• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಎಚ್‌ಡಿಕೆ ಸ್ಪೂರ್ತಿ!

|

ಬೆಂಗಳೂರು, ಸೆ. 06: ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡುತ್ತಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ಗ್ರಾಮಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಸ್ಥಳೀಯರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಅವುಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವುದು ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶವಾಗಿತ್ತು. ಆ ಹೊಸ ಪರಿಕಲ್ಪನೆಯಿಂದ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಮೇಲೆ ಜನಸಾಮಾನ್ಯರಲ್ಲಿ ಹೊಸ ಭರವಸೆಯೂ ಮೂಡಿತ್ತು. ನಂತರ ಎಚ್.ಡಿ. ಕುಮಾರಸ್ವಾಮಿ ಅವರು ಎರಡನೇ ಬಾರಿ ಸಿಎಂ ಆದಾಗಲೂ ಗ್ರಾಮ ವಾಸ್ತವ್ಯ ಆರಂಭಿಸಿದ್ದರು. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಗಿಯ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದರು.

   IPL 2020 ವೇಳಾಪಟ್ಟಿ ಬಿಡುಗಡೆ ಮಾಡಿದ BCCI | Oneindia Kannada

   ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ರೈತರು, ಎಚ್‌ಐವಿ ಪೀಡಿತರು, ದೇವದಾಸಿಯರು ಹೀಗೆ ಸಮಾಜದ ಎಲ್ಲ ಸ್ತರದ ಜನರ ಮನೆಯಲ್ಲಿ ವಾಸ್ತವ್ಯ ಮಾಡುವ ಮೂಲಕ ಅವರ ಸಮಸ್ಯೆಗಳನ್ನು ಅರಿತು ಪರಿಹರಿಸಲು ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರಯತ್ನಿಸಿದ್ದರು.

   ರೈತರಿಗೆ ಎದುರಾಯ್ತು ಹೊಸ ಸಂಕಷ್ಟ, ಸಚಿವರು ಕೊಟ್ಟ ಎಚ್ಚರಿಕೆ ಏನು?

   ತಮ್ಮ ಅಧಿಕಾರದಲ್ಲಿ ಡಿಸಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಗ್ರಾಮ ವಾಸ್ತವ್ಯ ಕಡ್ಡಾಯ ಮಾಡಿದ್ದರು. ಅದೇ ಮಾದರಿಯನ್ನು ಈಗ ರಾಜ್ಯ ಬಿಜೆಪಿ ಸರ್ಕಾರದ ಸಚಿವರು ಪಾಲನೆ ಮಾಡಲು ಮುಂದಾಗಿದ್ದಾರೆ. ಆ ಮೂಲಕ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಡಳಿತ ಕಾಲದಲ್ಲಿ ಅತ್ಯಂತ ಜನಪ್ರೀಯವಾಗಿದ್ದ 'ಗ್ರಾಮ ವಾಸ್ತವ್ಯ' ಮಾದರಿಯಲ್ಲಿ 'ರೈತ ವಾಸ್ತವ್ಯ' ಕಾರ್ಯಕ್ರಮ ಇನ್ನೇನು ಶುರುವಾಗಲಿದೆ.

   ಎಚ್‌ಡಿಕೆ ಗ್ರಾಮ ವಾಸ್ತವ್ಯ

   ಎಚ್‌ಡಿಕೆ ಗ್ರಾಮ ವಾಸ್ತವ್ಯ

   ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ನಾಡಿನ ದೊರೆಯೆ ತಮ್ಮ ಊರಿಗೆ ಬಂದು ವಾಸ್ತವ್ಯ ಮಾಡುತ್ತಾರೆ ಎಂಬುದು ಆಗ ಜನರಲ್ಲಿ ಹೊಸ ಭರವಸೆ ಮೂಡಿಸಿತ್ತು. ಆಗ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲು ಸೂಚಿಸಲಾಗುತ್ತಿತ್ತು.

   ಸಮಸ್ಯೆಗಳನ್ನು ಅರಿತುಕೊಂಡು, ಆಲಿಸಿದ ಬಳಿಕ ಸ್ಥಳದಲ್ಲಿಯೇ ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಪರಿಹರಿಸಲು ಸೂಚನೆ ಕೊಡುತ್ತಿದ್ದರು. ಅಧಿಕಾರಿಗಳು ಸಿಎಂ ಜೊತೆಗೆ ಇರುತ್ತಿದ್ದರಾದರಿಂದ ಸಾಕಷ್ಟು ಸಮಸ್ಯೆಗಳು ತಕ್ಷಣವೆ ಪರಿಹಾರವಾಗುತ್ತಿದ್ದವು. ಹೀಗಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅತ್ಯಂತ ಜನಪ್ರೀಯತೆ ಪಡೆದಿತ್ತು.

   ರೈತರ ಜ್ವಲಂತ ಸಮಸ್ಯೆಗಳು

   ರೈತರ ಜ್ವಲಂತ ಸಮಸ್ಯೆಗಳು

   ಪ್ರತಿ ಸಲದ ಮಳೆಗಾಲದಲ್ಲೂ ರೈತರ ಸಮಸ್ಯೆಗಳು ಉಲ್ಬಣವಾಗುತ್ತವೆ. ಬಂದರೆ ಅತಿಯಾದ ಮಳೆ, ಇಲ್ಲದಿದ್ದರೆ ಬರಗಾಲ. ಎರಡೂ ಸರಿಯಾಗಿದ್ದು ಉತ್ತಮ ಫಸಲು ಬಂದಾಗ ಬೆಲೆ ಕುಸಿತ ರೈತರನ್ನು ಕಂಗೆಡಿಸುತ್ತದೆ. ಹಣ ಕೊಟ್ಟರೂ ಸಕಾಲದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಸಿಗದೇ ರೈತರು ಪರದಾಡುವುದು ಮಳೆಗಾಲದ ಆರಂಭದಲ್ಲಿ ಸಹಜ ಎಂಬಂತಾಗಿದೆ.

   ಯೂರಿಯಾ ಕೊರತೆ: ಕೇಂದ್ರ ಸಚಿವರಿಗೆ ಬಿ.ಸಿ. ಪಾಟೀಲ್ ಮಾಹಿತಿ ಏನು?

   ರಸಗೊಬ್ಬರ, ಬಿತ್ತನೆ ಬೀಜಕ್ಕೆ ಆಗ್ರಹಿಸಿ ಹಾವೇರಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಗೋಲಿಬಾರ್ ಮಾಡಲಾಗುತ್ತು. ಆಗ ಇಬ್ಬರು ರೈತರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಹೀಗಾಗಿ ಈ ಸಲ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಈಡೇರಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಹೀಗಾಗಿ 'ಗ್ರಾಮ ವಾಸ್ತವ್ಯ'ದ ಮಾದರಿಯಲ್ಲಿ 'ರೈತ ವಾಸ್ತವ್ಯ' ಮಾಡಲು ಕೃಷಿ ಸಚಿ ಬಿ.ಸಿ. ಪಾಟೀಲ್ ಮುಂದಾಗಿದ್ದಾರೆ.

   'ಗ್ರಾಮ ವಾಸ್ತವ್ಯ' ಅಲ್ಲ 'ರೈತ ವಾಸ್ತವ್ಯ'

   'ಗ್ರಾಮ ವಾಸ್ತವ್ಯ' ಅಲ್ಲ 'ರೈತ ವಾಸ್ತವ್ಯ'

   ರೈತ ಕುಟುಂಬದ ಹಿನ್ನೆಲೆಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು, ರೈತರೊಂದಿಗೆ ಕಾಲಕಳೆಯಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು "ರೈತ ವಾಸ್ತವ್ಯ" ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.

   ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಕೃಷಿ ಅಧಿಕಾರಿಗಳ ಜೊತೆ ಪ್ರಗತಿಪರ ರೈತರನ್ನು ಭೇಟಿಮಾಡಿ ರೈತರ ನಿವಾಸದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ವಾಸ್ತವ್ಯದ ಸಂದರ್ಭದಲ್ಲಿ ರೈತರೊಂದಿಗೆ ಚರ್ಚೆಯ ಜೊತೆಗೆ ಪ್ರಗತಿಪರ ರೈತರ ಸಾಧನೆಗಳನ್ನು ಇತರ ರೈತರಿಗೂ ಪ್ರೇರಣೆ ಆಗುವಂತೆ ಮಾಡುವುದು ರೈತ ವಾಸ್ತವ್ಯದ ಉದ್ದೇಶ. ಅದೇ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನೂ ಕೃಷಿ ಸಚಿವರು ಆಲಿಸದ್ದಾರೆ.

   ಕೋವಿಡ್ ಸಹಜ ಸ್ಥಿತಿಗೆ ಬಂದ ನಂತರ

   ಕೋವಿಡ್ ಸಹಜ ಸ್ಥಿತಿಗೆ ಬಂದ ನಂತರ

   ಸಧ್ಯ ಕೊರೊನಾ ವೈರಸ್ ಸಂಕಷ್ಟದ ಪರಿಸ್ಥಿತಿಯಿದೆ. ಹೀಗಾಗಿ ರೈತರ ಮನೆಯಲ್ಲಿ ಸಚಿವರು ವಾಸ್ತವ್ಯ ಮಾಡುವುದರಿಂದ ತೊಂದರೆ ಆಗಬಹುದು. ಹೀಗಾಗಿ ಕೊರೊನಾ ಸೋಂಕು ಕಡಿಮೆಯಾದ ಬಳಿಕ ರೈತ ವಾಸ್ತವ್ಯಕ್ಕೆ ರೂಪುರೇಷೆ ನಿರ್ಧಾರವಾಗಲಿದೆ. ಜೊತೆಗೆ ಯಾವ ಊರಿನಿಂದ ರೈತ ವಾಸ್ತವ್ಯವನ್ನು ಆರಂಭಿಸಬೇಕು ಎಂಬುದನ್ನು ಆಗಲೇ ನಿರ್ಧಾರ ಮಾಡಲಿದ್ದಾರೆ. ಸ್ಥಳ ಮತ್ತು ದಿನಾಂಕವನ್ನು ನಂತರ ನಿರ್ಧಾರ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   English summary
   The Grama Vastavya program will begin in the form of 'Raita Vastavya' which was very popular during the tenure of former CM HD Kumaraswamy. Know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X