ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರುವರೆ ವರ್ಷ ನಾನೇ ಸಿಎಂ: ಯಡಿಯೂರಪ್ಪ ವಿಶ್ವಾಸಕ್ಕೆ ಷರಾ ಬರೆದ ಅಂಶಗಳು

|
Google Oneindia Kannada News

ಕಳೆದ ಐದಾರು ತಿಂಗಳ ಹಿಂದಿನ ಮಾತು. ಹಾಗೂ, ಹೀಗೂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡ ನಂತರ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲೂ, ಅಮಿತ್ ಶಾ ಅನುಮತಿಗಾಗಿ ಯಡಿಯೂರಪ್ಪ ಕಾಯಬೇಕಾಗಿತ್ತು.

ಅಂತೂ, ಇಂತೂ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರೂ, ಸಂಪುಟ ರಚನೆಗೆ ಅನುಮತಿ ಸಿಕ್ಕಿರಲಿಲ್ಲ. ಕಂಡು ಕೇಳರಿಯದ ಪ್ರವಾಹದ ವೇಳೆ, ತಾವೊಬ್ಬರೇ ರಾಜ್ಯ ಪ್ರವಾಸ ಮಾಡಿ, ಸಾಧ್ಯವಾಗುವುದಕ್ಕಿಂತ ಹೆಚ್ಚನ್ನೇ ಈ ಇಳಿವಯಸ್ಸಿನಲ್ಲಿ ಯಡಿಯೂರಪ್ಪ ಮಾಡಿದ್ದರು. ಬಿಎಸ್ವೈ ಪ್ರಯತ್ನಕ್ಕೆ ಶ್ಲಾಘನೆಯೂ ವ್ಯಕ್ತವಾಗಿತ್ತು.

ಅದಾದ ನಂತರ, ಬಿಎಸ್ವೈಗೆ ಕೊಂಚವೂ ಸುಳಿವು ನೀಡದಂತೇ (ಅವರೇ ಹೇಳಿದಂತೆ) ಉಪಮುಖ್ಯಮಂತ್ರಿಗಳನ್ನು ವರಿಷ್ಠರು ಆರಿಸಿದ್ದರು. ಇವೆಲ್ಲಾ ಒಂದು ಹಂತಕ್ಕೆ ಬಂದ ನಂತರ, ಬರ ಪರಿಹಾರದ ವಿಚಾರದಲ್ಲೂ ಯಡಿಯೂರಪ್ಪ ಹಲವು ಬಾರಿ ದೆಹಲಿಯ ಅಪಾಯಿಂಟ್ಮೆಂಟ್ ಬಯಸಿದ್ದರೂ ಅದು ಸಿಕ್ಕಿರಲಿಲ್ಲ.

15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಕೇಂದ್ರದಿಂದ ಬರಬೇಕಾದ ಪರಿಹಾರದ ವಿಚಾರದಲ್ಲಿ ಅಕ್ಷರಸಃ ತಾಳ್ಮೆಯ ಪರೀಕ್ಷಿಸುವ ಕೆಲಸ ನಡೆಯಿತು. ಯಡಿಯೂರಪ್ಪನವರನ್ನು ದೆಹಲಿಯ ದೊರೆಗಳು ಕಡೆಗಣಿಸುತ್ತಿದ್ದಾರೆಂದು ವಿರೋಧ ಪಕ್ಷದ ನಾಯಕರು ಆಡಿಕೊಳ್ಳಲು ಆರಂಭಿಸಿದರು. ಆದರೆ, ಒಂದು ವಾರದಿಂದ ಯಡಿಯೂರಪ್ಪ, ಆತ್ಮವಿಶ್ವಾಸದಿಂದ ಮುನ್ನುಗ್ಗಲು ವೇದಿಕೆ ಕ್ಲಿಯರ್ ಆಗುವ ಲಕ್ಷಣಗಳು ಕಾಣಿಸುತ್ತಿವೆ.

ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣಾ ಫಲಿತಾಂಶ

ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣಾ ಫಲಿತಾಂಶ

ಕೇಂದ್ರದ ಹಿಡಿತ ಒಂದು ಹಂತಕ್ಕೆ ಸಡಿಲವಾಗುವಂತೆ ಗೋಚರವಾಗುತ್ತಿರುವುದು ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣಾ ಫಲಿತಾಂಶ. ಅತಿಯಾದ ವಿಶ್ವಾಸದಲ್ಲಿದ್ದ ಬಿಜೆಪಿಗೆ ಪ್ರಮುಖವಾಗಿ ಮಹಾರಾಷ್ಟ್ರದ ಚುನಾವಣೆ ಸರಿಯಾದ ಪಾಠವನ್ನು ಕಲಿಸಿತು. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಇನ್ನೊಬ್ಬರ ಸಹಾಯವಿಲ್ಲದೇ, ಬಿಜೆಪಿಗೆ, ಗದ್ದುಗೇರಲು ಸಾಧ್ಯವಾಗುತ್ತಿಲ್ಲ.

ಸ್ಥಳೀಯ ಸಮಸ್ಯೆ ಮತ್ತು ಸ್ಥಳೀಯ ಮುಖಂಡರಿಗೆ ಆದ್ಯತೆ ನೀಡದೇ ಇದ್ದದ್ದು

ಸ್ಥಳೀಯ ಸಮಸ್ಯೆ ಮತ್ತು ಸ್ಥಳೀಯ ಮುಖಂಡರಿಗೆ ಆದ್ಯತೆ ನೀಡದೇ ಇದ್ದದ್ದು

ತೃಪ್ತಿದಾಯಕ ಫಲಿತಾಂಶ ಬರದೇ ಇದ್ದದ್ದಕ್ಕೆ ಕಾರಣ ಏನು ಎಂದು ಅವಲೋಕಿಸಿದಾಗ, ಅದರಲ್ಲಿ ಕಂಡು ಬಂದಿದ್ದು ಸ್ಥಳೀಯ ಸಮಸ್ಯೆ ಮತ್ತು ಸ್ಥಳೀಯ ಮುಖಂಡರಿಗೆ ಆದ್ಯತೆ ನೀಡದೇ ಇದ್ದದ್ದು. ಹೆಚ್ಚಿನ ಎಲ್ಲಾ ವಾಹಿನಿಗಳು/ಮಾಧ್ಯಮ ಸಂಸ್ಥೆಗಳು, ಹೆಚ್ಚಿನ ಒತ್ತು ನೀಡಿ ವಿಶ್ಲೇಷಿಸಿದ್ದು ಇದೇ ಅಂಶವನ್ನು ಹಿಡಿದುಕೊಂಡು.

ಹೊಸಕೋಟೆ ಉಪಚುನಾವಣೆ: ಶರತ್ ಬಚ್ಚೇಗೌಡ ಮಹತ್ವದ ಸ್ಪಷ್ಟನೆಹೊಸಕೋಟೆ ಉಪಚುನಾವಣೆ: ಶರತ್ ಬಚ್ಚೇಗೌಡ ಮಹತ್ವದ ಸ್ಪಷ್ಟನೆ

ಅಕ್ಷರಸಃ ಬಿಎಸ್ವೈ ತಾಳ್ಮೆಯ ಪರೀಕ್ಷಿಸುವ ಕೆಲಸ

ಅಕ್ಷರಸಃ ಬಿಎಸ್ವೈ ತಾಳ್ಮೆಯ ಪರೀಕ್ಷಿಸುವ ಕೆಲಸ

ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರೀಯತೆ ವಿಚಾರಕ್ಕೆ ಬಿಜೆಪಿ ವಿಶೇಷ ಒತ್ತು ನೀಡಿತ್ತು. ಆದರೆ, ಎನ್ಸಿಪಿ ಮತ್ತು ಜನನಾಯಕ ಜನತಾ ಪಾರ್ಟಿ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಿತು, ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿತು. ಹಾಗಾಗಿ, ಎರಡೂ ಪಕ್ಷಗಳು ನಿರೀಕ್ಷೆಗೆ ಮೀರಿದ ಫಲಿತಾಂಶವನ್ನು ತಮ್ಮದಾಗಿಸಿಕೊಂಡಿತು.

ಆತ್ಮವಿಶ್ವಾಸದಿಂದ ಮುಂದೆ ಹೆಜ್ಜೆಯಿಡಲು ಸಹಾಯಕಾರಿ

ಆತ್ಮವಿಶ್ವಾಸದಿಂದ ಮುಂದೆ ಹೆಜ್ಜೆಯಿಡಲು ಸಹಾಯಕಾರಿ

ಇದೇ ವಿಚಾರ, ಯಡಿಯೂರಪ್ಪನವರನ್ನು ಸದೃಢಗೊಳಿಸಲು, ಆತ್ಮವಿಶ್ವಾಸದಿಂದ ಮುಂದೆ ಹೆಜ್ಜೆಯಿಡಲು ಸಹಾಯಕಾರಿಯಾಗಬಹುದು. "ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಕೆಲವೊಂದು ಇತಿಮಿತಿಗಳು ಇದ್ದೇ ಇರುತ್ತದೆ" ಎನ್ನುವ ಮಾತನ್ನು ಬಿಎಸ್ವೈ ಹೇಳಿದ್ದರೂ, ಜೊತೆಗೆ, ಆತ್ಮವಿಶ್ವಾಸದ ಮಾತನ್ನೂ ಆಡಿದ್ದಾರೆ.

ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ

ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ

"ಸರಕಾರ ನಡೆಸಲು ವರಿಷ್ಠರು ಫ್ರೀಹ್ಯಾಂಡ್ ನೀಡಿದ್ದಾರೆ. ಮುಂದಿನ ಮೂರುವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡುತ್ತಾರೆ ಎನ್ನುವ ಖಚಿತ ವಿಶ್ವಾಸದಲ್ಲಿದ್ದೇನೆ" ಎನ್ನುವ ಮಾತನ್ನು ಎರಡು ದಿನಗಳ ಹಿಂದೆ ಹೇಳಿದ್ದಾರೆ. ಒಟ್ಟಾರೆಯಾಗಿ, ಎರಡು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಫಲಿತಾಂಶ, ಬಿಎಸ್ವೈಗೆ ಬಲನೀಡಿದ್ದಂತೂ ಹೌದು.

English summary
After Maharasthra And Haryana Assembly Election Result: Is Karnataka CM Yediyurappa Becomes Strong?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X