ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 25 ಬಿಜೆಪಿ ಸಂಸದರಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಷರತ್ತು?

|
Google Oneindia Kannada News

Recommended Video

ರಾಜ್ಯದ 25 ಬಿಜೆಪಿ ಸಂಸದರಿಗೆ ಅಮಿತ್ ಶಾ ವಿಧಿಸಿರುವ ಷರತ್ತೇನು? | Oneindia Kannada

ನವದೆಹಲಿ, ಜೂನ್ 18: ಕರ್ನಾಟಕದಿಂದ ಆಯ್ಕೆ ಆಗಿರುವ 25 ಬಿಜೆಪಿ ಸಂಸದರಿಗೆ ರಾಷ್ಟ್ರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಷರತ್ತೊಂದನ್ನು ಹಾಕಿದ್ದಾರೆ ಎನ್ನಲಾಗಿದೆ.

ಅನಂತ್‌ಕುಮಾರ್ ಹೆಗ್ಡೆ ಹೊರತು ಪಡಿಸಿ ರಾಜ್ಯದ ಎಲ್ಲ ಬಿಜೆಪಿ ಸಂಸದರು ನಿನ್ನೆ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮಿತ್ ಶಾ ಹಾಕಿರುವ ಹೊಸ ಷರತ್ತು ಗಮನಿಸಿದರೆ ನಮ್ಮ ಸಂಸದರ ಭಾಷಾ ಪ್ರೇಮ ಅಮಿತ್ ಶಾ ಅವರು ಕಣ್ಣು ಕೆಂಪಗೆ ಮಾಡಿದೆಯಾ ಎಂಬ ಅನುಮಾನ ಮೂಡುತ್ತಿದೆ.

ಸಂಸತ್ ತುಂಬಾ 'ರಾಧೆ' ಸದ್ದು ಮೊಳಗಿಸಿದ ಹೇಮಾ ಮಾಲಿನಿಸಂಸತ್ ತುಂಬಾ 'ರಾಧೆ' ಸದ್ದು ಮೊಳಗಿಸಿದ ಹೇಮಾ ಮಾಲಿನಿ

ರಾಜ್ಯದ ಎಲ್ಲ ಸಂಸದರು ಕಡ್ಡಾಯವಾಗಿ ಹಿಂದಿ ಕಲಿಯಬೇಕು ಎಂದು ಅಮಿತ್ ಶಾ ಅವರು ಸೂಚಿಸಿದ್ದಾರೆ. ಕೇವಲ ರಾಜ್ಯದ ಸಂಸದರಿಗೆ ಮಾತ್ರವಲ್ಲ, ಹಿಂದಿ ಬಳಕೆಯಿಲ್ಲದ ರಾಜ್ಯಗಳಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರಿಗೂ ಈ ಸೂಚನೆಯನ್ನು ಶಾ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದ ಬಹುತೇಕ ಸಂಸದರಿಗೆ ಹಿಂದಿ ಬರುತ್ತದೆ

ರಾಜ್ಯದ ಬಹುತೇಕ ಸಂಸದರಿಗೆ ಹಿಂದಿ ಬರುತ್ತದೆ

ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರು ಆಯ್ಕೆ ಆಗಿದ್ದು, ವಿಶೇಷವೆಂದರೆ ಬಹುತೇಕರಿಗೆ ಹಿಂದಿ ಚೆನ್ನಾಗಿಯೇ ಬರುತ್ತದೆ. ಕೆಲವು ಸಂಸದರಿಗಷ್ಟೆ ಹಿಂದಿ ಭಾಷೆಯ ಮೇಲೆ ಹಿಡಿತ ಸ್ವಲ್ಪ ಕಡಿಮೆ. ಹಾಗಾಗಿ ಅಮಿತ್ ಶಾ ಅವರ ಷರತ್ತು ನಮ್ಮ ರಾಜ್ಯದ ಬಿಜೆಪಿ ಸಂಸದರನ್ನು ಹೆಚ್ಚೇನೂ ಭಾದಿಸದು.

ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಕೇರಳ ಸಂಸದನ ವಿರುದ್ಧ ಸೋನಿಯಾ ಗರಂಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಕೇರಳ ಸಂಸದನ ವಿರುದ್ಧ ಸೋನಿಯಾ ಗರಂ

ಬಿಜೆಪಿಯ ಹಿಂದಿ ಪ್ರೀತಿ ಜಗಜ್ಜಾಹೀರು

ಬಿಜೆಪಿಯ ಹಿಂದಿ ಪ್ರೀತಿ ಜಗಜ್ಜಾಹೀರು

ಬಿಜೆಪಿ ಪಕ್ಷದ ಹಿಂದಿ ಪ್ರೀತಿ ಬಗ್ಗೆ ಎಲ್ಲರಿಗೂ ತಿಳಿದಿದ್ದೆ. ಇತ್ತೀಚೆಗಷ್ಟೆ ಹಿಂದಿ ಭಾಷೆಯನ್ನು ಪಠ್ಯದಲ್ಲಿ ಕಡ್ಡಾಯ ಆಯ್ಕೆಯ ಭಾಷೆ ಮಾಡಲು ಹೋಗಿ ವಿರೋಧ ವ್ಯಕ್ತವಾದ ನಂತರ ಕರಡನ್ನೇ ಬದಲಾಯಿಸಲಾಯಿತು.

ಸಂಸತ್ತಿನ ಬಹುತೇಕ ಚರ್ಚೆಗಳು ಹಿಂದಿಯಲ್ಲಿರುತ್ತವೆ

ಸಂಸತ್ತಿನ ಬಹುತೇಕ ಚರ್ಚೆಗಳು ಹಿಂದಿಯಲ್ಲಿರುತ್ತವೆ

ಸಂಸತ್ತಿನಲ್ಲಿ ಬಹುತೇಕ ಚರ್ಚೆಗಳು ಹಿಂದಿಯಲ್ಲೇ ನಡೆಯುತ್ತವೆ. ಲೋಕಸಭೆ ಸದಸ್ಯರಾದವರಿಗೆ ಹಿಂದಿಯ ಅಗತ್ಯ ಹೆಚ್ಚಿಗೆ ಇರುತ್ತದೆ. ಹಾಗಾಗಿ ಶಾ ಅವರು ಹಿಂದಿ ಕಲಿಯಲು ಸೂಚಿಸಿದ್ದಾರೆ ಎನ್ನಲಾಗಿದೆ.

ಒಬ್ಬರನ್ನು ಬಿಟ್ಟು ಕರ್ನಾಟಕ ಸಂಸದರೆಲ್ಲರೂ ಕನ್ನಡದಲ್ಲಿಯೇ ಪ್ರಮಾಣ ವಚನ ಒಬ್ಬರನ್ನು ಬಿಟ್ಟು ಕರ್ನಾಟಕ ಸಂಸದರೆಲ್ಲರೂ ಕನ್ನಡದಲ್ಲಿಯೇ ಪ್ರಮಾಣ ವಚನ

ದಕ್ಷಿಣದ ರಾಜ್ಯಗಳು ಹಿಂದಿ ವಿರೋಧಿ

ದಕ್ಷಿಣದ ರಾಜ್ಯಗಳು ಹಿಂದಿ ವಿರೋಧಿ

ದ್ರಾವಿಡ ರಾಜ್ಯಗಳು ಎನಿಸಿಕೊಂಡಿರುವ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳು ಹಿಂದಿನಿಂದಲೂ ಹಿಂದಿಗೆ ವಿರುದ್ಧವಾಗಿಯೇ ಇವೆ. ವಿಶೇಷವಾಗಿ ತಮಿಳುನಾಡು ಈ ಪ್ರತಿರೋಧದಲ್ಲಿ ಮುಂದಿದೆ. ಗಮನಿಸಿದಲ್ಲಿ ಅಹಿಂದಿ ರಾಜ್ಯಗಳಲ್ಲಿ ಬಿಜೆಪಿ ಗಟ್ಟಿಯಾಗಿಲ್ಲ ಕರ್ನಾಟಕ ಹೊರತುಪಡಿಸಿ.

English summary
BJP president Amit Shah instructed all non Hindi states BJP MPs to learn Hindi as quick as possible. Karnataka has 25 BJP MPs and almost many MPs know Hindi language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X