ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾರಕಕ್ಕೇರಿದ ಕುಕ್ಕೇ ವಿವಾದ: ಕುಕ್ಕೇ ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರ ಸಂದರ್ಶನ

|
Google Oneindia Kannada News

Recommended Video

ತಾರಕಕ್ಕೇರಿದ ಕುಕ್ಕೇ ವಿವಾದ: ಕುಕ್ಕೇ ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರ ಸಂದರ್ಶನ

ರಾಜ್ಯದ ಮುಜರಾಯಿ ವ್ಯಾಪ್ತಿಯಡಿಯಲಿ ಬರುವ ದೇವಾಲಯಗಳಲ್ಲಿ, ರಾಜ್ಯದ ಬೊಕ್ಕಸಕ್ಕೆ ಅತಿಹೆಚ್ಚು ಆದಾಯ ತಂದುಕೊಡುವ ದೇವಸ್ಥಾನಗಳ ಪೈಕಿ ನಂಬರ್ ಒನ್ ಸ್ಥಾನದಲ್ಲಿರುವ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೇ ಸುಬ್ರಮಣ್ಯ ದೇವಾಲಯ ಸದ್ಯ ಭಾರೀ ಸುದ್ದಿಯಲ್ಲಿದೆ.

ಕುಕ್ಕೇ ಸುಬ್ರಮಣ್ಯ ದೇವಾಲಯ ಮತ್ತು ದೇವಸ್ಥಾನದ ಆವರಣದಲ್ಲೇ ಇರುವ ಸುಬ್ರಮಣ್ಯ ಸಂಪುಟ ನರಸಿಂಹ ಮಠದ ನಡುವೆ ಮನಸ್ತಾಪಗಳು ಹೊಸ ರೂಪ ಪಡೆಯುತ್ತಿದೆ. ದೇವಾಲಯದಲ್ಲಿ ನಡೆಯುವ ಸರ್ಪಸಂಸ್ಕಾರ, ಆಶ್ಲೇಷಬಲಿ ಮುಂತಾದ ಧಾರ್ಮಿಕ ವಿಧಿವಿದಾನಗಳನ್ನು ನೆರವೇರಿಸುವ ವಿಚಾರದಲ್ಲಿ ದೇವಾಲಯದ ಆಡಳಿತ ಮಂಡಳಿ ಮತ್ತು ಮಠದ ನಡುವಿನ ಭಿನ್ನಮತ ಬೀದಿಗೆ ಬಂದಿದೆ.

ಚೈತ್ರಾ ಕುಂದಾಪುರ ಬೀದಿ ಹೆಣವಾಗಬೇಕು: ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟಚೈತ್ರಾ ಕುಂದಾಪುರ ಬೀದಿ ಹೆಣವಾಗಬೇಕು: ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟ

ಕೆಲವು ದಿನಗಳ ಹಿಂದೆ, ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತು ಮತ್ತೊಂದು ಹಿಂದೂ ಸ್ಥಳೀಯ ಸಂಘಟನೆಯ ಯುವಕರ ನಡುವೆ ನಡೆದ ವಾಗ್ಯುದ್ದ, ಮಾರಾಮಾರಿ ಹಲವು ಆಯಾಮದತ್ತ ಸಾಗುತ್ತಿದೆ. ಈ ಸಂದರ್ಭದಲ್ಲಿ ಸುಬ್ರಮಣ್ಯ ಮಠದ ಶ್ರೀ. ವಿದ್ಯಾಪ್ರಸನ್ನ ಸ್ವಾಮೀಜಿಯವರ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಪ್ರಮುಖಾಂಶ ಇಂತಿದೆ:

ಪ್ರ: ವಿದ್ಯಾಭೂಷಣರು ಪೀಠ ತೊರೆಯುವ ಮುನ್ನ ಮಠದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಪೂಜೆಗಳು ನಡೆಯುತ್ತಿರಲಿಲ್ಲ. ಇದು ನಿಮ್ಮ ಕಾಲಘಟ್ಟದಲ್ಲಿ ಆರಂಭವಾಗಿರುವುದಾ?
ಶ್ರೀಗಳು: ವಿದ್ಯಾಭೂಷಣರ ಕಾಲದಿಂದಲೂ ಇದೆಲ್ಲಾ ನಡೆದುಕೊಂಡು ಬರುತ್ತಿತ್ತು, ವ್ಯತ್ಯಾಸವಿಷ್ಟೇ ಅವರ ಕಾಲದಲ್ಲಿ ಮಠದಲ್ಲಿ ಮತ್ತು ದೇವಾಲಯದಲ್ಲೂ ಕಮ್ಮಿ ಮಟ್ಟದಲ್ಲಿ ಪೂಜೆ ನಡೆಯುತ್ತಿತ್ತು. ಈಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಕರಾವಳಿಯ ಹಿಂದೂ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಸಂದರ್ಶನಕರಾವಳಿಯ ಹಿಂದೂ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಸಂದರ್ಶನ

ಹಾಗಾಗಿ, ನಾವು ಪೀಠಾರೋಹಣ ಮಾಡಿದ ನಂತರ, ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆಗಳು ಆರಂಭವಾಯಿತು ಎನ್ನುವುದು ಸತ್ಯಕ್ಕೆ ದೂರವಾದದು. ಹಿಂದಿನಿಂದಲೂ ಮಠದಲ್ಲಿ ನಡೆದುಕೊಂಡು ಬರುತ್ತಿರುವ ಪೂಜೆಗಳು, ಅದನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ, ಇದಕ್ಕೆ ನಮ್ಮಲ್ಲಿ ದಾಖಲೆಗಳಿವೆ.

ಚೈತ್ರಾ ಕುಂದಾಪುರ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು

ಚೈತ್ರಾ ಕುಂದಾಪುರ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು

ಪ್ರ. ಚೈತ್ರಾ ಕುಂದಾಪುರ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರ ನಡುವೆ ಮೊನ್ನೆ ನಡೆದ ಗಲಭೆಯ ಬಗ್ಗೆ ನಿಮ್ಮ ಅಭಿಪ್ರಾಯ?

ಶ್ರೀಗಳು: ಚಾತುರ್ಮಾಸದ ಸಂದರ್ಭದಲ್ಲಿ ನಡೆದ ಸುಧರ್ಮ ಸಭೆಯನ್ನು ಮಠ ಆಯೋಜಿಸಿದ್ದಲ್ಲ, ಅದನ್ನು ಕುಕ್ಕೇ ಸುಬ್ರಮಣ್ಯ ಭಕ್ತ ಮಂಡಳಿ ಏರ್ಪಾಡು ಮಾಡಿದ್ದು. ಚೈತ್ರಾ ಅವರ ಯಾವುದೇ ಸಂಪರ್ಕ ಸಂಖ್ಯೆ ನಮ್ಮಲಿರಲಿಲ್ಲ. ಭಕ್ತ ಮಂಡಳಿಯ ಆಹ್ವಾನದ ಮೇರೆಗೆ ಇಲ್ಲಿಗೆ ಬಂದು ಚೈತ್ರಾ ಭಾಷಣ ಮಾಡಿದ್ದಾರೆ.
ಅದು ದೊಡ್ಡ ವಿವಾದವಾಗಿ ಪರಿಣಮಿಸಿದೆ.

ಈ ವಿಚಾರದಲ್ಲಿ ನಾನು ಹೆಚ್ಚು ಮಾತನಾಡಲು ಈ ಸಂದರ್ಭದಲ್ಲಿ ಇಷ್ಟ ಪಡುವುದಿಲ್ಲ. ಯಾಕೆಂದರೆ, ಚೈತ್ರಾ ಅವರು ಮೊನ್ನೆ ಇಲ್ಲಿಗೆ ಬಂದಿದ್ದಾಗ, ನಾವು ಬೆಂಗಳೂರಿನಲ್ಲಿ ಇದ್ದೆವು, ಹಾಗಾಗಿ ಆ ಘಟನೆಯ ಬಗ್ಗೆ ಹೆಚ್ಚು ಮಾಹಿತಿ ನಮಗಿಲ್ಲ. ಸಾಮಾಜಿಕ ಜಾಲತಾಣದ ವ್ಯವಹಾರದಿಂದ ಉಂಟಾದ ಗೊಂದಲದಿಂದ ಅಹಿತಕರ ಘಟನೆ ನಡೆದಿದೆ ಎಂದು ಘಟನೆ ನಡೆದ ನಂತರ ನಮಗೆ ತಿಳಿದು ಬಂತು.

 ಮಠದಲ್ಲಿ ನಡೆಯುವ ಆಶ್ಲೇಷ ಬಲಿ

ಮಠದಲ್ಲಿ ನಡೆಯುವ ಆಶ್ಲೇಷ ಬಲಿ

ಪ್ರ: ಮಠದಲ್ಲಿ ಆಶ್ಲೇಷ ಬಲಿ ಮಾಡಿದರೆ ಫಲ ಸಿಗುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವವರು ಯಾರು?

ಶ್ರೀಗಳು: ಇದನ್ನು ಯಾವ ಕಾರಣಕ್ಕಾಗಿ ಅಪಪ್ರಚಾರ ಮಾಡಲಾಗುತ್ತಿದೆ, ಯಾರು ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಒಂದಂತೂ ನಿಜ, ಮಠದಲ್ಲಿ ಪೂಜೆ ಮಾಡಿದರೂ ಒಂದೇ, ದೇವಾಲಯದಲ್ಲಿ ಪೂಜೆ ಮಾಡಿದರೂ ಒಂದೇ. ಇಲ್ಲಿ ಗಮನಿಸಬೇಕಾಗಿರುವುದು, ಆಶ್ಲೇಷ ಬಲಿಯಾದಿಯಾಗಿ ಯಾವುದೇ ನಾಗಪೂಜೆಗಳು ಕ್ಷೇತ್ರದಲ್ಲಿ ನಡೆಯುತ್ತಿದೆ ಎನ್ನುವುದು ಮುಖ್ಯವಾಗುತ್ತದೆ.

ಪ್ರ: ಅಷ್ಟಮಂಗಲ ಪ್ರಶೆಯ ವೇಳೆ, ಈಗ ಏನು ಗರ್ಭಗುಡಿಯಲ್ಲಿರುವ ಗಣಪತಿಯ ಸಣ್ಣ ವಿಗ್ರಹವನ್ನು ಮತ್ತೆ ನರಸಿಂಹ ಗುಡಿಯಲ್ಲಿ ಇಡಬೇಕು ಎನ್ನುವ ಉತ್ತರ ಬಂದಿತ್ತೇ, ಈ ಬಗ್ಗೆ ನಿಮ್ಮ ಅಭಿಪ್ರಾಯ?

ಶ್ರೀಗಳು: ಈ ಬಗ್ಗೆ ಸ್ಪಷ್ಟವಾದ ಮಾಹಿತಿ ನನಗಿಲ್ಲ. ಆದರೆ, ಪ್ರಾಚೀನ ವಾಸ್ತು ಪ್ರಕಾರ ಗಣಪತಿಯ ವಿಗ್ರಹ ನೈಖುತ್ಯ ದಿಕ್ಕಿನಲ್ಲಿ ಇರಬೇಕು. ಒಂದು ವೇಳೆ ಗಣಪತಿ ಪ್ರಧಾನ ದೇವರಾಗಿದ್ದರೆ, ಗರ್ಭಗುಡಿಯಲ್ಲಿ ಇಡಬೇಕು. ಅಗ್ನಿ ಮೂಲದಲ್ಲಿ ಗಣಪತಿಯನ್ನು ಇಡಬೇಕು ಎನ್ನುವುದು ಯಾವ ಸಂಪ್ರದಾಯದಲ್ಲೂ ಇಲ್ಲ.

 ಸೇವೆಯಲ್ಲಿ ದುಡ್ಡು ಮಾಡುವ ಆಸಕ್ತಿ ಮಠಕ್ಕಿಲ್ಲ

ಸೇವೆಯಲ್ಲಿ ದುಡ್ಡು ಮಾಡುವ ಆಸಕ್ತಿ ಮಠಕ್ಕಿಲ್ಲ

ಪ್ರ: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲೊಬ್ಬರಾದ ನಿತ್ಯಾನಂದ ಮುಂಡೋಡಿಯವರು, ಕ್ಷೇತ್ರಕ್ಕೆಂದು ಬರುವ ಭಕ್ತರು ತಮಗೆ ಅರಿವಿಲ್ಲದೇ ದುಬಾರಿ ಶುಲ್ಕ ಸಲ್ಲಿಸಿದರೆ ಅದರ ಕುಖ್ಯಾತಿ ಬರುವುದು ದೇವಸ್ಥಾನಕ್ಕೆಯೇ ಹೊರತು, ಮಠಕ್ಕಲ್ಲ ಎನ್ನುವ ಮಾತನ್ನು ಹೇಳಿದ್ದರು. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಶ್ರೀಗಳು: ದೇವಾಲಯದಲ್ಲಿ ಪೂಜೆ ಮಾಡುವುದಕ್ಕೂ ಮಠದಲ್ಲಿ ಪೂಜೆ ಮಾಡುವುದಕ್ಕೂ ಇರುವ ವ್ಯತ್ಯಾಸವೇನಂದರೆ, ದೇವಾಲಯದಲ್ಲಿ ಸಾಮೂಹಿಕವಾಗಿ ಪೂಜೆ ನಡೆಸಲಾಗುತ್ತದೆ. ಮಠದಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಸೇವೆ ನೀಡಿರುವವರಿಗೆ ಊಟೋಪಚಾರ, ದಕ್ಷಿಣೆ, ಹೋಮಹವನಕ್ಕಾಗಿ ಆಗುವ ಖರ್ಚು, ಸ್ವಾಭಾವಿಕವಾಗಿ ದೇವಾಲಯದಲ್ಲಿ ನಡೆಸುವ ಸಾಮೂಹಿಕ ಖರ್ಚಿಗಿಂತ ಹೆಚ್ಚು ಇರುತ್ತದೆ. ಮಠದಲ್ಲಿ 3,200 ರೂಪಾಯಿ ಇದ್ದರೆ ಮಠದಲ್ಲಿ 5,000 ರೂಪಾಯಿ ಇದೆ.

ಭಕ್ತರು, ದೂರುವುದಿದ್ದರೆ, ದೇವಾಲಯಕ್ಕೆ ಬರುವ ರಸ್ತೆ, ದೇವಾಲಯದ ಚಾವಣಿ ಸರಿಯಿಲ್ಲ ಎಂದೂ ಹೇಳಬಹುದು. ಸೇವೆಗಳು ಹೆಚ್ಚಾದಾಗ ದೇವಾಲಯದಲ್ಲಾಗುವ ಅವ್ಯವಸ್ಥೆ ಬಗ್ಗೆಯೂ ಭಕ್ತರು ದೂರಬಹುದು. ಮಠದಲ್ಲಿ 15, 20 ಸಾವಿರ ಶುಲ್ಕ ವಿಧಿಸಲಾಗುತ್ತಿದೆ ಎನ್ನುವುದು ಸುಳ್ಳು, ಎಲ್ಲದಕ್ಕೂ ನಾವು ರಸೀದಿ ಕೊಡುತ್ತೇವೆ.

ದೇವಾಲಯಕ್ಕೆ ಬರುವ ಭಕ್ತಾದಿಗಳನ್ನು ನಾವಾಗಿಯೇ ಮಠಕ್ಕೆ ಬಂದು ಸೇವೆ ಕೊಡಿ ಎಂದು ಕರೆಯುವುದಿಲ್ಲ. ನಿರ್ದಿಷ್ಟ ಪೂಜೆಗಳಿಗೆ ಇಷ್ಟು ಖರ್ಚಾಗುತ್ತದೆ ಎನ್ನುವುದನ್ನು ಮುಂಚಿತವಾಗಿಯೇ ತಿಳಿಸುತ್ತೇವೆ. ಇದರಲ್ಲಿ ದುಡ್ಡು ಮಾಡುವ ಆಸಕ್ತಿ ಮಠಕ್ಕಿಲ್ಲ.

ಮತ್ತೆ ತಾರಕಕ್ಕೇರಿದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವಿವಾದಮತ್ತೆ ತಾರಕಕ್ಕೇರಿದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವಿವಾದ

 ಕುಕ್ಕೇ ಶ್ರೀ ಸುಬ್ರಮಣ್ಯ ದೇವಾಲಯ

ಕುಕ್ಕೇ ಶ್ರೀ ಸುಬ್ರಮಣ್ಯ ದೇವಾಲಯ

ಪ್ರ: ಕುಕ್ಕೇ ದೇವಾಲಯದ ಆಡಳಿತ ಮಂಡಳಿಯ ಸದಸ್ಯರಿಂದ ಶ್ರೀಗಳು ನೊಂದಿದ್ದಾರೆ, ಹಾಗಾಗಿ, ಶ್ರೀಗಳು ಉಪವಾಸ ಕೂತಿದ್ದು ಎನ್ನುವ ಮಾತಿದೆ, ಈ ಬಗ್ಗೆ?

ಶ್ರೀಗಳು: ಆಡಳಿತ ಮಂಡಳಿಯ ಕೆಲವರು ಮಠದ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ, ಮಠಕ್ಕೆ ಅಸ್ತಿತ್ವವೇ ಇಲ್ಲ ಎನ್ನುವ ರೀತಿಯಲ್ಲೂ ಹೇಳಿಕೆಯನ್ನು ನೀಡಿದ್ದಾರೆ. ಅನಾದಿ ಕಾಲದಿಂದಲೂ ನರಸಿಂಹ ದೇವರ ವಿಗ್ರಹ ನಮ್ಮ ಗರ್ಭಗುಡಿಯಲ್ಲಿ ಇತ್ತು. ಸಿದ್ದಿವಿನಾಯಕ ಎನ್ನುವ ಪುಸ್ತಕವನ್ನು ಆಧಾರವಾಗಿ ಇಟ್ಟುಕೊಂಡು, ಮಠಕ್ಕೆ ಇತಿಹಾಸವಿಲ್ಲ, ಶ್ರೀಗಳು ಬೇರೆ ಕಡೆಯಿಂದ ಬಂದವರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

ಆಡಳಿತ ಮಂಡಳಿಯ ಇನ್ನೂ ಕೆಲವರು ನಮ್ಮ ತೇಜೋವಧೆ ಮಾಡಿದ್ದಾರೆ. ಇದರಿಂದ ಸಹಜವಾಗಿ, ನಮಗೆ ಬೇಸರ ತಂದಿದೆ, ಇದರಿಂದ ಉಪವಾಸ ಕೂತಿದ್ದು ಹೌದು.

 ಕೆಲವೊಂದು ವಿಚಾರದಲ್ಲಿ ಮಠದ ಪರವಾಗಿದ್ದರೆ, ಹಾಗೇ ದೇವಾಲಯದ ಪರವಾಗಿಯೂ ಇದ್ದಾರೆ

ಕೆಲವೊಂದು ವಿಚಾರದಲ್ಲಿ ಮಠದ ಪರವಾಗಿದ್ದರೆ, ಹಾಗೇ ದೇವಾಲಯದ ಪರವಾಗಿಯೂ ಇದ್ದಾರೆ

ಪ್ರ: ಸ್ಥಳೀಯರು ಯಾರ ಪರವಾಗಿದ್ದಾರೆ, ದೇವಾಲಯದ ಪರವಾಗಿದ್ದಾರಾ ಅಥವಾ ಮಠದ ಪರವಾಗಿದ್ದಾರಾ?

ಶ್ರೀಗಳು: ಸ್ಥಳೀಯರು ಕೆಲವೊಂದು ವಿಚಾರದಲ್ಲಿ ಮಠದ ಪರವಾಗಿದ್ದರೆ, ಹಾಗೇ ದೇವಾಲಯದ ಪರವಾಗಿಯೂ ಇದ್ದಾರೆ. ನಾವು ಯಾರನ್ನೂ ವಿರೋಧ ಮಾಡಿಕೊಂಡಿಲ್ಲ, ಮಠದಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಿದ್ದೇವೆ. ಸ್ಥಳೀಯರನ್ನು ಬೆಂಬಲಿಸಿದ್ದೇವೆ, ಊರಿನ ಅಭಿವೃದ್ದಿಗೂ ಸಹಕಾರ ನೀಡಿದ್ದೇವೆ.

ಪ್ರ: ನೀವು ಉಪವಾಸ ಕೂತ ವೇಳೆ, ದಸರಾ ನಂತರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಸರಕಾರ ಭರವಸೆ ನೀಡಿತ್ತು. ಅದನ್ನು ಆಧರಿಸಿ ನೀವು ಉಪವಾಸ ಕೈಬಿಟ್ಟಿದ್ದೀರಿ. ಸರಕಾರ ಸಂಧಾನ ಪ್ರಕ್ರಿಯೆ ಆರಂಭಿಸಿದೆಯಾ?

ಶ್ರೀಗಳು: ಉಪವಾಸ ಕೂತಿದ್ದಾಗ, ಸಿಎಂ ಆದಿಯಾಗಿ ತುಂಬಾ ಜನರಿಂದ ಕರೆ ಬಂದಿದ್ದು ನಿಜ. ಉಪಚುನಾವಣೆ ನಡೆಯುತ್ತಿರುವುದರಿಂದ, ಈ ಪ್ರಕ್ರಿಯೆ ಮುಗಿದ ನಂತರ, ಸರಕಾರದಿಂದ ಸಂಧಾನ ಪ್ರಕ್ರಿಯೆ ಆರಂಭವಾಗಬಹುದು ಎನ್ನುವ ಆಶಯದಲ್ಲಿದ್ದೇವೆ.

ಕುಕ್ಕೆ ಸುಬ್ರಹ್ಮಣ್ಯ ವಿವಾದದ ಬಗ್ಗೆ ಪೇಜಾವರರು ಕೊಟ್ಟ ಪ್ರತಿಕ್ರಿಯೆ ಹೀಗಿದೆ...ಕುಕ್ಕೆ ಸುಬ್ರಹ್ಮಣ್ಯ ವಿವಾದದ ಬಗ್ಗೆ ಪೇಜಾವರರು ಕೊಟ್ಟ ಪ್ರತಿಕ್ರಿಯೆ ಹೀಗಿದೆ...

ಮಡೆಸ್ನಾನದ ವಿಚಾರ

ಮಡೆಸ್ನಾನದ ವಿಚಾರ

ಪ್ರ: ಮಡೆಸ್ನಾನದ ವಿಚಾರದಲ್ಲಿ ಕೋರ್ಟ್ ತನ್ನ ತೀರ್ಪನ್ನು ನೀಡಿದೆ. ವೈಯಕ್ತಿಕವಾಗಿ ನೀವು ಯಾವ ಅಭಿಪ್ರಾಯವನ್ನು ಹೊಂದಿದ್ದೀರಾ?

ಶ್ರೀಗಳು: ಸುಪ್ರೀಂಕೋರ್ಟ್ ಮಡೆಸ್ನಾನ ಮಾಡುವುದು ಅಮಾನವೀಯ ಎನ್ನುವ ತೀರ್ಪನ್ನು ನೀಡಿದೆ. ಮಡೆಸ್ನಾನ ಯಾರೂ ಯಾರ ಒತ್ತಡದಿಂದಲೂ ಮಾಡುತ್ತಿರುವುದು ಅಲ್ಲ. ಪರಂಪರೆಯಿಂದ ಆಚರಣೆಯಲ್ಲಿ ಇರುವಂತದ್ದು. ಈ ರೀತಿಯ ಧಾರ್ಮಿಕ ಆಚರಣೆಯ ಬಗ್ಗೆ ನ್ಯಾಯಾಲಯ ತೀರ್ಪು ನೀಡುವಾಗ, ಸಾರ್ವಜನಿಕ ಅಭಿಪ್ರಾಯ ತೆಗೆದುಕೊಳ್ಳುವುದು ಉತ್ತಮ. ಆ ಮೂಲಕ, ಭಕ್ತರ ಭಾವನೆಗೂ ಬೆಲೆಕೊಟ್ಟಂತಾಗುತ್ತದೆ ಎನ್ನುವುದು ನಮ್ಮ ಅಭಿಪ್ರಾಯ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಉರುಳು ಸೇವೆ ಮಾಡಿದ ಕ್ರೀಡಾಪಟು ಪೂವಮ್ಮಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಉರುಳು ಸೇವೆ ಮಾಡಿದ ಕ್ರೀಡಾಪಟು ಪೂವಮ್ಮ

ಸ್ಥಳೀಯ ಮಲೆಕುಡಿಕೆಯರ ಕಲ್ಯಾಣ

ಸ್ಥಳೀಯ ಮಲೆಕುಡಿಕೆಯರ ಕಲ್ಯಾಣ

ಪ್ರ: ನಾಡಿನ ಪ್ರಮುಖ ಹಿಂದೂ ಪೀಠಾಧಿಪತಿಗಳಲ್ಲಿ ನಿಮ್ಮ ಸಂಸ್ಥಾನ ಕೂಡಾ ಒಂದು. ಯಾವರೀತಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು?

ಶ್ರೀಗಳು: ಮಠ ಮತ್ತು ದೇವಾಲಯದ ನಡುವೆ ಸಂಘರ್ಷ ಬಂದಿರುವುದು ಸಹಜ. ಮಠ ಮತ್ತು ದೇವಾಲಯದವರು ಅವರವರ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬಂದರೆ, ಇಂತಹ ಸಮಸ್ಯೆ ಉದ್ಭವಿಸಲಾರದು ಎನ್ನುವುದು ನಮ್ಮ ಅಭಿಪ್ರಾಯ. ಮತ್ತು, ಆದಷ್ಟು ಬೇಗ ಎಲ್ಲಾ ಗೊಂದಲಗಳು ದೂರವಾಗಲಿ ಎನ್ನುವ ಆಶಯವನ್ನು ಹೊಂದಿದ್ದೇವೆ.

ಪ್ರ: ಸ್ಥಳೀಯ ಮಲೆಕುಡಿಕೆಯರ ಕಲ್ಯಾಣಕ್ಕಾಗಿ ಯಾವುದಾದರೂ ಯೋಜನೆಯನ್ನು ಮಠದಿಂದ ಹಾಕಿಕೊಳ್ಳಲಾಗಿದೆಯಾ?

ಶ್ರೀಗಳು: ಮಲೆಕುಡಿಕೆಯರು ದೇವಸ್ಥಾನದ ರಥ ಕಟ್ಟುವುದರಿಂದ ಹಿಡಿದು ಎಲ್ಲಾ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಾರೆ. ಅವರಿಂದ ನಡೆಯಬೇಕಾಗಿರುವ ಸೇವೆಯೂ ಇಂದಿಗೂ ನಡೆದುಕೊಂಡು ಬರುತ್ತಿದೆ. ಆ ಜನಾಂಗವೂ ಕ್ಷೇಮವಾಗಿ ಇರಬೇಕು, ಅದಕ್ಕಾಗಿ ಕೆಲಸಗಳನ್ನು ಮಾಡಬೇಕು ಎನ್ನುವುದು ನಮಗೂ ಅನಿಸಿದೆ. ಹಾಗಾಗಿ, ಸಂದರ್ಭ ಸಿಕ್ಕಾಗ ಅವರ ಕ್ಷೇಮಾಭಿವೃದ್ದಿಗಾಗಿ ನಾವೂ ಕಲ್ಯಾಣ ಕಾರ್ಯಗಳನ್ನು ಮಾಡಿಕೊಂಡು ಬರುತ್ತೇವೆ.

English summary
An exclusive interview with Kukke Subramanya Samputa Narasimha Mutt Vidya Prasanna Swamiji. During the interview Seer was explaining Why Hindu activist Chaitra Kundapur called for religious speech in Kukke during his Chaturmasa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X