• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ನಿ ಸುಮಲತಾ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದರು ಅಂಬರೀಶ್‌?

|
   Ambareesh : ಪತ್ನಿ ಸುಮಲತಾ ಮೊಬೈಲ್ ನಂಬರ್ ನ ಅಂಬಿ ಏನಂತ ಸೇವ್ ಮಾಡಿದ್ರು ಗೊತ್ತಾ? | Oneindia Kannada

   ಬೆಂಗಳೂರು, ನವೆಂಬರ್ 26: ಪತ್ನಿ ಸುಮಲತಾ ಅವರ ಮೊಬೈಲ್ ನಂಬರ್ ಅನ್ನು ಅಂಬರೀಶ್‌ ವಿಚಿತ್ರ ಹೆಸರಿನಿಂದ ಸೇವ್ ಮಾಡಿದ್ದರು. ಅವರು ಸೇವ್ ಮಾಡಿದ್ದ ಹೆಸರೇ ಹೇಳುತ್ತಿತ್ತು ಸುಮಲತಾ ಎಡೆಗೆ ಅಂಬರೀಶ್‌ಗೆ ಯಾವ ಪರಿ ಪ್ರೀತಿ ಇತ್ತೆಂದು.

   ಅಂಬರೀಶ್‌ ಅವರ ಮೊಬೈಲ್‌ಗೆ 'ಗಾಡೆಸ್‌' ಎಂಬ ಸಂಖ್ಯೆಯಿಂದ ಕರೆ ಬಂದರೆ ರಿಸೀವ್ ಮಾಡದೇ ಇರುತ್ತಿರಲಿಲ್ಲ. ಅದು ಪತ್ನಿ ಸುಮಲತಾ ಅವರಿಂದ ಬರುವ ಕರೆ ಆಗಿರುತ್ತಿತ್ತು. ಹೌದು, ಅಂಬರೀಶ್ ಅವರು ಸುಮಲತಾ ಅವರ ಸಂಖ್ಯೆಯನ್ನು ಗಾಡೆಸ್ ಎಂದು ಸೇವ್ ಮಾಡಿಕೊಂಡಿದ್ದರು.

   ಬದುಕಿನ ಲಗಾಮು ದೇವ್ರ ಕೈಯಲ್ಲಿ.. ನಾವೇನು ಮಾಡೋಣ?

   ಅಂಬರೀಶ್ ಹಾಗೂ ಸುಮಲತಾ ಮದುವೆ ಬಹಳ ತಡವಾಗಿ ಆಯಿತು. ಅವರು ಮದುವೆಯಾದದ್ದು 1991 ರಲ್ಲಿ. ಅದೂ ಅಂಬರೀಶ್‌ ಅವರ ಹಲವು ಮಿತ್ರರು ಸೇರಿ ಬೈದಮೇಲೆ ಅಂಬರೀಶ್‌ ಅವರು ಸುಮಲತಾ ಅವರನ್ನು ಮದುವೆಯಾದರು.

   ಸಾವಿನ ನಂತರವೂ ಜೊತೆಯಾಗಲಿದ್ದಾರೆ ಅಂಬಿ-ವಿಷ್ಣು: ಕಾರಣ ಕುಮಾರಸ್ವಾಮಿ

   ಸುಮಲತಾ ಅವರು ಅಂಬರೀಶ್‌ ಅವರ ಬಾಳಿಗೆ ಬಂದ ಮೇಲೆ ಅಂಬರೀಶ್‌ ಅವರ ಜೀವನ ಸಾಕಷ್ಟು ಸುಧಾರಿಸಿತು. ಅದಕ್ಕೆ ಮುನ್ನಾ ಕೆಟ್ಟ ದಿನಗಳನ್ನೇನೂ ಅವರು ಕಂಡಿರಲಿಲ್ಲವಾದರೂ, ಅಂಬರೀಶ್‌ ರಾಜಕೀಯ ಜೀವನ ಪ್ರಾರಂಭವಾಗಿದ್ದು, ಮತ್ತು ಸಾಲು-ಸಾಲು ಹಿಟ್ ಚಿತ್ರಗಳನ್ನು ನೀಡಿದ್ದು ಮದುವೆಯ ನಂತರವೇ.

   ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ

   ಅಂಬಿ ಪಾಲಿಗೆ ಸುಮಾ ದೇವತೆ

   ಅಂಬಿ ಪಾಲಿಗೆ ಸುಮಾ ದೇವತೆ

   ಅಂಬರೀಶ್ ಅವರ ಹಳಿ ತಪ್ಪುತ್ತಿದ್ದ ಜೀವನವನ್ನು ಸರಿ ದಾರಿಗೆ ತಂದವರು ಸುಮಲತಾ ಎಂದೂ ಕೆಲವರು ಹೇಳುವುದಿದೆ ಹಾಗಾಗಿಯೇ ಅಂಬರೀಶ್ ಅವರು ಸುಮಲತಾ ಹೆಸರನ್ನು ಗಾಡೆಸ್‌ ಅರ್ಥಾತ್‌ ದೇವತೆ ಎಂದು ಸೇವ್ ಮಾಡಿಕೊಂಡಿದ್ದರು.

   ಕಪ್ಪು ಮಚ್ಚೆ ಬೀಳದಂತೆ ಬಾಳಿದರು

   ಕಪ್ಪು ಮಚ್ಚೆ ಬೀಳದಂತೆ ಬಾಳಿದರು

   ಕೌಟುಂಬಿಕ ಜೀವನದಲ್ಲಿ ಒಂದೂ ಕಪ್ಪು ಮಚ್ಚೆ ಬರದಂತೆ ಬಾಳಿದವರು ಅಂಬರೀಶ್. ಮಗ ಅಭಿಷೇಕ್‌ ಪತ್ನಿ ಸುಮಲತಾ ಅವರುಗಳು ಅಂಬಿ ಅವರ ಶಕ್ತಿಯಾಗಿದ್ದರು. ಚಿತ್ರರಂಗದಲ್ಲಿ ಅಂಬರೀಶ್‌ ಅವರಿಗೆ ಸಿಗುತ್ತಿದ್ದ ಗೌರವವೇ ಸುಮಲತಾ ಅವರಿಗೂ ಸಿಗುತ್ತಿತ್ತು. ನಟ-ನಟಿಯರು ಸುಮಲತಾ ಅವರನ್ನು ಅಮ್ಮನೆಂದೇ ಸಂಭೋದಿಸುತ್ತಿದ್ದರು.

   ಪತ್ನಿ ಎದುರಿಗಿದ್ದರೆ ಬೈಗುಳಗಳಿಗೆ ಬ್ರೇಕ್‌

   ಪತ್ನಿ ಎದುರಿಗಿದ್ದರೆ ಬೈಗುಳಗಳಿಗೆ ಬ್ರೇಕ್‌

   ಅಂಬರೀಶ್‌ ಅವರದ್ದು ಒರಟು ಮಾತು ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದೆ, ತಮ್ಮ ಅಭಿಮಾನಿಗಳನ್ನೂ ಬೈದೇ ಮಾತನಾಡಿಸುತ್ತಿದ್ದರು. ಆದರೆ ಅವರ ಗುಣವೆಂದರೆ ಹೆಣ್ಣುಮಕ್ಕಳನ್ನೂ ಎಂದೂ ಬೈದವರಲ್ಲವಂತೆ, ಅದರಲ್ಲಿಯೂ ಸುಮಲತಾ ಅವರು ಎದುರಿಗೆ ಇದ್ದಾಗಲಂತೂ ಬೈಗುಳಗಳನ್ನು ಬಳಸುತ್ತಲೇ ಇರಲಿಲ್ಲವಂತೆ ಅಂಬಿ. ಅದು ಅಂಬಿ ಅವರು ಕುಟುಂಬಕ್ಕೆ, ಪತ್ನಿ ಸುಮಲತಾ ಅವರಿಗೆ ನೀಡುತ್ತಿದ್ದ ಗೌರವ.

   ಅತ್ತು-ಅತ್ತು ಹಣ್ಣಾದ ಸುಮಲತಾ

   ಅತ್ತು-ಅತ್ತು ಹಣ್ಣಾದ ಸುಮಲತಾ

   ಅಂಬರೀಶ್‌ ಅವರು ಶನಿವಾರ ರಾತ್ರಿ ನಿಧನರಾದರು. ಅವರ ಅಂತ್ಯಸಂಸ್ಕಾರ ಆದದ್ದು ಸೋಮವಾರ ಮೂರು ದಿನಗಳ ಕಾಲವೂ ಸುಮಲತಾ ಅವರು ಅನುಭವಿಸಿದ ನೋವು ಕರ್ನಾಟಕವೇ ನೋಡಿದೆ. ಅವರು ಅತ್ತು-ಅತ್ತು ಹಣ್ಣಾದರು. ಒಂದು ಸಮಯದಲ್ಲಿ ತಲೆ ತಿರುಗಿ ಬಿದ್ದು ಬಿಟ್ಟರು ಆದರೆ ಅಲ್ಲಿಯೇ ಇದ್ದ ರಾಕ್‌ಲೈನ್ ವೆಂಕಟೇಶ್ ಮತ್ತು ಯಶ್ ಅವರನ್ನು ಹಿಡಿದು ನಿಲ್ಲಿಸಿದರು. ಅಮರನಾಥ ಅಂಬರೀಶ್‌ ಅವರೆಡೆಗೆ ಸುಮಲತಾ ಅವರದ್ದು ಆರದ ಪ್ರೇಮ.

   English summary
   Actor Ambareesh saved his wife Sumalatha's mobile number as goddess. As said Ambareesh got very good luck after marrying Sumalatha. Both were married on 8th December 1991.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X