ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಬಗ್ಗೆ ಆಂಧ್ರ ಹೊಸ ಸಿಎಂ ಜಗನ್ ರೆಡ್ಡಿ ಮೆಚ್ಚುಗೆ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಆಂಧ್ರ ಸಿಎಂ ಜಗನ್ ರೆಡ್ಡಿ | Oneindia Kannada

ಬೆಂಗಳೂರು, ಜೂನ್ 18: ರಾಜ್ಯ ಸಿಎಂ ಕುಮಾರಸ್ವಾಮಿ ಅವರ ಆಡಳಿತದ ಬಗ್ಗೆ ಆಂಧ್ರ ಪ್ರದೇಶದ ಹೊಸ ಸಿಎಂ ಜಗನ್ ಮೋಹನ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಹೀಗೆಂದು ಸ್ವತಃ ಕುಮಾರಸ್ವಾಮಿ ಹೇಳಿದ್ದಾರೆ.

ನಿನ್ನೆ ಚನ್ನಪಟ್ಟಣದಲ್ಲಿ ಸಾರ್ವಜನಿಕರ ಅವಹಾಲು ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರದ ಸಾಲಮನ್ನಾದ ಬಗ್ಗೆ ಜಗನ್‌ ಮೋಹನ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

4 ತಿಂಗಳಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಬದಲು ಮಾಡ್ತಾರಂತೆ ಎಚ್‌ಡಿಕೆ4 ತಿಂಗಳಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಬದಲು ಮಾಡ್ತಾರಂತೆ ಎಚ್‌ಡಿಕೆ

ನೀತಿ ಆಯೋಗ ಸಭೆಯ ಸಂದರ್ಭ ಜಗನ್ ಭೇಟಿ ಆಗಿದ್ದರು, ಇಬ್ಬರೂ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಾಲಮನ್ನಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು, ಅಷ್ಟೆ ಅಲ್ಲದೆ, ಚಂದ್ರಬಾಬು ನಾಯ್ಡು ಅವರ ಕೈಲಿ ಐದು ಸಾವಿರ ಕೋಟಿ ಸಾಲಮನ್ನಾ ಮಾಡಲು ಸಾಧ್ಯವಾಗಿರಲಿಲ್ಲವೆಂದು ಜಗನ್ ಹೇಳಿದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನೀತಿ ಆಯೋಗದ ಸಭೆಯಲ್ಲಿ ಕುಮಾರಸ್ವಾಮಿ ಅವರು ಜಗನ್‌ ಮೋಹನ್ ರೆಡ್ಡಿ ಅವರನ್ನು ಭೇಟಿ ಆಗಿದ್ದರು. ಆ ಸಂದರ್ಭ ಕುಮಾರಸ್ವಾಮಿ ಅವರು ಜಗನ್ ಅವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

ಜಗನ್ ಜೊತೆ ಸಾಲಮನ್ನಾ ಬಗ್ಗೆ ಚರ್ಚೆ

ಜಗನ್ ಜೊತೆ ಸಾಲಮನ್ನಾ ಬಗ್ಗೆ ಚರ್ಚೆ

ಕರ್ನಾಟಕದಲ್ಲಿ ಕೈಗೊಂಡಿರುವ ಸಾಲಮನ್ನಾ ಯೋಜನೆಯ ಬಗ್ಗೆ ಜಗನ್ ಅವರೊಂದಿಗೆ ಕುಮಾರಸ್ವಾಮಿ ಮಾಹಿತಿ ಹಂಚಿಕೊಂಡಿದ್ದು ಒಂದೇ ವರ್ಷದಲ್ಲಿ 25 ಸಾವಿರ ಕೋಟಿ ಹಣವನ್ನು ಸಾಲ ಮನ್ನಾಗೆ ನೀಡಿರುವ ಬಗ್ಗೆ ಹೇಳಿದ್ದಾಗಿ ತಿಳಿಸಿದ್ದಾರೆ.

ಜಗನ್‌ ರೆಡ್ಡಿ ಸಹ ಹಲವು ಯೋಜನೆ ಕೈಗೆತ್ತಿಕೊಂಡಿದ್ದಾರೆ

ಜಗನ್‌ ರೆಡ್ಡಿ ಸಹ ಹಲವು ಯೋಜನೆ ಕೈಗೆತ್ತಿಕೊಂಡಿದ್ದಾರೆ

ಜಗನ್ ಮೋಹನ್ ರೆಡ್ಡಿ ಅವರು ಸಹ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ವೇತನ ಭಾರಿ ಹೆಚ್ಚಳ, ವೃದ್ಧಾಪ್ಯ ವೇತನ ಹೆಚ್ಚಳದ ನಿರ್ಣಯಗಳನ್ನು ಅವರು ಕೈಗೊಂಡಿದ್ದಾರೆ.

ರಾಜ್ಯದ ಪ್ರತೀ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು: ಕುಮಾರಸ್ವಾಮಿ ರಾಜ್ಯದ ಪ್ರತೀ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು: ಕುಮಾರಸ್ವಾಮಿ

ಜೂನ್ 15 ರಂದು ನಡೆದಿದ್ದ ನೀತಿ ಆಯೋಗ ಸಭೆ

ಜೂನ್ 15 ರಂದು ನಡೆದಿದ್ದ ನೀತಿ ಆಯೋಗ ಸಭೆ

ನೀತಿ ಆಯೋಗದ ಸಭೆಯು ದೆಹಲಿಯಲ್ಲಿ ಜೂನ್ 15 ರಂದು ನಡೆದಿತ್ತು, ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹೊರತುಪಡಿಸಿ ಎಲ್ಲ ರಾಜ್ಯದ ಸಿಎಂ ಗಳು, ಕೇಂದ್ರಾಡಳಿತ ಪ್ರದೇಶದ ಗೌರ್ನರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆಯು ನಡೆಯಿತು.

ರಾಹುಲ್ ಗಾಂಧಿ ಸಹ ಮೆಚ್ಚುಗೆ

ರಾಹುಲ್ ಗಾಂಧಿ ಸಹ ಮೆಚ್ಚುಗೆ

ಈ ಹಿಂದೆ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಅವರುಗಳು ರಾಜ್ಯದ ಸಾಲಮನ್ನಾ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಕುಮಾರಸ್ವಾಮಿ ಅವರು ತಿಳಿಸಿದ್ದರು. ನೀತಿ ಆಯೋಗದ ಸಭೆಗೆ ಮುನ್ನಾ ಕುಮಾರಸ್ವಾಮಿ ಅವರು ಮನಮೋಹನ್ ಸಿಂಗ್ ಅವರೊಂದಿಗೆ ಸಭೆ ನಡೆಸಿದ್ದರು.

ಮೃತ ರೈತ ಸುರೇಶ್ ಮನೆಗೆ ಭೇಟಿ ನೀಡಿ 5 ಲಕ್ಷ ಪರಿಹಾರ ನೀಡಿದ ಸಿಎಂಮೃತ ರೈತ ಸುರೇಶ್ ಮನೆಗೆ ಭೇಟಿ ನೀಡಿ 5 ಲಕ್ಷ ಪರಿಹಾರ ನೀಡಿದ ಸಿಎಂ

English summary
Andhra Pradesh CM Jagan Mohan Reddy praised Karnataka's farmer loan waive off scheme said CM Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X