ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ನಲ್ಲಿ ಕುಡುಕರ ಹುಡುಕುವಿಕೆ:ಯಾರು ಗೊತ್ತಾ ನಂ.1?

|
Google Oneindia Kannada News

ಬೆಂಗಳೂರು, ಅ 18: ಸರ್ಚ್ ಇಂಜಿನ್ ದೈತ್ಯ 'ಗೂಗಲ್' ವಿವಿಧ ಕ್ಷೇತ್ರಗಳಲ್ಲಿ ತರವೇವಾರಿ ಮಾಹಿತಿಯನ್ನು ಆಗಾಗ ಬಹಿರಂಗ ಪಡಿಸುತ್ತಲೇ ಇರುತ್ತದೆ. ಇತ್ತೀಚೆಗೆ ಗೂಗಲ್ ತಾನು ಬಿಡುಗಡೆ ಮಾಡಿದ ಇನ್ನೊಂದು ಮಾಹಿತಿಯ ಪ್ರಕಾರ ನಮ್ಮ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎನ್ನುವ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಭಿವೃದ್ದಿ ವಿಚಾರದಲ್ಲಿ ನಂಬರ್ ಒನ್ ಇರಬಹುದೋ ಏನೋ ಅಂದು ನೀವು ಅಂದು ಕೊಂಡರೆ ಅದು ನಿಮ್ಮ ತಪ್ಪು ಗ್ರಹಿಕೆ. ಗೂಗಲ್ ನೀಡಿದ ಮಾಹಿತಿಯ ಪ್ರಕಾರ ಕರ್ನಾಟಕ ಮೊದಲನೇ ಸ್ಥಾನದಲ್ಲಿರುವುದು ಅಬಕಾರಿ ಇಲಾಖೆಗೆ ಸಂಬಂಧಪಟ್ಟ ವಿಚಾರದಲ್ಲಿ.

ಅಂತರ್ಜಾಲದಲ್ಲಿ ಮದ್ಯ ಸಂಬಂಧ ಪಟ್ಟ ಹುಡುಕಾಟದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಅಂದರೆ ಕುಡುಕರು ಬೆನ್ನು ತಟ್ಟಿ ಕೊಳ್ಳಬಾರದು ಮತ್ತು ಕುಡಿಯದೇ ಇರುವವರು ಅಸಹ್ಯ ಪಟ್ಟು ಕೊಳ್ಳಬಾರದು ಸ್ವಾಮಿ..

ಇನ್ನು ಮೆಟ್ರೋ ಸಿಟಿಯಲ್ಲಿ ಯಾವ ನಗರ ಮುಂದಿದೆ ಎನ್ನುವ ವಿಚಾರಕ್ಕೆ ಬಂದಾಗ ನಮ್ಮ ರಾಜಧಾನಿ ಬೆಂಗಳೂರು ಮೊದಲನೇ ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ. ಮೊದಲನೇ ಸ್ಥಾನ ದೇಶದ ವಾಣಿಜ್ಯ ನಗರ ಮುಂಬೈ ಪಾಲಾಗಿದೆ.

ಕರ್ನಾಟಕ

ಕರ್ನಾಟಕ

ಕರ್ನಾಟಕದ ನಂತರದ ಸ್ಥಾನದಲ್ಲಿರುವ ರಾಜ್ಯಗಳೆಂದರೆ ಹರ್ಯಾಣ ಮತ್ತು ಮಹಾರಾಷ್ಟ್ರ. ಕರ್ನಾಟಕದಲ್ಲಿ ನೆಲೆಸಿರುವ ಮದ್ಯ ಪ್ರಿಯರು ಅತಿಯಾಗಿ ಮೆಚ್ಚುವ 'ಎಣ್ಣೆ' ಯಾವುದು ಎಂದರೆ off course ಅದು ವಿಸ್ಕಿ ಮತ್ತು ರಮ್. ಆದರೆ ದೆಹಲಿಯ ಮದ್ಯಪ್ರಿಯರು ಎಲ್ಲಾ ಬ್ರಾಂಡ್ ಗಳನ್ನು ನೆಟ್ ನಲ್ಲಿ ಹುಡುಕುತ್ತಾರಂತೆ.

ಮಹಾರಾಷ್ಟ್ರ

ಮಹಾರಾಷ್ಟ್ರ

ಹರ್ಯಾಣದಲ್ಲಿ ವೈನ್ ಮತ್ತು ಬೀರ್ ಹಾಗೇ ಮಹಾರಾಷ್ಟ್ರದಲ್ಲಿ ವೊಡ್ಕಾ ಉತ್ಪನ್ನಗಳು ಹೆಚ್ಚಾಗಿ ಅಂತರ್ಜಾಲದಲ್ಲಿ ಹುಡುಕಾಡಲ್ಪಡುತ್ತಿದೆ. ಎಪ್ರಿಲ್ 2013 ರಿಂದ ಸೆಪ್ಟಂಬರ್ 2013ರ ವರೆಗೆ ನಡೆಸಿದ ಅಧ್ಯಯನದ ಪ್ರಕಾರ ಗೂಗಲ್ ಈ ಮಾಹಿತಿ ಹೊರಹಾಕಿದೆ.

ಬೀರ್ ಉತ್ಪನ್ನಗಳು

ಬೀರ್ ಉತ್ಪನ್ನಗಳು

ಕಳೆದ ಮೂರು ತಿಂಗಳ ಹುಡುಕಾಟದನ್ವಯ ಭಾರತದಲ್ಲಿ ಬೀರ್ ಉತ್ಪನ್ನಗಳು ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ವೈನ್, ವೊಡ್ಕಾ, ವಿಸ್ಕಿ ಮತ್ತು ರಮ್ ನಂತರದ ಸ್ಥಾನದಲ್ಲಿದೆ. ವಾರದ ದಿನಗಳಲ್ಲಿ ಬೀರ್ ಮತ್ತು ವಾರಾಂತ್ಯಗಳಲ್ಲಿ ವಿಸ್ಕಿ ಮತ್ತು ವೈನಿಗೆ ಹೆಚ್ಚಿನ ಬೇಡಿಕೆಯಿದೆ.

ಟಾಪ್ ಮೂವತ್ತು ಪಟ್ಟಿ

ಟಾಪ್ ಮೂವತ್ತು ಪಟ್ಟಿ

ಆದರೂ, ವಿಶ್ವದ ಮದ್ಯ ಪ್ರಿಯರಿಗೆ ಹೋಲಿಸಿದರೆ ಭಾರತ ಇನ್ನೂ ಬಾಟಮ್ ಲೈನ್ ನಲ್ಲಿದೆ. ಬೀರ್ ಪ್ರಿಯರ ವಿಶ್ವದ ಟಾಪ್ 30 ದೇಶದ ಪಟ್ಟಿಯಲ್ಲಿ ಭಾರತ ಕೊನೆಯ ಸ್ಥಾನದಲ್ಲಿದೆ ಎನ್ನುವುದು ಕೊಂಚ ಸಮಾಧಾನದ ವಿಷಯ.

ಸರಾಸರಿ ಲೆಕ್ಕ

ಸರಾಸರಿ ಲೆಕ್ಕ

ದಿನದಿಂದ ದಿನಕ್ಕೆ ಭಾರತದಲ್ಲಿ ಬೀರ್ ಹೆಚ್ಚು ಪ್ರಸಿದ್ದಿ ಪಡೆಯುತ್ತಿದ್ದರೂ ದೇಶದಲ್ಲಿ ಒಟ್ಟಾರೆ ಮಾರಾಟವಾಗುವ ಬೀರ್ ಇಪ್ಪತ್ತು ಮಿಲಿಯನ್ ಹೆಕ್ಟೋ ಲೀಟರ್ಸ್ (2012ರ ಪ್ರಕಾರ). ಇದು ಭಾರತದಲ್ಲಿ ಒಟ್ಟು ಬೀರ್ ಕುಡಿಯುವವರ ಸಂಖ್ಯೆಗೆ ಸರಾಸರಿ ಲೆಕ್ಕ ಹಾಕಿದರೆ ಒಬ್ಬರು 1.6 ಲೀಟರ್, ಚೀನಾದಲ್ಲಿ 37, ಥೈಲ್ಯಾಂಡ್ ನಲ್ಲಿ 31 ಮತ್ತು ವಿಯಟ್ನಾಂ ನಲ್ಲಿ 30 ಲೀಟರ್ ನಂತೆ ಬೀರ್ ಸೇವಿಸುತ್ತಾರೆ.

English summary
Karnataka contributes the most number of searches on the internet for alcoholic beverages followed by Haryana and Maharashtra as per Google search. Bangalore figures second after Mumbai among the major cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X