ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ, ಮಗದೊಮ್ಮೆ 'ಭಿಕ್ಷೆ, ಸ್ವಾಭಿಮಾನ' ಪದ ಪ್ರಯೋಗಿಸಿದ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಮಾರ್ಚ್ 23: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಸೀಟು ಹೊಂದಾಣಿಕೆಯ ಬಿಸಿ ಪದೇಪದೇ ಮುಖ್ಯಮಂತ್ರಿಗಳಿಗೆ ತಟ್ಟುತ್ತಲೇ ಇದೆ ಎನ್ನುವುದು ಅವರು ನೀಡುತ್ತಿರುವ ಹೇಳಿಕೆಯಿಂದಲೇ ಅರ್ಥವಾಗುತ್ತಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಮೈತ್ರಿಧರ್ಮದ ಪ್ರಕಾರ ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದ ತುಮಕೂರು ಸೀಟಿನಲ್ಲಿ ಈ ಬಾರಿ ಜೆಡಿಎಎಸ್ ಸ್ಪರ್ಧಿಸುತ್ತಿದೆ. ಜೆಡಿಎಸ್ ವರಿಷ್ಠ ದೇವೇಗೌಡ್ರು ಸೋಮವಾರ (ಮಾ 25) ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಇದು, ಕಾಂಗ್ರೆಸ್ಸಿನ ಹಾಲೀ ಸಂಸದ ಮುದ್ದಹನುಮೇಗೌಡರನ್ನು ಕೆರಳಿಸಿದೆ.

ಮೋದಿ ಅಲೆ, ಸುನಾಮಿಯಾಗಿ ವ್ಯವಸ್ಥೆ ನಾಶ ಮಾಡಿದೆ: ಎಚ್ಡಿಕೆ ಮೋದಿ ಅಲೆ, ಸುನಾಮಿಯಾಗಿ ವ್ಯವಸ್ಥೆ ನಾಶ ಮಾಡಿದೆ: ಎಚ್ಡಿಕೆ

ಕಾಂಗ್ರೆಸ್ ವರಿಷ್ಠರ ನಿರ್ಧಾರಕ್ಕೆ ತಿರುಗಿಬಿದ್ದಿರುವ ಮುದ್ದಹನುಮೇಗೌಡ್ರು, ತಾನೂ ಸೋಮವಾರ ನಾಮಪತ್ರ ಸಲ್ಲಿಸುವುದಾಗಿ, ತಮ್ಮ ಕಾರ್ಯಕರ್ತರ ಸಭೆಯ ನಂತರ ಹೇಳಿದ್ದಾರೆ. ಇವರ ಈ ನಿರ್ಧಾರ ಜೆಡಿಎಸ್-ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Angry CM Kumaraswamy said, I am not going to beg anyone for support

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ, ಮುದ್ದಹನುಮೇಗೌಡರ ವಿಚಾರವನ್ನು ನನ್ನ ಬಳಿ ಯಾಕೆ ಪ್ರಸ್ತಾವಿಸುತ್ತಿದ್ದೀರಾ, ಹೋಗಿ ಕಾಂಗ್ರೆಸ್ ನವರನ್ನು ಕೇಳಿ. ನಾನಂತೂ ಸ್ವಾಭಿಮಾನ ಬಿಟ್ಟು, ಯಾರ ಮನೆಗೂ 'ಭಿಕ್ಷೆ' ಎತ್ತಲು ಹೋಗುವುದಿಲ್ಲ ಎಂದು ಮಾಧ್ಯಮದವರಿಗೆ ಖಾರವಾಗಿ ಉತ್ತರಿಸಿದ್ದಾರೆ.

ಮಂಡ್ಯ ಕಾಂಗ್ರೆಸ್ ಮುಖಂಡರಿಗೆ ಕುಮಾರಸ್ವಾಮಿ ಮಾತಿನ ಚಾಟಿ ಮಂಡ್ಯ ಕಾಂಗ್ರೆಸ್ ಮುಖಂಡರಿಗೆ ಕುಮಾರಸ್ವಾಮಿ ಮಾತಿನ ಚಾಟಿ

ಒಂದು ವೇಳೆ ಮುದ್ದಹನುಮೇಗೌಡರು ಕಣದಲ್ಲಿ ಇದ್ದದ್ದೇ ಆದ ಪಕ್ಷದಲ್ಲಿ ಜೆಡಿಎಸ್-ಕಾಂಗ್ರೆಸ್ ಜಂಟಿ ಅಭ್ಯರ್ಥಿ ದೇವೇಗೌಡರಿಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಯಿಲ್ಲದಿಲ್ಲ. ಇದು ವೋಟ್ ಡಿವೈಡ್ ಆಗಿ, ಬಿಜೆಪಿಗೆ ಲಾಭವಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ, ಸಿಎಂ ಸಿಟ್ಟಿನ ಈ ಹೇಳಿಕೆಯನ್ನು ನೀಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಕರ್ನಾಟಕ ಸಂಸದರಿಗೆ ಅನುದಾನ ಸಿಕ್ಕಿದ್ದೆಷ್ಟು, ಅವರು ಕ್ಷೇತ್ರದಲ್ಲಿ ಖರ್ಚು ಮಾಡಿದ್ದೆಷ್ಟು, ಉಳಿಸಿಕೊಂಡಿದ್ದೆಷ್ಟು?

ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಜರಿದ್ದರು. ಆಗಲೂ, ಕುಮಾರಸ್ವಾಮಿ, ನಾನು ಯಾರ ಮನೆಬಾಗಿಲಿಗೆ ಹೋಗಿ, 'ಭಿಕ್ಷೆ' ಎತ್ತುವುದಿಲ್ಲ ಎಂದು ಪರೋಕ್ಷವಾಗಿ ಚೆಲುವನಾರಾಯಣಸ್ವಾಮಿಯವರನ್ನು ಉದ್ದೇಶಿಸಿ ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.

English summary
Angry Karnataka Chief Minsiter HD Kumaraswamy said, I am not going to beg anyone for support. He said this statement after Tumakuru existing MP Mudda Hanumegowda deccided to contest in Tumakuru segment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X