ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಖಿಲ್ ಎಲ್ಲಿದ್ದೀಯಪ್ಪ ?' ಎಂದು ಟ್ವೀಟ್ ಮಾಡಿದ ಬಿಜೆಪಿ

|
Google Oneindia Kannada News

Recommended Video

ಸಾಲು ಸಾಲು ಟ್ವೀಟ್ ಮಾಡಿ ನಿಖಿಲ್ ಕಾಲೆಳೆದ ಬಿಜೆಪಿ..!

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಕ್ಷೇತ್ರ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಭಾರಿ ಅಂತರದಲ್ಲಿ ಜಯ ಸಿಕ್ಕಿದೆ. ಚೊಚ್ಚಲ ಪ್ರಯತ್ನದಲ್ಲೇ ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಗೆಲುವಿನ ಸಂಭ್ರಮಾಚರಣೆ ಬಗ್ಗೆ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗುತ್ತಿದೆ.

ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ರಾಜಾನಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿ, ನಿಜವಾದಾ ಜೋಡೆತ್ತುಗಳು ಯಾರು ಎಂಬುದು ತಿಳಿದಿದೆ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಟ್ವೀಟ್ ನಡುವೆ, ಅಧಿಕೃತ ಖಾತೆಯಿಂದ 'ನಿಖಿಲ್ ಎಲ್ಲಿದ್ದೀಯಪ್ಪಾ?' ಎಂಬ ಪ್ರಶ್ನೆ ಹಾಕಿ ಟ್ವೀಟ್ ಮಾಡಲಾಗಿದೆ.

ಲೋಕಸಭೆ ಚುನಾವಣೆ 2019ರ ಫಲಿತಾಂಶ ಇದೀಗ ಜನತೆಯ ಕಣ್ಮುಂದಿದೆ. ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಮೇ 23ರಂದು ಮತದಾರರು ನೀಡಿರುವ ತೀರ್ಪು ಬಂದಿದೆ

543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ 10 ಲಕ್ಷಕ್ಕೂ ಅಧಿಕ ಮತಗಟ್ಟೆ ಬಳಸಲಾಗಿತ್ತು. ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ, 542 ಸ್ಥಾನಗಳನ್ನು ಮಾತ್ರ ಮೇ 23ರಂದು ಫಲಿತಾಂಶ ನೀಡಲಾಗುತ್ತಿದೆ.

ಚೊಚ್ಚಲ ಪ್ರಯತ್ನದಲ್ಲೇ ಸಂಸದರಾದ ನಿಖಿಲ್

ಚೊಚ್ಚಲ ಪ್ರಯತ್ನದಲ್ಲೇ ಸಂಸದರಾದ ನಿಖಿಲ್

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಕ್ಷೇತ್ರ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಭಾರಿ ಅಂತರದಲ್ಲಿ ಜಯ ಸಿಕ್ಕಿದೆ. ಚೊಚ್ಚಲ ಪ್ರಯತ್ನದಲ್ಲೇ ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಗೆಲುವಿನ ಸಂಭ್ರಮಾಚರಣೆ ಬಗ್ಗೆ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗುತ್ತಿದೆ.

ನಿಜವಾದ ಜೋಡೆತ್ತುಗಳು

ನಿಜವಾದ ಜೋಡೆತ್ತುಗಳು ಯಾರೆಂದು ಇಂದು ದೇಶಕ್ಕೆ ತಿಳಿಯಿತು ಎಂದು ಶಾಸಕ ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ. ಮಂಡ್ಯ ಚುನಾವಣೆ ಸಂದರ್ಭದಲ್ಲಿ ಯಶ್- ದರ್ಶನ್ ಅವರು ಜೋಡೆತ್ತುಗಳಾಗಿ ನಿಂತು ಸುಮಲತಾ ಪರ ಪ್ರಚಾರ ಕೈಗೊಂಡಿದ್ದರು.

ಬಿಎಲ್ ಸಂತೋಷ್ ರಿಂದ ಟ್ವೀಟ್

2024ರಲ್ಲಿ ಅನೇಕ ಪಕ್ಷಗಳು, ಅನೇಕ ನಾಯಕರು ಇರುವುದಿಲ್ಲ, ಉತ್ತಮ ಸಮಾಜಕ್ಕಾಗಿ ಅಡಿಪಾಯ ಹಾಕಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮಂಡ್ಯ ಅಪ್ಡೇಟ್ ನೀಡಿದ ಬಿಜೆಪಿ

ಮಂಡ್ಯ ಅಪ್ಡೇಟ್ ಎಂದು ಹಾಕಿ, ನಿಖಿಲ್ ಎಲ್ಲಿದ್ದೀಯಪ್ಪ ಎಂದು ಬಿಜೆಪಿ ಕರ್ನಾಟಕದಿಂದ ಟ್ವೀಟ್.

ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಪ್ರಶ್ನೆಗೆ ಉತ್ತ

ಅಪ್ಪ, ನಾನು ಮಂಡ್ಯ ನಲ್ಲಿ ನಿಮ್ಮನ್ನು ಮತ್ತು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಸುಮಲತಾ ಸಪೋರ್ಟರ್ಸ್ ಜೊತೆ ಇದ್ದೀನಿ ಎಂದು ಕಾಮಿಡಿ ಟ್ವೀಟ್.

English summary
BJP Karnataka erupts with joy after securing 24 in lead at this time, BJP Karnataka official handle tweeted 'Nikhil Yellidiyappa?' a dialogue which is much popularly trending on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X