ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Live Updates : ಪಂಚಭೂತಗಳಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಲೀನ

|
Google Oneindia Kannada News

ಬೆಂಗಳೂರು, ನವೆಂಬರ್ 26: ಶನಿವಾರ ನಿಧನರಾದ ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಸೋಮವಾರ ಸಂಜೆ ನಡೆಯಿತು.

ಸೋಮವಾರ ಸಂಜೆ ಪುತ್ರ ಅಭಿಷೇಕ್ ಅವರು ಅಂತಿಮ ವಿಧಿ ವಿಧಾನಗಳನ್ನು ನೇರವೇರಿಸಿದರು ಮತ್ತು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದಕ್ಕೂ ಮೊದಲು ಕುಟುಂಬದವರು ಅಂತಿಮ ನಮನ ಸಲ್ಲಿಸಿದರು. ಸುಮಲತಾ ಅಂಬರೀಶ್ ಅವರು ಅಂತಿಮ ನಮನ ಸಲ್ಲಿಸಿದರು.

ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದರು.

ambarish final rituals bengaluru kanteerava studio live updates

ಸೋಮವಾರ ಬೆಳಗ್ಗೆ 11.45ರ ಸುಮಾರಿಗೆ ಮಂಡ್ಯದಿಂದ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಯಿತು. ಬಳಿಕ ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋ ತನಕ ಮೆರವಣಿಗೆ ಮಾಡಲಾಗಯಿತು. ಸಾವಿರಾರು ಅಭಿಮಾನಿಗಳು ರಸ್ತೆಯ ಇಕ್ಕೆಲದಲ್ಲಿ ನಿಂತು ಅಂತಿಮ ನಮನ ಸಲ್ಲಿಸಿದರು.

ಅಂಬರೀಶ್ ಅಂತಿಮ ವಿದಾಯದ ಮಾಹಿತಿಗಳಿಗಳು ಇಲ್ಲಿವೆ ನೋಡಿ...

Newest FirstOldest First
5:57 PM, 26 Nov

ಅಂಬರೀಶ್ ಚಿತೆಗೆ ಅಗ್ನಿಸ್ಪರ್ಶ, ಅಗ್ನಿಸ್ಪರ್ಶ ಮಾಡಿದ ಪುತ್ರ ಅಭಿಷೇಕ್
5:42 PM, 26 Nov

ತಂದೆಗೆ ಅಂತಿಮ ನಮನ ಸಲ್ಲಿಸಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಅಭಿಷೇಕ್
5:40 PM, 26 Nov

ಪತಿಯ ಕಾಲಿಗೆ ನಮಸ್ಕರಿಸಿ ಅಂತಿಮ ವಿದಾಯ ಹೇಳಿದ ಸುಮಲತಾ ಅಂಬರೀಶ್
5:37 PM, 26 Nov

ಅಂತಿಮ ನಮನ ಸಲ್ಲಿಸಿದ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್
5:34 PM, 26 Nov

ಅಂಬರೀಶ್ ಪಾರ್ಥೀವ ಶರೀರ ಚಿತೆಗೆ ಸ್ಥಳಾಂತರ. ಕೆಲವೇ ಕ್ಷಣದಲ್ಲಿ ಅಗ್ನಿಸ್ಪರ್ಶ
5:30 PM, 26 Nov

ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಪುತ್ರ ಅಭಿಷೇಕ್‌ರಿಂದ ಅಂತಿಮ ವಿಧಿವಿಧಾನ
5:18 PM, 26 Nov

ಶವಪೆಟ್ಟಿಗೆಯಿಂದ ಪಾರ್ಥಿವ ಶರೀರ ತೆಗೆದು ಕೆಳಕ್ಕೆ ಇರಿಸಿ ಮಂತ್ರಘೋಷ
Advertisement
5:12 PM, 26 Nov

ಪುರೋಹಿತ ನಾಗರಾಜ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕಾರ್ಯಗಳ ನೆರವೇರಿಕೆ
5:07 PM, 26 Nov

ಪಾರ್ಥಿವ ಶರೀರದ ಮೇಲೆ ಹೊದಿಸಿದ ರಾಷ್ಟ್ರಧ್ವಜವನ್ನು ಸುಮಲತಾ ಅಂಬರೀಶ್ ಅವರಿಗೆ ಹಸ್ತಾಂತರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ.
5:04 PM, 26 Nov

ಪೊಲೀಸ್ ತಂಡದಿಂದ ಅಂಬರೀಶ್ ಪಾರ್ಥಿವ ಶರೀರಕ್ಕೆ ವಂದನೆ ಸಲ್ಲಿಕೆ
4:57 PM, 26 Nov

ಅಂಬರೀಶ್ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಕೆ
4:56 PM, 26 Nov

ಗಾಳಿಯಲ್ಲಿ ಮೂರು ಸುತ್ತುಗುಂಡು ಹಾರಿಸಿ ಮತ್ತು ಪೊಲೀಸ್ ಬ್ಯಾಂಡ್‌ನಿಂದ ರಾಷ್ಟ್ರಗೀತೆಯ ವಂದನೆ ಸಲ್ಲಿಕೆ
Advertisement
4:55 PM, 26 Nov

ಇದುವರೆಗೂ ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ. ಮುಂದಿನ ಶಾಸ್ತ್ರ ಮುಂದುವರಿಸಲು ಅವಕಾಶ ನೀಡಿ ಎಂದು ಅಂಬರೀಶ್ ಅಭಿಮಾನಿಗಳಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು.
4:53 PM, 26 Nov

ಅಂತಿಮ ದರ್ಶನ ಪಡೆಯುತ್ತಿರುವ ಕುಟುಂಬದ ಸದಸ್ಯರು
4:47 PM, 26 Nov

ನಟ ಶಿವರಾಜ್ ಕುಮಾರ್, ನಟಿ ಜಯಪ್ರದಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಶಾಸಕ ಗೋಪಾಲಯ್ಯ, ಮುನಿರತ್ನ ನಾಯ್ಡು, ನಿಖಿಲ್ ಕುಮಾರಸ್ವಾಮಿ, ದರ್ಶನ್, ರಾಕ್ ಲೈನ್ ವೆಂಕಟೇಶ್, ಪುನೀತ್ ರಾಜ್ ಕುಮಾರ್, ಯಶ್, ಸತೀಶ್ ರೆಡ್ಡಿ, ದೊಡ್ಡಣ್ಣ, ಅರ್ಜುನ್ ಸರ್ಜಾ, ಚಿನ್ನೇಗೌಡ, ಜಗ್ಗೇಶ್, ಗೋವಿಂದ ಕಾರಜೋಳ, ಎಂಬಿ ಪಾಟೀಲ್, ಶಾಸಕ ಹ್ಯಾರಿಸ್, ಆರ್ ವಿ ದೇಶಪಾಂಡೆ ಮುಂತಾದವರು ಗೌರವ ಸಲ್ಲಿಸಿದರು.
4:40 PM, 26 Nov

ಶ್ರೀ ನಂಜಾವಧೂತ ಮಹಾಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್, ಎಚ್ ಡಿ ರೇವಣ್ಣ, ಕೆಜೆ ಜಾರ್ಜ್, ಡಿಸಿ ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಜಯಮಾಲಾ, ಸಂಸದ ಶಿವರಾಮೇಗೌಡ, ಆರ್. ಅಶೋಕ್, ಮೇಯರ್ ಗಂಗಾಬಿಕಾ ಮಲ್ಲಿಕಾರ್ಜುನ್, ದಿನೇಶ್ ಗುಂಡೂರಾವ್, ನಟ ಮೋಹನ್ ಬಾಬು, ಚಲುವರಾಯಸ್ವಾಮಿ, ನಟಿ ಬಿ. ಸರೋಜಾದೇವಿ, ನಟ ರವಿಚಂದ್ರನ್ ಹೂಗುಚ್ಛ ಇರಿಸಿ ನಮಿಸಿದರು.
4:33 PM, 26 Nov

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂದೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ, ಶಾಸಕ ಬಸವರಾಜ ಹೊರಟ್ಟಿ, ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರಿಂದ ಶ್ರದ್ಧಾಂಜಲಿ ಸಲ್ಲಿಕೆ.
4:28 PM, 26 Nov

ಅಗಲಿದ ಅಂಬರೀಶ್‌ಗೆ ಸರ್ಕಾರಿ ಗೌರವ ವಂದನೆ ಸಲ್ಲಿಕೆ ಆರಂಭ
4:20 PM, 26 Nov

ಕಂಠೀರವ ಸ್ಟುಡಿಯೋದಲ್ಲಿ ಕುಟುಂಬದವರು, ಸರ್ಕಾರದ ಮುಖಂಡರಿಂದ ನಮನ ಸಲ್ಲಿಕೆ ಬಳಿಕ ಸರ್ಕಾರಿ ಗೌರವ ಸಲ್ಲಿಕೆ.
4:10 PM, 26 Nov

ಅಂಬರೀಶ್ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ. ಕೆಲವೇ ಕ್ಷಣಗಳಲ್ಲಿ ಅಂತಿಮ ವಿಧಿ ವಿಧಾನ ಆರಂಭ
4:00 PM, 26 Nov

ಅಂತಿಮ ದರ್ಶನಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ
3:56 PM, 26 Nov

ಬ್ಯಾರಿಕೇಡ್‌ಗಳನ್ನು ಹಾರಿ ಬರಲು ಯತ್ನಿಸುತ್ತಿರುವ ಅಭಿಮಾನಿಗಳನ್ನು ನಿಯಂತ್ರಿಸಲುಪೊಲೀಸರ ಹರಸಾಹಸ
3:48 PM, 26 Nov

ಕಂಠೀರವ ಸ್ಟುಡಿಯೋ ತಲುಪಿದ ಅಂಬರೀಶ್ ಪಾರ್ಥಿವ ಶರೀರ
3:32 PM, 26 Nov

ಮೆರವಣಿಗೆ ಸ್ಟುಡಿಯೋ ಸಮೀಪಿಸುತ್ತಿರುವಂತೆ ಹೆಚ್ಚುತ್ತಿರುವ ಅಭಿಮಾನಿಗಳ ದಂಡು
3:20 PM, 26 Nov

ಕಂಠೀರವ ಸ್ಟುಡಿಯೋದೊಳಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ
3:12 PM, 26 Nov

ಕಂಠೀರವ ಸ್ಟುಡಿಯೋ ಸುತ್ತಮುತ್ತ ವಾಹನ ಸಂಚಾರಕ್ಕೆ ನಿರ್ಬಂಧ
3:00 PM, 26 Nov

ಗೊರಗುಂಟೆಪಾಳ್ಯದಲ್ಲಿ ಸಾಗುತ್ತಿರುವ ಮೆರವಣಿಗೆ
2:38 PM, 26 Nov

ಕಂಠೀರವ ಸ್ಟುಡಿಯೋಗೆ ಆಗಮಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
2:38 PM, 26 Nov

ಕಂಠೀರವ ಸ್ಟುಡಿಯೋಗೆ ಆಗಮಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
2:34 PM, 26 Nov

ಅಂತ್ಯ ಸಂಸ್ಕಾರದ ಸ್ಥಳ ತಲುಪಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ.
READ MORE

English summary
Demised Actor, politician Ambarish to be laid rest in peace with state honors near Dr Rajukumar memorial in Kanteerava Studio, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X