ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಕೋರ್ ಕಮಿಟಿ ಸಭೆ ನಡೆಸದೇ ಅಮಿತ್ ಶಾ ವಾಪಸ್

|
Google Oneindia Kannada News

ಬೆಂಗಳೂರು, ಮೇ 03; ಒಂದು ದಿನದ ಕರ್ನಾಟಕ ಪ್ರವಾಸ ಮುಗಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ಮರಳಿದರು. ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಮಿತ್ ಶಾರಿಗೆ ಬೀಳ್ಕೊಡುಗೆ ನೀಡಿದರು.

ಮಂಗಳವಾರ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಸೋಮವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರ ಜೊತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೆಹಲಿಗೆ ವಾಪಸ್‌ ಆದರು.

ಅಮಿತ್ ಶಾ ಆಗಮನ ಮುನ್ನವೇ ರಾಜಕೀಯ ದಾಳ ಉರುಳಿಸಿದ ಯಡಿಯೂರಪ್ಪಅಮಿತ್ ಶಾ ಆಗಮನ ಮುನ್ನವೇ ರಾಜಕೀಯ ದಾಳ ಉರುಳಿಸಿದ ಯಡಿಯೂರಪ್ಪ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಅಮಿತ್ ಶಾ ಮಂಗಳವಾರ ಮಧ್ಯಾಹ್ನ ಭೋಜನ ಸವಿದರು. ಮುಖ್ಯಮಂತ್ರಿಗಳು ಆಯೋಜನೆ ಮಾಡಿದ್ದ ಔತಣಕೂಟದಲ್ಲಿ ಸಚಿವರು, ಸಂಸದರು, ಶಾಸಕರು ಪಾಲ್ಗೊಂಡಿದ್ದರು.

ರಾಜ್ಯಕ್ಕೆ ಅಮಿತ್ ಶಾ: ಯಾರ ಯಾರ ತಲೆದಂಡ ಖಚಿತ?ರಾಜ್ಯಕ್ಕೆ ಅಮಿತ್ ಶಾ: ಯಾರ ಯಾರ ತಲೆದಂಡ ಖಚಿತ?

Amith Shah Not Chaired Karnataka BJP Core Committee Meeting

ಅಮಿತ್ ಶಾ, ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಮತ್ತು ನಳಿನ್ ಕುಮಾರ್ ಕಟೀಲ್ ಒಟ್ಟಿಗೆ ಕುಳಿತು ಬೆಳ್ಳಿತಟ್ಟೆಯಲ್ಲಿ ಊಟ ಮಾಡಿದ ಫೋಟೋ ವೈರಲ್ ಆಗಿದೆ. ಅಮಿತ್ ಶಾ ಕರ್ನಾಟಕ ಬಿಜೆಪಿ ಕೋರ ಕಮಿಟಿ ಸಭೆ ನಡೆಸಬೇಕಾಗಿತ್ತು.

ನಾಯಕತ್ವ ಬದಲಾವಣೆಯತ್ತ ಗಮನ, ರಾಜ್ಯಕ್ಕೆ ಅಮಿತ್ ಶಾ ಆಗಮನನಾಯಕತ್ವ ಬದಲಾವಣೆಯತ್ತ ಗಮನ, ರಾಜ್ಯಕ್ಕೆ ಅಮಿತ್ ಶಾ ಆಗಮನ

Amith Shah Not Chaired Karnataka BJP Core Committee Meeting

ಆದರೆ ಸಭೆ ಕೊನೆ ಕ್ಷಣದಲ್ಲಿ ರದ್ದಾಯಿತು. ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ ಚರ್ಚೆಯ ಹಿನ್ನಲೆಯಲ್ಲಿ ಕೋರ್ ಕಮಿಟಿ ಸಭೆ ಮಹತ್ವ ಪಡೆದಿತ್ತು. ಅಮಿತ್ ಶಾ ಸಭೆ ನಡೆಸದೇ ವಾಪಸ್ ತೆರಳಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

Recommended Video

BJP ಗೆ ಮುಂದಿನ ಚುನಾವಣೆಗೆ ಸ್ಲೋಗನ್ ಕೊಟ್ಟ ಬರ್ಲಿನ್ ನಲ್ಲಿರೋ ಭಾರತೀಯರು | Oneindia Kannada

ಮೇ 8 ಅಥವ 9ರಂದು ಸಂಪುಟ ವಿಸ್ತರಣೆ ನಡೆಯಬಹುದು ಎಂಬ ಸುದ್ದಿಗಳು ಹಬ್ಬಿವೆ. ಆದರೆ ಪಕ್ಷದ ಯಾವುದೇ ನಾಯಕರು ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.

English summary
BJP senior leader Amith Shah returned to New Delhi from Bengaluru. He not chaired Karnataka BJP core committee meeting during his one day visit to state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X