ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ನೋವಿನ ನಡುವೆ ಗೆಲ್ಲುವ ವಿಶ್ವಾಸದಲ್ಲಿದ್ದೇನೆ: ಶಾಸಕ ಹ್ಯಾರಿಸ್ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ನೋವಿದ್ದರೂ ಗೆಲ್ಲುವ ವಿಶ್ವಾಸದಲ್ಲಿದ್ದೇನೆ: ಶಾಸಕ ಎನ್ ಎ ಹ್ಯಾರಿಸ್ ಸಂದರ್ಶನ | Oneindia Kannada

ಎನ್ ಎ ಹ್ಯಾರಿಸ್ ಬೆಂಗಳೂರು ನಗರ ಹೃದಯ ಭಾಗದ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ. ಸತತ ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಹ್ಯಾರಿಸ್ ಮತ್ತೆ ಮೇ ತಿಂಗಳಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ.

ಮಿನಿ ಭಾರತದಂತಿರುವ ಶಾಂತಿನಗರದಲ್ಲಿ ಎಲ್ಲಾ ಭಾಷಿಗರು ನೆಲೆಸಿದ್ದಾರೆ. ಸಿದ್ದರಾಮಯ್ಯನವರ ಸರಕಾರದ ಸಾಧನೆ ಮತ್ತು ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಶೇ. 90ರಷ್ಟು ಕೆಲಸಗಳನ್ನು ಮುಗಿಸಿದ್ದೇನೆ ಎಂದಿರುವ ಹ್ಯಾರಿಸ್, 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಮೋದಿ, ಅಮಿತ್ ಶಾ ಮತ್ತು ತಮ್ಮ ಪುತ್ರ ನಲಪ್ಪಾಡ್ ಘಟನೆಯ ಬಗ್ಗೆಯೂ ವಿವರಿಸಿದ್ದಾರೆ. ಸಂದರ್ಶನದ ಆಯ್ದ ಭಾಗ, ಹೀಗಿದೆ..

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಪ್ರ: ಕಳೆದ ಹನ್ನೊಂದು ಚುನಾವಣೆಯಲ್ಲಿ ನೀವು ಪ್ರತಿನಿಧಿಸುತ್ತಿರುವ ಶಾಂತಿನಗರ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆ. ಸತತ ಎರಡು ಬಾರಿ ನೀವು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದೀರಾ, ಈ ಬಾರಿ ಪರಿಸ್ಥಿತಿ ಹೇಗಿದೆ?
ಹ್ಯಾರಿಸ್: ಇಲ್ಲಿನ ರಾಜಕೀಯ ಪರಿಸ್ಥಿತಿ ಬಹಳ ಚೆನ್ನಾಗಿದೆ. ಒಂದು ದಶಕಗಳಿಂದ ನಾನು ಇಲ್ಲಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಹನ್ನೊಂದು ಬಾರಿ ಇಲ್ಲಿ ಕಾಂಗ್ರೆಸ್ ಇರಲಿಲ್ಲ ಇಲ್ಲಿ. ನಾನು ಬರುವ ಮುನ್ನ ಇಲ್ಲಿ ಬಿಜೆಪಿಯವರು ಇದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಂದಾದ ಮೇಲೆ ಒಂದು ಪಕ್ಷ ಇಲ್ಲಿ ಜಯಗಳಿಸುತ್ತಲೇ ಬಂದಿದೆ.

ಚರಿತ್ರೆಯಲ್ಲಿ ಎರಡನೇ ಬಾರಿ ನಾನು ಇಲ್ಲಿ ಗೆದ್ದಿರೋದು. ನಾನು ಬರುವುದಕ್ಕೆ ಮೊದಲು ಇದು ರಿಸರ್ವ ಕ್ಷೇತ್ರವಾಗಿತ್ತು. ನಾನು ಬಂದ ಮೇಲೆ ತುಂಬಾ ಅಭಿವೃದ್ದಿ ಕೆಲಸವನ್ನು ಮಾಡಿದ್ದೇನೆ.

ಭ್ರಷ್ಟ ಸಿದ್ದರಾಮಯ್ಯ ಎಲ್ಲಿ, ದೇವರಾಜ ಅರಸು ಎಲ್ಲಿ: ಲಿಂಗರಾಜ್ ಅರಸ್ ಕಿಡಿಭ್ರಷ್ಟ ಸಿದ್ದರಾಮಯ್ಯ ಎಲ್ಲಿ, ದೇವರಾಜ ಅರಸು ಎಲ್ಲಿ: ಲಿಂಗರಾಜ್ ಅರಸ್ ಕಿಡಿ

ಪ್ರ: ಈ ಬಾರಿ ಕಾಂಗ್ರೆಸ್ ನಿಮಗೆ ಟಿಕೆಟ್ ನೀಡಬಹುದಾ, ಎಷ್ಟು ಕಾನ್ಫಿಡೆಂಟ್ ಆಗಿದ್ದೀರಾ?
ಹ್ಯಾರಿಸ್: 100% ಟಿಕೆಟ್ ನನಗೇ ಸಿಗುತ್ತೆ. ಎರಡು ಬಾರಿ ಗೆದ್ದು ಬಂದಿದ್ದೇನೆ. ಕ್ಷೇತ್ರದ ಅಭಿವೃದ್ದಿ ಕೆಲಸ, ಬಾಕಿಯಿರುವ ಕೆಲಸ ಮುಗಿಸುವುದು ಈ ರೀತಿಯ ಎಲ್ಲಾ ಕೆಲಸದಲ್ಲಿ ನಾನು ಮುಂದೆ ಇದ್ದೀನಿ. ಕ್ಷೇತ್ರದ ಜನತೆಯೂ ನನ್ನ ಜೊತೆ ಆತ್ಮೀಯರಾಗಿದ್ದಾರೆ. ಟಿಕೆಟ್ ಸಿಗುವುದಿಲ್ಲ ಎನ್ನುವ ಪ್ರಶ್ನೆಯೇ ಹುಟ್ಟುವುದಿಲ್ಲ. ಮುಂದೆ ಓದಿ..

ಕ್ಷೇತ್ರ ಪರಿಚಯ: ಶಾಂತಿನಗರದಲ್ಲಿ ಬದಲಾವಣೆ ಸಾಧ್ಯವೇ?ಕ್ಷೇತ್ರ ಪರಿಚಯ: ಶಾಂತಿನಗರದಲ್ಲಿ ಬದಲಾವಣೆ ಸಾಧ್ಯವೇ?

 ಮುಖ್ಯಮಂತ್ರಿಗಳ ಜೊತೆ ನಿಮ್ಮ ಸಂಬಂಧ ಹೇಗಿದೆ?

ಮುಖ್ಯಮಂತ್ರಿಗಳ ಜೊತೆ ನಿಮ್ಮ ಸಂಬಂಧ ಹೇಗಿದೆ?

ಪ್ರ: ಮುಖ್ಯಮಂತ್ರಿಗಳ ಜೊತೆ ನಿಮ್ಮ ಸಂಬಂಧ ಹೇಗಿದೆ?
ಹ್ಯಾರಿಸ್: ಸಿದ್ದರಾಮಯ್ಯನವರ ಜೊತೆ ನನ್ನ ಜೊತೆ ಸಂಬಂಧ ಚೆನ್ನಾಗಿದೆ, ಒಳ್ಳೆ ಮುಖ್ಯಮಂತ್ರಿ. ಉತ್ತಮ ಕೆಲಸವನ್ನು ಅವರು ಮಾಡಿದ್ದಾರೆ. ವೈಯಕ್ತಿಕವಾಗಿ ಯಾರನ್ನೂ ದೂಷಿಸುವ ಕೆಲಸವನ್ನು ಅವರು ಮಾಡುವುದಿಲ್ಲ. ಜನಪರ, ಅಭಿವೃದ್ದಿ ಕೆಲಸದ ಬಗ್ಗೆ ಮಾತ್ರ ಅವರ ಗಮನ. ದೀನ ದಲಿತರ, ಬಡವರು, ದಲಿತರ ಬಗ್ಗೆ ವಿಶೇಷ ಕಾಳಜಿಯನ್ನು ಅವರು ಹೊಂದಿದ್ದಾರೆ. ಕ್ಷೇತ್ರಕ್ಕೆ ಉತ್ತಮ ಅನುದಾನವನ್ನೂ ಅವರು ನೀಡಿದ್ದಾರೆ.

ಕಾಂಗ್ರೆಸ್ ಗೆದ್ದಿರೋದು ಲೆಕ್ಕ ಇಲ್ವಾ? ಸಚಿವ ಕೃಷ್ಣ ಭೈರೇಗೌಡ ಸಂದರ್ಶನಕಾಂಗ್ರೆಸ್ ಗೆದ್ದಿರೋದು ಲೆಕ್ಕ ಇಲ್ವಾ? ಸಚಿವ ಕೃಷ್ಣ ಭೈರೇಗೌಡ ಸಂದರ್ಶನ

 ಮೋದಿ, ಅಮಿತ್ ಶಾ ಇದೆಲ್ಲಾ ವರ್ಕೌಟ್ ಆಗುತ್ತೋ, ಇಲ್ಲವೋ?

ಮೋದಿ, ಅಮಿತ್ ಶಾ ಇದೆಲ್ಲಾ ವರ್ಕೌಟ್ ಆಗುತ್ತೋ, ಇಲ್ಲವೋ?

ಪ್ರ: ಕಳೆದ ಚುನಾವಣೆಯಲ್ಲಿ ನೀವು ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ಆಯ್ಕೆಯಾಗಿದ್ರಿ. ಬಿಜೆಪಿ ದಯನೀಯವಾಗಿ ಸೋತಿತ್ತು, ಯಾಕೆಂದರೆ ಯಡಿಯೂರಪ್ಪ ಇಲ್ಲದ ಬಿಜೆಪಿ ಆಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ, ಮೋದಿ, ಅಮಿತ್ ಶಾ ಇದೆಲ್ಲಾ ವರ್ಕೌಟ್ ಆಗುತ್ತೋ, ಇಲ್ಲವೋ?
ಹ್ಯಾರಿಸ್: ಇಲ್ಲಿ ಅದ್ಯಾವುದು ವರ್ಕೌಟ್ ಆಗುವುದಿಲ್ಲ. ಕಳೆದ ಬಾರಿ ಜೆಡಿಎಸ್ ನಲ್ಲಿದ್ದ ಅಭ್ಯರ್ಥಿ ಈ ಬಾರಿ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ. ಬಿಜೆಪಿ ಟಿಕೆಟಿಗಾಗಿ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಈ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಅದರ ಮೇಲೆ ಫೈಟ್ ನಿರ್ಧಾರವಾಗುತ್ತೆ.

ಕಾಂಗ್ರೆಸ್ ಅನ್ನು ನಾವು ಇಲ್ಲಿ ಜಾಸ್ತಿ ಬೆಳೆಸಿದ್ದೇವೆ. ಯಾರೂ ಮಾಡಲಾಗದ ಸಾಧನೆಯನ್ನು ನಾವು ಮಾಡಿದ್ದೇವೆ. ಬಿಎಸ್ವೈ ಎಲ್ಲಾದರೂ ಇರಲಿ, ಈ ಐದು ವರ್ಷ ನಮ್ಮ ಸರಕಾರ ಜನಪರ ಕೆಲಸ ಮಾಡಿದೆ. ಬೆಂಗಳೂರು ನಗರಕ್ಕೆ ಯಾವ ಸರಕಾರವೂ ಮಾಡದಷ್ಟೂ ಕೆಲಸವನ್ನು ನಾವು ಮಾಡಿದ್ದೇವೆ. ಹಾಗಾಗಿ, ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕಾಂಗ್ರೆಸ್ಸಿಗೆ ಗೆಲುವಿನ ಅವಕಾಶಗಳು ಹೆಚ್ಚು.

ನಲಪಾಡ್ ಪ್ರಕರಣ : ಮಲ್ಯ ಆಸ್ಪತ್ರೆಗೆ ಎನ್.ಎ.ಹ್ಯಾರೀಸ್ ಭೇಟಿ ನಲಪಾಡ್ ಪ್ರಕರಣ : ಮಲ್ಯ ಆಸ್ಪತ್ರೆಗೆ ಎನ್.ಎ.ಹ್ಯಾರೀಸ್ ಭೇಟಿ

 ಬಿಬಿಎಂಪಿ ನಾವು ತೆಗೆದುಕೊಂಡಾಗ ಸಾಲದಲ್ಲಿ ಮುಳುಗಿತ್ತು

ಬಿಬಿಎಂಪಿ ನಾವು ತೆಗೆದುಕೊಂಡಾಗ ಸಾಲದಲ್ಲಿ ಮುಳುಗಿತ್ತು

ಪ್ರ: Bangalore infrastructure ಡೆವಲಪ್ಮೆಂಟ್ ಯಾವ ರೀತಿ ಕಾಂಗ್ರೆಸ್ಸಿಗೆ ಡ್ರಾಬ್ಯಾಕ್ ಆಗಬಹುದು?
ಹ್ಯಾರಿಸ್: ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರು ನಗರಕ್ಕೆ ವಿಶೇಷ ಅನುದಾನ ಕೊಟ್ಟ ಸರಕಾರ ನಮ್ಮದು. ಬಿಬಿಎಂಪಿ ನಾವು ತೆಗೆದುಕೊಂಡಾಗ ಸಾಲದಲ್ಲಿ ಮುಳುಗಿತ್ತು. ಇರೋ ಆಸ್ತಿಗಳನ್ನೆಲ್ಲಾ ಅಡಮಾನವಿಟ್ಟಿದ್ದರು. ನಾವು ಅದನ್ನೆಲ್ಲಾ ಬಿಬಿಎಂಪಿ ವಶಕ್ಕೆ ವಾಪಸ್ ಪಡೆದುಕೊಂಡಿದ್ದೇವೆ.

ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದೇವೆ. ಇಂದಿರಾ ಕ್ಯಾಂಟೀನ್ ತೆರೆಯುವ ಮೂಲಕ, ಬಡವರು ಯಾರೂ ಉಪವಾಸ ಇರದಂತೆ ನೋಡಿಕೊಂಡಿದ್ದೇವೆ. ರಸ್ತೆ ಗುಂಡಿಯಾಗಿರುವುದನ್ನೇ ನೋಡದೇ ಒಳ್ಳೆಯ ಕೆಲಸವನ್ನೂ ಜನ ನೋಡಬೇಕಿದೆ.

ಇಷ್ಟು ಬಾರಿ ಬೆಂಗಳೂರು ಪ್ರದಕ್ಷಿಣೆ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಟ್ಟು ಬೇರೆ ಯಾರಿದ್ದಾರೆ. ನಮ್ಮ ಮೆಟ್ರೋವನ್ನು ಈ ಮಟ್ಟಿಗೆ ತಂದಿದ್ದು ನಮ್ಮ ಸರಕಾರವೇ (ಕೇಂದ್ರ ಸರಕಾರದ ಅನುದಾನವಿದ್ದರೂ). ಮೆಟ್ರೋ 24X7 ಓಡಾಡಬೇಕು ಎನ್ನುವ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ.

ಮಗನ ಅಟ್ಟಹಾಸಕ್ಕೆ ಅಪ್ಪನ ಕ್ಷಮಾಪಣೆ ಪತ್ರಮಗನ ಅಟ್ಟಹಾಸಕ್ಕೆ ಅಪ್ಪನ ಕ್ಷಮಾಪಣೆ ಪತ್ರ

 ನಲಪ್ಪಾಡ್ ಘಟನೆ ನಿಮ್ಮ ಜೀವನದಲ್ಲಿ ಪರಿಣಾಮ ಬೀರುತ್ತಾ?

ನಲಪ್ಪಾಡ್ ಘಟನೆ ನಿಮ್ಮ ಜೀವನದಲ್ಲಿ ಪರಿಣಾಮ ಬೀರುತ್ತಾ?

ಪ್ರ: ನಿಮ್ಮ ಮಗನ ಇನ್ಸಿಡೆಂಟ್ ಏನಿದೆಯೋ, ಅದು ನಿಮ್ಮ ರಾಜಕೀಯ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರಬಹುದು?
ಹ್ಯಾರಿಸ್: ಮಗನ ಘಟನೆಗೂ ನನ್ನ ರಾಜಕೀಯ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ. ಆ ವಿಚಾರ ಈಗ ಕೋರ್ಟಿನಲ್ಲಿದೆ, ನ್ಯಾಯಾಲಯ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದನ್ನು ನಾವು ಒಪ್ಪಿಕೊಳ್ಳಲೇಬೇಕು.

 ಶಾಂತಿನಗರ ಮಿನಿ ಇಂಡಿಯಾ - ಹ್ಯಾರಿಸ್ ಅಭಿಪ್ರಾಯ

ಶಾಂತಿನಗರ ಮಿನಿ ಇಂಡಿಯಾ - ಹ್ಯಾರಿಸ್ ಅಭಿಪ್ರಾಯ

ಪ್ರ: ಶಾಂತಿನಗರ ಮಿನಿ ಇಂಡಿಯಾ ಅನ್ನುವ ಮಾತನ್ನು ಹೇಳಿದ್ದೀರಿ, ಕನ್ನಡ ಬೆಳೆಸುವ ಕೆಲಸ ನಡೆಯುತ್ತಿದೆಯಾ?
ಹ್ಯಾರಿಸ್: ಖಂಡಿತವಾಗಿಯೂ ನಾನು ಅದಕ್ಕೆ ವಿಶೇಷ ಒತ್ತನ್ನು ನೀಡುತ್ತಿದ್ದೇನೆ. ಈ ಹಿಂದೆ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿರಲಿಲ್ಲ, ಐದಾರು ವರ್ಷಗಳಿಂದ ಅದನ್ನು ಪ್ರಾರಂಭಿಸಿದ್ದೇವೆ. ಜನರೂ ಕನ್ನಡವನ್ನು ಕಲಿಯುತ್ತಿದ್ದಾರೆ.

 ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು, ಕಾಂಗ್ರೆಸ್ ಶಾಸಕರಾಗಿ ಏನಂತೀರಿ?

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು, ಕಾಂಗ್ರೆಸ್ ಶಾಸಕರಾಗಿ ಏನಂತೀರಿ?

ಪ್ರ: ಸಿದ್ದರಾಮಯ್ಯನವರ ಸರಕಾರದ ಮೇಜರ್ ತೀರ್ಮಾನಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿರುವುದೂ ಒಂದು. ಕಾಂಗ್ರೆಸ್ ಶಾಸಕರಾಗಿ ನಿಮ್ಮ ಅಭಿಪ್ರಾಯ?
ಹ್ಯಾರಿಸ್: ನಾವಾಗಿ ಪ್ರತ್ಯೇಕ ಧರ್ಮದ ವಿಚಾರವನ್ನು ಎತ್ತಲಿಲ್ಲ, ಪ್ರಸ್ತಾವನೆ ಬಂದಿದ್ದಕ್ಕಾಗಿ ಈ ಕೆಲಸವನ್ನು ಮಾಡಿದ್ದೇವೆ. ಲಿಂಗಾಯತ ಧರ್ಮಕ್ಕೆ ಒಳ್ಳೆಯದನ್ನು ಮಾಡಿದ್ದೇವೆ. ಅವರ ಬೆಂಬಲ, ಆಶೀರ್ವಾದ ನಮ್ಮ ಮೇಲೆ ಇರಲಿದೆ. ಬೆಂಗಳೂರಿನಲ್ಲಿ ಅಷ್ಟಿಲ್ಲದಿದ್ದರೂ, ಉತ್ತರ ಕರ್ನಾಟಕ ಭಾಗದಲ್ಲಿ ಇದು ದೊಡ್ಡ ವಿಷಯ.

 ನಿಮ್ಮ ಕ್ಷೇತ್ರದ ಜನರಲ್ಲಿ ನಿಮ್ಮ ಮನವಿಯೇನು?

ನಿಮ್ಮ ಕ್ಷೇತ್ರದ ಜನರಲ್ಲಿ ನಿಮ್ಮ ಮನವಿಯೇನು?

ಪ್ರ: ನಿಮ್ಮ ಕ್ಷೇತ್ರದ ಜನರಲ್ಲಿ ನಿಮ್ಮ ಮನವಿ?
ಹ್ಯಾರಿಸ್: ಶಾಂತಿನಗರವನ್ನು ಶಾಂತವಾಗಿ ಇಡುವಂತಹ ಕೆಲಸವನ್ನು ಮಾಡಿದ್ದೇನೆ. ಹತ್ತು ವರ್ಷದ ಹಿಂದಿನ ಶಾಂತಿನಗರ ಮತ್ತು ಈಗಿನ ನನ್ನ ಕ್ಷೇತ್ರ ಯಾವರೀತಿ ಇದೆ ಅನ್ನೋದು ಜನರಿಗೆ ಗೊತ್ತಿದೆ. ಜನರು ಗೌರವಯುತವಾಗಿ ಬದುಕುವ ವಾತವರಣ ಇಲ್ಲಿದೆ. ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡಿದ್ದೇನೆ ಎನ್ನಲು ನನಗೆ ಖುಷಿಯಾಗುತ್ತದೆ.

ದಿನನಿತ್ಯದ ಸಮಸ್ಯೆಗಳನ್ನು ದೂರಮಾಡಿದ್ದೇವೆ. ಹತ್ತು ವರ್ಷದಲ್ಲಿ 24X7 ಜನರು ನನ್ನ ಸಂಪರ್ಕಿಸಬಹುದಾಂತಹ ವಾತಾವರಣವನ್ನು ಮಾಡಿದ್ದೇನೆ. ಶಾಂತಿನಗರ ಅನ್ನುವುದು ಮಿನಿ ಇಂಡಿಯಾ, ಇಲ್ಲಿ ಎಲ್ಲಾ ಭಾಷಿಗರು, ಜಾತಿಯವರು ಇದ್ದಾರೆ. ಅವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ. ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಬಂದಿದ್ದೇನೆ, ಮತ್ತೊಂದು ಅವಕಾಶ ಕೊಡಬೇಕಾದವರು ಮತದಾರರೇ, ಕೊಡುತ್ತಾರೆ ಎನ್ನುವ ಅದಮ್ಯ ವಿಶ್ವಾಸವಿದೆ.

English summary
An exclusive interview with Shantingar (Bengaluru Urban limit) MLA NA Haris. Second time sitting MLA from the constituency Haris express his stand on Siddaramaiah governments development work, how he has worked in Shantinagr, Son Nalappad incident etc..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X