ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ ಕುಮಾರ್ ಹೆಗಡೆ ಹತ್ಯೆಗೆ ಸಂಚು ರೂಪಿಸಲಾಗಿತ್ತಾ..?!

|
Google Oneindia Kannada News

Recommended Video

ಅನಂತ್ ಕುಮಾರ್ ಹೆಗಡೆಯವರನ್ನ ಕೊಳ್ಳಲು ಸಂಚು ರೂಪಿಸಲಾಗಿತ್ತಾ?| Oneindia Kannada

ಹಾವೇರಿ, ಏಪ್ರಿಲ್ 18: ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಾಗಿರುವ ಕೇಂದ್ರ ಸಚಿವ, ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರ ಕೊಲೆಗೆ ಪಿತೂರಿ ನಡೆದಿತ್ತಾ..?

ರಸ್ತೆಯ ಬಲಬದಿಯಲ್ಲಿ ಅಡ್ಡಲಾಗಿ ನಿಂತಿದ್ದ ಲಾರಿ ಹೆಗಡೆ ಅವರ ಕಾರನ್ನು ಕಂಡ ತಕ್ಷಣ ಇದ್ದಕ್ಕಿದ್ದಂತೆ ವೇಗವಾಗಿ ಚಲಿಸಿದ್ದು ಏಕೆ? ಲಾರಿ ಚಾಲಕ ಮದ್ಯ ಸೇವನೆ ಮಾಡಿಲ್ಲ ಎಂಬುದು ಪೊಲೀಸ್ ತನಿಖೆಯಿಂದ ತಿಳಿದಿದೆ. ಹಾಗಿದ್ದರೆ ರಸ್ತೆಯಲ್ಲಿ ಹೀಗೆ ಅಡ್ಡಾದಿಡ್ಡಿ ಲಾರಿ ನಿಲ್ಲಿಸಿ, ಹೆಗಡೆಯವರ ಬೆಂಗಾವಲಿನ ಕಾರಿಗೆ ಬಂದು ಡಿಕ್ಕಿ ಹೊಡೆದಿದ್ದೇಕೆ?

ಅನಂತ ಕುಮಾರ್ ಹೆಗಡೆ ಬೆಂಗಾವಲು ಕಾರು ಅಪಘಾತ: ಕೊಲೆ ಸಂಚಿನ ಆರೋಪಅನಂತ ಕುಮಾರ್ ಹೆಗಡೆ ಬೆಂಗಾವಲು ಕಾರು ಅಪಘಾತ: ಕೊಲೆ ಸಂಚಿನ ಆರೋಪ

ಈ ಎಲ್ಲ ಪ್ರಶ್ನೆಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ವತಃ ಹೆಗಡೆಯವರೇ ಕೇಳಿದ್ದಾರೆ. ತಮ್ಮ ಹತ್ಯೆಗೆ ಪಿತೂರಿ ನಡೆದಿದೆ ಎಂದು ಆರೋಪಿಸಿರುವ ಅವರು ಈ ಕುರಿತು ಗಂಭೀರವಾಗಿ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

ನಿನ್ನೆ(ಏ.17) ರಾತ್ರಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಚಲಿಸುತ್ತಿದ್ದ ಕಾರಿನ ಹಿಂಬದಿ ಇದ್ದ ಬೆಂಗಾವಲಿನ ಕಾರಿಗೆ ಟ್ರಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಸಚಿವರ ಸಹಾಯಕರೊಬ್ಬರು ಗಂಭೀರವಾಗಿ ಗಾಯಗೊಂದಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಆದರೆ ಅನಂತ ಕುಮಾರ್ ಹೆಗಡೆ ಅವರು ಹೇಳುವ ಪ್ರಕಾರ, 'ಟ್ರಕ್ ಚಾಲಕನ ಗುರಿ ತಮ್ಮ ಕಾರೇ ಆಗಿತ್ತು. ಆದರೆ ನಮ್ಮ ಕಾರು ವೇಗವಾಗಿ ಚಲಿಸಿದ್ದರಿಂದ ಬೆಂಗಾವಲಿನ ಕಾರಿಗೆ ಡಿಕ್ಕಿಹೊಡೆದಿದೆ.'

ಈ ಘಟನೆ ಸಹಜವೋ ಅಥವಾ ಕೊಲೆಪಿತೂರಿಯೋ ಎಂಬುದು ತನಿಖೆಯ ನಂತರ ತಿಳಿಯಲಿದೆ. ಆದರೆ ಹೆಗಡೆ ಅವರ ಪ್ರಕಾರ ಇದು ಕೊಲೆ ಪ್ರಯತ್ನ. ಹಾಗೆಂದು ಅವರು ಸಾಲು ಸಾಲು ಟ್ವೀಟ್ ಮಾಡಿ ಆರೋಪಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಮಾಡಿದ ಯತ್ನ

ನನ್ನನ್ನು ಕೊಲ್ಲುವುದಕ್ಕಾಗಿ ಉದ್ದೇಶಪೂರ್ವಕವಾಗಿ ಕೆಲವರು ಯತ್ನಿಸಿದ್ದಾರೆ. ಹಾವೇರಿ ಜಿಲ್ಲೆಯ ಹಲಗೇರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಮ್ಮ ವಾಹನಕ್ಕೆ ಗುದ್ದಲು ಪ್ರಯತ್ನಿಸಿತ್ತು. ಆದರೆ ನಮ್ಮ ಕಾರು ವೇಗವಾಗಿದ್ದರಿಂದ ದುರಂತದಿಂದ ತಪ್ಪಿಸಿಕೊಂಡಿತು ಎಂದು ಅವರು ಚಿತ್ರ ಸಮೇತ ಟ್ವೀಟ್ ಮಾಡಿದ್ದಾರೆ. ಆದರೆ ನಮ್ಮ ಹಿಂದಿದ್ದ ಬೆಂಗಾವಲಿನ ಕಾರಿಗೆ ಟ್ರಕ್ಕು ಡಿಕ್ಕಿ ಹೊಡೆದಿದ್ದು, ಈ ಅಪಘಾತದಿಂದ ನಮ್ಮ ಸಹಾಯಕ ಸಿಬ್ಬಂದಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಅವರ ಭುಜದಲ್ಲಿ ಫ್ರಾಕ್ಚರ್ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಡ್ಡಾದಿಡ್ಡಿ ನಿಂತಿದ್ದ ಲಾರಿ

ರಸ್ತೆಯ ಬಲಬದಿಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿದ್ದ ಲಾರಿ ನಾವು ಆಗಮಿಸುತ್ತಿದ್ದಂತೆಯೇ ಜೋರಾಗಿ ಚಲಿಸುವುದಕ್ಕೆ ಶುರುಮಾಡಿತ್ತು. ಆದರೆ ನಮ್ಮ ಕಾರು ವೇಗವಾಗಿದ್ದರಿಂದ ಆ ಲಾರಿಗೆ ನಮ್ಮನ್ನು ಗುದ್ದಲು ಸಾಧ್ಯವಾಗಲಿಲ್ಲ. ಲಾರಿ ಅತ್ಯಂತ ವೇಗವಾಗಿ ಚಲಿಸುತ್ತಿತ್ತು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮದ್ಯಸೇವನೆ ಮಾಡಿರದ ಚಾಲಕ

ಘಟನೆಯ ನಂತರ ಟ್ರಕ್ ಚಾಲಕನನ್ನು ಪೊಲೀಸರು ತಪಾಸಿಸಿದರು. ಆದರೆ ಆತನ ಯಾವುದೇ ರೀತಿಯ ಮದ್ಯಸೇವನೆ ಮಾಡಿಲ್ಲ ಎಂಬುದು ದೃಢವಾಗಿತ್ತು. ಚಾಲಕನ ಹೆಸರು ನಾಸಿರ್. ಆತನನ್ನು ಸ್ಥಳೀಯರು ಹಿಡಿದಯ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಕೊಲೆ ಪಿತೂರಿ?

ಇದು ನನ್ನನ್ನು ಕೊಲ್ಲಲು ಮಾಡಿದ ಯತ್ನ ಎಂದು ನನಗೆ ಅನುಮಾನ ಬರುತ್ತಿದೆ. ಚಾಲಕ ನಮ್ಮ ವಾಹನವನ್ನು ಉದ್ದೇಶಪೂರ್ವಕವಾಗಿ ಗುದ್ದಲು ಪ್ರಯತ್ನಿಸಿ ವಿಫಲನಾಗಿದ್ದಾನೆ. ನಂತರ ಅದು ಬೆಂಗಾವಲಿನ ವಾಹನಕ್ಕೆ ಗುದ್ದಿದೆ ಎಂದು ವಿಡಿಯೋವನ್ನು ಸಹ ಅವರು ಟ್ವೀಟ್ ಮಾಡಿದ್ದಾರೆ.

ಇದರ ಹಿಂದೆ ಪ್ರಭಾವಿಗಳ ಕೈವಾಡ?

ಟ್ರಕ್ ಚಾಲಕ ನಾಸಿರ್ ನನ್ನು ತನಿಖೆಗೊಳಪಡಿಸಿ ಸತ್ಯವನ್ನು ಬಯಲಿಗೆಳೆಯುವಂತೆ ನಾನು ಪೊಲೀಸರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಘಟನೆಯ ಹಿಂದೆ ಪ್ರಭಾವಿಗಳ ಕೈವಾಡವಿದೆ ಎನ್ನಿಸುತ್ತಿದೆ. ಪೊಲೀಸರು ಈ ಎಲ್ಲವನ್ನೂ ಬಯಲಿಗೆಳೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೆಗಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
Union Minister Anant Kumar Hegde's escort vehicle was hit by a truck in Karnataka's Haveri district late on Tuesday night. Hegde was traveling near Halageri in Ranebennur taluk of Haveri district around 11:30 p.m. when the incident took place. Police have arrested the truck driver. Hegde claims on twitter that, it is a deliberate attempt on his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X