• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಭೀತಿ, ಮನೋವಿಜ್ಞಾನಿಯೊಬ್ಬರ ಹತ್ತು ಉಪಯುಕ್ತ ಟಿಪ್ಸ್

|

ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಆವರಿಸುತ್ತಿದ್ದರೂ, ಜನರು ನಿರ್ಲಕ್ಷ್ಯ ಮಾಡುತ್ತಿದ್ದರು. ಆದರೆ, ಯಾವಾಗ ದೈನಂದಿನ ಕೇಸುಗಳಲ್ಲಿ ವಿಪರಿಮೀತ ಹೆಚ್ಚಳ ಕಂಡು ಬರಲಾರಂಭಿಸಿತೋ, ಜನರಿಗೆ ಮತ್ತೆ ಹೋದ ವರ್ಷದ ನೆನಪು ಬರಲು ಆರಂಭಿಸಿತು.

ಪ್ರಮುಖವಾಗಿ, ಕಳೆದ ಒಂದು ವಾರದಿಂದ ವೈರಸ್ ಹರಡುತ್ತಿರುವ ರೀತಿ, ಹಾಸಿಗೆ ಅಭಾವ, ಸ್ಮಶಾನದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಸರಕಾರದ ಆಡಳಿತ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿದೆ.

 ಸರ್ವಪಕ್ಷಗಳ ಸಭೆ, ಕುಮಾರಣ್ಣ ನಿಮಗೊಂದು ಮನವಿ: ಸಲಹೆ ನೀಡಿ, ವ್ಯಂಗ್ಯ ಯಾಕೆ? ಸರ್ವಪಕ್ಷಗಳ ಸಭೆ, ಕುಮಾರಣ್ಣ ನಿಮಗೊಂದು ಮನವಿ: ಸಲಹೆ ನೀಡಿ, ವ್ಯಂಗ್ಯ ಯಾಕೆ?

ಅವಶ್ಯಕತೆಗಿಂತ ಹೆಚ್ಚಾಗಿ ಅದಕ್ಕಿಂತಲೂ ಭಯಭೀತಿ ಪಡುವಂತೆ ಟಿವಿ ಮಾಧ್ಯಮಗಳು ಕೊರೊನಾ ವಿಚಾರವನ್ನು ಪ್ರಸಾರ ಮಾಡುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ. ಕಾರಣ, ಈ ಕೊರೊನಾ ವಿಚಾರ ನಕಾರಾತ್ಮಕ ಶಕ್ತಿ ಬೆಳೆಯಲು ಕಾರಣವಾಗುತ್ತಿರುವುದು.

ಮನೋವಿಜ್ಞಾನಿಯೊಬ್ಬರು ಇಂತಹ ಆರೋಗ್ಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಾರ್ವಜನಿಕರು ಹೇಗೆ ಇರಬೇಕು ಎನ್ನುವುದರ ಬಗ್ಗೆ ಹತ್ತು ಅಂಶಗಳು ಇರುವ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ. ಇದು, ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ ಕೂಡಾ. ಅವರು ಕೊಟ್ಟಿರುವ ಸಲಹೆ ಏನು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

ಕೊರೊನಾ ಸೋಂಕು: ಮೇ 15ರವರೆಗೆ ರಾಷ್ಟ್ರೀಯ ಸ್ಮಾರಕಗಳು ಹಾಗೂ ಮ್ಯೂಸಿಯಂಗಳು ಬಂದ್ ಕೊರೊನಾ ಸೋಂಕು: ಮೇ 15ರವರೆಗೆ ರಾಷ್ಟ್ರೀಯ ಸ್ಮಾರಕಗಳು ಹಾಗೂ ಮ್ಯೂಸಿಯಂಗಳು ಬಂದ್

 ಲೇಟೆಸ್ಟ್ ಸ್ಕೋರ್ ನೋಡಲು, ಕ್ರಿಕೆಟ್ ಮ್ಯಾಚಿನ ಸ್ಕೋರ್ ಬೋರ್ಡ್ ಅಲ್ಲ

ಲೇಟೆಸ್ಟ್ ಸ್ಕೋರ್ ನೋಡಲು, ಕ್ರಿಕೆಟ್ ಮ್ಯಾಚಿನ ಸ್ಕೋರ್ ಬೋರ್ಡ್ ಅಲ್ಲ

1. ಕೊರೊನಾ ವಿಚಾರದಲ್ಲಿ ನಮಗೆಲ್ಲವೂ ತಿಳಿದಿದೆ ಎಂದು ಇದಕ್ಕೆ ಸಂಬಂಧ ಪಟ್ಟ ಯಾವುದೇ ಸುದ್ದಿಯನ್ನು ಅಲಕ್ಷ್ಯ ಮಾಡುವುದು.
2. ಕೊರೊನಾ ಸಾವಿನ ಸಂಖ್ಯೆಯ ಚಾರ್ಟ್ ಅನ್ನು ನೋಡದೇ ಇರುವುದು. ಯಾಕೆಂದರೆ, ಇದು ಲೇಟೆಸ್ಟ್ ಅಂಕಿಅಂಶ ನೋಡಲು ಕ್ರಿಕೆಟ್ ಮ್ಯಾಚಿನ ಸ್ಕೋರ್ ಬೋರ್ಡ್ ಅಲ್ಲ.
3. ಕೊರೊನಾಗೆ ಸಂಬಂಧ ಪಟ್ಟಂತೆ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಅಂತರ್ಜಾಲದಲ್ಲಿ ನೋಡದೇ ಇರುವುದು. ಹೊಸಹೊಸ ಮಾಹಿತಿಗಳು ನಿಮ್ಮ ಮಾನಸಿಕತೆಯನ್ನು ಕುಗ್ಗಿಸುತ್ತದೆ. (ಸಾಂದರ್ಭಿಕ ಚಿತ್ರ)

 ಕೆಲಸದ ಒತ್ತಡದ ಜೊತೆಗೆ ಸಮಯಾವಕಾಶ ಮಾಡಿಕೊಳ್ಳಿ

ಕೆಲಸದ ಒತ್ತಡದ ಜೊತೆಗೆ ಸಮಯಾವಕಾಶ ಮಾಡಿಕೊಳ್ಳಿ

4. ಎಲ್ಲರೂ ಉತ್ತಮ ಮಾನಸಿಕ ಶಕ್ತಿಯನ್ನು ಹೊಂದಿರುವುದಿಲ್ಲ. ಹಾಗಾಗಿ, ಕೊರೊನಾಗೆ ಸಂಬಂಧಿಸಿದಂತೆ ಯಾವುದೇ ನೆಗೆಟಿವ್ ಸುದ್ದಿಯನ್ನು ಗ್ರೂಪ್ ನಲ್ಲಾಗಲಿ, ವೈಯಕ್ತಿಕವಾಗಿ ಕಳುಹಿಸಬೇಡಿ.
5. ಕೆಲಸದ ಒತ್ತಡದ ಜೊತೆಗೆ ಸಮಯಾವಕಾಶ ಮಾಡಿಕೊಂಡು, ಸಂಗೀತವನ್ನು ಆಲಿಸಿ. ಸಂಸಾರದ ಜೊತೆ ಕಾಲ ಕಳೆಯಿರಿ.
6. ಕೊರೊನಾ ಇರಲಿ, ಬಿಡಲಿ ಮನೆಯಲ್ಲಿ ಸ್ವಚ್ಚತೆಗೆ ಪ್ರಾಮುಖ್ಯತೆಯನ್ನು ಕೊಡಿ. (ಸಾಂದರ್ಭಿಕ ಚಿತ್ರ)

 ಕೊರೊನಾ ಯಾವ ಲೆಕ್ಕ, ನಾವು ಸೇಫ್ ಎನ್ನುವ ದೃಢವಾದ ಮನಸ್ಥಿತಿ

ಕೊರೊನಾ ಯಾವ ಲೆಕ್ಕ, ನಾವು ಸೇಫ್ ಎನ್ನುವ ದೃಢವಾದ ಮನಸ್ಥಿತಿ

7. ಸಕಾರಾತ್ಮಕ ಮನಸ್ಥಿತಿ ರೋಗ ನಿರೋಧಕ ಶಕ್ತಿಯನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದೇ ನೆಗೆಟಿವ್ ಮನಸ್ಥಿತಿ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ವೈರಸ್‌ಗಳ ವಿರುದ್ಧ ದುರ್ಬಲವಾಗುತ್ತದೆ ಎನ್ನುವುದು ನೆನಪಿನಲ್ಲಿರಲಿ.
8. ಎಂತೆಂಹಾ ಸಮಸ್ಯೆಗಳನ್ನು ಎದುರಿಸಿದ್ದೇವೆ, ಕೊರೊನಾ ಯಾವ ಲೆಕ್ಕ, ನಾವು ಸೇಫ್ ಎನ್ನುವ ದೃಢವಾದ ಮನಸ್ಥಿತಿ ಇರಲಿ. (ಸಾಂದರ್ಭಿಕ ಚಿತ್ರ)

  ' ಖಾಸಗಿ ಹೊಟೇಲ್‌ಗಳನ್ನ ತಾತ್ಕಾಲಿಕ ಆಸ್ಪತ್ರೆಗಳಾಗಿಸಲು ಸಿದ್ಧತೆ' ಕೊರೊನಾ ಚಿಕಿತ್ಸೆ ಕುರಿತು ಸಚಿವ ಸುಧಾಕರ್ ಮಾಹಿತಿ | Oneindia Kannada
   ನಗುವಿಗಿಂತ ದೊಡ್ಡ ಮೆಡಿಸಿನ್ ಇನ್ನೊಂದಿಲ್ಲ

  ನಗುವಿಗಿಂತ ದೊಡ್ಡ ಮೆಡಿಸಿನ್ ಇನ್ನೊಂದಿಲ್ಲ

  9. ಕಚೇರಿ ಕೆಲಸವನ್ನು ಇನ್ನೂ ಉತ್ತಮವಾಗಿ ಹೇಗೆ ನಿಭಾಯಿಸಬಹುದು ಎನ್ನುವುದರ ಬಗ್ಗೆ ಚಿಂತಿಸಿ. ಕುಟುಂಬದ ಜೊತೆಗೆ ಇನ್ನೂ ಹೇಗೆ ಬೆರೆಯಬಹುದು ಎನ್ನುವುದರ ಬಗ್ಗೆ ಪ್ಲ್ಯಾನ್ ಮಾಡಿ.
  10. ನಗುವಿಗಿಂತ ದೊಡ್ಡ ಮೆಡಿಸಿನ್ ಇನ್ನೊಂದಿಲ್ಲ. ಹಾಗಾಗಿ, ಕಾಮಿಡಿ ಸಿನಿಮಾಗಳು, ದೃಶ್ಯಗಳು, ಸೀರಿಯಲ್ ಗಳನ್ನು ನೋಡಿ. (ಸಾಂದರ್ಭಿಕ ಚಿತ್ರ)

  English summary
  Amid Corona Fear How We can Stay Safe, Physchologists Useful Ten Recommendations
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X