ಇದರಲ್ಲಿ ಆದೇಶ ನೀಡಿದೆ, ಆದಾಗ್ಯೂ ಸರಕಾರ ಇಂತಹ ಗೋಶಾಲೆಗಳಿಗೆ ಇದುವರೆಗೂ ಆರ್ಥಿಕ ನೆರವು ನೀಡಲಿಲ್ಲ".

ಡಿಕೆಶಿ ಹೇಳಿಕೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು

"ಗೋ ಶಾಲೆಯಲ್ಲಿ 500-1000 ಕ್ಕೂ ಹೆಚ್ಚು ಗೋವುಗಳಿದ್ದರೂ ಗರಿಷ್ಠ 200 ಗೋವುಗಳಿಗೆ, ಜಾನುವಾರು ಒಂದಕ್ಕೆ ಕೇವಲ ರೂ 17.50 ಅನುದಾನ ಕೊಡುತ್ತಿದೆ. ಉಳಿದ ಹಣವನ್ನು ಗೋಶಾಲೆಯವರು ಸಾರ್ವಜನಿಕರಿಂದ ದೇಣಿಗೆ ಪಡೆದು ಗೋವುಗಳ ಪಾಲನೆ ಮಾಡುತ್ತಾ ಬಂದಿದ್ದಾರೆ".

"ಆದರೆ, ಈಗ ಲಾಕ್‌ ಡೌನ್ ಸಂದರ್ಭದಲ್ಲಿ ಸಾರ್ವಜನಿಕ ದೇಣಿಗೆ ಪೂರ್ತಿ ನಿಂತು ಹೋಗಿದೆ. ಆದುದರಿಂದ, ಗೋಶಾಲೆಗಳು ಸಂಪೂರ್ಣವಾಗಿ ಕಂಗಲಾಗಿದೆ, ಮೇವು ತೆಗೆದುಕೊಳ್ಳಲು ಹಣವಿಲ್ಲ, ಮುಂದಿನ ಆರು ತಿಂಗಳು ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ".

ಆದುದರಿಂದ ಸರಕಾರದ ಪರವಾಗಿ ಸಾಕುವ ಗೋವುಗಳಿಗೆ ಸಂಪೂರ್ಣ ಖಚ್ಚುವೆಚ್ಚ ಸರಕಾರವೇ ಭರಿಸಬೇಕು. ದೊಡ್ಡ ಜಾನುವಾರುಗಳಿಗೆ ದಿನವೊಂದಕ್ಕೆ ರೂ 300/- ಹಾಗೂ ಕರುಗಳಿಗೆ ದಿನಕ್ಕೆ ರೂ 100/- ರಂತೆ ಹಾಗೂ ರಾಜ್ಯದ ರೈತರ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗಿದ್ದು ಇವುಗಳಿಗೂ ತಕ್ಷಣ ಲಾಕ್‌ ಡೌನ್ ವಿಶೇಷ ಅನುದಾನ ನೀಡಬೇಕಾಗಿ ವಿನಂತಿ" - ಇದು ವಿನಯ್ ಶೆಟ್ಟಿಯವರು ಸರಕಾರಕ್ಕೆ ಬರೆದ ಪತ್ರ.

English summary
Animal Husbandry Board Requesting Financial Assistance From Government During Lock Down Period
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X