ಬಿಎಸ್ವೈ ಸಂಪುಟ ವಿಸ್ತರಣೆಯ ನಂತರ ಯಾವ ಜಾತಿಗೆ ಎಷ್ಟು ಪ್ರಾತಿನಿಧ್ಯ?ಇಲ್ಲಿದೆ ಪಟ್ಟಿ
ಬೆಂಗಳೂರು, ಜ 14: ಬಹುದಿನದಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆಯ ಬಹುದೊಡ್ಡ ಕಸರತ್ತನ್ನು ಅಂತೂ ಮುಖ್ಯಮಂತ್ರಿ ಯಡಿಯೂರಪ್ಪ ಮುಗಿಸಿದ್ದಾರೆ.
ಖಾಲಿಯಿದ್ದ ಎಂಟು ಸಚಿವ ಸ್ಥಾನಗಳ ಪೈಕಿ ಏಳು ಸ್ಥಾನವನ್ನು ಭರ್ತಿ ಮಾಡಿದ್ದಾರೆ. ನೂತನ ಸಚಿವರಿಗೆ ಯಾವ ಇಲಾಖೆಯ ಜವಾಬ್ದಾರಿಯನ್ನು ಸಿಎಂ ವಹಿಸಿ ಕೊಡುತ್ತಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ಬಿಎಸ್ವೈ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರುವ ನೂತನ ಸಚಿವರಾರು, ಆ 'ಸಿಡಿ'ಯಲ್ಲಿ ಅಂತದ್ದೇನಿದೆ!
ಸಂಪುಟ ವಿಸ್ತರಣೆಯ ವಿಚಾರದಲ್ಲಿ ಹಲವು ಆಕಾಂಕ್ಷಿಗಳು ಅಪಸ್ವರವನ್ನು ಎತ್ತಿದ್ದರು. ನಿಮ್ಮ ದೂರು ಏನಿದ್ದರೂ, ವರಿಷ್ಠರ ಬಳಿ ಹೇಳಿಕೊಳ್ಳಿ, ನನ್ನದೇನೂ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿಗಳು ಖಡಕ್ ಆಗಿ ಹೇಳಿದ್ದಾರೆ.
ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಮೂರನೇ ಬಾರಿಗೆ ಸಂಪುಟ ವಿಸ್ತರಣೆಯಾಗುತ್ತಿರುವುದು. ಸದ್ಯ, ಬಿಎಸ್ವೈ ಸಚಿವ ಸಂಪುಟದಲ್ಲಿ ಯಾವಯಾವ ಜಾತಿಗೆ ಎಷ್ಟು ಪ್ರಾತಿನಿಧ್ಯತೆ ನೀಡಲಾಗಿದೆ? ಮುಂದೆ ಓದಿ..
'ಕೈ' ತಪ್ಪಿದ ಮಂತ್ರಿ ಪದವಿ; ರಾಜ್ಯ ಸರ್ಕಾರದ ಭವಿಷ್ಯ ಹೇಳಿದ ಆರ್.ಆರ್. ನಗರ ಶಾಸಕ ಮುನಿರತ್ನ!

ಲಿಂಗಾಯತ ಸಮುದಾಯದ ಹನ್ನೊಂದು ಮಂತ್ರಿಗಳು
ಲಿಂಗಾಯತ ಸಮುದಾಯದ ಹನ್ನೊಂದು ಮಂತ್ರಿಗಳು: ಯಡಿಯೂರಪ್ಪ, ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಯಿ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ.

ಬ್ರಾಹ್ಮಣ ಸಮುದಾಯದ ಇಬ್ಬರು ಮಂತ್ರಿಗಳು
ಹಿಂದುಳಿದ ವರ್ಗದ ಇಬ್ಬರು ಮಂತ್ರಿಗಳು, ಅವರೆಂದರೆ, ಕೋಟ ಶ್ರೀನಿವಾಸ ಪೂಜಾರಿ (ಬಿಲ್ಲವ) ಮತ್ತು ಆನಂದ್ ಸಿಂಗ್ (ರಜಪೂತ)
ಜೈನ ಸಮುದಾಯದ ಒಬ್ಬರು ಮಂತ್ರಿ, ಅವರೆಂದರೆ ಶ್ರೀಮಂತ ಪಾಟೀಲ್.
ಬ್ರಾಹ್ಮಣ ಸಮುದಾಯದ ಇಬ್ಬರು ಮಂತ್ರಿಗಳು, ಅವರೆಂದರೆ, ಸುರೇಶ್ ಕುಮಾರ್ ಮತ್ತು ಶಿವರಾಮ ಹೆಬ್ಬಾರ್

ಒಕ್ಕಲಿಗ ಸಮುದಾಯದ ಏಳು ಮಂತ್ರಿಗಳು:
ಒಕ್ಕಲಿಗ ಸಮುದಾಯದ ಏಳು ಮಂತ್ರಿಗಳು: ಡಾ.ಅಶ್ವಥ್ ನಾರಾಯಣ್, ಆರ್.ಅಶೋಕ್, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್, ನಾರಾಯಣಸ್ವಾಮಿ, ಸಿ.ಪಿ.ಯೋಗೀಶ್ವರ್
ಕುರುಬ ಸಮುದಾಯದ ನಾಲ್ವರು ಮಂತ್ರಿಗಳು: ಕೆ.ಎಸ್.ಈಶ್ವರಪ್ಪ, ಬಿ.ಎ.ಬಸವರಾಜ, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್

ಪರಿಶಿಷ್ಟ ಜಾತಿಯಿಂದ ನಾಲ್ವರು ಮಂತ್ರಿಗಳು
ಪರಿಶಿಷ್ಟ ಜಾತಿಯಿಂದ ನಾಲ್ವರು ಮಂತ್ರಿಗಳು: ಗೋವಿಂದ ಕಾರಜೋಳ, ಎಸ್.ಅಂಗಾರ, ಅರವಿಂದ ಲಿಂಬಾವಳಿ, ಪ್ರಭು ಚವ್ಹಾಣ್
ಎಸ್ ಟಿ ಸಮುದಾಯದಿಂದ ಇಬ್ಬರು: ರಮೇಶ್ ಜಾರಕಿಹೊಳಿ ಮತ್ತು ಬಿ.ಶ್ರೀರಾಮುಲು