ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಧ ರಾಜ್ಯಗಳಿಗೆ ವಾರದ ಬಳಕೆಗಾಗಿ ಕೇಂದ್ರದಿಂದ 19.2 ಲಕ್ಷ ರೆಮ್‌ಡೆಸಿವಿರ್ ವಯಲ್ಸ್ ಹಂಚಿಕೆ

|
Google Oneindia Kannada News

ನವದೆಹಲಿ, ಮೇ 07: ವಿವಿಧ ರಾಜ್ಯಗಳಿಗೆ ವಾರದ ಬಳಕೆಗಾಗಿ 19.2 ಲಕ್ಷ ರೆಮ್‌ಡೆಸಿವಿರ್ ಲಸಿಕೆಯನ್ನು ಕೇಂದ್ರ ಹಂಚಿಕೆ ಮಾಡಿದೆ.ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ ಕೇಂದ್ರ ಸರ್ಕಾರ ಲಸಿಕೆಗಳನ್ನು ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ. ಕರ್ನಾಟಕಕ್ಕೆ 2,62,346 ವಯಲ್ಸ್ ( ಶೇ.13.6) ಒದಗಿಸಲಾಗಿದೆ.ಏಪ್ರಿಲ್ 21ರಿಂದ ವಿವಿಧ ರಾಜ್ಯಗಳಿಗೆ ಒಟ್ಟು 53 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದ್ದು, ರಾಜ್ಯಕ್ಕೆ 5 ಲಕ್ಷದ 75 ಸಾವಿರ ವಯಲ್ಸ್ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇಡೀ ದೇಶಕ್ಕಲ್ಲ, ಕರ್ನಾಟಕಕ್ಕಂತೂ ಲಾಕ್‌ಡೌನ್ ಅಗತ್ಯವಿದೆ: ತಜ್ಞರುಇಡೀ ದೇಶಕ್ಕಲ್ಲ, ಕರ್ನಾಟಕಕ್ಕಂತೂ ಲಾಕ್‌ಡೌನ್ ಅಗತ್ಯವಿದೆ: ತಜ್ಞರು

ರೆಮ್‌ಡೆಸಿವಿರ್ ಹಂಚಿಕೆಯನ್ನು 2,62,346 ವಯಲ್ಸ್ ಗೆ ಹೆಚ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಮನವಿಗೆ ಸ್ಪಂದಿಸಿ ಅಗತ್ಯ ಔಷಧ ಪೂರೈಸುತ್ತಿರುವ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ಅವರಿಗೆ ಧನ್ಯವಾದಗಳು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

Allocation Of Remdesivir Made Upto May 16 To Ensure Its Adequate Availability

ದೇಶದಲ್ಲಿ ಕೊರೊನಾ 2ನೇ ಅಲೆ ಆರ್ಭಟ ತೀವ್ರಗೊಂಡಿದ್ದು, ಶುಕ್ರವಾರ ಸೋಂಕು ಮತ್ತು ಸಾವು ಎರಡರಲ್ಲೂ ಮತ್ತೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

ಶುಕ್ರವಾರದಂದು ದೇಶದಲ್ಲಿ ಮತ್ತೆ ದಾಖಲೆಯ 4,14,188 ಹೊಸ ಪ್ರಕರಣಗಳು ದೃಢವಾಗಿವೆ ಮತ್ತು ದಾಖಲೆಯ 3,915 ಸಾವು ಸಂಭವಿಸಿದೆ. ಗುರುವಾರ ಕೂಡ ದೇಶದಲ್ಲಿ 4.14 ಲಕ್ಷ ಹೊಸ ಕೇಸ್ ದಾಖಲಾಗಿದ್ದವು. ಈ ಮೂಲಕ ದೇಶದಲ್ಲಿ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.14 ಕೋಟಿಗೆ ಏರಿಕೆಯಾಗಿದೆ.

ಇನ್ನು ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ದೇಶದಲ್ಲಿ ಇದೀಗ ಸಾವಿನ ಸಂಖ್ಯೆ 2,34,083ಕ್ಕೆ ತಲುಪಿದೆ. ಸೋಂಕಿತರ ಸಂಖ್ಯೆ ಸತತ ಏರುತ್ತಿರುವ ಪರಿಣಾಮ ದೇಶದ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 36,45,164ಕ್ಕೆ ಹೆಚ್ಚಿದೆ.

English summary
Union Minister of Chemicals and Fertilizers D. V. Sadananda Gowda on Friday informed that allocation of Remdesivir vials to the states has been made up to May 16 in wake of the Covid-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X