• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೆಳೆಯನ ನೆನಪಲ್ಲಿ ಯಡಿಯೂರಪ್ಪ ಭಾವುಕ ಟ್ವೀಟ್

|
   BS Yediyurappa tweets an emotional note remembering Ananth Kumar

   ಬೆಂಗಳೂರು, ನವೆಂಬರ್ 12 : ಕೇಂದ್ರ ಸಚಿವ, ಬಿಜೆಪಿಯ ನಾಯಕ ಅನಂತ್ ಕುಮಾರ್ ವಿಧಿವಶರಾಗಿ ಒಂದು ವರ್ಷ ಕಳೆದಿದೆ. ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತನ ನೆನಪಿನಲ್ಲಿ ಭಾವುಕ ಟ್ವೀಟ್ ಮಾಡಿದ್ದಾರೆ.

   ಮಂಗಳವಾರ ಬೆಳಗ್ಗೆ ಯಡಿಯೂರಪ್ಪ, "ನನ್ನ ಪರಮಾಪ್ತ ಶ್ರೀ ಅನಂತ್ ಕುಮಾರ್ ಅವರು ನಮ್ಮನ್ನಗಲಿದ ದಿನ ನೆನೆದರೆ ಮನಸ್ಸು ಭಾರವಾಗುವುದು" ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಆತ್ಮೀಯ ಗೆಳೆಯನ ನೆನಪು ಮಾಡಿಕೊಂಡಿದ್ದಾರೆ.

   ನಮ್ಮನ್ನಗಲಿದ ಸ್ನೇಹ ಜೀವಿ, ಜನಾನುರಾಗಿ ಅನಂತ್ ಕುಮಾರ್

   ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೇಂದ್ರ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ 2019ರ ನವೆಂಬರ್ 12ರ ಮುಂಜಾನೆ 3ಗಂಟೆ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು.

   ರಾಜ್ಯ ಬಿಜೆಪಿ ನಾಯಕರಿಗೆ ತೇಜಸ್ವಿನಿ ಅನಂತ್ ಕುಮಾರ್ 'ನೀತಿಪಾಠ'

   ಇಂದು ಅನಂತ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ. ಆದ್ದರಿಂದ, ಯಡಿಯೂರಪ್ಪ ಬೆಳಗ್ಗೆಯೇ ಆತ್ಮೀಯ ಗೆಳೆಯನನ್ನು ನೆನಪು ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ.

   ಅನಂತ್ ಕುಮಾರ್ ಬಿಟ್ಟುಹೋದ ಎರಡೂ ಖಾತೆಗಳು ಕನ್ನಡಿಗರಿಗೆ

   ಅನಂತ್ ಕುಮಾರ್ ಸಾವು ಕರ್ನಾಟಕ ಬಿಜೆಪಿಗೆ ಬಹುದೊಡ್ಡ ನಷ್ಟ ಉಂಟು ಮಾಡಿದೆ.ಬಿಜೆಪಿಯ ಹೈಕಮಾಂಡ್ ಮಟ್ಟದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ ಅನಂತ್ ಕುಮಾರ್ ಕರ್ನಾಟಕ ಮತ್ತು ದೆಹಲಿ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು.

   ಯಡಿಯೂರಪ್ಪ ಟ್ವೀಟ್

   English summary
   Karnataka chief minister B.S.Yediyurappa emotional tweet for Ananth Kumar death anniversary on November 12.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X