ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತೆ ಹಂಚಿಕೆ ಕಗ್ಗಂಟು; ದೆಹಲಿಗೆ ಹೊರಟ ಯಡಿಯೂರಪ್ಪ

|
Google Oneindia Kannada News

Recommended Video

ಮುಖ್ಯ ಕಾರಣಕ್ಕೆ ದೆಹಲಿಗೆ ಹೊರಟ ಎಡಿಯೂರಪ್ಪ | Oneindia Kannada

ಬೆಂಗಳೂರು, ಆಗಸ್ಟ್ 22 : "ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ವರಿಷ್ಠರ ಜತೆ ಚರ್ಚಿಸಿ ಅಂತಿಮಗೊಳಿಸಲಾಗುವುದು" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಯಡಿಯೂರಪ್ಪ "ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದೇನೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ನಾಳೆ ವಾಪಾಸಾಗುತ್ತೇನೆ" ಎಂದರು.

ಯಡಿಯೂರಪ್ಪ ಸಂಪುಟ ಆಯ್ತು; ಈಗ ಖಾತೆ ಹಂಚಿಕೆ ಕಗ್ಗಂಟುಯಡಿಯೂರಪ್ಪ ಸಂಪುಟ ಆಯ್ತು; ಈಗ ಖಾತೆ ಹಂಚಿಕೆ ಕಗ್ಗಂಟು

"ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಚಿವರು ಈಗಾಗಲೇ ಪ್ರವಾಸ ಮಾಡುತ್ತಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಜನರಿಗೆ ಸರ್ಕಾರ ಎಲ್ಲ ನೆರವು‌ ನೀಡುತ್ತಿದೆ. ಕೇಂದ್ರ ಸರ್ಕಾರ ಕೂಡಾ ಶೀಘ್ರದಲ್ಲೇ ರಾಜ್ಯದ ನೆರವಿಗೆ ಧಾವಿಸಲಿದೆ" ಎಂದು ತಿಳಿಸಿದರು.

ಕೊನೆ ಕ್ಷಣದಲ್ಲಿ ಪಟ್ಟಿ ಬದಲು, 5 ಹೆಸರು ಕೈ ಬಿಟ್ಟ ಯಡಿಯೂರಪ್ಪಕೊನೆ ಕ್ಷಣದಲ್ಲಿ ಪಟ್ಟಿ ಬದಲು, 5 ಹೆಸರು ಕೈ ಬಿಟ್ಟ ಯಡಿಯೂರಪ್ಪ

Allotment Of Portfolios Yediyurappa To Meet High Command Leaders

"ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಸತಿ ರಹಿತರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಡಲಾಗುತ್ತದೆ" ಎಂದು ಭರವಸೆ ನೀಡಿದರು.

ಯಡಿಯೂರಪ್ಪ ಸಂಪುಟ ಸೇರಿ ಬಿ. ಡಿ. ಜತ್ತಿ ದಾಖಲೆ ಮುರಿದ ಶೆಟ್ಟರ್ಯಡಿಯೂರಪ್ಪ ಸಂಪುಟ ಸೇರಿ ಬಿ. ಡಿ. ಜತ್ತಿ ದಾಖಲೆ ಮುರಿದ ಶೆಟ್ಟರ್

ಯಡಿಯೂರಪ್ಪ ಸಂಪುಟಕ್ಕೆ ಮಂಗಳವಾರ 17 ಸಚಿವರು ಸೇರ್ಪಡೆಗೊಂಡಿದ್ದಾರೆ. ಆದರೆ, ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ.

ಸಂಪುಟ ಸೇರಿರುವವರಿಗೆ ಖಾತೆ ಹಂಚಿಕೆ ಮಾಡುವ ಜೊತೆಗೆ ಅನರ್ಹ ಶಾಸಕರಿಗಾಗಿ ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳಬೇಕಾದ ಸವಾಲು ಯಡಿಯೂರಪ್ಪ ಮುಂದಿದೆ.

ಸಂಪುಟ ಸೇರುವ ಶಾಸಕರ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹೈಕಮಾಂಡ್ ಖಾತೆಗಳ ಹಂಚಿಕೆಯನ್ನೂ ಎಚ್ಚರಿಕೆಯಿಂದ ಮಾಡುವ ನಿರೀಕ್ಷೆ ಇದೆ.

English summary
Karnataka Chief Minister B.S.Yediyurappa inducted 17 ministers to cabinet. To allot portfolios CM to meet high command leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X