ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಕೇಸ್: ಮ್ಯಾನ್ ಆಫ್ ದಿ ಮ್ಯಾಚ್ ಆಚಾರ್ಯ ಸಂದರ್ಶನ

|
Google Oneindia Kannada News

ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಸಿಎಂ ಜಯಲಲಿತಾ ವಿರುದ್ದ ದಾಖಲಾಗಿರುವ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (Special Public Prosecutor) ಆಗಿ ಕಾರ್ಯ ನಿರ್ವಹಿಸಿ ನಂತರ ಪರಿಸ್ಥಿತಿಯ ಒತ್ತಡದಿಂದ ಆ ಸ್ಥಾನಕ್ಕೆ ಆಗಸ್ಟ್ 2012ರಲ್ಲಿ ರಾಜೀನಾಮೆ ನೀಡಿದ್ದ ನಾಡಿನ ಹಿರಿಯ ವಕೀಲರು ಉಡುಪಿ ಮೂಲದ ಬಿ ವಿ ಆಚಾರ್ಯ.

ಎಂಟು ವರ್ಷದಿಂದ ಜಯಲಲಿತಾ ಪ್ರಕರಣದಲ್ಲಿ ಸರಕಾರದ ಪರವಾಗಿ ವಾದ ಮಾಡುತ್ತಿದ್ದ ಆಚಾರ್ಯ ಅವರ ಮೇಲೆ ಬಿಎಂಎಸ್ ವಿದ್ಯಾಸಂಸ್ಥೆ ಟ್ರಸ್ಟ್ ಹಣ ದುರುಪಯೋಗದ ದೂರು ದಾಖಲಾಗಿತ್ತು. ಲಾಭದಾಯಕ ಹುದ್ದೆಯನ್ನು ಆಚಾರ್ಯ ಅಲಂಕರಿಸಿದ್ದಾರೆ ಎಂದು ಬಂದ ಆರೋಪದಿಂದ ನೊಂದಿದ್ದ ಆಚಾರ್ಯ ತಮ್ಮ ಸ್ಥಾನಕ್ಕೆ ಅಂದು ರಾಜೀನಾಮೆ ನೀಡಿದ್ದರು.

ಜಯಲಲಿತಾ ಕೇಸಿನಲ್ಲಿ ನ್ಯಾ. ಕುನ್ಹಾ ಬೆನ್ನಿಗೆ ನಿಂತು ಐತಿಹಾಸಿಕ ತೀರ್ಪು ನೀಡಲು ನಿರ್ಣಾಯಕ ಪಾತ್ರ ವಹಿಸಿದ್ದ ಒಂದು ಲೆಕ್ಕದಲ್ಲಿ 'ಮ್ಯಾನ್ ಆಫ್ ದಿ ಮ್ಯಾಚ್' ಎಂದೇ ಹೇಳಬಹುದಾದ ಬಿ ವಿ ಆಚಾರ್ಯ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. (ಜಯಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ)

An exclusive interview with former Advocate General and Special Public Prosecutor B V Acharya interview to Oneindia

ಪ್ರ: ಸರ್ ನಮಸ್ತೆ, ಜಯಲಲಿತಾ ಕೇಸಿನ ಅಂತಿಮ ತೀರ್ಪು ಬರಲು ಇಷ್ಟು ವರ್ಷ ತಗಲಿದ್ದುರ ಬಗ್ಗೆ?

ಆಚಾರ್ಯ: ಮೊದಲಿಗೆ ಈ ಕೇಸಿನ ಅಂತಿಮ ತೀರ್ಪು ಬರಲು ಇಷ್ಟು ಕಾಲ ತಗುಲಿತು ಎನ್ನುವುದಕ್ಕೆ ನನಗೆ ವಿಷಾದವಿದೆ. ನಾನು ಈ ಕೇಸಿನ ವಿಶೇಷ ಅಭಿಯೋಜಕನಾಗಿ ಆಯ್ಕೆಯಾದಾಗ ತ್ವರಿತಗತಿಯಲ್ಲಿ ಕೇಸಿಗೆ ಮಂಗಳ ಹಾಡಲು ಪ್ರಯತ್ನಿಸಿದ್ದಂತೂ ಸತ್ಯ. 59 ಸಾಕ್ಷಿಗಳ ವಿಚಾರಣೆ ಮಾಡಿದ್ದೇವೆ, ಎರಡು ಸಾವಿರಕ್ಕೂ ಹೆಚ್ಚು ದಾಖಲೆಗಳನ್ನು ಮಾರ್ಕ್ ಮಾಡಿದ್ದೆವು. ಜಯಲಲಿತಾ ಮತ್ತೆ ಸಿಎಂ ಅಗಿ ಆಯ್ಕೆಯಾದ ನಂತರ ಕೇಸ್ ಕುಂಟುತ್ತಾ ಸಾಗಿತು. ದಾಖಲೆಗಳನ್ನು ಕನ್ನಡಕ್ಕೆ ಅನುವಾದಿಸಲು ಅನಾವಶ್ಯಕ ಸಮಯ ತೆಗೆದೆಕೊಳ್ಳಲಾಯಿತು.

ಪ್ರ: ಈ ಕೇಸಿನಿಂದ ನೀವು ಹಿಂದೆ ಸರಿದ ಬಗ್ಗೆ, ನಿಮ್ಮ ಅಭಿಪ್ರಾಯ?
ಆಚಾರ್ಯ: ಕೇಸು ಒಂದು ಹಂತದಲ್ಲಿ ಸಾಗುತ್ತಿದ್ದಾಗ, ಕೇಸಿನಿಂದ ಹಿಂದೆ ಸರಿಯಲು ನನ್ನ ಮೇಲೆ ತೀವ್ರ ಒತ್ತಡ ಬರಲಾರಂಭಿಸಿತು. ಒತ್ತಡಕ್ಕೆ ಮಣಿಯದಿದ್ದಾಗ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಯಿತು. ಲಾಭದಾಯಕ ಹುದ್ದೆಯನ್ನು ಹೊಂದಿದ್ದೇನೆಂದು ಒತ್ತಡ ಬಂತು, ಹೀಗಾಗಿ ನೊಂದು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ.

ಪ್ರ: ನ್ಯಾ. ಕುನ್ಹಾ ನೀಡಿದ ಐತಿಹಾಸಿಕ ತೀರ್ಪನ್ನು ಯಾವ ರೀತಿ ವ್ಯಾಖ್ಯಾನಿಸುತ್ತೀರಾ?
ಆಚಾರ್ಯ: ಇದೊಂದು well balanced judgement. ಈ ಕೇಸಿನಲ್ಲಿ ಒಂದರಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿತ್ತು. ನಾಲ್ಕು ವರ್ಷ ಜೈಲು ಶಿಕ್ಷೆಯ ತೀರ್ಪು ಬಂದಿರುವುದರಿಂದ ಇದೊಂದು harsh judgement ಅಂದು ನನಗೆ ಅನಿಸುವುದಿಲ್ಲ. ನೂರು ಕೋಟಿ ದಂಡ ಕೂಡಾ ದೊಡ್ಡ ಮೊತ್ತವಲ್ಲ. 53 ಕೋಟಿ ರೂಪಾಯಿಯ ಲೆಕ್ಕವನ್ನು ಕೇಸಿನಲ್ಲಿ ತೋರಿಸಲೇ ಇಲ್ಲ. ಒಟ್ಟಾರೆ ಇದೊಂದು ಒಳ್ಳೆಯ ತೀರ್ಪು.

ಪ್ರ: ಭವಾನಿ ಸಿಂಗ್ (ಪಬ್ಲಿಕ್ ಪ್ರಾಸಿಕ್ಯೂಟರ್) ಜಾಗಕ್ಕೆ ನೀವು ಮತ್ತೆ ಆಯ್ಕೆಯಾಗುತ್ತೀರಾ?
ಆಚಾರ್ಯ: ಸರಕಾರದಿಂದ ನನಗೆ ಯಾವುದೇ ಕರೆಗಳು ಬಂದಿಲ್ಲ. ಹಾಗಾಗಿ ಈ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ.

ಪ್ರ: ವಕೀಲರಾಗಿ ನಿಮಗೆ ಏನನಿಸುತ್ತೆ, ಜಯಾ ಅವರಿಗೆ ಬೇಲ್ ಸಿಗುತ್ತಾ:
ಆಚಾರ್ಯ: ಮೊದಲ ಒಂದು ವಾರ ಬೇಲ್ ಸಿಗುವುದು ಕಷ್ಟ. ಆಮೇಲೆ ಕೇಸನ್ನು ಪರಾಮರ್ಶಿಸಿ, ಜಯಲಲಿತಾ ಪರ ವಕೀಲರ ವಾದ ಮಂಡನೆಯ ನಂತರ ಅದು ನ್ಯಾಯಾಧೀಶರಿಗೆ ಬಿಟ್ಟ ವಿಚಾರ.

ಪ್ರ: ಜಯಾ ವಿರುದ್ದ ಕಠಿಣ ತೀರ್ಪು ನೀಡಲಾಗಿದೆ ಎಂದು ತಮಿಳುನಾಡಿನಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ?
ಆಚಾರ್ಯ: ನಾನು ಈಗಾಗಲೇ ಹೇಳಿದಂತೆ ಇದು harsh decision ಅಲ್ಲ. ಇನ್ನೊಂದು ವಿಚಾರವೆಂದರೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಹೋರಾಟ, ಪ್ರತಿಭಟನೆ ಕಾನೂನುಬಾಹಿರ. ನ್ಯಾಯಾಲಯ ಹೋರಾಟ ನಡೆಸುವವರ ವಿರುದ್ದವೂ ಕೇಸ್ ಹಾಕಬಹುದು.

English summary
Jayaverdict Is an excellent judgement opinions B V Acharya former Advocate General and Special Public Prosecutor in an exclusive interview with Oneindia
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X