ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆಕ್ಷನ್ flashback : 'ಇಂದಿರಾಕಟ್ಟೆ’ ಪಕ್ಕದಲ್ಲೇ ರಾಹುಲ್ ಭಾಷಣ

By Jಜಿಎಂಆರ್, ಬಳ್ಳಾರಿ
|
Google Oneindia Kannada News

ಮಾಜಿ ಪ್ರಧಾನಿ, ದಿವಂಗತ ಇಂದಿರಾಗಾಂಧಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಅಂದು ಭಾಷಣ ಮಾಡಿದ್ದ ಜಾಗದ ಪಕ್ಕದಲ್ಲೇ ಇಂದು ಅವರ ಮೊಮ್ಮಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾಷಣ ಮಾಡಲು ವೇದಿಕೆ ಸಜ್ಜಾಗಿದೆ.

ಇದು ನಿಜಕ್ಕೂ ಇದು ಕಾಕತಾಳೀಯ. ಇಂದಿರಾಗಾಂಧಿ ಅವರು 1974 ರಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಸ್ಥಳಕ್ಕೆ ಸ್ವಲ್ಪ ದೂರದಲ್ಲೇ ರಾಹುಲ್‍ ಗಾಂಧಿ ಚುನಾವಣಾ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.

ಕರ್ನಾಟಕ ಬರಲಿರುವ ರಾಹುಲ್ ಗಾಂಧಿಗೆ ದಲಿತರಿಂದ ಪ್ರತಿಭಟನೆ ಸ್ವಾಗತಕರ್ನಾಟಕ ಬರಲಿರುವ ರಾಹುಲ್ ಗಾಂಧಿಗೆ ದಲಿತರಿಂದ ಪ್ರತಿಭಟನೆ ಸ್ವಾಗತ

ಗೂಡುಸಾಬ್ ಎನ್ನುವ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ಇಂದಿರಾಗಾಂಧಿ ಹೊಸಪೇಟೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ತಾಲೂಕು ಕ್ರೀಡಾಂಗಣದಲ್ಲಿ ಒಂದು ಎತ್ತರವಾದ ಕಟ್ಟೆಯನ್ನು ನಿರ್ಮಿಸಲಾಗಿತ್ತು. ಇದೇ ರೀತಿಯ ಕಟ್ಟೆಯನ್ ಈಗ ಬಳ್ಳಾರಿಯ ಮುನಿಸಿಪಲ್ ಹೈಸ್ಕೂಲ್/ಕಾಲೇಜಿನ ಮೈದಾನದಲ್ಲೂ ಕಟ್ಟಲಾಗಿದೆ.

ರಾಹುಲ್ ಗಾಂಧಿ ಹಂಪಿ ವಿರೂಪಾಕ್ಷನ ದರ್ಶನ ಏಕೆ ಪಡೆಯುತ್ತಿಲ್ಲ?ರಾಹುಲ್ ಗಾಂಧಿ ಹಂಪಿ ವಿರೂಪಾಕ್ಷನ ದರ್ಶನ ಏಕೆ ಪಡೆಯುತ್ತಿಲ್ಲ?

ಈಗ, ರಾಹುಲ್‍ಗಾಂಧಿ ಅವರು ಹೊಸಪೇಟೆಯ ಆ ಕಟ್ಟೆಯ ಸಮೀಪದಲ್ಲೇ ನಿಂತು, ಅವರ ಅಜ್ಜಿಯನ್ನು ಸ್ಮರಿಸುತ್ತಲೇ ಭಾಷಣ ಮಾಡಲಿದ್ದಾರೆ ಎಂದೇ ಕಾಂಗ್ರೆಸ್ಸಿಗರು ನಿರೀಕ್ಷೆ ಮಾಡಿದ್ದಾರೆ. ಈ ಕಟ್ಟೆಯನ್ನು ಹಳೆಯ ಕಾಂಗ್ರೆಸ್ಸಿಗರು ಮತ್ತು ಹಿರಿಯರು 'ಇಂದಿರಾಕಟ್ಟೆ' ಎಂದೇ ಇಂದಿಗೂ ಪ್ರೀತಿಯಿಂದ ಕರೆಯುತ್ತಾರೆ.

1974 ರಲ್ಲಿ ಇಲ್ಲಿಗೆ ಬಂದಿದ್ದ ಇಂದಿರಾಗಾಂಧಿ

1974 ರಲ್ಲಿ ಇಲ್ಲಿಗೆ ಬಂದಿದ್ದ ಇಂದಿರಾಗಾಂಧಿ

ಮಾಜಿ ಪ್ರಧಾನಿ, ದಿವಂಗತ ಇಂದಿರಾಗಾಂಧಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಅಂದು ಭಾಷಣ ಮಾಡಿದ್ದ ಜಾಗದ ಪಕ್ಕದಲ್ಲೇ ಇಂದು ಅವರ ಮೊಮ್ಮಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾಷಣ ಮಾಡಲು ವೇದಿಕೆ ಸಜ್ಜಾಗಿದೆ.

ಇಂದಿರಾಗಾಂಧಿ ಅವರು 1974 ರಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಸ್ಥಳಕ್ಕೆ ಸ್ವಲ್ಪ ದೂರದಲ್ಲೇ ರಾಹುಲ್‍ಗಾಂಧಿ ಚುನಾವಣಾ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.

ಇಂದಿರಾಗಾಂಧಿಯ ಹೊಸಪೇಟೆಗೆ ಭೇಟಿ

ಇಂದಿರಾಗಾಂಧಿಯ ಹೊಸಪೇಟೆಗೆ ಭೇಟಿ

ಅಂದು ಇಂದಿರಾಗಾಂಧಿ ನಿಂತು ಭಾಷಣ ಮಾಡಿದ ಕಟ್ಟೆಯ ಮೇಲೆ ನಿಂತು ಈವರೆಗೂ ಯಾರೊಬ್ಬರೂ ಭಾಷಣ ಮಾಡಿಲ್ಲ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಎಲ್. ಸಿದ್ಧನಗೌಡ.

ಗೂಡುಸಾಬ್ ಎನ್ನುವ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ಇಂದಿರಾಗಾಂಧಿ ಹೊಸಪೇಟೆಗೆ ಭೇಟಿ ನೀಡಿದಾಗ ಕಟ್ಟಲಾದ ಈ ಕಟ್ಟೆಯನ್ನು ಹಳೆಯ ಕಾಂಗ್ರೆಸ್ಸಿಗರು ಮತ್ತು ಹಿರಿಯರು ಇಂದಿರಾಕಟ್ಟೆ' ಎಂದೇ ಇಂದಿಗೂ ಪ್ರೀತಿಯಿಂದ ಕರೆಯುತ್ತಾರೆ.

ನೆನಪು ಹಂಚಿಕೊಂಡ ಎಲ್. ಸಿದ್ಧನಗೌಡ

ನೆನಪು ಹಂಚಿಕೊಂಡ ಎಲ್. ಸಿದ್ಧನಗೌಡ

'ಒನ್ ಇಂಡಿಯಾ ಕನ್ನಡ' ದ ಜೊತೆ ಮಾತನಾಡಿದ ಎಲ್. ಸಿದ್ಧನಗೌಡ, ನನಗಾಗ ಏರು ಯೌವ್ವನ. ತಂದೆಯ ಜೊತೆ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದೆ. ಇಂದಿರಾಗಾಂಧಿ ಅವರ ಬಗ್ಗೆ ಕೇಳಿ ತಿಳಿದಿದ್ದ ಕಾಲವದು. ಅವರನ್ನು ಅತೀ ಹತ್ತಿರದಿಂದ ಕಾಣಲಿಕ್ಕಾಗಿ ಪರದಾಡಿ. ಹೊಸಪೇಟೆಯಲ್ಲಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ. ದೇಶಕಂಡ ಗ್ರೇಟ್ ಲೀಡರ್, ಇಂದಿರಾ' ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಸೋನಿಯಾ ಕೂಡಾ ಇಲ್ಲಿಗೆ ಬಂದಿದ್ದರು.

ಸೋನಿಯಾ ಕೂಡಾ ಇಲ್ಲಿಗೆ ಬಂದಿದ್ದರು.

ಇಂದಿರಾಗಾಂಧಿ ಅವರ ಸೊಸೆ ಸೋನಿಯಾಗಾಂಧಿ ಅವರು 1999 ರಲ್ಲಿ ಬಳ್ಳಾರಿಯಲ್ಲಿ ಸ್ಫರ್ಧಿಸಿದ್ದರು. ಆಗಲೂ ಸೋನಿಯ ಗಾಂಧಿ ಈ ಇಂದಿರಾಕಟ್ಟೆಯ ಪಕ್ಕದ ವೇದಿಕೆಯಲ್ಲಿ ಭಾಷಣ ಮಾಡಿದ್ದರು. ಇಂದಿರಾ ಗಾಂಧಿ ಅವರು ಚುನಾವಣಾ ಪ್ರಚಾರದ ನಂತರ ಅವರು ಹಂಪಿಯ ವೀರೂಪಾಕ್ಷೆಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈಗ ರಾಹುಲ್ ಗಾಂಧಿ ಅವರ ಸರದಿ ಎಂದರು.

English summary
AICC president Rahul Gandhi is all seto kickstart Election campaign near Indirakatte a stage where Indira Gandhi campaigned for Congress in 1974 in Hospet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X