ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣೆ ಕುರಿತ ಅಮಿತ್ ಶಾ ಟ್ವೀಟ್‌ ಟ್ರೋಲ್ ಆಗುತ್ತಿರುವುದೇಕೆ?

By Manjunatha
|
Google Oneindia Kannada News

ಕರ್ನಾಟಕ ವಿಧಾನಸಭೆ ಚುನಾವಣೆ ದಿನದಂದು ರಾಷ್ಟ್ರೀಯ ಪಕ್ಷಗಳ ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಮತ ಹಾಕುವಂತೆ ಸಂದೇಶ ನೀಡಿದ್ದಾರೆ. ಮೋದಿ, ರಾಹುಲ್ ಗಾಂಧಿ, ಅಮಿತ್ ಶಾ ಈ ಸಾಲಿನ ಪ್ರಮುಖರು.

LIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರುLIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರು

ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕ ಚುನಾವಣೆ ಬಗ್ಗೆ ಮಾಡಿರುವ ಟ್ವೀಟ್‌ ಅಪಹಾಸ್ಯಕ್ಕೆ ಕಾರಣವಾಗಿದೆ. ಏಕೆಂದರೆ ಅವರು ತಮ್ಮ ಟ್ವೀಟ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಧ್ಯೇಯ ವಾಕ್ಯವನ್ನು ಬಳಸಿದ್ದಾರೆ.

ಹೌದು, ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, 'ಮತದಾನ ಜನರ ಧ್ವನಿ, 'ನವ ಕರ್ನಾಟಕ' ಕ್ಕಾಗಿ ಮತ ಹಾಕಲು ಮರೆಯದಿರಿ, ಅರ್ಹ ಅಭ್ಯರ್ಥಿಗೆ ಮತಹಾಕಿರಿ, ಸಧೃಡ ಸರ್ಕಾರಕ್ಕಾಗಿ ಮತಹಾಕಿ ನಿಮ್ಮ ಜವಾಬ್ದಾರಿ ಪೂರ್ಣಗೊಳಿಸಿ' ಎಂಬುದು ಅಮಿತ್ ಶಾ ಅವರ ಟ್ವೀಟ್‌.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Amit Shahs tweet about Karnataka polling day is gone wrong

ಆದರೆ ಅಮಿತ್ ಶಾ ಅವರ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ 'ನವ ಕರ್ನಾಟಕ' ಎಂಬುದು ಕಾಂಗ್ರೆಸ್‌ ಸರ್ಕಾರದ ಧ್ಯೇಯ ವಾಕ್ಯ. 'ನವ ಕರ್ನಾಟಕ 2025' ಎಂಬ ಯೋಜನೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಹೊರ ತಂದಿತ್ತು. ಸಿದ್ದರಾಮಯ್ಯ ಅವರು ಚುನಾವಣೆಗೆ ಮುಂಚೆ ಮಾಡಿದ್ದ ಸಾಧನಾ ಯಾತ್ರೆಯಯೂ ಸಹ 'ನವ ಕರ್ನಾಟಕ ನಿರ್ಮಾಣ'ದ ಧ್ಯೇಯ ವಾಕ್ಯದಡಿಯಲ್ಲಿಯೇ ಆಗಿತ್ತು. ಈಗ ಅಮಿತ್ ಶಾ ಅವರು ಅದೇ ವಾಕ್ಯ ಬಳಸಿ ಮತ ಮಾಡಲು ಹೇಳಿದ್ದಾರೆ.

ಅಮಿತ್ ಶಾ ಅವರು ಈ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 'ಅಮಿತ್ ಶಾ ಅವರು ಕಾಂಗ್ರೆಸ್‌ಗೆ ಮತ ಹಾಕಲು ಹೇಳುತ್ತಿದ್ದಾರೆಯೇ?' ಎಂದು ಕಾಲೆಳೆದಿದ್ದಾರೆ.

English summary
BJP national president Amit Shah's tweet about Karnataka polling day is trending in social media. He uses congress government program name in his tweet and requested people to cast their vote without fail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X