• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೋಹತ್ಯೆಗೂ, ಕೇರಳ ಪ್ರವಾಹಕ್ಕೂ ಸಂಬಂಧವಿದೆಯೇ? ಪೇಜಾವರ ಶ್ರೀ ಸಂದರ್ಶನ

|
   ಗೋಹತ್ಯೆಗೂ, ಕೇರಳ ಪ್ರವಾಹಕ್ಕೂ ಸಂಬಂಧವಿದೆಯೇ? ಪೇಜಾವರ ಶ್ರೀ ಸಂದರ್ಶನ | Oneindia kannada

   ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಾನುವಾರ ಸೆಪ್ಟಂಬರ್ ಎರಡರಂದು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ನಾಡಿನ ಪ್ರಮುಖ ಕೃಷ್ಣ ದೇವಾಲಯಗಳಲ್ಲೊಂದಾದ ಉಡುಪಿಯ ಶ್ರೀ ಕೃಷ್ಣಮಠದ ಪೂಜಾ ಕೈಂಕರ್ಯ ನಡೆಸುವ ಅಷ್ಟಮಠಗಳಲ್ಲೊಬ್ಬರಾದ, ಮಾಧ್ವಪೀಠದ ಹಿರಿಯ ಯತಿಗಳೂ ಆದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಬೆಂಗಳೂರಿನ ವಿದ್ಯಾಪೀಠದಲ್ಲಿ ಚಾತುರ್ಮಾಸ ವ್ರತದಲ್ಲಿದ್ದಾರೆ.

   ಶಿರೂರು ಶ್ರೀಗಳು ವೈಕುಂಠಸ್ಥರಾದ ನಂತರ, ಪೇಜಾವರ ಶ್ರೀಗಳು ನೀಡಿದ್ದ ಹೇಳಿಕೆ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ತಮ್ಮ ನಿಲುವಿನಲ್ಲಿ ಅತ್ಯಂತ ಸ್ಪಷ್ಟತೆಯನ್ನು ಹೊಂದಿರುವ ಪೇಜಾವರ ಹಿರಿಯ ಶ್ರೀಗಳು, ಶ್ರೀಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ಹಿನ್ನಲೆ, ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಶ್ರೀಗಳ ಸಂದರ್ಶನದ ಆಯ್ದಭಾಗ ಮತ್ತು ಅವರ ಅನುಗ್ರಹ ಸಂದೇಶ ಇಂತಿದೆ:

   ಕೊಡಗು ನೆರೆ: 10 ಲಕ್ಷ ರೂ. ದೇಣಿಗೆ ನೀಡಿದ ಪೇಜಾವರ ಶ್ರೀಗಳು

   ಪ್ರ: ಜನ್ಮಾಷ್ಟಮಿಯ ನಿಮಿತ್ತ ನಾಡಿನ ಜನತೆಗೆ ನಿಮ್ಮ ಅನುಗ್ರಹ ಸಂದೇಶ?

   ಶ್ರೀಗಳು: ಕೃಷ್ಣಾಷ್ಟಮಿಯ ಬಗ್ಗೆ ನಾನೇನೂ ಹೆಚ್ಚಿಗೆ ಹೇಳಬೇಕಾಗಿಲ್ಲ. ಅಷ್ಟ ದೇವತೆ, ಶ್ರೀರಾಮ, ಶ್ರೀಕೃಷ್ಣ ತಮ್ಮ ಎಲ್ಲಾ ಅವತಾರಗಳಿಂದ ದುಷ್ಟನಿಗ್ರಹ, ಉತ್ತಮವಾದ ಭಗವದ್ಗೀತೆ ಉಪದೇಶ, ಬಲಕಾರ್ಯ, ಜ್ಞಾನಕಾರ್ಯ ಮಾಡಿ ನಮಗೆ ಅನುಗ್ರಹಿಸಿದ ಕೃಷ್ಣನ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ನಾನೇನು ಇದರ ಬಗ್ಗೆ ಮತ್ತೆ ಸವಿಸ್ತಾರವಾಗಿ ಹೇಳುವ ಅವಶ್ಯಕತೆಯಿಲ್ಲ.

   ಕೃಷ್ಣಾಷ್ಟಮಿ ನಮಗೆ ಭಗವಂತನ ಅನುಗ್ರಹ ಮತ್ತು ಆದರ್ಶ. ಕೃಷ್ಣನ ಅವತಾರದ ಮೂಲಕ ಜನತೆಯ ಕರ್ತವ್ಯವದ ಅನೇಕ ಮುಖಗಳನ್ನು ತೋರಿಸಿಕೊಟ್ಟಿದ್ದಾನೆ. ಬಡವರಿರಲಿ, ಶ್ರೀಮಂತರಿರಲಿ ಎಲ್ಲರಿಗೂ ಅನುಗ್ರಹ ಮಾಡಿದವನು. ಸೇವೆಯ ಸಂದೇಶವನ್ನು ಕೊಟ್ಟವನು. ಕೃಷ್ಣ ಗುಣಗಾನ ಇನ್ನೂ ಮಾಡಲಿಕ್ಕಿದೆ. ಅಂತಹ ಗುಣಪುರುಷನಾದ ಕೃಷ್ಣನ ಸ್ಮರಣೆಯನ್ನು ನಾವು ಮಾಡಬೇಕು. ಉತ್ತಮ ಜೀವನವನ್ನು ನಾವು ನಡೆಸಬೇಕು.

    ಕೇರಳದಲ್ಲಿ ಪಾಕೃತಿಕ ವಿಕೋಪ

   ಕೇರಳದಲ್ಲಿ ಪಾಕೃತಿಕ ವಿಕೋಪ

   ಪ್ರ: ಗೋಹತ್ಯೆಯಿಂದಲೇ ಕೇರಳದಲ್ಲಿ ಪಾಕೃತಿಕ ವಿಕೋಪ ಉಂಟಾಯಿತು ಎನ್ನುವ ಕೆಲವರ ವಾದವನ್ನು ನೀವು ಒಪ್ಪುತ್ತೀರಾ?

   ಶ್ರೀಗಳು: ನಾನು ಇದನ್ನು ಒಪ್ಪುವುದಿಲ್ಲ. ಯಾಕೆಂದರೆ ಜಲಪ್ರವಾಹದಿಂದ ಎಲ್ಲರೂ ತೊಂದರೆ ಪಟ್ಟಿದ್ದಾರೆ. ಬರೀ ಗೋಮಾಂಸವನ್ನು ತಿಂದವರಿಗೆ ಮಾತ್ರ ತೊಂದರೆಯಾಗಲಿಲ್ಲ. ಕೇರಳ ಇಂದು ಅನುಭವಿಸುತ್ತಿರುವ ಕಷ್ಟದ ಬಗ್ಗೆ ನಾವೆಲ್ಲಾ ಸಹಾನುಭೂತಿ ವ್ಯಕ್ತ ಪಡಿಸಬೇಕು. ಪರಿಹಾರ ಕಾರ್ಯದ ಬಗ್ಗೆ ನಾವು ಚಿಂತಿಸಬೇಕೇ ಹೊರತು ಅದರಿಂದ ಪ್ರವಾಹ ಬಂತು ಎಂದು ಊಹಾಪೋಹ ಹಬ್ಬಿಸುವುದು ಸರಿಯಲ್ಲ. ಅದಕ್ಕೂ, ಗೋಮಾಂಸ ತಿನ್ನುವುದಕ್ಕೂ ಸಂಬಂಧ ಕಲ್ಪಿಸಬಾರದು.

   ಪರಿಹಾರವೇ ಸಿಗದ ಸಮಸ್ಯೆಯಾಗಿದ್ದರು ಶೀರೂರು ಶ್ರೀ : ಜಯರಾಮಾಚಾರ್ಯ

    ಜ್ಯೋತಿಷಿಗಳು ಭಯ ಹುಟ್ಟಿಸುವ ಕೆಲಸವನ್ನು ಮಾಡಬಾರದು

   ಜ್ಯೋತಿಷಿಗಳು ಭಯ ಹುಟ್ಟಿಸುವ ಕೆಲಸವನ್ನು ಮಾಡಬಾರದು

   ಪ್ರ: ಕೊಡಗು, ಕೇರಳದಲ್ಲಿ ಪಾಕೃತಿಕ ವಿಕೋಪ ಉಂಟಾದ ನಂತರ, ಜ್ಯೋತಿಷಿಗಳು ಭಯ ಹುಟ್ಟಿಸುವ ಕೆಲಸವನ್ನು ಮಾಡಬಾರದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಈ ಬಗ್ಗೆ?

   ಶ್ರೀಗಳು: ನೈಸರ್ಗಿಕ ವಿಕೋಪಕ್ಕೆ ನಾವೇ ಕಾರಣ, ಜ್ಯೋತಿಷಿಗಳಲ್ಲ. ರಾಜಕಾರಣಿಗಳು ಮತ್ತು ಜನರು ಪರಿಸರದ ಕಡೆಗೆ ಗಮನ ಕೊಡದೇ, ಸಿಕ್ಕಾಪಟ್ಟೆ ಕಾರ್ಯಕ್ರಮ, ಯೋಜನೆ ಕೈಗೊಂಡಿದ್ದರಿಂದ ಪ್ರಕೃತಿ ವಿಕೋಪ ಉಂಟಾಗಿದೆ. ಇದು ನಾವು ಮಾಡಿರುವ ತಪ್ಪು. ಹೀಗಾಗಿ, ಜ್ಯೋತಿಷಿಗಳ ಯಾವುದೇ ಹೇಳಿಕೆಗೆ ನಾವು ಭಯ ಪಡಬೇಕಾಗಿಲ್ಲ. ಪ್ರಕೃತಿ ಮತ್ತು ಪರಿಸರವನ್ನು ಅಸಡ್ಡೆ ಮಾಡಿದ್ದರಿಂದ ಈ ರೀತಿಯಾಗಿದೆ. ವಿಜ್ಞಾನಿಗಳ ಜೊತೆ ಮಾತುಕತೆ ನಡೆಸಿ, ಸರಿಯಾಗಿ ಪರಿಶೀಲನೆ ಮಾಡಿ, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ.

   ಪೇಜಾವರ ಶ್ರೀಗಳಿಗೆ ಮಕ್ಕಳಿದ್ದಾರೆಯೇ? ಆರೋಪಕ್ಕೆ ಉತ್ತರ ಇಲ್ಲಿದೆ

    ಸಂಘಟೆನೆಯನ್ನು ಉಗ್ರರಿಗೆ ಹೋಲಿಕೆ ಮಾಡುತ್ತಿದ್ದಾರಲ್ಲಾ

   ಸಂಘಟೆನೆಯನ್ನು ಉಗ್ರರಿಗೆ ಹೋಲಿಕೆ ಮಾಡುತ್ತಿದ್ದಾರಲ್ಲಾ

   ಪ್ರ: ಕೇರಳದ ಪರಿಹಾರ ಕಾರ್ಯಾಚರಣೆಯಲ್ಲಿ ಸಂಘ ಪರಿವಾರ, ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆದರೆ, ಕೆಲವರು ಆ ಸಂಘಟೆನೆಯನ್ನು ಉಗ್ರರಿಗೆ ಹೋಲಿಕೆ ಮಾಡುತ್ತಿದ್ದಾರಲ್ಲಾ?

   ಶ್ರೀಗಳು: ಸಂಘ ಪರಿವಾರದ ಸಂಘಟನೆಗಳನ್ನು, ಉಗ್ರ ಸಂಘಟನೆಯೆಂದು ಆರೋಪ ಮಾಡುವುದು ಸರಿಯಲ್ಲ. ನಾಥೂರಾಂ ಗೋಡ್ಸೆ ಮುಂತಾದವರು ಇದ್ದರು ಎನ್ನುವ ಮಾತನ್ನು ಒಪ್ಪುತ್ತೇನೆ. ಉಗ್ರ ಪ್ರವೃತ್ತಿಯನ್ನು ಕೆಲವರು ಮಾಡಿರಬಹುದು, ಅದಕ್ಕಾಗಿ ಇಡೀ ಸಂಘಟನೆಯ ಮೇಲೆ ಆ ರೀತಿಯ ಆರೋಪ ಹೊರಿಸುವುದು ಸರಿಯಲ್ಲ.

    ವಾಜಪೇಯಿಯವರ ವ್ಯಕ್ತಿತ್ವದ ಬಗ್ಗೆ

   ವಾಜಪೇಯಿಯವರ ವ್ಯಕ್ತಿತ್ವದ ಬಗ್ಗೆ

   ಪ್ರ: ವಾಜಪೇಯಿಯವರ ವ್ಯಕ್ತಿತ್ವದ ಬಗ್ಗೆ ಒಂದೆರಡು ವಾಕ್ಯದಲ್ಲಿ ನಿಮ್ಮ ಅಭಿಪ್ರಾಯ?

   ಶ್ರೀಗಳು: ವಾಜಪೇಯಿ ಒಬ್ಬರು ಅಜಾತಶತ್ರು, ಉತ್ತಮ ರೀತಿಯಲ್ಲಿ ದೇಶದ ಅಭಿವೃದ್ದಿಯನ್ನು ಸಾಧಿಸಿದ್ದಾರೆ. ಎಲ್ಲರನ್ನೂ ಹೊಂದಿಸಿಕೊಂಡು ಹೋಗುವಂತಹ ಅವರ ಗುಣ ಮೆಚ್ಚತಕ್ಕದ್ದು. ಅತ್ಯಂತ ಚಾತುರ್ಯದಿಂದ ಸರಕಾರವನ್ನು ಅವರು ನಡೆಸಿದ್ದಾರೆ. ಪಾಕಿಸ್ತಾನದ ಜೊತೆಗೂ ಸ್ನೇಹಸಂಬಂಧವನ್ನು ಬೆಸೆದಿದ್ದಾರೆ.

   ಅನೇಕ ರೀತಿಯ ಸಾಧನೆಯನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಮಾಡಿದ್ದಾರೆ. ಅವರ ವಿರೋಧಿಗಳಿಗೂ ಅವರಿಗೆ ಆಪ್ತರಾಗಿದ್ದವರು. ಅವರಿಗೆ ನಮ್ಮ ಗೌರವವನ್ನು ಅರ್ಪಿಸಿದ್ದೇವೆ, ಅವರ ಆತ್ಮಕ್ಕೆ ಭಗವಂತನ ಅನುಗ್ರಹವಿರಲಿ ಎಂದು ಪ್ರಾರ್ಥಿಸುತ್ತೇವೆ.

    ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಆಲೋಚನೆ ಇದೆಯಾ?

   ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಆಲೋಚನೆ ಇದೆಯಾ?

   ಪ್ರ: ಪೇಜಾವರ ಮಠದ ಟ್ರಸ್ಟಿನಿಂದ 10ಲಕ್ಷ ಕೊಡಗು ಪರಿಹಾರಕ್ಕೆ ಘೋಷಿಸಿದ್ದೀರಿ, ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಆಲೋಚನೆ ಇದೆಯಾ?

   ಶ್ರೀಗಳು: ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಇನ್ನೂ ನಿರ್ಧಾರವನ್ನು ಮಾಡಲಿಲ್ಲ. ಯಾಕೆಂದರೆ, ಗ್ರಾಮದಲ್ಲಿ ಎಲ್ಲರಿಗೂ ಪ್ರವಾಹದ ತೊಂದರೆಯಾಗಲಿಲ್ಲ. ಎಲ್ಲೆಲ್ಲಿ ಪರಿಹಾರ ಆಗಬೇಕೆಂದು ನೋಡಿಕೊಂಡು ಮತ್ತೆ ಮುಂದುವರಿಯುತ್ತೇವೆ. ನಮ್ಮ ಹತ್ತು ಲಕ್ಷ, ಇದರ ಜೊತೆಗೆ ಜನರಿಂದ ಸಂಗ್ರಹವಾಗುವ ದೇಣಿಗೆಯನ್ನು ಸೇರಿಸಿ, ಅದಕ್ಕೆ ಸರಿಯಾಗಿ, ನಮ್ಮ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಮಾಡುತ್ತೇವೆ.

    ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ

   ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ

   ಪ್ರ: ದ್ವಂದ್ವ ಮಠಕ್ಕೆ ಸಂಬಂಧಪಟ್ಟ ಪ್ರಶ್ನೆ, ಆದರೂ.. ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಯಾವ ಹಂತಕ್ಕೆ ಬಂತು?

   ಶ್ರೀಗಳು: ಶಿರೂರು ಮಠಕ್ಕೆ ಚಾತುರ್ಮಾಸ ವ್ರತ ಮುಗಿದಕೂಡಲೇ ಉತ್ತರಾಧಿಕಾರಿ ನೇಮಕದ ಪ್ರಕ್ರಿಯೆ ಆರಂಭವಾಗುತ್ತದೆ. ಇದರ ಬಗ್ಗೆ ಏನೂ ಸಂಶಯ ಬೇಕಾಗಿಲ್ಲ. ಸೋದೆ ಶ್ರೀಗಳಿಗೆ ಯಾವುದೇ ರೀತಿಯ ಸ್ವಾರ್ಥ ಇದರಲಿಲ್ಲ, ಖಂಡಿತವಾಗಿ ಈ ಕೆಲಸವನ್ನು ಸೋದೆ ಶ್ರೀಗಳು ಮುಗಿಸುತ್ತಾರೆ.

   ಪ್ರ: ಮಧ್ಯರಾತ್ರಿ, ರೋಹಿಣಿ ನಕ್ಷತ್ರದಲ್ಲಿ ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡುವ ಹಿಂದೆ ಇರುವ ಧಾರ್ಮಿಕ ಮಹತ್ವ ಏನು?

   ಶ್ರೀಗಳು: ಮಧ್ಯರಾತಿ ರೋಹಿಣಿ ನಕ್ಷತ್ರದಲ್ಲಿ ಕೃಷ್ಣನು ಅವತಾರ ಮಾಡಿದ್ದು. ಅದಕ್ಕಾಗಿ ಅದೇ ಸಮಯದಲ್ಲಿ ಅರ್ಘ್ಯ ಪ್ರಧಾನ ಮಾಡುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

   English summary
   An exclusive interview with Vishwesha Tirtha Swamiji of Pejawar Mutt, Udupi. During interview Pejawar Seer said, cow slaughter and Kerala floods are different. Seer also given his 'Anugraha Sandesha' eve of Krishna Janmasthami.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more