ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಅತಿ ಹೆಚ್ಚು ಲೀಡ್‌ನಿಂದ ಗೆದ್ದ ಐವರು ಅಭ್ಯರ್ಥಿಗಳು ಯಾರು ಗೊತ್ತೆ?

By Nayana
|
Google Oneindia Kannada News

ಬೆಂಗಳೂರು, ಮೇ 22: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಲಕೇಶಿನಗರದ ಕ್ಷೇತ್ರದ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ ರಾಜ್ಯದಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರೆ ಬಿಜೆಪಿಯ ಮಲ್ಲೇಶ್ವರಂ ಕ್ಷೇತ್ರದ ಡಾ. ಅಶ್ವತ್ಥ ನಾರಾಯಣ ಎರಡನೇ ಸ್ಥಾನ ಪಡೆದಿದ್ದಾರೆ.

ಅತಿ ಹೆಚ್ಚು ಮತ ಪಡೆದ ಐವರಲ್ಲಿ ಯಾರಿಗೂ ಇದು ಮೊದಲ ಚುನಾವಣೆ ಅಲ್ಲ, ರಾಜ್ಯದಲ್ಲೇ ಅತಿ ಹೆಚ್ಚು ಮತ ಗಳಿಸಿ ಗೆದ್ದ ಅಖಂಡ ಶ್ರೀನಿವಾಸಮೂರ್ತಿ ಪಕ್ಷಾಂತರ ಮಾಡಿದ್ದವರು. ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಯ್‌ ಪಾಟೀಲ್ ಕಳೆದ ಬಾರಿ ಸೋತಿದ್ದರು. ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟರು ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ರಾಜ್ಯದ ಟಾಪ್ ಫೈವ್ ಅತಿ ಹೆಚ್ಚು ಮತ ಗಳಿಸಿದವರ ವಿವರ ಇಲ್ಲಿದೆ. ಇದರಲ್ಲಿ ಮೂವರು ಬಿಜೆಪಿ ಪಕ್ಷದವಾಗಿದ್ದರೆ ಇನ್ನುಳಿದ ಇಬ್ಬರು ಕಾಂಗ್ರೆಸ್‌ ಅಭ್ಯರ್ಥಿಗಳಾಗಿದ್ದಾರೆ.

ಸಮೀಪ ಪ್ರತಿಸ್ಪರ್ಧಿಯ ಠೇವಣಿ ಕಳೆದ ಅಖಂಡ

ಸಮೀಪ ಪ್ರತಿಸ್ಪರ್ಧಿಯ ಠೇವಣಿ ಕಳೆದ ಅಖಂಡ

ಪುಲಕೇಶಿನಗರದ ಕಾಂಗ್ರೆಸ್‌ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ ಅವರು ಶೇ.64.56 ಅತಿ ಹೆಚ್ಚು ಮತ ಗಳಿಸಿದ್ದಾರೆ.ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರು ಈ ಬಾರಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿದ್ದರು. ಅಖಂಡ ಶ್ರೀನಿವಾಸಮೂರ್ತಿ ಪಡೆದಿರುವ ಒಟ್ಟು ಮತ 97574, ಇವರ ಸಮೀಪ ಪ್ರತಿಸ್ಪರ್ಧಿ ಜೆಡಿಎಸ್‌ನ ಬಿ.ಪ್ರಸನ್ನ ಕುಮಾರ್ ಪಡೆದಿರುವುದು ಕೇವಲ 15,948 ಮತಗಳಷ್ಟೆ. ಅಡ್ಡ ಮತದಾನ ಮಾಡಿ ಜೆಡಿಎಸ್‌ನಿಂದ ಉಚ್ಛಾಟಿತರಾಗಿದ್ದ ಏಳು ಜನ ಶಾಸಕರಲ್ಲಿ ಇವರೂ ಒಬ್ಬರು.ಅಖಂಡ ಶ್ರೀನಿವಾಸಮೂರ್ತಿ ಅವರ ಗೆಲುವಿನ ಅಂತರ 81,626.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಸಜ್ಜನ ರಾಜಕಾರಣಿಯ ಕೈ ಹಿಡಿದ ಮತದಾರ

ಸಜ್ಜನ ರಾಜಕಾರಣಿಯ ಕೈ ಹಿಡಿದ ಮತದಾರ

ಮಲ್ಲೇಶ್ವರದ ಬಿಜೆಪಿ ಅಭ್ಯರ್ಥಿ ಡಾ. ಅಶ್ವತ್ಥನಾರಾಯಣ ಶೇ. 43.67 ಅತಿ ಹೆಚ್ಚು ಮತವನ್ನು ಗಳಿಸಿದ್ದಾರೆ.ರಾಜ್ಯದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಅಶ್ವತ್ಥನಾರಾಯಣ ಅವರು ವೃತ್ತಿಯಿಂದ ವೈದ್ಯರು ಕೂಡಾ. ಇವರು ಕಳೆದ ಬಾರಿ ಪಡೆದಿದ್ದದ್ದು 57609 ಮತಗಳು ಈ ಬಾರಿ ಮತಗಳನ್ನು ಹೆಚ್ಚಿಸಿಕೊಂಡಿರುವ ಅಶ್ವತ್ಥನಾರಾಯಣ ಅವರು ಈ ಬಾರಿ 83130 ಮತಗಳನ್ನು ಪಡೆದಿದ್ದಾರೆ. ಇವರ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೆಂಗಲ್ ಶ್ರೀಪಾದರೇಣು ಅವರು ಪಡೆದಿರುವುದು 29130. ಅಶ್ವತ್ಥನಾರಾಯಣ ಅವರು ಬರೋಬ್ಬರಿ 54000 ಮತಗಳ ಅಂತರದಿಂದ ಜಯಿಸಿದ್ದಾರೆ.

ಫಲಿತಾಂಶ 2018: ಅತಿ ಕಡಿಮೆ ಅಂತರದಲ್ಲಿ ಗೆದ್ದವರು -ಬಿದ್ದವರು ಫಲಿತಾಂಶ 2018: ಅತಿ ಕಡಿಮೆ ಅಂತರದಲ್ಲಿ ಗೆದ್ದವರು -ಬಿದ್ದವರು

ಸೋಲಿಲ್ಲದ ಸರದಾರ ಡಿ.ಕೆ.ಶಿವಕುಮಾರ್

ಸೋಲಿಲ್ಲದ ಸರದಾರ ಡಿ.ಕೆ.ಶಿವಕುಮಾರ್

ಕನಕಪುರದ ಸೋಲಿಲ್ಲದ ಸರದಾರ ಡಿ.ಕೆ.ಶಿವಕುಮಾರ್ ಅವರು ಪ್ರತಿ ಭಾರಿಯಂತೆ ಈ ಭಾರಿ ಅಂತರದಲ್ಲಿ ಜಯಿಸಿದ್ದಾರೆ. ಶಿವಕುಮಾರ್ ಅವರು 127552 ಮತಗಳನ್ನು ಗಳಿಸಿದ್ದಾರೆ. ಇವರ ಸಮೀಪ ಪ್ರತಿಸ್ಪರ್ಧಿ ಜನತಾದಳದ ನಾರಾಯಣಗೌಡ ಪಡೆದಿರುವುದು 47643 ಮತಗಳು. ಶಿವಕುಮಾರ್ ಅವರ ಗೆಲುವಿನ ಅಂತರ 79909. ಡಿ.ಕೆ ಶಿವಕುಮಾರ್ ಶೇ.42.93 ರಷ್ಟು ಮುಂದಿದ್ದಾರೆ.

ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳಿಸಿದ ಹಾಲಾಡಿ ಶೆಟ್ಟರು

ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳಿಸಿದ ಹಾಲಾಡಿ ಶೆಟ್ಟರು

ಕುಂದಾಪುರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಶೇ.35.55ರಷ್ಟು ಮತವನ್ನು ಪಡೆದಿದ್ದಾರೆ.ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟರು ಈ ಬಾರಿ ಪಡೆದಿರುವ ಒಟ್ಟು ಮತ 103434. ಇವರ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಾಕೇಶ್ ಮಲ್ಲಿ ಪಡೆದಿರುವುದು 47029 ಮತಗಳು. ಹಾಲಾಡಿ ಶ್ರೀನಿವಾಸ ಶೆಟ್ಟರ ಮತಗಳ ಅಂತರ 56405. ಕಳೆದ ಬಾರಿವಿಧಾನಸಭೆ ಚುನಾವಣೆಯಲ್ಲಿಇವರು ಪಡೆದಿದ್ದ ಮತಗಳ ಸಂಖ್ಯೆ 80563.

ಕಳೆದ ಬಾರಿ ಸೋಲು, ಈ ಬಾರಿ ಭಾರಿ ಅಂತರದ ಗೆಲುವು

ಕಳೆದ ಬಾರಿ ಸೋಲು, ಈ ಬಾರಿ ಭಾರಿ ಅಂತರದ ಗೆಲುವು

ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಅಭಯ್ ಪಾಟೀಲ್ ಶೇ.34.54 ರಷ್ಟು ಹೆಚ್ಚಿನ ಮತವನ್ನು ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.ಕಳೆದ ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಅಭಯ್ ಪಾಟೀಲ್ ಭರ್ಜರಿಯಾಗಿ ವಾಪಸ್ಸಾಗಿದ್ದಾರೆ. ಈ ಬಾರಿ ಅಭಯ್ ಪಾಟೀಲ್ ಪಡೆದಿರುವ ಒಟ್ಟು ಮತಗಳ ಸಂಖ್ಯೆ 84498. ಇವರ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಲಕ್ಷ್ಮಿ ನಾರಾಯಣಸ್ವಾಮಿ ಪಡೆದಿರುವ ಮತ 25806. ಇವರ ಮತಗಳ ಅಂತರ 58692. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭಯ್ ಪಾಟೀಲ್ ಪಡೆದಿದ್ದ ಮತಗಳ ಸಂಖ್ಯೆ 48116.

English summary
Akhanda Srinivasamurthy, Congress candidate in Pulikeshi Nagar constituency in Bangalore, was the highest leading winner in state assembly elections. BJP candidate in Malleshwaram, Dr Ashwath Narayan was followed him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X