ತಪ್ಪಿದ ಅಮಿತ್ ಶಾ-ನಿರಂಜನಾನಂದ ಪುರಿ ಶ್ರೀ ಭೇಟಿ, ಈಶ್ವರಪ್ಪಗೆ ಕ್ಲಾಸ್

Posted By:
Subscribe to Oneindia Kannada
   ಫುಲ್ ಗರಂ ಆಗಿ ಕೆ ಎಸ್ ಈಶ್ವರಪ್ಪಾಗೆ ಕ್ಲಾಸ್ ತೆಗೆದುಕೊಂಡ ಅಮಿತ್ ಶಾ | Oneindia Kannada

   ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆದ ಕಾಗಿನೆಲೆಯ ನಿರಂಜನಾನಂದ ಪುರಿ ಶ್ರೀಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಗೆ ದೊರಕದೇ ಇರುವುದು ಅಮಿತ್ ಶಾ ಅವರಿಗೆ ಮುಜುಗರ ತಂದಿದೆ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

   ಈ ಸಂಬಂಧ ನಿರಂಜನಾನಂದ ಪುರಿ ಶ್ರೀಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಈಶ್ವರಪ್ಪ ಅವರ ಮೇಲೆ ಅಮಿತ್ ಶಾ ಹರಿಹಾಯ್ದಿದ್ದು, ಹೀಗೆ ಆದರೆ ಬಿಜೆಪಿಯು ಕುರುಬ ಸಮಾಜದ ವಿರುದ್ಧ ಇದೆ ಎಂಬ ಅಭಿಪ್ರಾಯ ಬರುತ್ತದೆ ಶೀಘ್ರವೇ ಸ್ವಾಮಿಗಳ ಭೇಟಿಗೆ ವ್ಯವಸ್ಥೆ ಮಾಡಿಸುವಂತೆ ತಾಕೀತು ಮಾಡಿದ್ದಾರೆ.

   ಅಮಿತ್ ಶಾ ಅವರ ಮುಂಬಯಿ ಕರ್ನಾಟಕ ಪ್ರವಾಸ ರದ್ದು

   ನಿನ್ನೆ ಹಿಂದುಳಿದ ವರ್ಗಗಳ ಸಮಾವೇಶದ ನಂತರ ಕಾಗಿನೆಲೆಯ ಕನಕ ಗುರು ಪೀಠಕ್ಕೆ ಅಮಿತ್ ಶಾ ಭೇಟಿ ನೀಡಿದರು ಆದರೆ ಮಠದಲ್ಲಿ ನಿರಂಜನಾನಂದ ಪುರಿ ಶ್ರೀಗಳು ಇರಲಿಲ್ಲ. ಹಾಗಾಗಿ ಗುರುಪೀಠದಲ್ಲಿ ಹಾಜರಿದ್ದ ಶಾಖಾ ಮಠಗಳ ಸ್ವಾಮೀಜಿಗಳ ಜತೆ ಶಾ ಅವರು ಕೆಲ ಹೊತ್ತು ಸಮಾಲೋಚನೆ ನಡೆಸಿ ವಾಪಾಸ್ಸಾಗಿದ್ದರು.

   Amit Shah angry on Eshwarappa for not arranging meeting with Niranjananda puri swamy

   ಆದರೆ ದಾವಣಗೆರೆ ರಸ್ತೆಯ ಬಳಿಯ ಮಲೆಬೆನ್ನೂರು ಬಳಿ ಇರುವ ಕನಕ ಗುರುಪೀಠದ ಶಾಖಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು. ಶಾಖಾ ಮಠದಲ್ಲಿದ್ದ ನಿರಂಜನಾನಂದ ಪುರಿ ಶ್ರೀಗಳ ಜತೆ ಕೆಲಹೊತ್ತು ಚರ್ಚಿಸಿದರು. ಅಮಿತ್ ಶಾಗೆ ಸಿಗದ ಶ್ರೀಗಳು ರಾಹುಲ್ ಗಾಂಧಿ ಅವರಿಗೆ ಸಿಕ್ಕರು. ಇದು ಅಮಿತ್ ಶಾ ಅವರನ್ನು ಕೆರಳಿಸಿದೆ.

   ಅಮಿತ್ ಶಾರಿಂದ ನೀತಿ ಸಂಹಿತೆ ಉಲ್ಲಂಘನೆ, ಕಾಂಗ್ರೆಸ್‌ನಿಂದ ಆಯೋಗಕ್ಕೆ ದೂರು

   ದಾವಣಗೆರೆ ಭಾಗದಲ್ಲಿ ಕುರುಬ ಮತಗಳು ಹೆಚ್ಚಿದ್ದು, ಕನಕ ಗುರುಪೀಠವು ಸಮಾಜದ ಪ್ರಮುಖ ಮಠವಾಗಿರುವ ಕಾರಣ ಮಠದ ಶ್ರೀಗಳು ಅಮಿತ್ ಶಾ ಭೇಟಿಗೆ ಹಿಂದೇಟು ಹಾಕಿದರೆ ಬಿಜೆಪಿಯು ಕುರುಬರ ವಿರುದ್ಧ ಇದೆ ಎಂಬ ಅಭಿಪ್ರಾಯ ಬರುತ್ತದೆ ಎಂದು ಎಣಿಸಿರುವ ಅಮಿತ್ ಶಾ ಅವರು ಕುರುಬ ಸಮುದಾಯದ ಬಿಜೆಪಿ ನಾಯಕ ಈಶ್ವರಪ್ಪ ಅವರಿಗೆ ನಿರಂಜನಾನಂದ ಪುರಿ ಶ್ರೀ ಅವರ ಭೇಟಿಗೆ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   BJP president Amit Shah not get chance to meet Niranjananda puri swamy yesterday. where AICC president Rahul Gandhi met Niranjananda puri swamy. Amit Shah gets upset with this and order Eshwarappa to arrange meeting with Niranjananda puri swamy.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ