ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾಹ ನಿಶ್ಚಯವಾಗಿದ್ದ ಪೇದೆ ಗುಂಡಿಟ್ಟುಕೊಂಡು ಆತ್ಮಹತ್ಯೆ

By Super Admin
|
Google Oneindia Kannada News

Karnataka ANF Constable Albert D'souza Commit Suicide
ಉಡುಪಿ, ಜ.14: ವಿವಾಹ ನಿಶ್ಚಿತಾರ್ಥವಾಗಿದ್ದ ಪೇದೆಯೊಬ್ಬರು ಸೋಮವಾರ ಮಧ್ಯರಾತ್ರಿ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಬರ್ಟ್ ಡಿಸೋಜಾ (38) ಆತ್ಮಹತ್ಯೆ ಮಾಡಿಕೊಂಡ ಪೇದೆ.

ಅಲ್ಬರ್ಟ್ ಡಿಸೋಜಾ ಕೆಎಸ್ಆರ್ ಪಿಯ 7ನೇ ಬೆಟಾಲಿಯನ್ ಪೇದೆ. ಇವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಸಮೀಪ ಜಡ್ಡಿನಗದ್ದೆ ಬಳಿ ಕಾರ್ಯನಿರ್ವಹಿಸುವಾಗ ಕಾಡಿನ ಮಧ್ಯೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಡಿಸೋಜಾ ನಕ್ಸಲ್ ನಿಗ್ರಹ ಪಡೆಯ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಡಿಕೇರಿಯ ಯುವತಿ ಜತೆ ಇವರ ಮದುವೆ ನಿಶ್ಚಿತವಾಗಿತ್ತು.

ಮೃತ ಡಿಸೋಜಾ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯಾವುದೇ ಪತ್ರ ಬರೆದಿಟ್ಟಿಲ್ಲ. ಹಾಗಾಗಿ ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಡಿಸೋಜಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು.

aaa
aaa
ww

English summary
Karnataka Anti Naxalite Force constable Albert D'souza (38) commit suicide by triggering service revolver yesterday midnight (Jan13). He was working at Amasebailu village in Kundapura Taluk of Udupi district in Karnataka. Recently he got engaged to a girl from Madikeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X