ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಬುಲೆನ್ಸ್‌ ಸೇವೆ ವ್ಯತ್ಯಯ: 108ಗೆ ಕರೆ ಹೋಗ್ತಿಲ್ಲ, ತಾಂತ್ರಿಕ ಸಮಸ್ಯೆ ಒಪ್ಪಿಕೊಂಡ ಸಚಿವರು

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 25: ತಾಂತ್ರಿಕ ಸಮಸ್ಯೆಯಿಂದಾಗಿ ಕರ್ನಾಟಕದಲ್ಲಿ ಆಂಬುಲೆನ್ಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. 108 ನಂಬರ್‌ನ ಸೇವೆ ಎಷ್ಟೋ ದೂರವಾಣಿ ಕರೆಗಳು ಲಭ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಪರಿಸ್ಥಿತಿ ಉಂಟಾದರೂ ಅಚ್ಚರಿ ಇಲ್ಲ.

ಹೌದು, ತುರ್ತು ಆರೋಗ್ಯ ಸೇವೆ ಪಡೆಯಲು 108ನಂಬರ್‌ಗೆ ಕರೆ ಮಾಡಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಆಂಬುಲೆನ್ಸ್‌ ನಮ್ಮ ಮುಂದಿರುತ್ತದೆ. ಆದರೆ ಶನಿವಾರ ಮಧ್ಯಾಹ್ನದ ನಂತರ 108ನಂಬರ್‌ಗೆ ಸಮರ್ಪಕವಾಗಿ ಸಂಪರ್ಕ ಸಾಧಿಸಲು ಆಗುತ್ತಿಲ್ಲ. ಇದಕ್ಕೆ 108 ನಿರ್ವಹಣಾ ಜಿವಿಕೆ ಸಂಸ್ಥೆಯು 15 ವರ್ಷಗಳಷ್ಟು ಹಳೆಯ ಸಾಫ್ಟ್ ವೇರ್ ಅನ್ನು ಬಳಸುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

Breaking; ಬಿಜೆಪಿ ನಾಯಕ ಎಸ್‌. ಎಂ. ಕೃಷ್ಣ ಆಸ್ಪತ್ರೆಗೆ ದಾಖಲುBreaking; ಬಿಜೆಪಿ ನಾಯಕ ಎಸ್‌. ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

ಈ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಆಂಬುಲೆನ್ಸ್ ಸಮಸ್ಯೆ ಸೇವೆ ವ್ಯತ್ಯಯವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಸಂಬಂಧ 108 ಕರೆ ಸ್ವೀಕರಿಸುವ ಸಿಬ್ಬಂದಿ ಮತ್ತು ಸಂಬಂಧಿಸಿದ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಬಳಿಕ ಈ ಕುರಿತು ಮಾಹಿತಿ ನೀಡಿರುವ ಅವರು, ತಾಂತ್ರಿಕ ದೋಷವಿರುವ ಹಿನ್ನೆಲೆಯಲ್ಲಿ ಸಮರ್ಪಕ ಕರೆಗಳ ಸಂಪರ್ಕ ಸಾಧ್ಯವಾಗಿಲ್ಲ.

ಇನ್ನೆರಡು ದಿನದಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದ್ದಾರೆ. ಅಲ್ಲಿಯವರೆಗೆ ಖಾಸಗಿ ಸಂಸ್ಥೆಯ ಆರೋಗ್ಯ ಸೇವೆ ಬಳಸಲು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Ambulance service variation in Karnataka, technical problem accepted by the minister

ಈ ಸಂಬಂಧ 108ಗೆ 'ಒನ್ ಇಂಡಿಯಾ' ಕರೆ ಮಾಡಿದಾಗ ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದ್ದು, ಕೆಲವೊಂದು ಕರೆಗಳ ಸಂಪರ್ಕ ಮಾತ್ರ ಸಾಧ್ಯವಾಗುತ್ತಿದೆ. ಒಂದು ದಿನದಿಂದ ತಾಂತ್ರಿಕ ಸಮಸ್ಯೆ ಎದುರಾಗಿರುವುದು ಸತ್ಯ. ಈ ಬಗ್ಗೆ ಸಚಿವರು ಸಹ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಆದಷ್ಟು ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ಸಂಪರ್ಕ ಸಾಧ್ಯವಾಗುವ ಕರೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಮತ್ತೊಬ್ಬ ಸಿಬ್ಬಂದಿಯು ಈ ರೀತಿಯ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ. ಕರೆ ಮಾಡುವವರು ನೆಟ್‌ವರ್ಕ್, ಫೋನ್ ಸಮಸ್ಯೆ ಇರಬಹುದು ಎಂದು ನಿರ್ಲಕ್ಷ್ಯದ ಮಾತುಗಳನ್ನಾಗಿದ್ದಾರೆ.

ಆಂಬುಲೆನ್ಸ್‌ ವ್ಯತ್ಯಯ: 108 ಕರೆ ಮಾಡುವವರು ಯಾರು?

ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಜೀವ ಉಳಿಸುವಲ್ಲಿ ಆಂಬುಲೆನ್ಸ್ ಗಳ ಆರೋಗ್ಯ ವಲಯದಲ್ಲಿ ಮಹತ್ವದ್ದಾಗಿದೆ. ಇವುಗಳ ಸೇವೆ ಪಡೆಯಲು ವಿವಿಧ ಅಪಘಾತ ಪ್ರಕರಣಗಳು, ಆತ್ಮಹತ್ಯೆ ಯತ್ನ, ವಿಷಕುಡಿದ ಪ್ರಕರಣಗಳು, ಹಾವು ಕಚ್ಚಿದ ಪ್ರಕರಣ, ಹೆರಿಗೆ ಸಮಸ್ಯೆ ಸೇರಿದಂತೆ ಹತ್ತಾರು ಆರೋಗ್ಯ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗೆ ಅಂಬುಲೆನ್ಸ್ ಸೇವೆ ಅಗತ್ಯವಾಗಿರುತ್ತದೆ.

ಆಗ 108ಗೆ ಕರೆ ಮಾಡುತ್ತಾರೆ. ಹೀಗೆ ಶನಿವಾರದಿಂದ ತುರ್ತು ಸೇವೆ ಪಡೆಯಲು ಕರೆ ಮಾಡಿದವರಲ್ಲಿ ಬಹುತೇಕರಿಗೆ ಸಂಪರ್ಕ ಸಾಧ್ಯವಾಗಿಲ್ಲ. ಈ ನಂಬರ್‌ಗೆ ರಾಜ್ಯಾದ್ಯಂತ ನಿತ್ಯ ಸುಮಾರು 8,000 ಕರೆಗಳು ಹೋಗುತ್ತವೆ. ಅಷ್ಟು ಕರೆಗಳಲ್ಲಿ ಅಂದಾಜು 2,000 ಕರೆಗಳು ತುರ್ತು ಪ್ರಕರಣಗಳಿಗೆ ಸಂಬಂಧಿಸಿರುತ್ತವೆ. ಈಗ ಕಂಡು ಬಂದ ತಾಂತ್ರಿಕ ಸಮಸ್ಯೆಯಿಂದಾಗಿ ಗಂಭೀರ ಪ್ರಕರಣಗಳಿಗೆ ಸಕಾಲಕ್ಕೆ ಅಂಬುಲೆನ್ಸ್ ಸೇವೆ ಸಿಗದಿದ್ದರೆ ಅದೆಷ್ಟೋ ಜೀವಗಳಿಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ.

English summary
Ambulance service variation in Karnataka, technical problem accepted by the minister Dr. K. Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X