ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರುಮೌಲ್ಯಮಾಪನ: ಹೊನ್ನಾವರದ ಪ್ರಮಥಾ SSLCಯಲ್ಲಿ ರಾಜ್ಯಕ್ಕೆ ಫಸ್ಟ್

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 2: ಮೌಲ್ಯಮಾಪಕರ ಎಡವಟ್ಟಿನಿಂದಾಗಿ ರಾಜ್ಯಕ್ಕೆ 3ನೇ ರ್ಯಾಂಕ್ ಬಂದಿದ್ದ ಜಿಲ್ಲೆಯ ಹೊನ್ನಾವರದ ಮಾರ್‌ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಮಥಾ ಗಜಾನನ ಭಟ್, ಮರುಮೌಲ್ಯಮಾಪನದಿಂದಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

2016- -17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆದಿದ್ದ ಪ್ರಮಥಾ ಮರುಮೌಲ್ಯಮಾಪನದಲ್ಲಿ ಪುನಃ 2 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಈ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

 After revaluation Pramatha got 625 marks in SSLC exams and holds first rank in the state

ಈ ಹಿಂದೆ ಫಲಿತಾಂಶ ಘೋಷಣೆಯಾದಾಗ ಒಟ್ಟು ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದರು. ಇದೀಗ ಈ ಸಾಲಿಗೆ ಪ್ರಮಥಾ ಕೂಟಾ ಸೇರ್ಪಡೆಯಾಗಿದ್ದಾರೆ.

ಈಕೆಯ ತಾಯಿ ಶಾಂತಿ ಭಟ್ಟ ಮಾರ್‌ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಇದೇ ಶಾಲೆಯ ಸಿಂಚನಾ ಬಿ.ಎಸ್ ರಾಜ್ಯಕ್ಕೆ ಈ ಮೊದಲು 8ನೇ ರ್ಯಾಂಕ ಪಡೆದಿದ್ದಳು. ಮತ್ತೆ ಮರುಮೌಲ್ಯಮಾಪನಕ್ಕೆ ಕಳುಹಿಸಿದಾಗ 6ನೇ ರ್ಯಾಂಕ ಪಡೆದುಕೊಂಡಿದ್ದಳು.

ಇದೀಗ ಇದೇ ರೀತಿ ಪ್ರಮಥಾ ಕೂಡಾ ಮೂರನೇ ರ್ಯಾಂಕ್ ಪಡೆದಿದ್ದಳು ಇದೀಗ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾಳೆ.

English summary
After the revaluation Pramatha from Honnavar got 625 marks out of 625 marks in SSLC examinatio 2017 and got first rank in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X