• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ-ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬಾರದೇಕೆ?: ಸುಪ್ರೀಂಕೋರ್ಟ್ ಪ್ರಶ್ನೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಮುಸ್ಲಿಂ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡುವುದರ ಮೂಲಕ ಬೇರೆ ವಿದ್ಯಾರ್ಥಿಗಳಿಗೆ ವೈವಿಧ್ಯತೆಯ ಪರಿಚಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹಿಜಾಬ್ ಕುರಿತು ಕರ್ನಾಟಕ ಸರ್ಕಾರ ಮತ್ತು ಫಾತಿಮಾ ಬುಶ್ರಾ ನಡುವಿನ ಅರ್ಜಿಯು ಬುಧವಾರ ಸುಪ್ರೀಂಕೋರ್ಟ್ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. ಈ ವೇಳೆ ಹಿಜಾಬ್ ಅನ್ನು ಸಾಂಸ್ಕೃತಿಕವಾಗಿ ಸಂವೇದನಾಶೀಲರಾಗುವ ಒಂದು ಅವಕಾಶವಾಗಿ ಏಕೆ ನೋಡಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಕೂದಲು ಕತ್ತರಿಸಿ ಹಿಜಾಬ್‌ ವಿರುದ್ಧ ಪ್ರತಿಭಟಿಸಿದ ಮತ್ತೊಬ್ಬ ಇರಾನ್ ಮಹಿಳೆ: ಹಾರ್ನ್ ಮಾಡಿ ಜನರ ಬೆಂಬಲಕೂದಲು ಕತ್ತರಿಸಿ ಹಿಜಾಬ್‌ ವಿರುದ್ಧ ಪ್ರತಿಭಟಿಸಿದ ಮತ್ತೊಬ್ಬ ಇರಾನ್ ಮಹಿಳೆ: ಹಾರ್ನ್ ಮಾಡಿ ಜನರ ಬೆಂಬಲ

ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ನ್ಯಾ. ಹೇಮಂತ್ ಗುಪ್ತಾ ಜೊತೆಗೆ ವಿಚಾರಣೆ ನಡೆಸಿದ ನ್ಯಾ. ಸುಧಾಂಶು ಧುಲಿಯಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠವು ಕುರಾನ್ ವ್ಯಾಖ್ಯಾನ ಬಗ್ಗೆ ಹೇಳಿದ್ದು ಉಲ್ಲೇಖಾರ್ಹವಾಗಿದ್ದು, ನ್ಯಾಯಾಲವು, ಪವಿತ್ರ ಕುರಾನ್‌ನ "ವ್ಯಾಖ್ಯಾನಕಾರ" ಅಲ್ಲ ಎಂದಿದೆ. ಧಾರ್ಮಿಕ ಗ್ರಂಥಗಳನ್ನು ಅರ್ಥೈಸಲು ನ್ಯಾಯಾಲಯಗಳು ಸಜ್ಜುಗೊಂಡಿಲ್ಲ ಎಂದು ಕರ್ನಾಟಕ ಹಿಜಾಬ್ ನಿಷೇಧದ ವಿಷಯದಲ್ಲಿ ಈ ಬಗ್ಗೆ ವಾದಿಸಲಾಗಿದೆ ಎಂದು ನ್ಯಾಯಪೀಠವು ಹೇಳಿತ್ತು.

ಹಿಜಾಬ್ ಧರಿಸಲು ಏಕೆ ಅವಕಾಶ ನೀಡಬಾರದು?

ಹಿಜಾಬ್ ಧರಿಸಲು ಏಕೆ ಅವಕಾಶ ನೀಡಬಾರದು?

ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಅನುಮತಿಸುವುದರ ವಿರುದ್ಧದ ವಾದಗಳಿಗೆ ಪರ್ಯಾಯವಾಗಿ ನ್ಯಾ. ಸುಧಾಂಶು ಧುಲಿಯಾ "ಇದು ವಿವಿಧತೆಗೆ ತೆರೆದುಕೊಳ್ಳುವ ಅವಕಾಶ ಎಂದು ಯಾರಾದರೂ ಹೇಳಬಹುದು. ನಮ್ಮಲ್ಲಿ ಎಲ್ಲಾ ಸಂಸ್ಕೃತಿ, ಧರ್ಮಗಳ ವಿದ್ಯಾರ್ಥಿಗಳಿದ್ದಾರೆ. ಅವರ ಬಗ್ಗೆ ಸಾಂಸ್ಕೃತಿಕವಾಗಿ ಸಂವೇದನಾಶೀಲರಾಗಿರಿ," ಎಂದು ಹೇಳಿದರು.

ಹಿಜಾಬ್ ಎನ್ನುವುದು ಶಿಕ್ಷಕರಿಗೆ ಅಡ್ಡಗೋಡೆ ಆಗದಿರಲಿ

ಹಿಜಾಬ್ ಎನ್ನುವುದು ಶಿಕ್ಷಕರಿಗೆ ಅಡ್ಡಗೋಡೆ ಆಗದಿರಲಿ

ಶಿಕ್ಷಕರು ಸಾಮಾನ್ಯವಾಗಿ ಯಾವುದೇ ಪ್ರತ್ಯೇಕತೆಯ ಗೋಡೆಗಳಿಲ್ಲದೆ ಮತ್ತು ಗುರುತಿನ ಪ್ರತಿಪಾದನೆಗಳಿಲ್ಲದೆ ವಿದ್ಯಾರ್ಥಿಗಳ ಜೊತೆಗೆ ಮುಕ್ತ ಸಂವಾದ ಬಯಸುತ್ತಾರೆ ಎಂದು ಶಿಕ್ಷಕರೊಬ್ಬರ ಪರ ಹಿರಿಯ ವಕೀಲ ಆರ್‌ ವೆಂಕಟರಮಣಿ ವಾದ ಮಂಡಿಸಿದರು. ಅವರ ಮನವಿಗೆ ನ್ಯಾಯಮೂರ್ತಿ ಧುಲಿಯಾ ಪ್ರತಿಕ್ರಿಯಿಸಿದರು. "ನಾನು ವೈಯಕ್ತಿಕ ಅಸ್ಮಿತೆಯ ಪ್ರತಿಪಾದನೆಗಳು ಅಡ್ಡಿಯಾಗುವ ವಾತಾವರಣದಲ್ಲಿ ಕೆಲಸ ಮಾಡುತ್ತೇನೆ. ಅವುಗಳು ಇಲ್ಲದೇ ಇದ್ದಾಗ ಮಾತ್ರ ನೀವು ಅವರನ್ನು ಗೌರವಿಸಲು ಪ್ರಾರಂಭಿಸಬಹುದು. ಶಿಕ್ಷಕರ ಕೈಗಳನ್ನು ಕಟ್ಟಲಾಗುತ್ತದೆ," ಎಂದು ಅವರು ಹೇಳಿದರು. ರಾಜ್ಯ ಸರ್ಕಾರ ಮತ್ತು ಶಿಕ್ಷಕರು ಸೇರಿದಂತೆ ಎಲ್ಲ ಪ್ರತಿವಾದಿಗಳ ವಿಚಾರಣೆಯನ್ನು ಪೀಠವು ಪೂರ್ಣಗೊಳಿಸಿತು.

ಸುಪ್ರೀಂಕೋರ್ಟ್ ಪೀಠದ ಎದುರು ಹಳೆಯ ವಾದ ಮಂಡನೆ

ಸುಪ್ರೀಂಕೋರ್ಟ್ ಪೀಠದ ಎದುರು ಹಳೆಯ ವಾದ ಮಂಡನೆ

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ತನ್ನ ಹಿಂದಿನ ವಾದವನ್ನೇ ಸುಪ್ರೀಂಕೋರ್ಟ್ ಪೀಠದ ಎದುರಿನಲ್ಲೂ ಮಂಡಿಸಿತು. ಕರ್ನಾಟಕ ಸರ್ಕಾರವು ತಾನು ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ, ಆದರೆ ಶಾಲೆಗಳಲ್ಲಿ ಶಿಸ್ತು ಕಾಪಾಡುವ ಗುರಿಯೊಂದಿಗೆ ಸರಳವಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಪುನರುಚ್ಚರಿಸಿತು.
ಕರ್ನಾಟಕದ ಪರವಾಗಿ ಅಡ್ವೊಕೇಟ್ ಜನರಲ್ (ಎಜಿ) ಪ್ರಭುಲಿಂಗ ಕೆ ನಾವದಗಿ ವಾದ ಮಂಡಿಸಿದರು. ಕುರಾನ್‌ನಲ್ಲಿ ಉಲ್ಲೇಖಿಸಿರುವ ಎಲ್ಲವನ್ನೂ ಅಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅಂತಹ ಊಹೆಯು ಅಪ್ರಾಯೋಗಿಕವಾಗಿದೆ ಎಂದು ವಿವರಿಸಿದರು.

ಮೇಲ್ಮನವಿದಾರರ ವಾದ ಮಂಡನೆ ಗುರುವಾರಕ್ಕೆ ಮುಂದೂಡಿಕೆ

ಮೇಲ್ಮನವಿದಾರರ ವಾದ ಮಂಡನೆ ಗುರುವಾರಕ್ಕೆ ಮುಂದೂಡಿಕೆ

ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಕೂಡ ಹಿಜಾಬ್ ಮೇಲೆ ಯಾವುದೇ 'ನಿಷೇಧ ವಿಧಿಸಿಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. "ಧರ್ಮ ನಿರಪೇಕ್ಷ ಸಮವಸ್ತ್ರವನ್ನು ಮಾತ್ರ ಶಿಫಾರಸು ಮಾಡಬೇಕೆಂದು ಸರ್ಕಾರ ಸೂಚಿಸಿದೆ. ಸರ್ಕಾರ ಯಾವುದೇ ಧಾರ್ಮಿಕ ಚಟುವಟಿಕೆ ನಿಷೇಧಿಸಿಲ್ಲ ಅಥವಾ ಪ್ರಚಾರ ಮಾಡಿಲ್ಲ" ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿದಾರರ ಖಂಡನಾ ವಾದಗಳನ್ನು ಗುರುವಾರ ನ್ಯಾಯಾಲಯ ಆಲಿಸಲಿದೆ.

English summary
Allowing to wear Hijab is introduce diversity to other students in schools and colleges, says Supreme Court. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X