• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಅಡಗೂರು ಎಚ್ ವಿಶ್ವನಾಥ್ ಸಂದರ್ಶನ

By ಬಾಲರಾಜ್ ತಂತ್ರಿ
|
   An exclusive interview with JDS State President H Vishwanath | Oneindia Kannada

   ಜಾತ್ಯಾತೀತ ಜನತಾದಳ ಕರ್ನಾಟಕದ ಘಟಕದ ಮುಖ್ಯಸ್ಥರಾಗಿ ಅಡಗೂರು ಎಚ್ ವಿಶ್ವನಾಥ್ ಆಯ್ಕೆಯಾಗಿದ್ದಾರೆ. ಹೊಸ ಹುದ್ದೆ, ಹೊಸ ಜವಾಬ್ದಾರಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಗುರುತರ ಜವಾಬ್ದಾರಿಯನ್ನು ವಿಶ್ವನಾಥ್ ಹೊಂದಿದ್ದಾರೆ.

   ಶಾಂತ ಸ್ವಭಾವದ ಮತ್ತು ಜುಲೈ 2017ರಲ್ಲಿ ಅಂದರೆ ಜೆಡಿಎಸ್ ಪಕ್ಷಕ್ಕೆ ಸೇರಿದ ಒಂದು ವರ್ಷ ಪೂರೈಸುವಷ್ಟರಲ್ಲಿ ವಿಶ್ವನಾಥ್ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ಒಲಿದಿದೆ. ಪಿಜಿಆರ್ ಸಿಂಧ್ಯಾ, ಮಧು ಬಂಗಾರಪ್ಪನವರ ಹೆಸರು ಈ ಹುದ್ದೆಗೆ ಕೇಳಿಬರುತ್ತಿದ್ದರೂ, ವಿಶ್ವನಾಥ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

   ವಿಶ್ವನಾಥ್ ಆಗಮನದಿಂದ ಆನೆ ಬಲ : ಸಾರಾ ಮಹೇಶ್

   ವಿಶ್ವನಾಥ್ ಆಯ್ಕೆಯ ಹಿಂದೆ ಕುರುಬ ಸಮುದಾಯದ ಮತವೋ, ಸಿದ್ದರಾಮಯ್ಯನವರನ್ನು ಹಣೆಯುವ ತಂತ್ರವೋ, ಒಟ್ಟಿನಲ್ಲಿ ವಿಶ್ವನಾಥ್ ಆಯ್ಕೆಯ ಹಿಂದೆ ದೇವೇಗೌಡರ ಯಾವ ರಾಜಕೀಯ ಕಾರ್ಯತಂತ್ರ ಅಡಗಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ.

   ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ, 'ಒನ್ ಇಂಡಿಯಾ' ಎಚ್ ವಿಶ್ವನಾಥ್ ಜೊತೆ ಸಂದರ್ಶನ ನಡೆಸಿದೆ. ಅದರ ಪ್ರಮುಖಾಂಶ ಇಂತಿದೆ:

   'ದಳಪತಿ'ಯಾದ ಎಚ್.ವಿಶ್ವನಾಥ್ ಮುಂದಿರುವ ಸವಾಲುಗಳು!

   ಪ್ರ: ಕಳೆದ ವರ್ಷ ಜೆಡಿಎಸ್ ಸೇರ್ಪಡೆಗೊಂಡಿದ್ರಿ. ಗೌಡ್ರ ಮತ್ತು ಜೆಡಿಎಸ್ ಪಕ್ಷ ನಿಮಗೆ ಹೊಸದು, ಯಾವ ರೀತಿ ಪಕ್ಷ ಬಲವರ್ಧನೆಗೆ ರೂಪುರೇಷೆ ಹಾಕಿಕೊಂಡಿದ್ದೀರಾ?

   ವಿಶ್ವನಾಥ್: ಎರಡು ದಿನದ ಹಿಂದೆ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿಕೊಂಡೆ. ಈಗಿರುವ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಹೊಸ ಟೀಂ ರೆಡಿಯಾಗಿದೆ. ಹೊಸ ಟೀಂನಲ್ಲಿ ಯಾರಿರಬೇಕು, ಎಲ್ಲಾ ಜಾತಿಯವರಿಗೂ ಅಲ್ಲಿ ಸ್ಥಾನವಿರಬೇಕು. ವಿಶೇಷವಾಗಿ ಅವಕಾಶವಂಚಿತರಿಗೆ ಮತ್ತು ಯುವಕರಿಗೆ ಸ್ಥಾನ ಸಿಗಬೇಕು.

   ಪಕ್ಷದಲ್ಲಿ ಹಿರಿಯರು ಸರಿಯಾದ ಮಾರ್ಗದರ್ಶನ ನೀಡಬೇಕು. ಅದಕ್ಕೆ ಸೂಕ್ತವಾದ ಯೋಜನೆಯ ಕರಡನ್ನು ತಯಾರಿಸಿ ಸಂಘಟನಾ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದೇನೆ. ಉತ್ತರ ಕರ್ನಾಟಕದ ಪ್ರವಾಸ ಮಾಡುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಸಿದ್ದಗೊಳ್ಳಲಿದೆ.

    ಕಾಂಗ್ರೆಸ್ ಮೈತ್ರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಯಾಕೆ ಬೇಡ?

   ಕಾಂಗ್ರೆಸ್ ಮೈತ್ರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಯಾಕೆ ಬೇಡ?

   ಪ್ರ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ಯಾಕೆ ಕಾಂಗ್ರೆಸ್ ಜೊತೆ ಮೈತ್ರಿ ಬೇಡ?

   ವಿಶ್ವನಾಥ್: ಲೋಕಲ್ ಪಾಲಿಟಿಕ್ಸ್ ಬೇರೆ, ರಾಜ್ಯ ಮತ್ತು ದೇಶದ ಪಾಲಿಟಿಕ್ಸ್ ಬೇರೆ. ಇಲ್ಲಿ ಹೊಂದಾಣಿಕೆ ಅಷ್ಟು ಎಫೆಕ್ಟ್ ಆಗಿರುವುದಿಲ್ಲ. ತಾಲೂಕು ಪಂಚಾಯತಿ, ನಗರ ಮತ್ತು ಪುರಸಭೆಗಳಲ್ಲಿ ಹೊಂದಾಣಿಕೆ ಮಾಡಿದರೆ ಅದು ಸಕ್ಸಸ್ ಆಗುವುದಿಲ್ಲ. ಜೊತೆಗೆ, ಇಲ್ಲೂ ಹೊಂದಾಣಿಕೆ ಮಾಡಿಕೊಂಡರೆ ಪಾರ್ಟಿಯಲ್ಲೂ ಅರಾಜಕತೆ ಆರಂಭವಾಗುತ್ತದೆ.

   ಹಾಗಾಗಿ ಲೋಕಲ್ ಬಾಡಿ ಚುನಾವಣೆಯಲ್ಲಿ ನಾವು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ದೇಶಕ್ಕೆ ನಡೆಯುವ ಚುನಾವಣೆಯಲ್ಲಿ ನಾವು ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇವೆ.

    ಗೌಡ್ರು, ಎಚ್ಡಿಕೆ, ರೇವಣ್ಣ ಅವರ ಮುಂದೆ ನಿಮ್ಮ ಮಾತು ನಡೆಯುತ್ತಾ?

   ಗೌಡ್ರು, ಎಚ್ಡಿಕೆ, ರೇವಣ್ಣ ಅವರ ಮುಂದೆ ನಿಮ್ಮ ಮಾತು ನಡೆಯುತ್ತಾ?

   ಪ್ರ: ಗೌಡ್ರು, ಎಚ್ಡಿಕೆ, ರೇವಣ್ಣ ಅವರ ಮುಂದೆ ರಾಜ್ಯಾಧ್ಯಕ್ಷರಾಗಿ ನಿಮ್ಮ ಮಾತು ಪಕ್ಷದಲ್ಲಿ, ಕಾರ್ಯಕರ್ತರ ವಲಯದಲ್ಲಿ ನಡೆಯುತ್ತಾ?

   ವಿಶ್ವನಾಥ್: ಈ ಮೂವರೂ ಸುಮ್ಮನೆ ಪ್ರಚಲಿತ, ಅವರು ದೈನಂದಿನ ಕೆಲಸಕ್ಕೆ ಕೈಹಾಕುತ್ತಾರೆ ಎನ್ನುವುದೆಲ್ಲಾ ಬರೀ ಮಾತು. ನಾನು ದೂರದಿಂದ ನೋಡಿದ ದೇವೇಗೌಡ್ರಿಗೂ, ಹತ್ತಿರದಿಂದ ನೋಡಿದ ದೇವೇಗೌಡರಿಗೂ ಬಹಳ ವ್ಯತ್ಯಾಸವಿದೆ.

   ಗೌಡ್ರು, ಎಚ್ಡಿಕೆ, ರೇವಣ್ಣ, ಈ ಮೂವರೂ ನನ್ನ ಬಗ್ಗೆ ಗೌರವದಿಂದಲೇ ಇದ್ದಾರೆ. ಪಕ್ಷದ ಸಂಘಟನೆಯ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎನ್ನುವ ಭರವಸೆಯನ್ನು ನೀಡಿದ್ದಾರೆ.

    ಕುಮಾರಸ್ವಾಮಿಯವರ ಹೇಳಿಕೆ ಕಾರಣನಾ?

   ಕುಮಾರಸ್ವಾಮಿಯವರ ಹೇಳಿಕೆ ಕಾರಣನಾ?

   ಪ್ರ: ಪ್ರತ್ಯೇಕ ರಾಜ್ಯದ ಕೂಗಿಗೆ ಮೂಲ ಕಾರಣ ಕುಮಾರಸ್ವಾಮಿಯವರ ಹೇಳಿಕೆನಾ?

   ವಿಶ್ವನಾಥ್: ಎರಡು ವರ್ಷಗಳಿಂದ ರಾಜ್ಯದಲ್ಲಿ ಜಾತಿ ಧರ್ಮವನ್ನು ಪ್ರತ್ಯೇಕ ಮಾಡುವ ಕೆಲಸ ನಡೆಯುತ್ತಿದೆ. ಆ ಮನಸ್ಥಿತಿಯಲ್ಲೇ ಸರಕಾರ ಬಂದಾಗ, ನಾವು ಬಯಸಿದ ಸರಕಾರ ಬಂದಿಲ್ಲ ಅನ್ನೋ ಗುಂಗಿನಲ್ಲಿ ಪ್ರತ್ಯೇಕತೆ ಅನ್ನುವ ಪದ ಆರಂಭವಾಗುತ್ತದೆ. ಕುಮಾರಸ್ವಾಮಿಯವರ ಹೇಳಿಕೆಯಿಂದ ಪ್ರತ್ಯೇಕ ರಾಜ್ಯದ ಕೂಗು ಆರಂಭವಾಯಿತು ಎನ್ನುವುದು ಸತ್ಯಕ್ಕೆ ದೂರವಾದಂತದ್ದು.

   ಅಖಿಲ ಕರ್ನಾಟಕ ಏಕೀಕರಣಕ್ಕೆ ಬಹಳಷ್ಟು ಜನ ದುಡಿದಿದ್ದಾರೆ. ಏಕೀಕರಣದ ತೀರ್ಪನ್ನು ದಕ್ಷಿಣದವರು ಒಪ್ಪಿಕೊಂಡಿದ್ದರು. ಮೈಸೂರು ಮಹಾಸಂಸ್ಥಾನ ಮತ್ತು 1972ರಲ್ಲಿ ದೇವರಾಜು ಅರಸು ಇದನ್ನು ಒಪ್ಪಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಪ್ರತ್ಯೇಕತೆ ಬಯಸುತ್ತಿದ್ದಾರೆಯೇ ಹೊರತು, ಜನಸಾಮಾನ್ಯರಿಗೆ ಇದು ಬೇಕಾಗಿಲ್ಲ. ಜತ್ತಿ, ವೀರೇಂದ್ರ ಪಾಟೀಲ್, ಶೆಟ್ಟರ್ ಎಲ್ಲಾ ಆ ಭಾಗದವರೇ, ಹಾಗಾಗಿ ಪ್ರತ್ಯೇಕತೆಯ ಉಯಿಲು ಎಬ್ಬಿಸುವುದು ಸರಿಯಲ್ಲ.

    ಎಷ್ಟು ಸ್ಥಾನವನ್ನು ಗೆಲ್ಲಬೇಕೆನ್ನುವ ಗುರಿ ಇಟ್ಟುಕೊಂಡಿದ್ದೀರಾ?

   ಎಷ್ಟು ಸ್ಥಾನವನ್ನು ಗೆಲ್ಲಬೇಕೆನ್ನುವ ಗುರಿ ಇಟ್ಟುಕೊಂಡಿದ್ದೀರಾ?

   ಪ್ರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಎಷ್ಟು ಸ್ಥಾನವನ್ನು ಗೆಲ್ಲಬೇಕೆನ್ನುವ ಗುರಿ ಇಟ್ಟುಕೊಂಡಿದ್ದೀರಾ?

   ವಿಶ್ವನಾಥ್: ನೋಡಬೇಕು ಈ ಬಗ್ಗೆ, ಯಾಕೆಂದರೆ ಲೋಕಸಭಾ ಚುನಾವಣೆಯ ವೇಳೆ ಯಾವಯಾವ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ. ದೆಹಲಿಯಲ್ಲಿ ಈಗ ತಾನೇ ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ.

   ಇನ್ನೂ ಇದಕ್ಕೆ ಸಮಯಾವಕಾಶ ಬೇಕಾಗುತ್ತದೆ, ಯಾರಿಗೆ ಎಷ್ಟು ಸ್ಥಾನ ಬಿಟ್ಟುಕೊಡುವುದು ಈ ಬಗ್ಗೆ ವಿಸ್ಕೃತ ಚರ್ಚೆ ನಡೆಯಬೇಕಾಗಿದೆ. ಇದೊಂದು ಬಹಳ ಬೇಗ ಕೇಳುವ ಪ್ರಶ್ನೆ.

    ರಾಹುಲ್ ಗಾಂಧಿ ಒಬ್ಬ ಚೈಲ್ಡಿಶ್

   ರಾಹುಲ್ ಗಾಂಧಿ ಒಬ್ಬ ಚೈಲ್ಡಿಶ್

   ಪ್ರ: ಯುಪಿಎ ಮೈತ್ರಿಕೂಟದಲ್ಲಿ ಮೋದಿಗೆ ವಿರುದ್ದವಾಗಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ವಾ?

   ವಿಶ್ವನಾಥ್: ಯಾಕಿಲ್ಲಾ.. ಪ್ರಿಯಾಂಕ ಗಾಂಧಿ ಇಲ್ವಾ, ಅವರಿಗೆ ಒಳ್ಲೆ ವರ್ಚಸ್ಸಿದೆ, ಇಂದಿರಾ ಗಾಂಧಿಯವರನ್ನೇ ಹೋಲುತ್ತಾರೆ. ಆದರೆ ಇವರನ್ನು ಮುಖ್ಯವಾಹಿನಿಗೆ ತರಲು ಸೋನಿಯಾ ಗಾಂಧಿ ಮಗನ ಸಲುವಾಗಿ ಬಿಡುತ್ತಿಲ್ಲ. ಪ್ರಿಯಾಂಕಗೆ ಒಳ್ಲೆ ಬುದ್ದಿಯಿದೆ, ಜನರ ಜೊತೆ ಬೆರೆಯುತ್ತಾರೆ.

   ಇವರು ಬಿಟ್ಟರೆ ಜ್ಯೋತಿರಾದಿತ್ಯ ಸಿಂಧ್ಯಾ ಇದ್ದಾರೆ, ಅವರು ಇನ್ನೂ ಯುವಕರು, ಉತ್ತಮ ವಾಗ್ಮಿ. ಆದರೆ, ಇಲ್ಲಿ ಯಾರಿಗೂ ಅವಕಾಶ ಸಿಗುತ್ತಿಲ್ಲ ಅಥವಾ ಕೊಡುತ್ತಿಲ್ಲ. ಮನಮೋಹನ್ ಸಿಂಗ್ ಅಂತವರನ್ನೇ ಶೋಕೇಸ್ ಮಾಡಲಿಲ್ಲ. ಮೋದಿ ಏನೂ ಮಾಡದೇ ಇದ್ದರೂ ಶೋಕೇಸ್ ಆಗುತ್ತಿದ್ದಾರೆ.

   ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ದೇಶದ ಜನರಿಗೆ ಮತ್ತು ಮುಖಂಡರಿಗೆ ಒಪ್ಪಿಗೆಯಿಲ್ಲ ಮತ್ತು ವಿಶ್ವಾಸವಿಲ್ಲ. ಯಾಕೆಂದರೆ ಅವರು ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಬಹಳ ಚೈಲ್ಡಿಶ್ ಆಗಿ ನಡೆದುಕೊಳ್ಳುತ್ತಾರೆ.

    ನಿಮ್ಮ ಮತ್ತು ಸಿದ್ದರಾಮಯ್ಯನವರ ನಡುವೆ ಸಮನ್ವಯ ಹೇಗಿರಲಿದೆ?

   ನಿಮ್ಮ ಮತ್ತು ಸಿದ್ದರಾಮಯ್ಯನವರ ನಡುವೆ ಸಮನ್ವಯ ಹೇಗಿರಲಿದೆ?

   ಪ್ರ: ಸಮನ್ವಯ ಸಮಿತಿಗೆ ನೀವು ಸದಸ್ಯರಾಗುತ್ತಿದ್ದೀರಾ, ನಿಮ್ಮ ಮತ್ತು ಸಿದ್ದರಾಮಯ್ಯನವರ ನಡುವೆ ಸಮನ್ವಯ ಹೇಗಿರಲಿದೆ?

   ವಿಶ್ವನಾಥ್: ಮಾಜಿ ಮುಖ್ಯಮಂತ್ರಿಗಳು ಅದಕ್ಕೆ ಅಧ್ಯಕ್ಷರು. ನಮ್ಮ ಸಿಎಂ, ನಮ್ಮ ಮುಖಂಡರು ಮತ್ತು ಕಾಂಗ್ರೆಸ್ ಮುಖಂಡರು ಅದರಲ್ಲಿ ಇದ್ದಾರೆ. ಸಮನ್ವಯ ಸಮಿತಿಯಲ್ಲಿ ಸಮನ್ವಯ ಇರಲೇಬೇಕು. ಸಮನ್ವಯದಲ್ಲಿ ಕುಂದುಕೊರತೆ ಬಂದರೆ, ಸರಕಾರಕ್ಕೆ ತೊಂದರೆಯಾಗುತ್ತದೆ.

   ಸಿದ್ದರಾಮಯ್ಯನವರು ಸಮನ್ವಯದಿಂದ, ಸಂಶಯಬಿಟ್ಟು ನಡೆಸಿಕೊಂಡು ಸಮಿತಿಯನ್ನು ಹೋಗಬೇಕಾಗುತ್ತದೆ. ಕಾಮನ್ ಮಿನಿಮಮ್ ಪ್ರೋಗ್ರಾಂ ಅವನ್ನು ಬರೀಬೇಕು. ಇದರ ಬಗ್ಗೆ ಮೀಟಿಂಗ್, ಚರ್ಚೆ ಏನೂ ನಡೆಯುತ್ತಿಲ್ಲ. ಸುಮ್ಮನೆ ಪತ್ರ ಬರೆದುಕೊಂಡು ಕೂತರೆ ಆಗುವುದಿಲ್ಲ.

   ಸಮಿತಿಯ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳನ್ನು ಕರೆಯುವ ಅಧಿಕಾರ ಸಿದ್ದರಾಮಯ್ಯನವರಿಗಿದೆ. ವಿಧಾನಸೌಧದಲ್ಲಿ ರೂಂ ಕೊಡಲಾಗಿದೆ, ಸಿಬ್ಬಂದಿ ನೀಡಲಾಗಿದೆ. ಸಭೆ ಕರೆದು ಸಮಸ್ಯೆಯಿದ್ದರೆ ಬಗೆಹರಿಸಬೇಕು. ಅದು ಬಿಟ್ಟೂ ಸಾರ್ವಜನಿಕರಿಗೆ ಗೊತ್ತಾಗುವ ಹಾಗೇ ಪತ್ರ ಬರೆಯುವುದಲ್ಲ.

    ಕುಮಾರಸ್ವಾಮಿ ಸಿಎಂ, ರೇವಣ್ಣ ಸೂಪರ್ ಸಿಎಂ, ಗೌಡ್ರು ಸುಪ್ರೀಂ ಸಿಎಂ

   ಕುಮಾರಸ್ವಾಮಿ ಸಿಎಂ, ರೇವಣ್ಣ ಸೂಪರ್ ಸಿಎಂ, ಗೌಡ್ರು ಸುಪ್ರೀಂ ಸಿಎಂ

   ಪ್ರ: ಕುಮಾರಸ್ವಾಮಿ ಸಿಎಂ, ರೇವಣ್ಣ ಸೂಪರ್ ಸಿಎಂ, ಗೌಡ್ರು ಸುಪ್ರೀಂ ಸಿಎಂ ಎನ್ನುವ ಬಿಜೆಪಿ ಟೀಕೆಗೆ ನಿಮ್ಮ ಉತ್ತರ?

   ವಿಶ್ವನಾಥ್: ಇದೆಲ್ಲಾ ಉತ್ಪ್ರೇಕ್ಷೆ, ಯಾಕೆಂದರೆ ಬಿಜೆಪಿಯೊಂದು ರಾಷ್ಟ್ರೀಯ ಪಕ್ಷ. ಹಾಗಾಗಿ ಅವರು ಮಾತನಾಡುವಾಗ ವಿವೇಚನೆಯಿಟ್ಟುಕೊಂಡು ಮಾತನಾಡಬೇಕಾಗುತ್ತದೆ. ಗೌಡ್ರ ಸಲಹೆಯನ್ನು ಮುಖ್ಯಮಂತ್ರಿಗಳು ಕೇಳಿದರು ತಪ್ಪೇನು. Devegowda he is a man of excellence and experienced.

   ಈ ದೇಶದ ಪ್ರಧಾನಿಯಾಗಿದ್ದವರು, ಅವರ ಮಗ ಸಿಎಂ ಆಗಿದ್ದಾರೆ. ರೇವಣ್ಣ ತಮಗೆ ಸಂಬಂಧವಿಲ್ಲದ ಇಲಾಖೆಯ ಕಡತಗಳಿಗೆ ಸಹಿಮಾಡಲು ಆಗುತ್ತಾ? ಸಿಎಂಗೆ ಪವರ್ ಇರುವುದರಿಂದ, ಎಲ್ಲಾ ಇಲಾಖೆಯ ಫೈಲ್ಸ್ ಗಳನ್ನು ತರಿಸಿಕೊಳ್ಳಬಹುದು, ಇದರಲ್ಲಿ ಯಾವುದೇ ತಪ್ಪಿಲ್ಲ. ಹಾಗಾಗಿ ಸುಖಾಸುಮ್ಮನೆ ಬಿಜೆಪಿ ಅಪಪ್ರಚಾರ ಮಾಡುವುದು.

   English summary
   An exclusive interview with newly elected JDS State President Adagur H Vishwanath. During his interview Vishwanath shared his views on co-ordination committee, who is best choice in Congress as PM candidate for the upcoming general election, etc.,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X