ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ಕ್ಷೇತ್ರದ ಉಪ ಚುನಾವಣೆ; ವೀಕ್ಷಕರನ್ನು ನೇಮಿಸಿದ ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ನವೆಂಬರ್ 18 : ಕರ್ನಾಟಕದ 15 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಸೋಮವಾರ ಕೊನೆಯ ದಿನವಾಗಿತ್ತು. ಉಪ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರನ್ನು ನೇಮಕ ಮಾಡಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ 9 ಮಂದಿ ವೀಕ್ಷಕರು, ಒಬ್ಬರು ಸಂಚಾಲಕರನ್ನು ಸೋಮವಾರ ನೇಮಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಉಪ ಚುನಾವಣೆ; ಜೆಡಿಎಸ್ ಪಕ್ಷದ ಅಚ್ಚರಿಯ ನಡೆ! ಉಪ ಚುನಾವಣೆ; ಜೆಡಿಎಸ್ ಪಕ್ಷದ ಅಚ್ಚರಿಯ ನಡೆ!

ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. 14 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಎದುರಾಗಿದ್ದು, ಪಕ್ಷ ಕಳೆದ ಬಾರಿ ಗೆದ್ದ ಸ್ಥಾನಗಳನ್ನು ಉಳಿಸಿಕೊಳ್ಳಬೇಕಿದೆ.

'ಕೈ' ಹಿಡಿಯದ ಯಶವಂತಪುರ ತಂತ್ರ; ಸಿದ್ದರಾಮಯ್ಯಗೆ ಹಿನ್ನಡೆ! 'ಕೈ' ಹಿಡಿಯದ ಯಶವಂತಪುರ ತಂತ್ರ; ಸಿದ್ದರಾಮಯ್ಯಗೆ ಹಿನ್ನಡೆ!

AICC

ವೀಕ್ಷಕರ ಪಟ್ಟಿ

* ಅಥಣಿ, ಕಾಗವಾಡ : ಎಸ್. ಎ. ಸಂಪತ್ ಕುಮಾರ್
* ಗೋಕಾಕ್, ಯಲ್ಲಾಪುರ : ವಂಶಿಚಂದ ರೆಡ್ಡಿ
* ಹಿರೇಕೆರೂರು, ರಾಣೆಬೆನ್ನೂರು : ಪೊನ್ನಂ ಪ್ರಭಾಕರ್
* ಚಿಕ್ಕಬಳ್ಳಾಪುರ, ಹೊಸಕೋಟೆ : ಎಂ. ಎಂ. ಪಲ್ಲಂ ರಾಜು
* ಕೆ. ಆರ್. ಪುರ, ಶಿವಾಜಿನಗರ : ಮಯೂರ ಜಯಕುಮಾರ್
* ಕೆ. ಆರ್. ಪೇಟೆ, ಹುಣಸೂರು : ವಿಶ್ವನಾಥನ್
* ಮಹಾಲಕ್ಷ್ಮೀ ಲೇಔಟ್, ಯಶವಂತಪುರ : ಸಂಜೀವ್ ಜೋಸೆಫ್
* ವಿಜಯನಗರ : ಎನ್.ತುಳಸಿ ರೆಡ್ಡಿ, ಜೆ. ಡಿ. ಸಲೀಂ (ಸಂಚಾಲಕ)

English summary
All India Congress Committee (AICC) named observers for 15 seat by polls of Karnataka. By election will be held on December 5, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X