ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಕೊನೆಗೂ ಹೆಸರು ಅಂತಿಮ: ಸದ್ಯದಲ್ಲೇ ಅಧಿಕೃತ ಘೋಷಣೆ?

|
Google Oneindia Kannada News

Recommended Video

ಅಂದುಕೊಂಡಂತೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಅಲಂಕರಿಸೋದು ಇವರೇ! | SONIA GANDHI | DK SHIVAKUMAR | CONGRESS

ಇತ್ತೀಚಿನ ಉಪಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲು, ವಲಸೆ ಮತ್ತು ಮೂಲ ಕಾಂಗ್ರೆಸ್ಸಿಗರು ಎನ್ನುವ ಆಂತರಿಕ ಭಿನ್ನಮತ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿರುವ ಎಐಸಿಸಿ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿ, ಕೊನೆಗೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ.

ಕರ್ನಾಟಕದ ಪ್ರಮುಖ ಮುಖಂಡರನ್ನು ಕರೆದು ಮಾತನಾಡಿಸುತ್ತಿರುವ ಸೋನಿಯಾ, ಎಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿ, ಅಹಮದ್ ಪಟೇಲ್ ಮತ್ತು ಕೆ.ಸಿ.ವೇಣುಗೋಪಾಲ್ ಅವರಿಂದ ಮಾಹಿತಿ ಪಡೆದಿದ್ದಾರೆಂದು ಹೇಳಲಾಗುತ್ತಿದೆ.

ಡಿಕೆಶಿ, ಎಚ್ಡಿಕೆ ಪ್ರಾಬಲ್ಯ ಮುರಿಯಲು ಬಿಎಸ್ ವೈ ಅಸ್ತ್ರ ಪ್ರಯೋಗಡಿಕೆಶಿ, ಎಚ್ಡಿಕೆ ಪ್ರಾಬಲ್ಯ ಮುರಿಯಲು ಬಿಎಸ್ ವೈ ಅಸ್ತ್ರ ಪ್ರಯೋಗ

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿರುವುದರಿಂದ, ಅವರ ಸ್ಥಾನಕ್ಕೆ, ಪಕ್ಷವನ್ನು ಮುನ್ನಡೆಸುವ, ಸಮರ್ಥ ನಾಯಕರನ್ನು ತುರ್ತಾಗಿ ನೇಮಿಸುವ ಅಗತ್ಯವಿದೆ.

ಅಚ್ಚರಿ ಬೆಳವಣಿಗೆ; ಡಿ. ಕೆ. ಶಿವಕುಮಾರ್‌ಗೆ ಹೈಕಮಾಂಡ್‌ ಬುಲಾವ್!ಅಚ್ಚರಿ ಬೆಳವಣಿಗೆ; ಡಿ. ಕೆ. ಶಿವಕುಮಾರ್‌ಗೆ ಹೈಕಮಾಂಡ್‌ ಬುಲಾವ್!

ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಹಾಗಾಗಿ, ಹಲವು ಬದಲಾವಣೆಗಳನ್ನು ಮಾಡಲು ಸೋನಿಯಾ ನಿರ್ಧರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ, ಸೋನಿಯಾ, ಫೈನಲ್ ಮಾಡಿರುವ ಹೆಸರು?

ಡಿಕೆಶಿಯನ್ನು ತುರ್ತಾಗಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿತ್ತು

ಡಿಕೆಶಿಯನ್ನು ತುರ್ತಾಗಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿತ್ತು

ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಸಿಎಲ್‌ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ, ಹೈಕಮಾಂಡ್ ನಿಂದ, ಡಿ.ಕೆ.ಶಿವಕುಮಾರ್ ಅವರನ್ನು ತುರ್ತಾಗಿ, ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿತ್ತು.

ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ರಾಜೀನಾಮೆ ಆಂಗೀಕಾರ?

ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ರಾಜೀನಾಮೆ ಆಂಗೀಕಾರ?

ಮೂಲಗಳ ಪ್ರಕಾರ, ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯನವರು ನೀಡಿದ ರಾಜೀನಾಮೆಯನ್ನು ಆಂಗೀಕರಿಸಲು ಸೋನಿಯಾ ನಿರ್ಧರಿಸಿದ್ದಾರೆ. ಇದರ ಜೊತೆಗೆ, ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರ ಬಣಕ್ಕೆ ಬೇಸರವಾಗದಂತೆ, ಇರುವ ಆಯಕಟ್ಟಿನ ಹುದ್ದೆಯನ್ನು ಹಂಚಲು, ಸೋನಿಯಾ ನಿರ್ಧರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಡಿ ಕೆ ಶಿವಕುಮಾರ್ ಗೆ?

ಕೆಪಿಸಿಸಿ ಅಧ್ಯಕ್ಷ ಹುದ್ದೆ ಡಿ ಕೆ ಶಿವಕುಮಾರ್ ಗೆ?

ಕೆಲವೊಂದು ಮಾಧ್ಯಮಗಳು ವರದಿ ಮಾಡಿದ ಪ್ರಕಾರ, ಕನಕಪುರದ ಬಂಡೆ ಎಂದೇ ಇತ್ತೀಚಿನ ದಿನಗಳಲ್ಲಿ ಹೆಸರು ಪಡೆದಿರುವ, ಡಿ.ಕೆ.ಶಿವಕುಮಾರ್ ಅವರ ಹೆಸರನ್ನು, ಸೋನಿಯಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬಹುತೇಕ ಫೈನಲ್ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ, ಈ ಬಗ್ಗೆ, ಅಂತಿಮ ಘೋಷಣೆ ಹೊರಬೀಳಲಿದೆ.

ಕೆ.ಎಚ್.ಮುನಿಯಪ್ಪ ಬಹಳ ಪ್ರಯತ್ನ ನಡೆಸುತ್ತಿದ್ದರು

ಕೆ.ಎಚ್.ಮುನಿಯಪ್ಪ ಬಹಳ ಪ್ರಯತ್ನ ನಡೆಸುತ್ತಿದ್ದರು

ಹೊಸ ವರ್ಷದ ಮೊದಲ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮತ್ತು ಪಕ್ಷದ ಇತರ ಪ್ರಮುಖ ಜವಾಬ್ದಾರಿ ಯಾರಿಗೆ ಎಂದು, ಎಐಸಿಸಿದಿಂದ ಅಧಿಕೃತ ಘೋಷಣೆ ಹೊರಬೀಳಬಹುದು. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ, ಮಾಜಿ ಕೋಲಾರದ ಸಂಸದ ಕೆ.ಎಚ್.ಮುನಿಯಪ್ಪ ಬಹಳ ಪ್ರಯತ್ನ ನಡೆಸುತ್ತಿದ್ದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಡಿ. ಕೆ. ಶಿವಕುಮಾರ್

ಜೈಲಿನಿಂದ ಬಿಡುಗಡೆಯಾದ ಬಳಿಕ ಡಿ. ಕೆ. ಶಿವಕುಮಾರ್

ಈ ಹುದ್ದೆಗೆ, ಮುನಿಯಪ್ಪ ಜೊತೆ, ಸಿದ್ದರಾಮಯ್ಯ ಮತ್ತು ಎಚ್.ಸಿ.ಮಹಾದೇವಪ್ಪ ಅವರ ಹೆಸರೂ ಚಾಲ್ತಿಯಲ್ಲಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಡಿ. ಕೆ. ಶಿವಕುಮಾರ್ ಯಾವುದೇ ಹುದ್ದೆ ಬೇಡ ಎಂದು ಹಲವು ಬಾರಿ ಡಿಕೆಶಿ ಹೇಳಿದ್ದಾರೆ. ಪಕ್ಷ ಸಂಘಟನೆ ಮಾಡುವುದು ಅನಿವಾರ್ಯವಾಗಿರುವುದರಿಂದ, ಹೈಕಮಾಂಡ್, ಡಿಕೆಶಿಗೆ ಈ ಜವಾಬ್ದಾರಿ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

English summary
AICC President Sonia Gandhi Almost Finalized Name For KPCC President Post, Sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X