ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಂಭ್ರಮ

By ರವಿ ವಳಲಂಬೆ, ಉಡುಪಿ
|
Google Oneindia Kannada News

ಜೈನ ಕಾಶಿ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ವಿಶ್ವನುಡಿಸಿರಿ ವಿರಾಸತ್ ಸಂಭ್ರಮ. ಅದಕ್ಕಾಗಿ ಅಂತಿಮ ಹಂತದ ಸಿದ್ದತೆ ಪೂರ್ಣಗೊಂಡಿದೆ. ಶಿವರಾಮ ಕಾರಂತರ ಹೆಸರಿನ ಸಭಾಂಗಣದ ರತ್ನಾಕರವರ್ಣಿ ಮುಖ್ಯ ವೇದಿಕೆಯಲ್ಲಿ ವಿಶ್ವ ನುಡಿಸಿರಿ ವಿರಾಸತ್ ನ ಉದ್ಘಾಟನೆ ಗುರುವಾರ ಸಂಜೆ ನಡೆಯಲಿದೆ.

ಮೊದಲಿಗೆ ಕನ್ನಡ ಮನಸ್ಸು ಅಂದು-ಇಂದು -ಮುಂದು ಕುರಿತು ಸಾಹಿತ್ಯಗೋಷ್ಠಿ ನಡೆದರೆ, ಸಂಜೆಯಾಗುತ್ತಿದ್ದಂತೆ ಸಾಹಿತ್ಯದ ಚಟುವಟಿಕೆ ನೇಪಥ್ಯಕ್ಕೆ ಸರಿದು, ಸಾಂಸ್ಕೃತಿಕ ಸಂಭ್ರಮ ವಿರಾಸತ್ ನ ಕಲಾ ಲೋಕ ವಿದ್ಯಾಗಿರಿಯಲ್ಲಿ ತೆರದುಕೊಳ್ಳಲಿದೆ. [ಗ್ಯಾಲರಿ : ವಿಶ್ವ ನುಡಿಸಿರಿ ವಿರಾಸತ್ 2013]

ಸುಮಾರು 5 ಲಕ್ಷ ಸಾಹಿತ್ಯ ಸಾಂಸ್ಕೃತಿಕ ಆಸಕ್ತರು ಭಾಗವಹಿಸುವ ನಿರೀಕ್ಷೆ ಸಂಘಟಕ ಡಾ. ಮೋಹನ ಆಳ್ವರದ್ದು. ಡಿ. 19 ರಂದು ಮಧ್ಯಾಹ್ನ 3 ಗಂಟೆಗೆ ಮೂಡಬಿದಿರೆಯಲ್ಲಿ ಅದ್ದೂರಿಯ ಮೆರವಣಿಗೆ ನಡೆಯಲಿದೆ.

ಅಂದಾಜು 150 ಸಾಂಸ್ಕೃತಿಕ ತಂಡಗಳ 5 ಸಾವಿರದಷ್ಟು ಕಲಾವಿದರು ಮೆರವಣಿಗೆಗೆ ಮೆರುಗು ನೀಡಲಿದ್ದಾರೆ. ವಿದ್ಯಾಗಿರಿಯ 100 ಎಕರೆ ಪ್ರದೇಶದಲ್ಲಿ ನಡೆಯುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಬೃಹತ್ ಲೋಕ ತೆರೆದುಕೊಳ್ಳಲು ಈ ವರ್ಣರಂಜಿತ ಮೆರವಣಿಗೆ ನಾಂದಿ ಹಾಡಲಿದೆ. ಅಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ತಯಾರಿ ಹೇಗಿದೆ ಚಿತ್ರಗಳಲ್ಲಿ ನೋಡಿ..

ವಿದ್ಯಾಗಿರಿಯಲ್ಲಿ

ವಿದ್ಯಾಗಿರಿಯಲ್ಲಿ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಕರ್ನಾಟಕ ಮುಕ್ತ ವಿಶ್ವ ವಿದ್ಯಾಲ್ಯ, ಕುವೆಂಪು ವಿವಿಯ ಮಾಜಿ ಉಪ ಕುಲಪತಿಗಳು ಉಪಸ್ಥಿತರಿರುತ್ತಾರೆ.

ಎರಡನೇ ದಿನದ ಕಾರ್ಯಕ್ರಮ

ಎರಡನೇ ದಿನದ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ತೀಜಾನ್ ಬಾಯಿ ಅವರಿಗೆ ವಿಶ್ವ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೃಷಿ ಸಿರಿಯನ್ನು ವರ್ಗೀಸ್ ಕುರಿಯನ್ ವೇದಿಕೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಉದ್ಘಾಟಿಸಲಿದ್ದಾರೆ.
ಪ್ರೊ. ವಿವೇಕ್ ರೈ ಅವರು ಎಚ್ ಎಲ್ ನಾಗೇಗೌಡ ವೇದಿಕೆಯಲ್ಲಿ ಜನಪದ ಸಿರಿಗೆ ಚಾಲನೆ ನೀಡಲಿದ್ದಾರೆ.

ಪುಸ್ತಕ ಮೇಳ

ಪುಸ್ತಕ ಮೇಳ

ಸುಮಾರು 700ಕ್ಕೂ ಅಧಿಕ ಮಳಿಗೆಗಳಲ್ಲಿ ವೈವಿಧ್ಯಮಯ ಪುಸ್ತಕಗಳು ಓದುಗರಿಗೆ ಸಿಗಲಿದೆ. ಆಳ್ವಾಸ್ ಕಾಲೇಜ್ ಲೆಕ್ಚರರ್ ಮೋಹನ್ ಗಣಪತಿ ಹೆಗ್ಡೆ ಅವರ ಅಪರೂಪದ ನ್ಯೂಸ್ ಪೇಪರ್ ಸಂಗ್ರಹ ಕೂಡಾ ಕಾಣಬಹುದು.

ಚಿತ್ರ ಮೇಳ

ಚಿತ್ರ ಮೇಳ

ಸುಮಾರು 3000ಕ್ಕೂ ಅಧಿಕ ವಿಶಿಷೃ ಚಿತ್ರಗಳ ಪ್ರದರ್ಶನವಿರುತ್ತದೆ. ಆಯ್ದ ಕಲಾಕೃತಿಗಳನ್ನು ವನಸಿರಿಯಲ್ಲಿ ಪ್ರದರ್ಶಿಸಲಾಗುತ್ತದೆ. ತುಳುನಾಡಿನ ಸಾಂಪ್ರದಾಯಿಕ ಊಟದ ರುಚಿಯನ್ನು 200 ಕ್ಕೂ ಆಹಾರ ಮಳಿಗೆಗಳಲ್ಲಿ ಸವಿಯಬಹುದಾಗಿದೆ.

ಸಾಂಸ್ಕೃತಿಕ ಮೆರವಣಿಗೆ

ಸಾಂಸ್ಕೃತಿಕ ಮೆರವಣಿಗೆ

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಮ್ಮೇಳನಕ್ಕೆ ಮುನ್ನ ಮೂಡ ಬಿದಿರೆಯಿಂದ ಅದ್ದೂರಿಯ ಜಾನಪದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು ದೆಶಾದ್ಯಂತದಿಂದ ಬಂದಿದ್ದ 150ಕ್ಕೋ ಹೆಚ್ಚು ತಂಡಗಳ 5 ಸಾವಿರದಷ್ಟು ಮಂದಿ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೂಡಬಿದಿರೆಯಿಂದ ಸುಮಾರು ಮೂರು ಕಿಲೋಮೀಟರ್ ದೂರದ ವಿದ್ಯಾಗಿರಿಗೆ ಮೆರವಣಿಗೆ ಸಾಗಿ ಬಂತು . ಈ ಮೆರವಣಿಗೆಯ ಕೆಲವು ಝಲಕ್ ಇಲ್ಲಿದೆ

English summary
Moodabidri a Jain Kashi of the South turned itself into literary and cultural hub, The four-day Alva's Vishwa Nudisiri Virasat-2013 gets under way here Vidyagiri Campus on December 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X