ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು: ಅನಂತ ಕುಮಾರ್ ಭವಿಷ್ಯ

By Nayana
|
Google Oneindia Kannada News

ಬೆಂಗಳೂರು, ಮೇ 08: ರಾಜ್ಯ ದಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ ಎನ್ನುವುದು ಸುಳ್ಳು, ಮತದಾರ ರಿಗೆ ಸಮ್ಮಿಶ್ರ ಸರ್ಕಾರ ಬೇಕಾಗಿಲ್ಲ, ಮೋದಿ 18ಗಂಟೆ ಕೆಲಸ ಮಾಡಿದರೆ ಸಿಎಂ ಹದಿನೆಂಟು ಘಂಟೆ ನಿದ್ದೆ ಮಾಡುತ್ತಾರೆ, ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು..

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 100 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ‌ ಪ್ರವಾಸ ಮಾಡಿದ್ದೇನೆ, ರಾಜ್ಯದ ರಾಜಕಾರಣ ಕವಲು‌ ಹಾದಿಯಲ್ಲಿದೆ, ರಾಹುಲ್, ಸಿಎಂ ಅವರಿಂದ ಕಾಂಗ್ರೆಸ್ ವಿನಾಶದ ಹಾದಿಯಲ್ಲಿದೆ. ಮೋದಿ, ಬಿಎಸ್ ವೈ ಅಂದರೆ ವಿಕಾಸ, ನಾವು ಇದೀಗ ವಿಕಾಸದ ಹಾದಿ ಹಿಡಿದಿದ್ದೇವೆ, ಕಾಂಗ್ರೆಸ್ ಇಂದು ಅಧಃಪತನವಾಗಿದೆ ಎಂದರು.

ಗೆಳೆಯನ ಒಡನಾಟ ನೆನೆದು ಕಣ್ಣೀರಿಟ್ಟ ಅನಂತ್ ಕುಮಾರ್, ಸದಾನಂದಗೌಡಗೆಳೆಯನ ಒಡನಾಟ ನೆನೆದು ಕಣ್ಣೀರಿಟ್ಟ ಅನಂತ್ ಕುಮಾರ್, ಸದಾನಂದಗೌಡ

ಯಡಿಯೂರಪ್ಪ ನವರ ಮೇಲಿರುವುದು ಸುಳ್ಳು ಆರೋಪ: ರಾಜ್ಯದ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ನಲ್ಲೂ ಯಡಿಯೂರಪ್ಪ ನವರ ಮೇಲಿನ ಆರೋಪ ಕ್ಲಿಯರ್ ಆಗಿದೆ. ನಿಷ್ಕಳಂಕ, ಭ್ರಷ್ಟಾಚಾರದ ರಹಿತ ಸರ್ಕಾರವನ್ನು ಮೋದಿ ಕೊಟ್ಟಿದ್ದಾರೆ.

Ananth Kumar opines Congress will defeat badly in the state

ರೈತಪರ ಹೋರಾಟಗಾರಿಗೆ ಗುರುತಿಸಿಕೊಂಡಿರುವ ಯಡಿಯೂರಪ್ಪಅವರಿಗೆ ಜನ ಶ್ರೀ ರಕ್ಷೆ ನೀಡಲಿದ್ದಾರೆ. ನನಗೆ ಸೂಕ್ತ ಸ್ಥಾನಮಾನ ಸಿಕ್ಕಿದೆ ಮೋದಿ ನನಗೆ ಸಾಕಷ್ಟು ಜವಾಬ್ದಾರಿ ಕೊಟ್ಟಿದ್ದಾರೆ, ಆದರೂ ಯಾಕೆ ಪಕ್ಷ ನನ್ನ ಸೈಡ್ ಲೈನ್ ಮಾಡಿದೆ ಅಂತಾ ಯಾಕೆ ನಿಮಗೆ ಅನ್ನಿಸಬೇಕು? ಕನಸಿನಲ್ಲೂ ಊಹಿಸದ ಹುದ್ದೆ ನನಗೆ ಸಿಕ್ಕಿದೆ‌ ಎಂದರು.

ಮೊದಲು ಬಿಬಿಎಂಪಿ ಮೈತ್ರಿಯಿಂದ ನೈತಿಕತೆ ಇದ್ದರೆ ಹೊರಬರಲಿ, ಶಿಕಾರಿಪುರದಲ್ಲಿ ಯಡಿಯೂರಪ್ಪ ಐವತ್ತು ಸಾವಿರ ಲೀಡ್ ನಿಂದ ಗೆಲ್ಲಲಿದ್ದಾರೆ. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ ವಿಚಾರದ ಕುರಿತು ಮಾತನಾಡಿ, ಇದು ಮೊದಲು ಯಡಿಯೂರಪ್ಪ ನಿರ್ಧಾರ ಮಾಡಿದ್ದು, ನಂತರ ಒಂದು ವಾರದ ಬಳಿಕ ಅಮಿತ್ ಶಾ ಈ ಬಗ್ಗೆ ಮಾತಾನಾಡಿವುದು. ಈಗಾಗಲೇ ಯಡಿಯೂರಪ್ಪ ಮತ್ತು ಶಾ ಇಬ್ಬರೂ ಈ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ ಎಂದರು.

English summary
Union minister Ananth Kumar has opined that the Congress party will be defeated badly in the state assembly elections and question of rise about alliance will be made with JDS as the Bjp will get clear majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X