ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಪದವಿ ಕಾಲೇಜುಗಳ ಹೊಸ ವೇಳಾಪಟ್ಟಿ ಇಲ್ಲಿದೆ ನೋಡಿ

By Nayana
|
Google Oneindia Kannada News

ಬೆಂಗಳೂರು, ಜು.18: ರಾಜ್ಯದ ಸರ್ಕಾರಿ ಕಾಲೇಜುಗಳ ವೇಳಾ ಪಟ್ಟಿ ಮತ್ತೆ ಬದಲಾಗಿದೆ. ಕಾಲೇಜು ತರಗತಿ ಆರಂಭಿಸುವ ಸಮಯವನ್ನು ಮತ್ತೆ ಪರಿಷ್ಕರಿಸಲಾಗಿದೆ. ಸ್ವಂತ ಕಟ್ಟಡ ಇಲ್ಲದ ಹಾಗೂ ಕೊಠಡಿಗಳ ಕೊರತೆಯಿದ್ದು 2 ಪಾಳಿ ತರಗತಿ ನಡೆಸುವ ಕಾಲೇಜುಗಳಲ್ಲಿ ಬೆಳಗ್ಗೆ 8ರಿಂದಲೇ ತರಗತಿ ಆರಂಭಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ಕಾಲೇಜು ತರಗತಿ ಆರಂಭಕ್ಕೆ ಸಂಬಂಧಿಸಿದಮತೆ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಪ್ರಾಧ್ಯಾಪಕರ ಸಂಘ ಮತ್ತು ಸಾರ್ವಜನಿಕರು ಸಲ್ಲಿಸಿದ ಮನವಿಯನ್ನು ಕೂಲಂಕುಷವಾಗಿ ಪರಿಶೀಲಿಸಿರುವ ಇಲಾಖೆ, ತರಗತಿ ಆರಂಭದ ಸಮಯಕ್ಕೆ ಸಂಬಂಧಿಸಿದಂತೆ 3 ಮಾರ್ಗೋಪಾಯಗಳನ್ನು ತಿಳಿಸಿದೆ.

ಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆ

ಈಗಾಗಲೇ 2 ಪಾಳಿ ತರಗತಿ ನಡೆಸುತ್ತಿರುವ ಕಾಲೇಜುಗಳಲ್ಲಿ ಮೊದಲ ಬ್ಯಾಚ್‌ಗಳನ್ನು ಬೆಳಗ್ಗೆ 8ರಿಂದಲೇ ಆರಂಭಿಸಲು ಸೂಚಿಸಲಾಗಿದೆ. ಎಲ್ಲಾ ಕಾಲೇಜುಗಳಲ್ಲೂ ಪ್ರಯೋಗಾಲಯ ಹಿಂದಿನಂತೆಯೇ ಬೆಳಗ್ಗೆ 8ರಿಂದಲೇ ಆರಂಭಿಸಲು ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.

Again changes in the Govt degree college time table

ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಅನನುಕೂಲವಾಗುತ್ತಿರುವ ಕಾಲೇಜು ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ದೃಷ್ಟಿಯಿಂದ 9 ಗಂಟೆಯಿಂದ 10 ಗಂಟೆ ನಡುವೆ ಆರಂಭಿಸಲು ಸೂಚಿಸಲಾಗಿದೆ.

ವೇಳಾಪಟ್ಟಿ ಬದಲಾವಣೆ ಮಾಡಿದರೂ ಪಠ್ಯೇತರ ಚಟುವಟಿಕೆಗಳಾದ ಎನ್‌ಎಸ್‌ಎಸ್‌, ಎನ್‌ಸಿಸಿ ವಿಶೇಷ ತರಬೇತಿಗಳು, ಕ್ರೀಡಾ ಚಟುವಟಿಕೆಗಳನ್ನು ಕಡಿತಗೊಳಿಸದಂತೆ ಸೂಚಿಸಲಾಗಿದೆ. ಇದೆಲ್ಲವೂ ಎಂದಿನಂತೆಯೇ ನಡೆಯಲಿದೆ.

English summary
Colligiate education changes timetable of Government degree colleges, From this education year classess will resume at 8 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X