ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ರಾಜ್ಯ ಭೇಟಿ: ಮೋದಿಗೆ ಕರ್ನಾಟಕ ಕಾಂಗ್ರೆಸ್ ಕೇಳಿದ ಏಕೈಕ ಪ್ರಶ್ನೆ

|
Google Oneindia Kannada News

ಬೆಂಗಳೂರು, ಜೂನ್ 19: ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಸರಕಾರೀ ಕಾರ್ಯಕ್ರಮ ಮತ್ತು ಮೈಸೂರಿನಲ್ಲಿ ಯೋಗ ದಿನಾಚಾರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಕ್ಕೆ ಎರಡು ದಿನಗಳ ಪ್ರವಾಸಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಕರ್ನಾಟಕ ಕಾಂಗ್ರೆಸ್ ಏಕೈಕ ಪ್ರಶ್ನೆಯನ್ನು ಕೇಳಿದೆ ಮತ್ತು ಅದಕ್ಕೆ ಉತ್ತರವನ್ನು ಬಯಸಿದೆ.

ಪ್ರಧಾನಿ ಸೋಮವಾರ (ಜೂನ್ 20) ಬೆಳಗ್ಗೆ 11.55ಕ್ಕೆ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಐದು ಗಂಟೆಗೆ ಮೈಸೂರಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿನ ರ‍್ಯಾಡಿಶನ್ ಬ್ಲೂ ಪ್ಲಾಜಾ ಹೊಟೇಲ್ ನಲ್ಲಿ ತಂಗಲಿದ್ದಾರೆ.

'ಸೇನೆ ಸೇರೋದು ದೇಶ ಸೇವೆಗೆ, ಎಡಬಿಡಂಗಿಗಳಿಗೆ ಅರ್ಥವಾಗುವುದಿಲ್ಲ'ಸೇನೆ ಸೇರೋದು ದೇಶ ಸೇವೆಗೆ, ಎಡಬಿಡಂಗಿಗಳಿಗೆ ಅರ್ಥವಾಗುವುದಿಲ್ಲ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗ ಮಾಡಲು ಅದರ ಜೊತೆಗೆ ರಾಜಕೀಯ ಮಾಡಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಇನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ಮೋದಿ ಸಾಗುವ ರಸ್ತೆಯಲ್ಲಿರುವ ಶಾಲಾ, ಕಾಲೇಜುಗಳಿಗೆ ರಜೆ ನೀಡಿರುವ ಬಗ್ಗೆ ಆಕ್ಷೇಪವನ್ನು ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕೆಪಿಸಿಸಿ ಏಕೈಕ ಪ್ರಶ್ನೆಯೊಂದನ್ನು ಕೇಳಿದೆ.

 ಫೆಬ್ರವರಿ ತಿಂಗಳಲ್ಲಿ ಚುನಾವಣಾ ಸಭೆ ನಡೆಸಲು ಮೋದಿ ರಾಜ್ಯಕ್ಕೆ ಆಗಮಿಸಿದ್ದರು

ಫೆಬ್ರವರಿ ತಿಂಗಳಲ್ಲಿ ಚುನಾವಣಾ ಸಭೆ ನಡೆಸಲು ಮೋದಿ ರಾಜ್ಯಕ್ಕೆ ಆಗಮಿಸಿದ್ದರು

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, "ಪ್ರಧಾನಮಂತ್ರಿಗಳು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕೆಲವೊಂದು ಪ್ರಶ್ನೆಗಳನ್ನು ಈ ಗೋಷ್ಠಿಯ ಮೂಲಕ ನೇರವಾಗಿ ಕೇಳಲು ಬಯಸುತ್ತೇನೆ. ಇದರ ಜೊತೆಗೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರವನ್ನೂ ತಲುಪಿಸುತ್ತೇವೆ. 2018ರಲ್ಲಿ ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರವಿತ್ತು. ಆ ಸಂದರ್ಭದಲ್ಲಿ ಅಂದರೆ ಫೆಬ್ರವರಿ ತಿಂಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲು ಮೋದಿಯವರು ರಾಜ್ಯಕ್ಕೆ ಆಗಮಿಸಿದ್ದರು"ಎಂದು ರಾಮಲಿಂಗ ರೆಡ್ಡಿ ಹೇಳಿದರು.

 ಅರಮನೆ ಮೈದಾನದಲ್ಲಿ ದೊಡ್ಡ ಸಭೆಯನ್ನು ಪ್ರಧಾನಿಗಳು ನಡೆಸುತ್ತಾರೆ

ಅರಮನೆ ಮೈದಾನದಲ್ಲಿ ದೊಡ್ಡ ಸಭೆಯನ್ನು ಪ್ರಧಾನಿಗಳು ನಡೆಸುತ್ತಾರೆ

"ಆ ವೇಳೆ ಅಸೆಂಬ್ಲಿ ನಡೆಯುತ್ತಿತ್ತು, ಅರಮನೆ ಮೈದಾನದಲ್ಲಿ ದೊಡ್ಡ ಸಭೆಯನ್ನು ಪ್ರಧಾನಿಗಳು ನಡೆಸುತ್ತಾರೆ. ಆ ಸಭೆಯಲ್ಲಿ ಸಿದ್ದರಾಮಯ್ಯನವರ ಸರಕಾರ ಹತ್ತು ಪರ್ಸೆಂಟ್ ಸರಕಾರ ಎಂದು ಹೇಳುತ್ತಾರೆ. ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿ ಮೋದಿಯವರ ಹೇಳಿಕೆಗೆ ಜವಾಬ್ ಅನ್ನು ನೀಡುತ್ತಾರೆ. ಅಂದು ನಮ್ಮ ಸರಕಾರದ ಮೇಲೆ ಯಾವ ಆಪಾದನೆಯೂ ಇರಲಿಲ್ಲ. ರಾಜಕೀಯ ಕಾರಣಕ್ಕಾಗಿ ಅಂದು ಅಂತಹ ಹೇಳಿಕೆಯನ್ನು ಪ್ರಧಾನಿ ಮೋದಿ ನೀಡಿದ್ದರು"ಎಂದು ರಾಮಲಿಂಗ ರೆಡ್ಡಿ ಹೇಳಿದರು.

 ಹತ್ತು ಇದ್ದದ್ದು ನಲವತ್ತು ಆಗಿರುವುದು ನಿಮ್ಮ ಸಾಧನೆಯಾಗಿರಬಹುದು

ಹತ್ತು ಇದ್ದದ್ದು ನಲವತ್ತು ಆಗಿರುವುದು ನಿಮ್ಮ ಸಾಧನೆಯಾಗಿರಬಹುದು

"ನಾನು ಇವತ್ತು ಪ್ರಧಾನಮಂತ್ರಿಗಳಿಗೆ ನಿಮ್ಮ ಸರಕಾರದ ಕಾರ್ಯವೈಖರಿಯ ಬಗ್ಗೆ ಕೇಳಲು ಬಯಸುತ್ತೇನೆ. ನಿಮ್ಮ ಬಿಜೆಪಿ ಸರಕಾರ ನಲವತ್ತು ಪರ್ಸೆಂಟ್ ಸರಕಾರ ಎಂದು ವಿಶ್ವವಿಖ್ಯಾತಿಯನ್ನು ಪಡೆದಿದೆ. ಇದೊಂದು ಅಮೋಘ ಕಾರ್ಯ ಎಂದು ನೀವು ತಿಳಿದುಕೊಂಡಿದ್ದೀರಾ. ಹತ್ತು ಇದ್ದದ್ದು ನಲವತ್ತು ಆಗಿರುವುದು ನಿಮ್ಮ ಸಾಧನೆಯಾಗಿರಬಹುದು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲು ಬಯಸುತ್ತೇನೆ"ಎಂದು ರಾಮಲಿಂಗ ರೆಡ್ಡಿ ವ್ಯಂಗ್ಯವಾಡಿದರು.

ಪೂರಕವಾಗಿ ಗುತ್ತಿಗೆದಾರರ ಸಂಘದ ಕೆಂಪಣ್ಣ

"ಇದಕ್ಕೆ ಪೂರಕವಾಗಿ ಗುತ್ತಿಗೆದಾರರ ಸಂಘದ ಕೆಂಪಣ್ಣನವರು ವರ್ಷಕ್ಕೆ ಮುಂಚೆ ಪತ್ರವನ್ನು ಪ್ರಧಾನಿ ಕಾರ್ಯಾಲಯಕ್ಕೆ ಬರೆದಿದ್ದರು. ಅದೇ ರೋತಿ ಸಂತೋಷ್ ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದೆಲ್ಲವೂ ಪ್ರಧಾನಿಗಳ ಗಮನಕ್ಕೂ ಹೋಗಿದೆ, ಎರಡೂ ಕಡೆ ಇವರದ್ದೇ ಸರಕಾರವಿದೆ. ಈ ಬಗ್ಗೆ ಪ್ರಧಾನಿಗಳು ಮೌನಿಬಾಬಾ ಆಗಿದ್ದಾರೆ. ಇದಕ್ಕೂ ಪ್ರಧಾನಿಗಳು ಉತ್ತರವನ್ನು ಕೊಡಬೇಕಾಗುತ್ತದೆ"ಎಂದು ರಾಮಲಿಂಗ ರೆಡ್ಡಿ ಒತ್ತಾಯಿಸಿದರು.

English summary
Ahead Of PM Karnataka Tour, KPCC One Question To Narendra Modi. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X