ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಷ್ಟ್ರೇ 60 ಅಂಕ ಕೊಡಿ, ನಿಮಗೆ ಪುಣ್ಯ ಗ್ಯಾರಂಟಿ!

By Prasad
|
Google Oneindia Kannada News

ಬೆಂಗಳೂರು, ಏಪ್ರಿಲ್ 21 : ಇಡೀ ರಾಜ್ಯವನ್ನು ತಲ್ಲಣಿಸುವಂತೆ, ವ್ಯವಸ್ಥೆಯ ಬಗ್ಗೆ ಅಸಹ್ಯ ಹುಟ್ಟಿಸುವಂತೆ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ನಂತರ, ಈಗ ಎಸ್ಸೆಸ್ಸೆಲ್ಸಿಯ ಸರದಿ. ಇದೇನಪ್ಪಾ ಅಂತ ಆಘಾತಕ್ಕೊಳಗಾಗುವ ಮುನ್ನ ಸ್ವಲ್ಪ ತಾಳಿ. ಲೀಕ್ ಆಗಿರುವುದು ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗಳಲ್ಲ, ಉತ್ತರ ಪತ್ರಿಕೆಗಳು!

ತಮಾಷೆಯಿಂದ ಕೂಡಿದ ಈ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪಕರೇ ಖುಲ್ಲಂಖುಲ್ಲಾ ಮಾಡಿದ್ದು, ವಾಟ್ಸಾಪಿನಲ್ಲಿ ಹರಿದಾಡುತ್ತಿವೆ. ಒಂದು ಗಣಿತ, ಮತ್ತೊಂದು ಸಮಾಜಶಾಸ್ತ್ರ ಮತ್ತು ಮಗದೊಂದು ಕನ್ನಡ ಉತ್ತರ ಪತ್ರಿಕೆ. ಹುಬ್ಬಳ್ಳಿಯ ಮೌಲ್ಯಮಾಪನ ಕೇಂದ್ರದಿಂದ ಈ ಉತ್ತರ ಪತ್ರಿಕೆಗಳು ಹೊರಬಿದ್ದಿವೆ ಎಂದು ತಿಳಿದುಬಂದಿದೆ.

ಕನ್ನಡ ಪ್ರಶ್ನೆ ಪತ್ರಿಕೆಯೊಂದರಲ್ಲಿ, ಕೆಳಗಿನ ಆಂಗ್ಲ ಪದಗಳ ಅರ್ಥವೇನು ಎಂದು ಕೇಳಲಾಗಿತ್ತು. ಫುಡ್, ಬರ್ಡ್ಸ್ ಮತ್ತು ಕಿಂಗ್ ಎಂದು ಆಂಗ್ಲ ಭಾಷೆಯಲ್ಲಿ ಕೇಳಿದ ಪದಗಳಿಗೆ ಅರ್ಥ ಕೇಳಲಾಗಿತ್ತು. ಕಿಂಗ್ ಪದಕ್ಕೆ ಒಬ್ಬ ಭೂಪ ಏನೆಂದು ಉತ್ತರ ಕೊಟ್ಟಿದ್ದಾನೆ ಗೊತ್ತಾ? 'ಸಿಗರೇಟ್!' ಏನು ಮಾಡೋಣ ಹೇಳಿ? ಕಾಲೇಜು ಮೆಟ್ಟಿಲು ಹತ್ತುವ ಮೊದಲೇ ಧೂಮಲೀಲೆಗೆ ಮರುಳಾಗುತ್ತಿರುವುದು ಇದಕ್ಕೆ ಕಾರಣವೆ? [ಪತ್ರಿಕೆ ಸೋರಿಕೆ, ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ]

After PU quesion papers leak, now its turn of SSLC answer papers

ಸಮಾಜಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ, ಜವಾಹರಲಾಲ್ ನೆಹರೂ ಅವರು ಡಾ. ಬಿಆರ್ ಅಂಬೇಡ್ಕರ್ ಅವರನ್ನು ದೇಶದ ಪ್ರಥಮ ಕಾನೂನು ಸಚಿವರನ್ನಾಗಿ ಏಕೆ ಆಯ್ಕೆ ಮಾಡಿದರು ಎಂದು ಕೇಳಲಾಗಿತ್ತು. ಅದಕ್ಕೆ ತಲೆಹರಟೆ ವಿದ್ಯಾರ್ಥಿ ಕೊಟ್ಟಿರುವ ಉತ್ತರ ಏನೆಂದು ಕೆಳಗಿನ ಚಿತ್ರ ನೋಡಿರಿ. ನಿಜಕ್ಕೂ ಅಸಂಬದ್ಧ ಮತ್ತು ಅವಮಾನಕರವಾದ ಉತ್ತರ ನೀಡಿದ್ದಾನೆ ಆತ. [ಪ್ರಶ್ನೆ ಪತ್ರಿಕೆ ಸೋರಿಕೆ : ಇಬ್ಬರು ಪಿಎಚ್ ಡಿ ವಿದ್ಯಾರ್ಥಿಗಳ ಬಂಧನ]

After PU quesion papers leak, now its turn of SSLC answer papers

ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ವಿದ್ಯಾರ್ಥಿ ನೀಡಿದ ಉತ್ತರ ಮತ್ತೂ ತಮಾಷೆಯಾಗಿದೆ. ಈ ಸಮೀಕರಣವನ್ನು ನಕ್ಷೆಯ ಸಹಾಯದಿಂದ ಬಿಡಿಸಿ ಎಂದು ಕೇಳಲಾಗಿರುವ ಪ್ರಶ್ನೆಗೆ, "ನೆಗ್ಲೆಕ್ಟ್ ಮಾಡಬೇಡಿ ಗುರುಗಳೆ, ನಿಮ್ಮ ಮಗನೆಂದು ಭಾವಿಸಿ" ಎಂದು ಆರಂಭಿಸಿರುವ ಆತ ಕೆಳಗಿನಂತೆ ಉತ್ತರಿಸಿದ್ದಾನೆ. [ಪ್ರಶ್ನೆ ಪತ್ರಿಕೆ ಸೋರಿಕೆ : ಪಲ್ಲವಿ ಅಕುರಾತಿ ವರ್ಗಾವಣೆ]

After PU quesion papers leak, now its turn of SSLC answer papers

"ನನ್ನ ಉತ್ತರ ಪತ್ರಿಕೆಯನ್ನು ತಿದ್ದುತ್ತಿರುವ ಗುರುಗಳೆ ದಯವಿಟ್ಟು 60 ಅಂಕಗಳನ್ನು ನೀಡಿರಿ. ಏಕೆಂದರೆ ನನಗೆ ಗಣಿತವೆಂದರೆ ಅರ್ಥವಾಗುವುದಿಲ್ಲ. ಆದರೂ ಕೂಡ ನಾನು ಬೆಳಿಗ್ಗೆ 5.30ಕ್ಕೆ ಎದ್ದು ಓದುತ್ತಿದ್ದೆ. ಲೆಕ್ಕವನ್ನು ಬಿಡಿಸಲಿಕ್ಕೆ ಆಗಲಿಲ್ಲ. ಯಾವುದಕ್ಕೂ ಈ ಲೆಕ್ಕಗಳು ಉಪಯೋಗವಾಗುವುದಿಲ್ಲ ಎಂದು ಮನಸ್ಸಿನಲ್ಲಿ ಗೊಂದಲವಾಗುತ್ತಿತ್ತು. ದಯವಿಟ್ಟು ನನಗೆ 60 ಅಂಕಗಳನ್ನು ಕೊಡಿ ಎಂದು ಕೇಳಿಕೊಳ್ಳುತ್ತೇನೆ. ನೀವೇನಾದರೂ ನನಗೆ ಇಷ್ಟು ಅಂಕಗಳನ್ನು ಕೊಟ್ಟರೆ ನಿಮಗೆ ಪುಣ್ಯ ಗ್ಯಾರಂಟಿ ಸಿಗುತ್ತದೆ. ಏಕೆಂದರೆ ನಾನು ದೇವರ ಹತ್ತಿರ ಕೇಳಿಕೊಳ್ಳುತ್ತೇನೆ. ನನ್ನ ತಂದೆಯವರಿಗೆ ಬಹಳ ಆಸೆ ಇದೆ. ನನ್ನ ಮಗ ಅತ್ಯುತ್ತಮವಾಗಿ ಉತ್ತೀರ್ಣನಾಗುತ್ತಾನೆ ಎಂದು ಭಾವಿಸಿದ್ದಾರೆ. ದಯವಿಟ್ಟು ನನಗೆ 60 ಅಂಕಗಳನ್ನು ನೀಡಿರಿ."
After PU question papers leak, now its turn of SSLC answer papers

ಹಲವಾರು ವಿದ್ಯಾರ್ಥಿಗಳಿಗೆ ಪರೀಕ್ಷೆಯೆಂಬುದು ಅಗ್ನಿಪರೀಕ್ಷೆಯೆಂಬುದು ತಿಳಿದಿರುವ ಸಂಗತಿ. ಆದರೆ, ಗಂಭೀರವಾಗಿ ತೆಗೆದುಕೊಳ್ಳಬೇಕಾದ ಪರೀಕ್ಷೆಯನ್ನು ಇಷ್ಟು ಉಡಾಫೆಯಿಂದ ತೆಗೆದುಕೊಂಡರೆ ಹೇಗೆ? ದಶಕಗಳ ಹಿಂದೆ ಗಣಿತ ಪ್ರಶ್ನೆ ಪತ್ರಿಕೆಯೊಂದರಲ್ಲಿ ಒಬ್ಬ ಎರಡೇ ಪದಗಳ ಉತ್ತರ ಬರೆದಿದ್ದ. ಏನೆಂದು ಗೊತ್ತೆ? Mental Torture! ಇನ್ನೂ ಏನೇನಿರತ್ತೋ?
English summary
After back to back leak of Pre University Chemistry question papers, now its the turn of some hilarious SSLC answer papers. The papers that said to be deliberately put out from evaluators has made its way to WhatsApp and is going vital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X