• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿಗೆ ಓವೈಸಿ ಬೆಂಬಲ ನೀಡುತ್ತಾರಾ? ಸಚಿವ ಪ್ರಿಯಾಂಕ್ ಖರ್ಗೆ ಸಂದರ್ಶನ

By ಬಾಲರಾಜ್ ತಂತ್ರಿ
|
   ಬಿಜೆಪಿಗೆ ಓವೈಸಿ ಬೆಂಬಲ ನೀಡುತ್ತಾರಾ? ಸಚಿವ ಪ್ರಿಯಾಂಕ್ ಖರ್ಗೆ ಸಂದರ್ಶನ | Oneindia Kannada

   ಕಳೆದ ಅಂದರೆ 2013ರ ಅಸೆಂಬ್ಲಿ ಚುನಾವಣೆಯಲ್ಲಿ ಕೆಜೆಪಿ, ಬಿಜೆಪಿಯ ಮತವಿಭಜನೆಯ ಭರಪೂರ ಲಾಭ ಪಡೆದುಕೊಂಡ ಪ್ರಿಯಾಂಕ್ ಖರ್ಗೆ, ಭರ್ಜರಿ ಮೂವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯ ವಿರುದ್ದ ಜಯಗಳಿಸಿದ್ದರು.

   ತಮ್ಮ ಮೊದಲ ಪ್ರಯತ್ನದಲ್ಲಿ (2008ರ ಚುನಾವಣೆ) ಸೋತಿದ್ದ ಪ್ರಿಯಾಂಕ್ ಖರ್ಗೆ, ಎರಡನೇ ಪ್ರಯತ್ನದಲ್ಲಿ ಯಶಸ್ಸನ್ನು ಪಡೆದುಕೊಂಡರು. ನಂತರ ಜೂನ್ 2016ರಲ್ಲಿ ಸಿದ್ದರಾಮಯ್ಯನವರ ಸರಕಾರದಲ್ಲಿ ಕ್ಯಾಬಿನೆಟ್ ರ‍್ಯಾಂಕಿಂಗ್ ಪಡೆದುಕೊಂಡ ಪ್ರಿಯಾಂಕ್, ಸದ್ಯ ಮೂರ್ಮೂರು ಖಾತೆಯನ್ನು ನಿಭಾಯಿಸುತ್ತಿದ್ದಾರೆ.

   ಕರ್ನಾಟಕದ ಮೂರುಮುಕ್ಕಾಲು ಕೋಟಿ ಜನತೆಗೆ ಉಚಿತ ವೈಫೈ

   ಐಟಿ ಬಿಟಿ, ವಿಜ್ಣಾನ ಮತ್ತು ತಂತ್ರಜ್ಣಾನ ಮತ್ತು ಪ್ರವಾಸೋದ್ಯಮ ಖಾತೆಯನ್ನು ನಿಭಾಯಿಸುತ್ತಿರುವ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯನವರ ಸರಕಾರದ ಅತಿ ಕಿರಿಯ ಸಚಿವರು. ಇಲಾಖೆಯಲ್ಲಿನ ಅಭಿವೃದ್ದಿ ಕೆಲಸಗಳು, ರಾಜ್ಯ ಮತ್ತು ಕಲಬುರ್ಗಿಯ ರಾಜಕೀಯ, ಬಿಜೆಪಿಯ ಹಿಂದುತ್ವ, ಓವೈಸಿ ಬಿಜೆಪಿಗೆ ಬೆಂಬಲ ನೀಡುವ ವಿಚಾರದ ಬಗ್ಗೆ ಪ್ರಿಯಾಕ್ ಖರ್ಗೆ, 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಜೊತೆಗಿನ ಸಂದರ್ಶನದ ಆಯ್ದಭಾಗ ಇಂತಿದೆ..

   ಪ್ರ: ಸಣ್ಣ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಮೂರು ಇಲಾಖೆಗಳ ಕೆಲಸ ಹೇಗೆ ನಡೆಯುತ್ತಿದೆ, ಪ್ರಮುಖವಾಗಿ ಐಟಿ-ಬಿಟಿಯಲ್ಲಿ?

   ಪ್ರಿಯಾಕ್ : ಕೆಲಸ ಚೆನ್ನಾಗಿ ನಡೆಯುತ್ತಿದೆ, ನನ್ನ ಇಲಾಖೆಯ ಕೆಲಸ ಹೇಗೆ ನಡೆಯುತ್ತಿದೆ ಎನ್ನುವುದನ್ನು ನೀವು ಮಾಧ್ಯಮದವರು ಹೇಳಬೇಕು. ಹೊಸ ತಂತ್ರಜ್ಣಾನವನ್ನು ಬಳಸಿಕೊಂಡು ಐಟಿಬಿಟಿ ಕ್ಷೇತ್ರದ ಅಭಿವೃದ್ದಿಗೆ ಮುಂದಾಗಿದ್ದೇವೆ, ಜೊತೆಗೆ ಪ್ರವಾಸೋದ್ಯಮ ಇಲಾಖೆಯಲ್ಲೂ ಹಲವು ಬದಲಾವಣೆಗಳನ್ನು ತಂದಿದ್ದೇವೆ. ಮುಂದೆ ಓದಿ..

   ಸಾರ್ವಜನಿಕ ಸ್ಥಳಗಳಲ್ಲಿ 2ತಿಂಗಳೊಳಗೆ ಉಚಿತ ವೈಫೈ ಸೌಲಭ್ಯ

   ಸಾರ್ವಜನಿಕ ಸ್ಥಳಗಳಲ್ಲಿ 2ತಿಂಗಳೊಳಗೆ ಉಚಿತ ವೈಫೈ ಸೌಲಭ್ಯ

   ಪ್ರ: ರಾಜ್ಯದ 11 ನಗರಪಾಲಿಕೆಗಳ ಸಾರ್ವಜನಿಕ ಸ್ಥಳಗಳಲ್ಲಿ ಮುಂದಿನ 2ತಿಂಗಳೊಳಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ರಿ, ಆ ಕೆಲಸ ಎಲ್ಲಿ ತನಕ ಬಂತು?

   ಪ್ರಿಯಾಂಕ್: ಬರೀ ನಗರಪಾಲಿಕೆಗಳಿಗಷ್ಟೇ ಅಲ್ಲ, ಎರಡು ಸಾವಿರ ಗ್ರಾಮ ಪಂಚಾಯತಿಗಳಿಗೂ ಉಚಿತ ವೈಫೈ ಕೊಡುವಂತಹ ಕೆಲಸ ನಡೆಯುತ್ತಿದೆ. ಪ್ರಾಯೋಗಿಕವಾಗಿ 32 ಪಂಚಾಯತಿಗಳಲ್ಲಿ ಇದನ್ನು ಜಾರಿಗೆ ತಂದು, ಅದು ಯಶಸ್ಸು ಪಡೆದುಕೊಂಡ ನಂತರ 2500 ಕಡೆ ವೈಫೈ ನೀಡಬೇಕೆನ್ನುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಮಾರ್ಚ್ ಅಂತ್ಯದೊಳಗೆ ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು ನಗರದಲ್ಲೂ ಹಂತ ಹಂತವಾಗಿ ಇದನ್ನು ನೀಡುತ್ತೇವೆ.

   ಇಪ್ಪತ್ತು ಸಾವಿರ ಸ್ಟಾರ್ಟ್ ಅಪ್ ಆರಂಭಿಸುವ ಗುರಿ

   ಇಪ್ಪತ್ತು ಸಾವಿರ ಸ್ಟಾರ್ಟ್ ಅಪ್ ಆರಂಭಿಸುವ ಗುರಿ

   ಪ್ರ: ರಾಜ್ಯದಲ್ಲಿ ಇಪ್ಪತ್ತು ಸಾವಿರ ಸ್ಟಾರ್ಟ್ ಅಪ್ ಆರಂಭಿಸುವ ಗುರಿಯನ್ನು ಹೋದ ವರ್ಷ ಹಾಕಿಕೊಂಡಿದ್ದೀರಿ, ಇದು ಯಾವ ಹಂತಕ್ಕೆ ಬಂದಿದೆ?

   ಪ್ರಿಯಾಂಕ್: ಇಪ್ಪತ್ತು ಸಾವಿರ ಸ್ಟಾರ್ಟ್ ಅಪ್ ಆರಂಭಿಸುವ ಪಾಲಿಸಿಯನ್ನು ಹೋದ ವರ್ಷ ಘೋಷಿಸಿಸಿದ್ದೆವು. ಇದಕ್ಕೆ ಉತ್ತೇಜನ ನೀಡಲು ಎರಡು ಲಕ್ಷ ಸ್ಟಾರ್ಟ್ ಅಪ್ ನೋಡಬೇಕಾಗುತ್ತದೆ. ಸದ್ಯಕ್ಕೆ 5,500 ನೊಂದಣಿಯಾಗಿದೆ. ಬೆಂಗಳೂರಿನಲ್ಲಿ ಹತ್ತು ಸಾವಿರ ಸ್ಟಾರ್ಟ್ ಅಪ್ ಇದೆಯೆಂದು ರಿಪೋರ್ಟ್ ಬಂದಿದೆ. ಎಲಿವೇಟರ್ -100 ಮಾಡಿದಾಗ 1800 ನವೋದ್ಯೋಮಗಳಲ್ಲಿ 450 ಗ್ರಾಮೀಣ ಪ್ರದೇಶದಿಂದ ಅಥವಾ ಟೈರ್ 2ಸಿಟಿಯಿಂದ ಬಂದಿದೆ. ಬಿ2ಬಿ ಸ್ಟುಡಿಯೋ ಆರಂಭಿಸಿದ್ದೇವೆ. ಇದು ದೇಶದಲ್ಲೇ ಮೊದಲು.

   ಓವೈಸಿಯವರ ಪಕ್ಷದ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ಸುದ್ದಿ

   ಓವೈಸಿಯವರ ಪಕ್ಷದ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ಸುದ್ದಿ

   ಪ್ರ: ಹೈ. ಕರ್ನಾಟಕದ ಭಾಗದಲ್ಲಿ, ಮುಸ್ಲಿಂ ಪ್ರಾಭಲ್ಯ ಜಾಸ್ತಿ ಇರುವಲ್ಲಿ, ಓವೈಸಿಯವರ ಪಕ್ಷದ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ಸುದ್ದಿ ಹರಿದಾಡುತ್ತಿದೆಯಲ್ಲಾ?

   ಪ್ರಿಯಾಂಕ್: ಬಿಜೆಪಿಯವರನ್ನು ಯಾವುದರಲ್ಲೂ ನಂಬಕ್ಕಾಗುವುದಿಲ್ಲ. ಒಮ್ಮೆ ಜಾತಿವಾದಿಗಳಾಗಿರುತ್ತಾರೆ, ಇನ್ನೊಮ್ಮೆ ಕೋಮುವಾದಿಗಳಾಗಿರುತ್ತಾರೆ. ಇದೇ ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪುಜಯಂತಿ ಆಚರಿಸಿದ್ರು. ಈ ಪ್ರಶ್ನೆಯ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ, ಅಧಿಕಾರ ಬೇಕಾದರೆ ಅವರ ತತ್ವವನ್ನೇ ಮಾರಾಟ ಮಾಡೋಕೆ ಅವರು ಹೇಸುವುದಿಲ್ಲ. ಕೋಮುವಾದ ವಿಷಬೀಜವನ್ನು ಬಿತ್ತಿ ಗಲಭೆ ನಡೆಸಲು ಅವರು ಹೇಸುವುದಿಲ್ಲ. ದಕ್ಷಿಣಕನ್ನಡ, ಚಿಕ್ಕಮಗಳೂರಿನಲ್ಲಿ ಇದನ್ನು ನೋಡುತ್ತಿದ್ದೇವೆ. ಅಮಿತ್ ಶಾ ಅವರೇ ಯುವಮೋರ್ಚಾದವರಿಗೆ ಗಲಭೆ ಮಾಡಿ, ಜೈಲ್ ಭರೋ ಮಾಡಿ ಅಂತಾರೆ, ಚುನಾವಣೆ ಗೆಲ್ಲಲು ಸುಳ್ಳು ಹೇಳೀಂತ ಈಶ್ವರಪ್ಪನವರು ಹೇಳುತ್ತಾರೆ,.ಓವೈಸಿ ಜೊತೆ ಬಿಜೆಪಿ ಹೊಂದಾಣಿಕೆ ಮಾಡುತ್ತೋ ಇಲ್ಲವೋ ಎನ್ನುವ ಬಗ್ಗೆ ಖಚಿತ ಮಾಹಿತಿಯಿಲ್ಲ.

   ಪುನೀತ ಯಾತ್ರೆಗೆ ರೆಸ್ಪಾನ್ಸ್ ಹೇಗಿದೆ

   ಪುನೀತ ಯಾತ್ರೆಗೆ ರೆಸ್ಪಾನ್ಸ್ ಹೇಗಿದೆ

   ಪ್ರ: ರಾಜ್ಯ ಮತ್ತು ಹೊರ ರಾಜ್ಯಗಳ ಪ್ರಮುಖ ಧಾರ್ಮಿಕ, ಐತಿಹಾಸಿಕ ಸ್ಥಳಗಳಿಗೆ ರಿಯಾಯಿತಿ ದರದಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ "ಪುನೀತ ಯಾತ್ರೆ"ಗೆ ರೆಸ್ಪಾನ್ಸ್ ಹೇಗಿದೆ?

   ಪ್ರಿಯಾಂಕ್: ಮೊದಲ ಹಂತದಲ್ಲಿ 21 ಕ್ಷೇತ್ರಗಳನ್ನು ಪಟ್ಟಿಮಾಡಿ ಅದರಲ್ಲಿ ಹನ್ನೆರಡು ಕ್ಷೇತ್ರಗಳಿಗೆ ಯಾತ್ರೆ ಆರಂಭಿಸಿದ್ದೇವೆ, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೋ ಲಾಸ್, ನೋ ಪ್ರಾಫಿಟ್ ಗಮನದಲ್ಲಿಟ್ಟುಕೊಂಡು ಇದನ್ನು ಆರಂಭಿಸಿರುವಂತದ್ದು. ಅದರಲ್ಲೂ ಪ್ರಮುಖವಾಗಿ ತಿರುಪತಿಗೆ ಉತ್ತಮ ಪ್ರತಿಕ್ರಿಯ ವ್ಯಕ್ತವಾಗುತ್ತಿದೆ. ಇದನ್ನು ಇನ್ನೂ ಹೆಚ್ಚು ಹೆಚ್ಚು ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳಿಗೆ ಮುಂದುವರಿಸುವ ಯೋಜನೆಯಿದೆ.

   ರಿಯಾಯಿತಿ ದರದ ಧಾರ್ಮಿಕ ಪ್ರವಾಸ 'ಪುನೀತ ಯಾತ್ರೆ'ಗೆ ಚಾಲನೆ

   ಲಲಿತಮಹಲ್ ಹೋಟೆಲ್ ರಾಜ್ಯ ಸರಕಾರದ ಸುಪರ್ದಿಗೆ ಬಂತಾ

   ಲಲಿತಮಹಲ್ ಹೋಟೆಲ್ ರಾಜ್ಯ ಸರಕಾರದ ಸುಪರ್ದಿಗೆ ಬಂತಾ

   ಪ್ರ: ಐಟಿಡಿಸಿ ವ್ಯಾಪ್ತಿಯಿಂದ ಮೈಸೂರಿನ ಲಲಿತಮಹಲ್ ಹೋಟೆಲ್ ರಾಜ್ಯ ಸರಕಾರದ ಸುಪರ್ದಿಗೆ ಅಧಿಕೃತವಾಗಿ ಬಂತಾ?

   ಪ್ರಿಯಾಕ್: ಎಲ್ಲಾ ಒಪ್ಪಂದ ಐಟಿಡಿಸಿ ಜೊತೆ ಮುಗಿದಿದೆ, ಇದೇ ಮಾರ್ಚ್ ಅಂತ್ಯದೊಳಗೆ ಅದು ನಮ್ಮ ಸುಪರ್ದಿಗೆ ಬರಲಿದೆ. ಲಲಿತಮಹಲ್ ಪ್ಯಾಲೇಶ್ ನಲ್ಲಿ ಇನ್ನಷ್ಟು ಹೆಚ್ಚಿನ ಸೇವೆಯನ್ನು ನೀಡಲು ಯೋಜನೆ ರೂಪಿಸುತ್ತಿದ್ದೇವೆ. ಇದು ನಮ್ಮ ರಾಜ್ಯದ ಹೆಮ್ಮೆಯ ಹೋಟೆಲ್.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   An exclusive interview with State IT,BT, Science and Toursim Minister Priyank Kharge - Part 1. Youngest minister of Siddaramaiah government Priyanka Kharge said during his interview, BJP will do anything for the power.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more