ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ್‌ ಕುಮಾರ್ ಮುಖ್ಯಮಂತ್ರಿ ಆಗಲೇ ಇಲ್ಲ: ಕಾರಣ ಏನು?

|
Google Oneindia Kannada News

Recommended Video

Ananth Kumar Demise : ಕೊನೆಗೂ ಅನಂತ್ ಕುಮಾರ್ ಕನಸು ಈಡೇರಲಿಲ್ಲ ಯಾಕೆ? | Oneindia Kannada

ಬೆಂಗಳೂರು, ನವೆಂಬರ್ 12: ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ್ದು ಯಾರು ಎಂದರೆ ಮೊದಲು ಕೇಳುವುದು ಎರಡೇ ಹೆಸರು, ಯಡಿಯೂರಪ್ಪ, ಅನಂತ್‌ಕುಮಾರ್‌.

ಕರ್ನಾಟಕ ಬಿಜೆಪಿಯ ಎರಡು ಕಂಬಗಳು ಎಂದೇ ಇವರಿಬ್ಬರನ್ನೂ ಕರೆಯಲಾಗುತ್ತಿತ್ತು. ಇಬ್ಬರಿಗೂ ಸಿಎಂ ಆಗುವ ಕನಸು ಬಹಳವೇ ಇತ್ತು. ಯಡಿಯೂರಪ್ಪ ಸಿಎಂ ಆದರು ಆದರೆ ಅನಂತ್‌ಕುಮಾರ್ ಸಿಎಂ ಆಗಲಿಲ್ಲ.

ಮಾಜಿ ಸಿಎಂ ಪತ್ನಿಯನ್ನು ಸೋಲಿಸಿ ರಾಜಕೀಯ ಬದುಕು ಆರಂಭಿಸಿದ್ದ ಅನಂತ್ ಕುಮಾರ್ಮಾಜಿ ಸಿಎಂ ಪತ್ನಿಯನ್ನು ಸೋಲಿಸಿ ರಾಜಕೀಯ ಬದುಕು ಆರಂಭಿಸಿದ್ದ ಅನಂತ್ ಕುಮಾರ್

ಅನಂತ್‌ಕುಮಾರ್ ಅವರ ಬಳಿಗೆ ಸಿಎಂ ಕುರ್ಚಿ ಬಂದಿತ್ತು ಆದರೆ ಅವರ ದುರಾದೃಷ್ಟವೋ ಅಥವಾ ಪಕ್ಷ ಮೊದಲು ಎಂಬ ಅವರ ಧೋರಣೆಯಿಂದಲೋ ಅಥವಾ ಪಕ್ಷದ ಆಂತರಿಕ ರಾಜಕಾರಣದಿಂದಲೋ ಅವರ ಪ್ರೀತಿಯ ಸಿಎಂ ಪಟ್ಟ ಅವರಿಂದ ದೂರವೇ ಉಳಿಯಿತು.

Ananth kumars CM dream did not come to true

ರಾಜ್ಯದಲ್ಲಿ ಬಿಜೆಪಿ ಕಟ್ಟಲು ಯಡಿಯೂರಪ್ಪ ಅವರ ಹೆಗಲಿಗೆ ಹೆಗಲಾಗಿದ್ದವರು ಅನಂತ್‌ಕುಮಾರ್ ಆದರೆ ಅಧಿಕಾರದ ಕಾರಣದಿಂದಲೇ ಇಬ್ಬರ ನಡುವೆ ವೈಮನಸ್ಯ ಉಂಟಾಯಿತು. 2011 ರಲ್ಲಿ ಯಡಿಯೂರಪ್ಪ ಅವರ ಭೂ ಕಬಳಿಕೆ ಆರೋಪಗಳು ಬಂದು ಅವರು ರಾಜೀನಾಮೆ ನೀಡಿದಾಗ ಅನಂತ್‌ಕುಮಾರ್ ಅವರೇ ಸಿಎಂ ಆಗಬೇಕಿತ್ತು. ಆದರೆ ಆಗಲಿಲ್ಲ.

ಅನಂತ ಕುಮಾರ್ ಮಾಡಿದ ಮಹತ್ವದ ಸಾಧನೆಗಳೇನು? ವಿವರ ಇಲ್ಲಿದೆ... ಅನಂತ ಕುಮಾರ್ ಮಾಡಿದ ಮಹತ್ವದ ಸಾಧನೆಗಳೇನು? ವಿವರ ಇಲ್ಲಿದೆ...

ಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರ

ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಇತಿಹಾಸ ನಿರ್ಮಿಸಿದ್ದ ಅನಂತ್ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಇತಿಹಾಸ ನಿರ್ಮಿಸಿದ್ದ ಅನಂತ್

ಸಿಎಂ ಹುದ್ದೆ ತಪ್ಪಿಸಿದ ಒಳ ರಾಜಕೀಯ

ಸಿಎಂ ಹುದ್ದೆ ತಪ್ಪಿಸಿದ ಒಳ ರಾಜಕೀಯ

ಪಕ್ಷದ ಸ್ಥಳೀಯ ನಾಯಕರು ಯಡಿಯೂರಪ್ಪ ಅವರ ಮಾತಿನಂತೆ ಅನಂತ್‌ಕುಮಾರ್ ವಿರುದ್ಧವಾಗಿ ಬಿಜೆಪಿ ಹೈಕಮಾಂಡ್‌ ಗೆ ಮನವಿಗಳನ್ನು ಸಲ್ಲಿಸಿದ ಕಾರಣ ಸದಾನಂದಗೌಡ ಸಿಎಂ ಆದರು ಎಂಬುದು ಈಗ ಇತಿಹಾಸ.

ಯಡಿಯೂರಪ್ಪ ಸ್ಥಾನ ತುಂಬುವ ಅಭ್ಯರ್ಥಿ ಆಗಿದ್ದರು

ಯಡಿಯೂರಪ್ಪ ಸ್ಥಾನ ತುಂಬುವ ಅಭ್ಯರ್ಥಿ ಆಗಿದ್ದರು

ಅವರಿಬ್ಬರ ನಡುವಿನ ವೈಮನಸ್ಯದಿಂದಲೇ ಆ ನಂತರ ಯಡಿಯೂರಪ್ಪ ಅವರು ಪಕ್ಷ ತೊರೆದು ಕೆಜೆಪಿ ಪ್ರಾರಂಭಿಸಿದರು ಎನ್ನಲಾಗಿತ್ತು. ಯಡಿಯೂರಪ್ಪ ಅವರಿಂದ ನಿರ್ವಾತವಾಗಿದ್ದ ಸ್ಥಾನವನ್ನು ಅನಂತ್‌ಕುಮಾರ್ ಅವರೇ ತುಂಬುವ ಜವಾಬ್ದಾರಿ ವಹಿಸಿಕೊಂಡಿದ್ದರು ಆದರೆ ಯಡಿಯೂರಪ್ಪ ಮತ್ತೆ ಪಕ್ಷಕ್ಕೆ ವಾಪಸ್ಸಾದರು.

ಯಡಿಯೂರಪ್ಪ ಅವರನ್ನು ನಗುಮೊಗದಿಂದ ಸ್ವಾಗತಿಸಿದ್ದರು

ಯಡಿಯೂರಪ್ಪ ಅವರನ್ನು ನಗುಮೊಗದಿಂದ ಸ್ವಾಗತಿಸಿದ್ದರು

ಯಡಿಯೂರಪ್ಪ ಅವರು ವಾಪಸ್ಸಾದಾಗ ಅನಂತ್‌ಕುಮಾರ್ ಅವರು ಸಿಹಿ ತಿನ್ನಿಸಿ ನಗುಮೊಗದಿಂದಲೇ ಅವರನ್ನು ಸ್ವಾಗತಿಸಿದ್ದರು. ಆದರೆ ವಾಪಸ್ ಬಂದ ಯಡಿಯೂರಪ್ಪ ಅವರು, ಅನಂತ್‌ಕುಮಾರ್ ಇಂದೆಂದೂ ರಾಜ್ಯ ರಾಜಕಾರಣದಲ್ಲಿ ತಲೆ ಹಾಕದಂತೆ ಮಾಡಿಬಿಟ್ಟರು. ಇವೆಲ್ಲಾ ಆಯಾ ಸಂದರ್ಭದ ರಾಜಕೀಯ ಘಟ್ಟಗಳು ಅಷ್ಟೆ. ಪರಸ್ಪರ ವೈರತ್ವ ಇದ್ದ ಮಾತ್ರಕ್ಕೆ ಒಬ್ಬರಿಗೆ ಇನ್ನೊಬ್ಬರು ಅನ್ಯಾಯವೆಸಗಿದ್ದಾರೆ ಎಂದೇನೂ ಹೇಳಲಾಗದು, ರಾಜಕೀಯದಲ್ಲಿ ಅದು ಸಾಮರ್ಥ್ಯವೂ ಎನಿಸಿಕೊಳ್ಳುತ್ತದೆ.

ಸಿಎಂ ಆಗುವ ಅರ್ಹತೆ, ಯೋಗ್ಯತೆ ಇತ್ತು

ಸಿಎಂ ಆಗುವ ಅರ್ಹತೆ, ಯೋಗ್ಯತೆ ಇತ್ತು

ಏನೇ ಆಗಲಿ ಸಿಎಂ ಆಗುವ ಅರ್ಹತೆ, ಯೋಗ್ಯತೆ, ಆಸೆಯೂ ಇದ್ದ ಅನಂತ್‌ಕುಮಾರ್ ಅವರು ಸಿಎಂ ಕುರ್ಚಿ ಏರಲಾಗಲಿಲ್ಲ. ಆದರೆ ಕೇಂದ್ರದಲ್ಲಿ ಹಲವು ಸಚಿವ ಹುದ್ದೆಗಳನ್ನು ನಿಭಾಯಿಸಿ ಕೇಂದ್ರದಲ್ಲಿ ಕರ್ನಾಟಕದ ಬಗ್ಗೆ ವಿಶೇಷ ಗೌರವ ಮೂಡುವಂತೆ ಮಾಡಿದವರು ಅವರು ಎಂಬುದರಲ್ಲಿ ಅನುಮಾನವಿಲ್ಲ.

English summary
Ananth Kumar dreams of become CM of Karnataka. But he can not succeed in that for various political reasons. he enjoyed several minister post in union government but can not become CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X