ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಪುರದಲ್ಲಿ ತಾಯಿ-ಮಗಳು ಸತ್ತಿದ್ದ ಕುಟುಂಬಕ್ಕೆ ಸರಕಾರದಿಂದ ಪರಿಹಾರ

By ವಿಜಯಪುರ ಪ್ರತಿನಿಧಿ
|
Google Oneindia Kannada News

ವಿಜಯಪುರ, ಅಕ್ಟೋಬರ್ 11: ವಿಜಯಪುರದಲ್ಲಿ ಮನೆ ಗೋಡೆ ಕುಸಿದು ಬಿದ್ದು ಮೃತ ಪಟ್ಟಿದ್ದ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಸವನ ಬಾಗೇವಾಡಿ ತಹಶೀಲ್ದಾರ್ ಎಂ.ಎನ್​.ಚೋರಸಗ್ತಿ ಮೃತರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಅಲ್ಲದೆ ರಾಷ್ಟ್ರಿಯ ವಿಪತ್ತು ನಿರ್ವಹಣಾ ಸಮಿತಿಯಿಂದ ಸಹ ತಲಾ 50.000 ರೂಪಾಯಿ ಪರಿಹಾರ ನಿಡೋದಾಗಿ ಹೇಳಿದ್ದಾರೆ.

ಈ ಹಿಂದೆ ಪ್ರಕಟಗೊಂಡ ಸುದ್ದಿ

ಪಕ್ಕದ ಮನೆಯ ಗೋಡೆ ಕುಸಿದು ಬಿದ್ದು, ತಾಯಿ-ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನ ರಕ್ಕಸ ರಸ್ತೆ ಗುಂಡಿಗೆ ಯುವಕ ದುರ್ಮರಣ: ವಾರದಲ್ಲಿ ಇದು 5 ನೇ ಬಲಿ!ಬೆಂಗಳೂರಿನ ರಕ್ಕಸ ರಸ್ತೆ ಗುಂಡಿಗೆ ಯುವಕ ದುರ್ಮರಣ: ವಾರದಲ್ಲಿ ಇದು 5 ನೇ ಬಲಿ!

ಗ್ರಾಮದ ಶಂಕ್ರಮ್ಮ ಔರಾದಿ (60) ಹಾಗೂ ಮಗಳು ಮಹಾದೇವಿ ಔರಾದಿ (30) ಮೃತರು. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ನೆನೆದಿದ್ದ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಶಂಕ್ರಮ್ಮಳ ಸಂಬಂಧಿಕರಾದ ಸಿದ್ದಪ್ಪ ಔರಾದಿ ಅವರ ಮನೆ ಕುಸಿದು ಬಿದ್ದು, ಅವಘಡ ಸಂಭವಿಸಿದೆ.

Death

ಸಿದ್ದಪ್ಪನ ಮನೆ ಗೋಡೆ ಕುಸಿದು ಶಂಕ್ರಮ್ಮ ವಾಸವಿದ್ದ ತಗಡಿನ ಶೆಡ್ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ತಾಯಿ-ಮಗಳು ಸಾವನ್ನಪ್ಪಿದ್ದಾರೆ. ಮನೆಯಾಚೆ ಮಲಗಿದ್ದ ಶಂಕ್ರಮ್ಮಳ ಮಗ ಶಿವಪುತ್ರ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬಸವನ ಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಷ್ಟು ಸಮಯ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಮಳೆಯಾಗುತ್ತಿರುವುದು ಒಂದು ಕಡೆ ಸಂತಸ ತಂದಿದ್ದರೆ, ಕೆಲವೆಡೆ ಜವರಾಯನಂತೆ ಅಟ್ಟಹಾಸ ಮೆಯುತ್ತಿದ್ದಾನೆ. ಈ ಬಾರಿಯ ಮಳೆಗಾಲದಲ್ಲಿ ವಿವಿಧೆಡೆ ಗೋಡೆ ಕುಸಿದು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

English summary
After wall collapse mother and daughter died in Bhairavadagai village, Basavana Bagevadi taluk, Vijayapura district. Shankramma and Mahadevi died in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X