ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತಕುಮಾರ್ ಹೆಗಡೆಯವರಿಗೆ ವೃದ್ಧೆ ಎಸೆದ ಪ್ರಶ್ನೆ ಏನು?

By Lekhaka
|
Google Oneindia Kannada News

Recommended Video

ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಅನಂತ್ ಕುಮಾರ್ ಹೆಗಡೆಗೆ ಶಾಕ್ | Oneindia Kannada

ಅಂಕೋಲಾ, ಮಾರ್ಚ್ 04 : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಶನಿವಾರ ನಡೆದ ಬಿಜೆಪಿಯ ಜನಸುರಕ್ಷಾ ಯಾತ್ರೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರ ಮಾತಿಗೆ ವೃದ್ಧ ಮಹಿಳೆಯೊಬ್ಬಳು ಸಭಿಕರೆದುರೆ ಪ್ರಶ್ನೆ ಎಸೆದ ಘಟನೆ ನಡೆದಿದೆ.

ಜನಸುರಕ್ಷಾ ಯಾತ್ರೆಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅನಂತಕುಮಾರ ಹೆಗಡೆ ಅವರು ಮಾತನಾಡುತ್ತಿದ್ದರು. 'ಸಿದ್ದರಾಮಯ್ಯ ಅವರು ಭ್ರಷ್ಟಾಚಾರವನ್ನು ನಡೆಸುತ್ತ ರಾಜ್ಯದ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಧೈರ್ಯ ಇದ್ದರೆ ನಮ್ಮೆದುರಿಗೆ ಬಂದು ಉತ್ತರ ನೀಡಿ' ಎಂದು ಹೆಗಡೆಯವರು ಹೇಳಿದರು.

ಮತ್ತೆ ವಿವಾದಿತ ಹೇಳಿಕೆ ನೀಡಿದ ಅನಂತ್‌ಕುಮಾರ್ ಹೆಗಡೆಮತ್ತೆ ವಿವಾದಿತ ಹೇಳಿಕೆ ನೀಡಿದ ಅನಂತ್‌ಕುಮಾರ್ ಹೆಗಡೆ

ಆವಾಗ ವೃದ್ಧ ಮಹಿಳೆಯೊಬ್ಬರು ಎದ್ದು ನಿಂತು, 'ನಿಮ್ಮ ಪ್ರಶ್ನೆಗೆ ನಾನು ಉತ್ತರ ನೀಡುತ್ತೇನೆ. ನೀವು ಸಿದ್ದರಾಮಯ್ಯ ಅವರಿಗೆ ಏನು ಸವಾಲು ಹಾಕುತ್ತೀರಿ?. ನಾನು ಅದಕ್ಕೆ ಉತ್ತರ ನೀಡುತ್ತೇನೆ. ಸಿದ್ದರಾಮಯ್ಯನಿಗೆ ಇಲ್ಲದೇ ಇರೋ ಧೈರ್ಯ ನಿಮಗೆ ಇದೆಯಾ?' ಎಂದು ಪ್ರಶ್ನಿಸಿದರು.

Angry woman questions Union minister Anant Kumar Hegde

ವೃದ್ಧೆಯ ಪ್ರಶ್ನೆ ಕೇಳಿದ ಅನಂತ್ ಕುಮಾರ್ ಹೆಗಡೆಯವರು ಕೂಡ ಒಂದು ಕ್ಷಣ ಕಾಲ ವಿಚಲಿತರಾದರು. ಕೆಲ ನಿಮಿಷ ವೇದಿಕೆ ಕೂಡ ಸ್ಥಬ್ದಗೊಂಡಿತು. ಪೊಲೀಸರು ಮಹಿಳೆಯನ್ನು ಸಮಾಧಾನಿಸಿ ಹೊರಗೆ ಕರೆದುಕೊಂಡು ಹೋದರು.

ಅಂಕೋಲಾ ತಾಲೂಕಿನ ಅವರ್ಸಾದ ಸುಶೀಲಾ ನಾಗಪ್ಪ ನಾಯ್ಕ ಅನಂತಕುಮಾರ್ ಹೆಗಡೆಯವರನ್ನು ಪ್ರಶ್ನಿಸಿದ ವೃದ್ಧ ಮಹಿಳೆ. ದೃಷ್ಟಿವಿಕಲಚೇತನ ಮಗ ಮಹೇಶ ನಾಗಪ್ಪ ನಾಯ್ಕನನ್ನು ಹೊಂದಿರುವ ಆಕೆ, ಕೇಂದ್ರ ಸರಕಾರದ ಯೋಜನೆಗಳ ಸೌಲಭ್ಯ ನೀಡುವಂತೆ ಕೇಳಲು ಸಭೆಗೆ ಆಗಮಿಸಿದ್ದರು.

ಮತ್ತೆ ಜಾತ್ಯಾತೀತರ ಬಗ್ಗೆ ಕುಹುಕವಾಡಿದ ಅನಂತ್‌ಕುಮಾರ್ ಹೆಗಡೆಮತ್ತೆ ಜಾತ್ಯಾತೀತರ ಬಗ್ಗೆ ಕುಹುಕವಾಡಿದ ಅನಂತ್‌ಕುಮಾರ್ ಹೆಗಡೆ

ಆದರೆ, ಸಚಿವ ಅನಂತಕುಮಾರ ಹೆಗಡೆ ಅವರನ್ನು ಭೇಟಿ ಮಾಡಲು ಬಿಜೆಪಿಯ ಕಾರ್ಯಕರ್ತರು ಹತ್ತಿರ ಬಿಡಲಿಲ್ಲ. ಇದರಿಂದಾಗಿ ವೇದಿಕೆಯ ಎದುರು ಕುಳಿತ ಆಕೆ, ಸಚಿವ ಅನಂತಕುಮಾರ ಕುಮಾರ ಹೆಗಡೆ ಅವರ ಭಾಷಣದ ವೇಳೆಯೇ ಪ್ರಶ್ನಿಸಿದ್ದಾರೆ.

English summary
Angry woman questions minister of State for Skill Development Anant Kumar Hegde in Ankola, Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X