• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಚುನಾವಣೆ: ತೃತೀಯ ರಂಗದತ್ತ ಜೆಡಿಎಸ್ ಉತ್ಸುಕ

|
Google Oneindia Kannada News

ಬೆಂಗಳೂರು ಮೇ 27: ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ಎಚ್. ಡಿ. ದೇವೇಗೌಡ, ತಮ್ಮದೇ ಆದ ನಿಲುವು ಹೊಂದಿರುವ ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ತೃತೀಯ ರಂಗದತ್ತ ಒಲವು ವ್ಯಕ್ತಪಡಿಸಿದ್ದಾರೆ.

ತಮ್ಮ ಬೆಂಗಳೂರು ಪ್ರವಾಸದ ಹಿನ್ನೆಲೆಯಲ್ಲಿ ಗುರುವಾರ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಜೆಡಿಎಸ್‌ನ ಉನ್ನತ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ ತೃತೀಯ ರಂಗದತ್ತ ಅವರು ಉತ್ಸುಕರಾಗಿರುವುದು ಬಹಿರಂಗವಾಗಿದೆ.

2024ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತೃತೀಯ ರಂಗವನ್ನು ಬಲಪಡಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಲು ಕೆ. ಚಂದ್ರಶೇಖರ ರಾವ್ ಅವರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

ದೇಶವನ್ನು ರಕ್ಷಿಸಲು ತೃತೀಯ ರಂಗ ಅಗತ್ಯ

ದೇಶವನ್ನು ರಕ್ಷಿಸಲು ತೃತೀಯ ರಂಗ ಅಗತ್ಯ

ಸಮಾಲೋಚನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, "ದೇಶವನ್ನು ರಕ್ಷಿಸಲು ತೃತೀಯ ರಂಗದ ಅವಶ್ಯಕತೆ ಇದೆ. ಇದಕ್ಕಾಗಿ ಕೆ. ಸಿ. ಚಂದ್ರಶೇಖರ ರಾವ್ ಶ್ರಮಿಸುತ್ತಿದ್ದಾರೆ,'' ಎಂದು ಪ್ರತಿಪಾದಿಸಿದರು.

ದೇವೇಗೌಡ ಅವರ ಪದ್ಮನಾಭನಗರ ನಿವಾಸಕ್ಕೆ ಗುರುವಾರ ಮಧ್ಯಾಹ್ನ ಆಗಮಿಸಿದ ಕೆಸಿಆರ್, ಭೋಜನದ ನಂತರ ಸಭೆ ನಡೆಸಿದರು. ಕೆಸಿಆರ್ ಅವರು ಬೆಂಗಳೂರಿನಲ್ಲಿದ್ದರೆ, ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ನಲ್ಲಿದ್ದರು.

ವಿಜಯದಶಮಿ ದಿನದಂದು ತೃತೀಯ ರಂಗ ರಚನೆ

ವಿಜಯದಶಮಿ ದಿನದಂದು ತೃತೀಯ ರಂಗ ರಚನೆ

ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕೆಸಿಆರ್ ಮತ್ತು ಎಚ್. ಡಿ. ಕುಮಾರಸ್ವಾಮಿ, "ಮೊದಲ ಬಾರಿಗೆ ತೃತೀಯ ರಂಗ ರಚನೆಗೆ ದಿನಾಂಕ ನಿಗದಿಪಡಿಸಲಾಗಿದೆ. ವಿಜಯದಶಮಿ ದಿನದಂದು ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ. ತೃತೀಯ ರಂಗದಲ್ಲಿ ಟಿಆರ್‌ಎಸ್, ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಜೆಡಿಎಸ್ ಸೇರಿದಂತೆ ಸಮಾನ ಮನಸ್ಕ ಪಕ್ಷಗಳು ಇರಲಿವೆ,'' ಎಂದು ತಿಳಿಸಿದರು.

ಭಾರತ ಬದಲಾಗಲಿದೆ

ಭಾರತ ಬದಲಾಗಲಿದೆ

"ಈಗಲೇ ಸೆನ್ಸೇಷನಲ್ ಸುದ್ದಿಯನ್ನು ನಿರೀಕ್ಷಿಸಬೇಡಿ. ಎರಡು-ಮೂರು ತಿಂಗಳು ನಿರೀಕ್ಷಿಸಿ. ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತ ಬದಲಾಗಲಿದೆ. ದೇಶ ಬದಲಾಗಬೇಕು. ನಾವು ನಮ್ಮ ಇಸಂ ಗಳಿಂದ ಹೊರಬಂದು ಮೇಲೇರಬೇಕಿದೆ,'' ಎಂದು ಕೆಸಿಆರ್ ಪ್ರತಿಪಾದಿಸಿದರು.

ರಾಷ್ಟ್ರಪತಿ ಚುನಾವಣೆ ಬಗ್ಗೆ ಚರ್ಚೆ

ರಾಷ್ಟ್ರಪತಿ ಚುನಾವಣೆ ಬಗ್ಗೆ ಚರ್ಚೆ

ಸಭೆಯಲ್ಲಿ ಮುಂಬುರುವ ರಾಷ್ಟ್ರಪತಿ ಚುನಾವಣೆ ಬಗ್ಗೆಯೂ ಚರ್ಚೆ ನಡೆದಿದೆ. ಈ ವೇಳೆ ಪರ್ಯಾಯ ರಾಜಕೀಯ ಶಕ್ತಿಯ ನೇತೃತ್ವ ವಹಿಸುವಂತೆ ದೇವೇಗೌಡರನ್ನು ಕೆಸಿಆರ್ ಮನವಿ ಮಾಡಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಅಲ್ಲದೇ ದೇವೇಗೌಡರನ್ನು ರಾಷ್ಟ್ರಪತಿ ಚುನಾವಣೆಗೆ ತಮ್ಮ ಉಮೇದುಗಾರಿಕೆ ಸಲ್ಲಿಸುವಂತೆ ಕೆಸಿಆರ್ ಸೂಚಿಸಿದರು ಎಂದು ವರದಿಯಾಗಿದೆ. ಆದರೆ ಜೆಡಿಎಸ್ ನ ಉನ್ನತ ಮೂಲಗಳು ಈ ಸುದ್ದಿಯನ್ನು ಅಲ್ಲಗೆಳೆದಿವೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧಿಕಾರ ಈ ವರ್ಷದ ಜುಲೈನಲ್ಲಿ ಪೂರ್ಣಗೊಳ್ಳಲಿದೆ.

ರುಪಾಯಿ ಮೌಲ್ಯ ಕುಸಿತ

ರುಪಾಯಿ ಮೌಲ್ಯ ಕುಸಿತ

"ಕೇವಲ ಭಾಷಣಗಳ ಹೊರತಾಗಿಯೂ ಕೈಗಾರಿಕೆಗಳು ಮುಚ್ಚುತ್ತಿವೆ. ರಾಷ್ಟ್ರದ ಜಿಡಿಪಿ ಕುಸಿಯುತ್ತಿದೆ. ಡಾಲರ್ ಗೆ ಹೋಲಿಸಿದರೆ ರುಪಾಯಿ ಮೌಲ್ಯ ಕುಸಿಯುತ್ತಿದೆ,'' ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ದೂರಿದರು.
"ಭಾರತದಲ್ಲಿ ಅಗತ್ಯ ಸಂಪನ್ಮೂಲಗಳು ಇದ್ದರೂ ಕುಡಿಯುವ ನೀರು, ವಿದ್ಯುತ್, ನೀರಾವರಿ ಕ್ಷೇತ್ರಗಳಲ್ಲಿ ಕೊರತೆ ಎದುರಿಸುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದೇಶದ ಪರಿಸ್ಥಿತಿ ಹೀಗೇ ಇದೆ. ಇದು ಬದಲಾಗಬೇಕಿದೆ,'' ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರ ಮಟ್ಟದಲ್ಲಿ ಬದಲಾವಣೆ

ರಾಷ್ಟ್ರ ಮಟ್ಟದಲ್ಲಿ ಬದಲಾವಣೆ

"ರಾಷ್ಟ್ರ ಮಟ್ಟದಲ್ಲಿ ಮತ್ತು ಕರ್ನಾಟಕದಲ್ಲಿ ಇರುವ ರಾಜಕೀಯ ಪರಿಸ್ಥಿತಿ ಕುರಿತು ಭೇಟಿ ವೇಳೆ ಚರ್ಚಿಸಲಾಯಿತು. 2018ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಾನು ಹೇಳಿದ್ದೆ. ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭಕ್ಕೆ ನಾನು ಆಗಮಿಸುತ್ತೇನೆ ಎಂದು. ನನ್ನ ಮಾತು ನಿಜವಾಯಿತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದೇ ರೀತಿ ರಾಷ್ಟ್ರ ಮಟ್ಟದಲ್ಲಿ ಬದಲಾವಣೆ ಆಗಲಿದೆ. ಇದನ್ನು ಯಾರು ತಡೆಯಲು ಆಗುವುದಿಲ್ಲ,'' ಎಂದು ಕೆ. ಚಂದ್ರಶೇಖರರಾವ್ ಭರವಸೆ ವ್ಯಕ್ತಪಡಿಸಿದರು.

   ಮಹಿಳೆಗೆ ನ್ಯಾಯ ಕೊಡಿಸಲು ಪೊಲೀಸರಿಗೇ ಹೇಗೆ ವಾರ್ನಿಂಗ್ ಕೊಟ್ಟಿದ್ದಾರೆ ನೋಡಿ CM ಯೋಗಿ |#Politics|Oneindia Kannada
   English summary
   Ahead of 2024 Loksabha elections, JDS, AAP, Samajavadi Party and others are enthusiastic to join Third Front.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X