ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರ ಸಂದರ್ಶನ

|
Google Oneindia Kannada News

Recommended Video

kannada rajyotsava 2018: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರ ಸಂದರ್ಶನ

1956 ನವೆಂಬರ್ ಒಂದು, ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡಿಗರು ಮತ್ತು ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಿದ ದಿನ. ಹೊಸದಾಗಿ ಏಕೀಕೃತಗೊಂಡ ರಾಜ್ಯದ ಹೆಸರನ್ನು "ಮೈಸೂರು" ಎಂದು ಉಳಿಸಿಕೊಂಡಿದ್ದರೂ, ನವೆಂಬರ್ 1, 1973ರಂದು ಅದನ್ನು "ಕರ್ನಾಟಕ" ಎಂದು ಮರುನಾಮಕರಣ ಮಾಡಲಾಯಿತು.

ಇತ್ತೀಚಿನ ದಿನಗಳಲ್ಲಿ ಕನ್ನಡ, ಕನ್ನಡಪರ ಹೋರಾಟ ಎಂದಾಗ ಮಂಚೂಣಿಯಲ್ಲಿ ಬರುವ ಹೆಸರು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರದ್ದು. ಸುಮಾರು ಇಪ್ಪತ್ತು ವರ್ಷಗಳ ಕಾಲ ನಿರಂತರ, ಕನ್ನಡ ನಾಡುನುಡಿಗಾಗಿ ತಮ್ಮ ಸಂಘಟನೆಯ ಮೂಲಕ ಗೌಡ್ರು ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ರಾಜ್ಯೋತ್ಸವದಿಂದ ಕನ್ನಡದಲ್ಲೇ ಬೋರ್ಡ್ ಹಾಕಿ ಇಲ್ಲವೇ ರೈಟ್ ಹೇಳಿರಾಜ್ಯೋತ್ಸವದಿಂದ ಕನ್ನಡದಲ್ಲೇ ಬೋರ್ಡ್ ಹಾಕಿ ಇಲ್ಲವೇ ರೈಟ್ ಹೇಳಿ

63ನೇ ರಾಜ್ಯೋತ್ಸವದ ಈ ಸಂದರ್ಭದಲ್ಲಿ, 'ಒನ್ ಇಂಡಿಯಾಗೆ' ನಾರಾಯಣ ಗೌಡ್ರು ಸಂದರ್ಶನ ನೀಡಿದ್ದಾರೆ. ಕನ್ನಡದ ಬಗ್ಗೆ ಜನಜಾಗೃತಿ ಮೂಡಿಸುವ ಯಾವಯಾವ ಕಾರ್ಯಕ್ರಮಗಳು, ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ, ಜೊತೆಜೊತೆಗೆ, ಬಿಜೆಪಿ, ಹಿಂದಿ ಭಾಷೆ ಹೇರಿಕೆಯ ಬಗ್ಗೆಯೂ ಗೌಡ್ರ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸಂದರ್ಶನದ ಪ್ರಮುಖಾಂಶ:

ಪ್ರ: ಇಷ್ಟು ವರ್ಷದ ನಿಮ್ಮ ಕನ್ನಡಪರ ಹೋರಾಟದಲ್ಲಿ ಕನ್ನಡ ಭಾಷೆಯ ಅಭಿವೃದ್ದಿಗೆ ತೊಡಕಾಗಿರುವ ವಿಷಯಗಳು ಯಾವುದು?

ನಾ.ಗೌಡ: ಕನ್ನಡ ಭಾಷೆಯ ವಿಚಾರದಲ್ಲಿ, ನನ್ನ ಇಪ್ಪತ್ತು ವರ್ಷದ ಹೋರಾಟದಲ್ಲಿ ನನಗೆ ಕಂಡು ಬಂದಿದ್ದು, ಕನ್ನಡದ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಿದ್ದರೆ ಕನ್ನಡ ಉದ್ದಾರ ಆಗಿರಬಹುದಾಗಿತ್ತು. ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಕನ್ನಡ ಶಾಲೆಗಳನ್ನು ಬೆಳೆಸಬೇಕಾಗಿತ್ತು. ಇದುವರೆಗೆ ಬಂದ ಸರಕಾರಗಳು, ಕನ್ನಡ ಭಾಷೆಯ ಅಭಿವೃದ್ದಿಯ ವಿಚಾರದಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಲಿಲ್ಲ ಎನ್ನುವುದು ನನ್ನ ಅನಿಸಿಕೆ.

ಆಡಳಿತದಲ್ಲಿ ಕನ್ನಡ ಬಳಸಿರೆಂದ ಎಚ್‌ಡಿಕೆ ಟ್ವಿಟ್ಟರ್‌ನಲ್ಲಿ ಇಂಗ್ಲೀಷ್‌: ನೆಟ್ಟಿಗರ ಅಸಮಾಧಾನಆಡಳಿತದಲ್ಲಿ ಕನ್ನಡ ಬಳಸಿರೆಂದ ಎಚ್‌ಡಿಕೆ ಟ್ವಿಟ್ಟರ್‌ನಲ್ಲಿ ಇಂಗ್ಲೀಷ್‌: ನೆಟ್ಟಿಗರ ಅಸಮಾಧಾನ

ಕನ್ನಡದ ಶಾಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು ಎನ್ನುವುದನ್ನು ಮನವರಿಕೆ ಮಾಡಲು ಸರಕಾರ ಮತ್ತು ನಾವೂ ವಿಫಲರಾಗಿದ್ದೇವೆ. ಸರಿಯಾದ ರೀತಿಯಲ್ಲಿ ಯಾವುದೇ ಸರಕಾರ ಕೆಲಸ ಮಾಡಿದ್ದರೆ, ಕನ್ನಡಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

 ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರ ಸಂದರ್ಶನ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರ ಸಂದರ್ಶನ

ಪ್ರ: ಹಿಂದಿ ಭಾಷೆಯ ಮೇಲೆ ಮಾತ್ರ ಕರವೇ ಹೋರಾಟನಾ? ಇತರ ಭಾಷಿಗರಿಂದ ಕನ್ನಡಕ್ಕೆ ತೊಂದರೆಯಾಗುತ್ತಿಲ್ಲವೇ?

ನಾ.ಗೌಡ: ಕರವೇ ಉದಯವಾಗಿ ಇಪ್ಪತ್ತು ವರ್ಷವಾಯಿತು. ಬರೀ ಹಿಂದಿ ಭಾಷೆಯ ವಿರೋಧಿಯಾಗಿ ಕರವೇ ಹೋರಾಟ ಮಾಡಿಕೊಂಡು ಬರಲಿಲ್ಲ. ಕರ್ನಾಟಕದ ನೆಲ,ಗಡಿ, ಸಂಸ್ಕೃತಿ, ಕನ್ನಡಿಗರಿಗೆ ಕೆಲಸದ ವಿಚಾರವನ್ನು ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದೆ. ಬೆಳಗಾವಿ, ಕೆಜಿಎಫ್ ಗಡಿ ವಿಚಾರ, ರೈಲ್ವೇ ಮುಂತಾದ ವಿಚಾರಗಳಲ್ಲಿ ಕನ್ನಡಿಗರಿಗೆ ಆಗಿರುವ ತೊಂದರೆಯ ವಿರುದ್ದ ಹೋರಾಟ ಮಾಡಿಕೊಂಡು ಬಂದಿದೆ. ಹಿಂದಿ ಹೇರಿಕೆಯ ವಿರುದ್ದವೂ ನಮ್ಮ ಹೋರಾಟವಾಗಿತ್ತು.

ನಮಗೆ ಯಾವ ಭಾಷಿಗರಿಂದ ಕುತ್ತಿದೆ ಅದನ್ನು ಗಮನಿಸಬೇಕಾಗುತ್ತದೆ. ಇತರ ಭಾಷಿಗರು ಅಸೆಂಬ್ಲಿ, ಪಾಲಿಕೆಗಳಿಗೆ ಆಯ್ಕೆಯಾದ ಉದಾಹರಣೆಗಳಿವೆ. ಎಐಎಡಿಎಂಕೆ, ಡಿಎಂಕೆಯ ಧ್ವಜ, ಕಟೌಟುಗಳು ಹಾರಾಡುತ್ತಿದ್ದವು. ಅದನ್ನು ತಿಳಿಗೊಳಿಸುವ ಕೆಲಸಗಳನ್ನೂ ನಾವು ಮಾಡಿದ್ದೇವೆ. ಹಿಂದಿ ಭಾಷಿಗರ ಹಾವಳಿ ಜಾಸ್ತಿಯಾದಾಗ, ಸ್ವಾಭಾವಿಕವಾಗಿ ನಮ್ಮ ಹೋರಾಟ ಅವರ ವಿರುದ್ದ ಸಾಗಿತು. ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳನ್ನು ನಿರಂತರವಾಗಿ ಹೇಳಿಕೊಂಡು ಬರಲಾಗುತ್ತಿದೆ.

 ಪಠ್ಯಪುಸ್ತಕಗಳಲ್ಲಿ ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳನ್ನು ಹೇಳಿಕೊಂಡು ಬರಲಾಗುತ್ತಿದೆ

ಪಠ್ಯಪುಸ್ತಕಗಳಲ್ಲಿ ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳನ್ನು ಹೇಳಿಕೊಂಡು ಬರಲಾಗುತ್ತಿದೆ

ಪ್ರ: ಹಿಂದಿ ಈ ದೇಶದ ರಾಷ್ಟ್ರ ಭಾಷೆ ಎಂದು ಎಲ್ಲೂ ಸಾಂವಿಧಾನಿಕವಾಗಿ ನಮೂದಿಯಾಗಿಲ್ಲ. ಆದರೂ, ಅದನ್ನು ಜನರ ಮನಸ್ಸಿನಿಂದ ತೆಗೆಯಲು ಯಾಕೆ ಸಾಧ್ಯವಾಗುತ್ತಿಲ್ಲ?

ನಾ.ಗೌಡ: ಪಠ್ಯಪುಸ್ತಕಗಳಲ್ಲಿ ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳನ್ನು ಹೇಳಿಕೊಂಡು ಬರಲಾಗುತ್ತಿದೆ. ಹಿಂದಿ ಈ ದೇಶದ ಆಡಳಿತ ಭಾಷೆ, ಹಿಂದಿಯಿಂದಲೇ ದೇಶ ಪ್ರಗತಿಯಾಗಿರುವುದು ಎನ್ನುವ ಸುಳ್ಳಿನಕಂತೆ ಇದಕ್ಕೆಲ್ಲಾ ಕಾರಣ. ಐಎಎಸ್, ಐಪಿಎಸ್ ಅಧಿಕಾರಿಗಳೂ ಇದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಹಿಂದಿ ಭಾಷೆ ಮಾತನಾಡಿದರೆ ರಾಷ್ಟ್ರ ನಾಯಕರಾಗುತ್ತಾರೆ ಎನ್ನುವ ಹುಚ್ಚು ಭ್ರಮೆಯಲ್ಲಿ ಜನರನ್ನು ಮುಳುಗಿಸಲಾಯಿತು.

ಹಿಂದಿಯನ್ನು ಆಳವಾಗಿ ಬೇರೂರಲು ಕಾರಣಕರ್ತರು ರಾಷ್ಟ್ರೀಯ ಪಕ್ಷಗಳು. ಹಿಂದಿ ಮಾತನಾಡಿದರೆ ನಿಮಗೆ ಅನುದಾನ, ಬೋನಸ್, ಸವಲತ್ತುಗಳನ್ನು ಕೊಡುತ್ತೇವೆ ಎನ್ನುವ ಭರವಸೆಯನ್ನು ಇವರು ನೀಡುತ್ತಿದ್ದಾರೆ. ಇದೆಲ್ಲಾ, ಹಿಂದಿ ಇಷ್ಟು ಪ್ರಭಾವಿಯಾಗಿ ಬೆಳೆಯಲು ಕಾರಣವಾಯಿತು.

ಹಿಂದಿ ಹೇರಿಕೆ ಹೀಗೇ ಮುಂದುವರಿದರೆ, ಕನ್ನಡಿಗರ ಮುಂದಿನ ದಾರಿ?ಹಿಂದಿ ಹೇರಿಕೆ ಹೀಗೇ ಮುಂದುವರಿದರೆ, ಕನ್ನಡಿಗರ ಮುಂದಿನ ದಾರಿ?

 ಕರವೇ ಸಮುದ್ರ ಇದ್ದ ಹಾಗೆ, 68ಲಕ್ಷ ನೊಂದಾಯಿತ ಸದಸ್ಯರಿದ್ದಾರೆ

ಕರವೇ ಸಮುದ್ರ ಇದ್ದ ಹಾಗೆ, 68ಲಕ್ಷ ನೊಂದಾಯಿತ ಸದಸ್ಯರಿದ್ದಾರೆ

ಪ್ರ: ಕರವೇ ಬಣದಲ್ಲಿದ್ದ ನಾಗರಾಜ್ ಎನ್ನುವವರು ನಿಮ್ಮ ವಿರುದ್ದ ದೂರು ದಾಖಲಿಸಿರುವ ವಿಚಾರದ ಬಗ್ಗೆ?

ನಾ.ಗೌಡ: ಕರವೇ ಸಮುದ್ರ ಇದ್ದ ಹಾಗೆ. 68ಲಕ್ಷ ನೊಂದಾಯಿತ ಸದಸ್ಯರಿದ್ದಾರೆ. ಕೆಲವೊಂದು ವಿಚಾರ ಏನಾಗುತ್ತಿದೆ ಎಂದು ನನಗೆ ತಿಳಿದುಬರುವುದಿಲ್ಲ. ಕರವೇ ಸಿದ್ದಾಂತಕ್ಕೆ ತೊಂದರೆಯಾಗುತ್ತಿದೆ ಅಂದರೆ ಅದನ್ನು ನಾನು ಸರಿಪಡಿಸಬೇಕು. ನಾವು ಸಾರ್ವಜನಿಕ ಜೀವನದಲ್ಲಿ ಇರುವವರು. ಕರವೇ ಹೆಸರು ಇಟ್ಟುಕೊಂಡು ಗುಂಪುಗಾರಿಕೆ ಮಾಡಿದರೆ ಅದನ್ನು ಸಹಿಸಿಕೊಳ್ಳುವುದಿಲ್ಲ. ನಿಷ್ಠೆ, ಬದ್ದತೆ, ಶಿಸ್ತು ಬೇಕು ಎನ್ನುವುದು ನನ್ನ ನಿಲುವು.

ಇಲ್ಲದಿದ್ದರೆ ಇಪ್ಪತ್ತು ವರ್ಷ ಕರವೇ ಸಂಘಟನೆಯನ್ನು ಉಳಿಸಿಕೊಂಡು ಬರಲಾಗುತ್ತಿರಲಿಲ್ಲ. ಹೀಗಿರುವಾಗ, ಇಂತಹ ಕೆಲವೊಂದು ವಿದ್ಯಮಾನಗಳು ನಡೆಯುವುದು ಸಹಜ.

 ತುಳು ಭಾಷಿಗರ ಮೇಲೆ ನಿಮಗೆ ಸಿಟ್ಟಿದೆಯೇ?

ತುಳು ಭಾಷಿಗರ ಮೇಲೆ ನಿಮಗೆ ಸಿಟ್ಟಿದೆಯೇ?

ಪ್ರ: ಕರಾವಳಿ ಕರ್ನಾಟಕದ ಭಾಗದಲ್ಲಿ ಯಾಕೆ ರಕ್ಷಣಾ ವೇದಿಕೆ ಸಕ್ರಿಯವಾಗಿಲ್ಲ? ತುಳು ಭಾಷಿಗರ ಮೇಲೆ ನಿಮಗೆ ಸಿಟ್ಟಿದೆಯೇ?

ನಾ. ಗೌಡ: ಅಖಂಡ ಕರ್ನಾಟಕವನ್ನು ಸಮೃದ್ದವಾಗಿ ಕಟ್ಟಬೇಕು, ಇದು ಕರವೇ ಘೋಷಣೆ. ಆ ಸಂದೇಶವನ್ನು ಇಟ್ಟುಕೊಂಡು ನಾವು ಹೊರಟವರು. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣಕನ್ನಡ ಎನ್ನುವ ಭೇದಬಾವ ನಮಗಿಲ್ಲ, ನಾವೆಲ್ಲರೂ ಒಂದು ಎನ್ನುವುದು ನನ್ನ ನಿಲುವು. ದಕ್ಷಿಣಕನ್ನಡ ಜಿಲ್ಲೆಯಲ್ಲೂ ರಕ್ಷಣಾ ವೇದಿಕೆಯಿದೆ. ಯಾರ ಮೇಲೂ ಬೇಸರ ಮಾಡಿಕೊಳ್ಳಲು, ನಾವು ರಾಜಕಾರಣ ಮಾಡಲು ಹೊರಟವರಲ್ಲ. ತುಳು ಭಾಷಿಗರು ನಮ್ಮ ಅಣ್ಣತಮ್ಮಂದಿರು. ಅಖಂಡ ಕರ್ನಾಟಕವಾಗಬೇಕು ಎನ್ನುವುದು ನನ್ನ ಕನಸು.

 ಕರಾಳದಿನ ಆಚರಿಸಲು ಬಿಡುವುದಿಲ್ಲ

ಕರಾಳದಿನ ಆಚರಿಸಲು ಬಿಡುವುದಿಲ್ಲ

ಪ್ರ: ಬೆಳಗಾವಿಯಲ್ಲಿ ಕರಾಳದಿನ ಆಚರಿಸಲು ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡಿದ್ದೀರಿ. ಯಾವ ರೀತಿ ಬೆಳಗಾವಿಯಲ್ಲಿ ರಾಜ್ಯೋತ್ಸವ ಆಚರಿಸಲು ಯೋಜನೆ ರೂಪಿಸಿಕೊಂಡಿದ್ದೀರಾ?

ನಾ.ಗೌಡ: ಬೆಳಗಾವಿ ಉಳಿದಿದೆ, ಅಲ್ಲಿ ಕನ್ನಡ ಉಳಿದುಕೊಂಡಿದೆ ಎಂದಾದರೆ ಅದಕ್ಕೆ ರಕ್ಷಣಾ ವೇದಿಕೆ ಕಾರಣ ಎಂದು ಹೇಳಲು ಇಷ್ಟ ಪಡುತ್ತೇನೆ. 1999ರಲ್ಲಿ ಕರವೇ ಉದಯವಾಗದೇ ಇದ್ದಿದ್ದರೆ, ಬೆಳಗಾವಿ ನಮ್ಮ ಕೈತಪ್ಪುವ ಸಾಧ್ಯತೆಯಿತ್ತು. ಹೆಚ್ಚಿನ ಆದ್ಯತೆಯನ್ನು ನೀಡಿ, ಅಲ್ಲಿ ನಾವು ಹಣವನ್ನು ವಿನಿಯೋಗಿಸಿದ್ದೇವೆ. ಎಂಇಎಸ್ ಪಕ್ಷದ ಆರು ಜನ ಶಾಸಕರು ಅಸೆಂಬ್ಲಿಗೆ ಆಯ್ಕೆಯಾಗುತ್ತಿದ್ದರು. ಅದು ಬರಬರುತ್ತಾ ನಾಲ್ಕು, ಎರಡಕ್ಕೆ ಇಳಿಯಿತು. ಮೊನ್ನೆ ನಡೆದ ಚುನಾವಣೆಯಲ್ಲಿ ಯಾರೂ ಗೆಲ್ಲಲಿಲ್ಲ.

ಎಂಇಎಸ್ ಈಗ ಸೋತು ಸುಣ್ಣವಾಗಿದೆ. ರಾಜಕೀಯವಾಗಿ ಅಸ್ತಿತ್ವದಲ್ಲಿ ಇರಲು ಈ ರೀತಿಯ ಪುಂಡಾಟಿಕೆಯ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ವರ್ಷ, ಎಲ್ಲಾ ಜಿಲ್ಲೆಗಳನ್ನು ಬಿಟ್ಟು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿ ಹೋಗಲು ನಿರ್ಧರಿಸಿದ್ದೆವು. ಆದರೆ, ಮುಖ್ಯಮಂತ್ರಿಗಳು ನಮ್ಮನ್ನು ಕರೆದು, ಅಲ್ಲಿಗೆ ಹೋಗದಂತೆ ಸೂಚಿಸಿದ್ದಾರೆ. ಕರಾಳ ದಿನವನ್ನಾಗಿ ಆಚರಿಸಲು ಅನುಮತಿ ನೀಡುವುದಿಲ್ಲ ಎನ್ನುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಹಾಗಾಗಿ, ಈ ಬಾರಿ ಅಲ್ಲಿಗೆ ಹೋಗದೇ ಇರಲು ನಿರ್ಧರಿಸಿದ್ದೇವೆ.

ಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆ

ಕರವೇ ಹೋರಾಟ

ಕರವೇ ಹೋರಾಟ

ಪ್ರ: ಕರವೇ ಹೋರಾಟ, ಯಾವತ್ತಾದ್ದಾರೂ ರಾಜಕೀಯ ಪ್ರೇರಿತವಾಗಿತ್ತಾ? ಬಿಜೆಪಿ ವಿರುದ್ದ ಮಾತ್ರ ಯಾಕೆ ನಿಮ್ಮ ಹೋರಾಟ?

ನಾ.ಗೌಡ: ಕರವೇ ಯಾವುದೇ ಪಕ್ಷದ ಲಾಂಛನವಾಗಿ ಕೆಲಸ ಮಾಡಿಲ್ಲ, ನಾವು ಯಾವ ಪಕ್ಷದ ರೂವಾರಿಯೂ ಅಲ್ಲ. ರಕ್ಷಣಾ ವೇದಿಕೆಯನ್ನು ಪ್ರೀತಿಸುವವರು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಹೋದಬಾರಿ ನಮ್ಮ ಐಟಿ ವಿಭಾಗ ಯಾಕಾಗಿ ಬಿಜೆಪಿಗೆ ಮತ ಹಾಕಬೇಡಿ ಎಂದು ಕರೆನೀಡಿತ್ತು ಅಂದರೆ, ಕೆಲವರು ಬಿಜೆಪಿಯ/ಸಂಘ ಪರಿವಾರದ ಹೆಸರನ್ನು ಹೇಳಿಕೊಂಡು ಕರ್ನಾಟಕಕ್ಕೆ ಅವಮಾನ ಮಾಡುವ ಕೆಲಸವನ್ನು ಮಾಡಿದ್ದರು.

ರಕ್ಷಣಾ ವೇದಿಕೆಯ ಮರ್ಯಾದೆ ತೆಗೆಯುವ ಕೆಲಸವನ್ನು ಸಾಮಾಜಿಕ ತಾಣದಲ್ಲಿ ಇವರುಗಳು ಮಾಡಿದ್ದರು. ಹಾಗಾಗಿ, ನಮ್ಮ ಐಟಿ ವಿಭಾಗ ಈ ಅಭಿಯಾನವನ್ನು ಆರಂಭಿಸಿತ್ತು. ನನಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಯಾರು ಕನ್ನಡ, ಕರ್ನಾಟಕವನ್ನು ದ್ವೇಷಿಸುತ್ತಾರೋ, ಅವರು ನಮ್ಮ ಶತ್ರುಗಳು. ಯಾರನ್ನೋ ದ್ವೇಷಿಸಿಕೊಂಡು ನಾವು ಸಾಮ್ರಾಜ್ಯ ಕಟ್ಟಬೇಕಾಗಿಲ್ಲ.

 ನಿಮ್ಮ ಮತ್ತು ಪ್ರವೀಣ್ ಶೆಟ್ಟಿಯವರ ನಡುವಣ ಬಾಂಧವ್ಯ ಹೇಗಿದೆ?

ನಿಮ್ಮ ಮತ್ತು ಪ್ರವೀಣ್ ಶೆಟ್ಟಿಯವರ ನಡುವಣ ಬಾಂಧವ್ಯ ಹೇಗಿದೆ?

ಪ್ರ: ನಿಮ್ಮ ಮತ್ತು ಪ್ರವೀಣ್ ಶೆಟ್ಟಿಯವರ ನಡುವಣ ಬಾಂಧವ್ಯ ಹೇಗಿದೆ?

ನಾ.ಗೌಡ: ಇವತ್ತು ನಾವಿಬ್ಬರೂ ಚೆನ್ನಾಗಿದ್ದೇವೆ. ಭಾಷೆ ಮತ್ತು ರಾಜ್ಯಕ್ಕೆ ಸಂಬಂಧಪಟ್ಟ ವಿಚಾರದ ಬಗ್ಗೆ ನಾವಿಬ್ಬರೂ ಮಾತುಕತೆ ನಡೆಸುತ್ತೇವೆ. ನಮ್ಮ ಹುಟ್ಟುಹಬ್ಬಕ್ಕೆ ಅವರು ಬಂದಿದ್ದರು, ಅವರ ಹುಟ್ಟುಹಬ್ಬಕ್ಕೆ ನಾವು ಹೋಗಿದ್ದೆವು. ಕನ್ನಡಪರ ಸಂಘಟನೆಗಳ ನಡುವೆ ಈ ರೀತಿಯ ಬಾಂಧವ್ಯ ಇರಬೇಕು ಎನ್ನುವುದು ನಮ್ಮ ಆಶಯ ಕೂಡಾ.

ನಾವು ಯಾರೂ ಕೋಟೆ ಕಟ್ಟಿಕೊಂಡು ಮೆರೆಯಬೇಕೆನ್ನುವ ಕನಸನ್ನು ಕಟ್ಟಿಕೊಂಡವರಲ್ಲ. ರಾಜ್ಯದ ಹಿತ ಕಾಪಾಡಬೇಕು ಎನ್ನುವ ಕನಸನ್ನು ಹೊತ್ತುಕೊಂಡವರು. ಹಾಗಾಗಿ, ನಾಡ ಪರವಾಗಿ ಕೆಲಸ ಮಾಡುವಾಗ ನಾವೂ ಎಲ್ಲರನ್ನೂ ಅಭಿಮಾನದಿಂದ ಕಾಣಬೇಕಾಗುತ್ತದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ, ಕನ್ನಡಕ್ಕೆ ಇನ್ನೂ ಹೆಚ್ಚಿನ ತಾಕತ್ತು ಬರುತ್ತದೆ ಎನ್ನುವುದು ನನ್ನ ಅನಿಸಿಕೆ.

ದೀರ್ಘ ಕಾಲದ ಬಳಿಕ ಮತ್ತೆ ಒಂದಾದ ಕರವೇ ಬಣಗಳು?ದೀರ್ಘ ಕಾಲದ ಬಳಿಕ ಮತ್ತೆ ಒಂದಾದ ಕರವೇ ಬಣಗಳು?

 ಸನ್ನಿ ನೈಟ್ ಕಾರ್ಯಕ್ರಮದ ಬಗ್ಗೆ ಕರವೇಯಲ್ಲಿ ಯಾಕಿಷ್ಟು ಗೊಂದಲ?

ಸನ್ನಿ ನೈಟ್ ಕಾರ್ಯಕ್ರಮದ ಬಗ್ಗೆ ಕರವೇಯಲ್ಲಿ ಯಾಕಿಷ್ಟು ಗೊಂದಲ?

ಪ್ರ: ಸನ್ನಿ ನೈಟ್ ಕಾರ್ಯಕ್ರಮದ ಬಗ್ಗೆ ಕರವೇಯಲ್ಲಿ ಯಾಕಿಷ್ಟು ಗೊಂದಲ?

ನಾ.ಗೌಡ: ವಾಸ್ತವತೆ ಏನಂದರೆ, ರಕ್ಷಣಾ ವೇದಿಕೆ ಈ ವಿಚಾರದಲ್ಲಿ ತಲೆಯೇ ಹಾಕಿಲ್ಲ. ಕರವೇ ಹೆಸರನ್ನು ಹಿಂದೆಮುಂದೆ ಇಟ್ಟುಕೊಂಡು ಕೆಲವೊಂದು ಸಂಘಟನೆಗಳು ಭಾಗಿಯಾಗಿದ್ದವೋ ಹೊರತು, ನಮಗೂ ಇದಕ್ಕೂ ಸಂಬಂಧವಿಲ್ಲ.

ಪ್ರ: ಈ ಬಾರಿಯ ರಾಜ್ಯೋತ್ಸವವನ್ನು ಯಾವ ರೀತಿ ವಿಶಿಷ್ಟವಾಗಿ ಆಚರಿಸುತ್ತಿದ್ದೀರಾ?

ನಾ.ಗೌಡ: ಅರ್ಥಪೂರ್ಣವಾಗಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಬೇಕು ಎಂದು ನಮ್ಮೆಲ್ಲಾ ಕಾರ್ಯಕರ್ತರಿಗೆ ಕರೆಕೊಟ್ಟಿದ್ದೇನೆ. ನೊಂದವರ ಸಹಾಯಕ್ಕೆ ನಿಲ್ಲುವ ಕೆಲಸವನ್ನು ಮಾಡಿ. ರಾಜ್ಯೋತ್ಸವದ ದಿನ ಒಂದಷ್ಟು ಗಿಡಗಳನ್ನು ನೆಡಿ. ನಿಮ್ಮ ನಿಮ್ಮ ಭಾಗದಲ್ಲಿ ಕನ್ನಡದ ಫಲಕವನ್ನು ಹಾಕುವಂತೆ ಪ್ರೀತಿಯಿಂದ ಒತ್ತಾಯ ಮಾಡಿ. ಸಮಾಜಮುಖಿ, ಹೋರಾಟಮುಖಿಯಾಗಿ ಕರವೇ ಕಾಣಿಸಿಕೊಂಡಿರುವುದರಿಂದ, ಎರಡೂ ಮುಖದಲ್ಲಿ ಕೆಲಸ ಮಾಡಿಕೊಂಡು ಬನ್ನಿ ಎಂದು ನಮ್ಮ ಕಾರ್ಯಕರ್ತರಿಗೆ ಮನವಿ ಮಾಡಿದ್ದೇನೆ.

ನಟಿ ಸನ್ನಿ ಲಿಯೋನ್ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರುನಟಿ ಸನ್ನಿ ಲಿಯೋನ್ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು

English summary
Eve of 63rd Karnataka Rayotsava: An exclusive interview with Karnataka Rakshana Vedike State President TA Narayana Gowda. During his interview Gowda said, why KRV opposed BJP during last Karnataka Assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X