ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ: ಇನ್ಮುಂದೆ ಕೆಲಸ ಕಡಿಮೆ ಆಗುತ್ತೆ

|
Google Oneindia Kannada News

Recommended Video

ಅಂಗನವಾಡಿ ಕಾರ್ಯಕರ್ತರಿಗೆ ಸಿಕ್ತು ಸರ್ಕಾರದಿಂದ ಸಿಹಿ ಸುದ್ದಿ | Oneindia Kannada

ಬೆಂಗಳೂರು, ಅಕ್ಟೋಬರ್ 26: ವೇತನ ಹೆಚ್ಚಳ ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ದು ನಿಮಗೆಲ್ಲಾ ತಿಳಿದೇ ಇದೆ.

ಹಾಗೆಯೇ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕೆಲಸ ಹೆಚ್ಚಾಗುತ್ತಿದ್ದು ಅದಕ್ಕೆ ಸಮನಾದ ವೇತನ ಸಿಗುತ್ತಿಲ್ಲ ಎನ್ನುವುದು ಇಷ್ಟು ದಿನ ಕೊರಗಾಗಿತ್ತು. ಇದೀಗ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕೆಲಸದ ಒತ್ತಡ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ.

ಬ್ಲೇಡ್‌ನಿಂದ ಬಾಲಕನ ಕತ್ತುಕೊಯ್ದ ಅಂಗನವಾಡಿ ಶಿಕ್ಷಕಿ ಬ್ಲೇಡ್‌ನಿಂದ ಬಾಲಕನ ಕತ್ತುಕೊಯ್ದ ಅಂಗನವಾಡಿ ಶಿಕ್ಷಕಿ

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಐಸಿಡಿಎಸ್ ನ 6 ಸೇವೆಗಳನ್ನು ಫಲಾನುಭವಿಗಳಿಗೆ ಒದಗಿಸುವುದಕ್ಕೆ ಮಾತ್ರ ಅಂಗನವಾಡಿ ಸಿಬ್ಬಂದಿಯನ್ನು ಸೀಮಿತಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಅ.20 ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಅಂಗನವಾಡಿಯಿಂದ ಗರ್ಭಿಣಿಯರಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಒದಗಿಸಲಾಗುತ್ತಿದೆ, ಜತೆಗೆ ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ಆರೋಗ್ಯ ಮತ್ತು ಪೌಷ್ಠಿಕತೆ, ಚುಚ್ಚುಮದ್ದು ನೀಡುವುದು ಸೇರಿದಂತೆ ಇದೀಗ ಕುಷ್ಠರೋಗ ಪತ್ತೆ ಪರಿಶೀಲನೆ ಕೆಲಸವನ್ನೂ ಅವರು ಮಾಡಬೇಕಿತ್ತು. ಇನ್ನುಮುಂದೆ ಸರ್ಕಾರ ನಿಗದಿತ ಸೇವೆಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿದೆ.

ಮಕ್ಕಳ ಜೊತೆ ಇರಬೇಕಾದವರು ಸಾರ್ವಜನಿಕರ ಮನೆ ಮುಂದೆ ಇರುತ್ತಿದ್ದರು

ಮಕ್ಕಳ ಜೊತೆ ಇರಬೇಕಾದವರು ಸಾರ್ವಜನಿಕರ ಮನೆ ಮುಂದೆ ಇರುತ್ತಿದ್ದರು

ಮಕ್ಕಳ ಜತೆ ಇರಬೇಕಾದ ಅಂಗನವಾಡಿ ಕಾರ್ಯಕರ್ತರು ಸಾರ್ವಜನಿಕರ ಮನೆ ಮುಂದೆ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲಸ ನಿಯೋಜನೆ ಮಾಡುತ್ತಿದ್ದು, ವಿಧವೆಯರ ಸರ್ವೆ, ಕುಷ್ಠರೋಗ ಪತ್ತೆ ಇತ್ಯಾಸಿ ಕಾರ್ಯಗಳಿಗೆ ಮಕ್ಕಳನ್ನು ಬಿಟ್ಟು ಮನೆಮನೆಗೆ ಅಲೆಯಬೇಕಿತ್ತು.

ಕಾರ್ಯಕರ್ತೆಯರಿಗೆ ಸಂತಸ

ಕಾರ್ಯಕರ್ತೆಯರಿಗೆ ಸಂತಸ

ಹೆಚ್ಚಿನ ಕೆಲಸಗಳಿಂದ ಬಿಡುಗಡೆ ಆಡಿರುವ ಈ ಆದೇಶದಿಂದ ಕಾರ್ಯಕರ್ತೆಯರ ಮುಖದಲ್ಲಿ ಸಂತಸ ಮೂಡಿದೆ. ಆದರೆ ಇವರನ್ನು ಬಳಸಿಕೊಂಡು ವಿವಿಧ ಕೆಲಸ ಮಾಡಿಸಿಕೊಳ್ಳುತ್ತಿದ್ದ ಇತರೆ ಇಲಾಖೆಗೆ ಸಂಕಷ್ಟ ಎದುರಾಗಿದೆ. ಒಟ್ಟಿನಲ್ಲಿ ಈವರೆಗೂ ನಾನಾ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಮಾಡುತ್ತಿದ್ದ ಅಂಗನವಾಡಿ ನೌಕರರಿಗೆ ಸಧ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'

ಅಂಗನವಾಡಿ ಶಿಕ್ಷಕರಿಗೆ ಬಯೋಮೆಟ್ರಿಕ್

ಅಂಗನವಾಡಿ ಶಿಕ್ಷಕರಿಗೆ ಬಯೋಮೆಟ್ರಿಕ್

ಅಂಗನವಾಡಿ ಶಿಕ್ಷಕಿಯರಿಗೆ ಇತರೆ ಇಲಾಖೆಗಳ ಕೆಲಸ ನೀಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಡ್ಡಿ ಆಗಬಾರದು, ಜತೆಗೆ ಅವರಲ್ಲಿ ಶಿಸ್ತು ಪಾಲನೆ ಆಗಬೇಕು ಎಂಬ ಕಾರಣಕ್ಕೆ ಶೀಘ್ರ ಮಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಮಾಡಲಾಗುತ್ತಿದೆ.

ಸಮಗ್ರಶಿಶು ಅಭಿವೃದ್ಧಿ ಯೋಜನೆ ಎಂದರೇನು?

ಸಮಗ್ರಶಿಶು ಅಭಿವೃದ್ಧಿ ಯೋಜನೆ ಎಂದರೇನು?

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ , ಸಹಾಯಕರ ಪರಣ ಪರಿಹಾರ ನಿಧಿ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯಗಳನ್ನು ಒಳಗೊಂಡಿರುತ್ತದೆ.
1- ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳ, ಗರ್ಭಿಣಿ, ಬಾಣಂತಿಯರ ಮತ್ತು ನ್ಯೂನ ಪೋಷಣೆಯುಳ್ಳ ಮಕ್ಕಳ ಪೌಷ್ಠಿಕತೆ ಮಟ್ಟವನ್ನು ಸುಧಾರಿಸುವುದು.

2-ಮಕ್ಕಳ ಮಾನಸಿಕ ಸಾಮಾಜಿಕ ಮತ್ತು ಭೌತಿಕ ಬೆಳವಣಿಗೆಗೆ ಬುನಾದಿ ಹಾÀಕುವುದು.

3- ಶಿಶು ಮರಣ ದರ, ಅಪೌಷ್ಠಿಕತೆ, ಕಾಯಿಲೆ ಪ್ರಮಾಣ ಹಾಗೂ ಮಕ್ಕಳು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವುದು.

4-ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಇತರೆ ಇಲಾಖೆಗಳೊಂದಿಗೆ ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸುವುದು.

5-ಪೌಷ್ಠಿಕಾಂಶ ಹಾಗೂ ಆರೋಗ್ಯ ಶಿಕ್ಷಣವನ್ನು ನೀಡುವುದರ ಮೂಲಕ ಮಕ್ಕಳ ಸಾಮಾನ್ಯ ಆರೋಗ್ಯ ಹಾಗೂ ಪೌಷ್ಠಿಕ ಮಟ್ಟವನ್ನು ಕಾಪಾಡುವ ಬಗ್ಗೆ ತಾಯಂದಿರ ಸಾಮಥ್ರ್ಯವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇಂಥ ಅಂಗನವಾಡಿಗೆ ಯಾವ ಧೈರ್ಯದಿಂದ ನಿಮ್ಮ ಮಕ್ಕಳನ್ನು ಕಳಿಸುತ್ತೀರಿ?! ಇಂಥ ಅಂಗನವಾಡಿಗೆ ಯಾವ ಧೈರ್ಯದಿಂದ ನಿಮ್ಮ ಮಕ್ಕಳನ್ನು ಕಳಿಸುತ್ತೀರಿ?!

English summary
Department of women and child welfare has been withdrawn Anganawadi workers from survey duties like epilepsy, widows survey and other works to relieve the burden on them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X