ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ನಂತರ ಬಿಜೆಪಿ ಪಾಲಿಗೆ ಐಟಿ, ಸಿಬಿಐ ಮುಗಿದ ಅಧ್ಯಾಯ: ಕಾಂಗ್ರೆಸ್

|
Google Oneindia Kannada News

Recommended Video

ಚುನಾವಣೆ ನಂತರ ಬಿಜೆಪಿ ಪಾಲಿಗೆ ಐಟಿ, ಸಿಬಿಐ ಮುಗಿದ ಅಧ್ಯಾಯ: Lok Sabha Elections 2019 | Oneindia Kannada

ಬೆಂಗಳೂರು, ಏ 23: ಒಂದು ಕಡೆ ಮೇ 23ರ ನಂತರ ಮೋದಿ ಪೆಟ್ರೋಲ್ ಬೆಲೆಯನ್ನು ಗಣನೀಯವಾಗಿ ಜಾಸ್ತಿ ಮಾಡಲಿದ್ದಾರೆ ಎನ್ನುವ ಹತಾಶೆಯ ಹೇಳಿಕೆಯನ್ನು ನೀಡುವ ಕಾಂಗ್ರೆಸ್, ಇನ್ನೊಂದು ಕಡೆ, ಲೋಕಸಭಾ ಚುನಾವಣೆಯ ನಂತರ ಬಿಜೆಪಿ ವಿರೋಧ ಪಕ್ಷವಾಗಲಿದೆ ಎನ್ನುವ ಭರವಸೆಯ ಮಾತನ್ನಾಡುತ್ತಿದೆ.

ವಿಶೇಷ ಪುಟ

ರಾಜ್ಯದ ಎರಡನೇ ಮತ್ತು ಕೊನೆಯ ಹಂತದ ಮತದಾನ ಮುಗಿದ ಬೆನ್ನಲ್ಲೇ ಕೆಪಿಸಿಸಿ, ಚುನಾವಣೆಯ ನಂತರ ಬಿಜೆಪಿಯದ್ದು ಏನೂ ನಡೆಯುವುದಿಲ್ಲ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದೆ.

ನಿನ್ನೆ ರಾತ್ರಿ ಯಶವಂತಪುರ ರೈಲ್ವೆನಿಲ್ದಾಣದಲ್ಲಿ ಮೋದಿ ಅಭಿಮಾನಿಗಳು ಮಾಡಿದ್ದೇನು?ನಿನ್ನೆ ರಾತ್ರಿ ಯಶವಂತಪುರ ರೈಲ್ವೆನಿಲ್ದಾಣದಲ್ಲಿ ಮೋದಿ ಅಭಿಮಾನಿಗಳು ಮಾಡಿದ್ದೇನು?

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆಯುವ ಸಂಕೇತವನ್ನು ನೀಡಿದ ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ, ಬಿಜೆಪಿ ವಿರುದ್ದ ಕಿಡಿಕಾರಿದ್ದರು. ಅತ್ತ, ಮುಖ್ಯಮಂತ್ರಿ ಕೂಡಾ ಉಡುಪಿ ಕಡಲ ಕಿನಾರೆಯಲ್ಲಿನ ಪ್ರಾಕೃತಿಕ ಚಿಕಿತ್ಸೆಯನ್ನು ಮೊಟಕುಗೊಳಿಸಿ, ಜಾರಕಿಹೊಳಿ ರಾಜೀನಾಮೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

After general election BJP will loose CBI,IT, ED power, KPCC tweet

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಟ್ವೀಟ್ ಮಾಡಿ, ಚುನಾವಣೆ ನಂತರ ಬಿಜೆಪಿ ಪಾಲಿಗೆ ಐಟಿ, ಸಿಬಿಐ, ಇಡಿ ಮೂಲಕ ಬ್ಲಾಕ್‌ಮೇಲ್ ಮಾಡುವುದು ಮುಗಿದ ಅಧ್ಯಾಯವಾಗಲಿದೆ ಎಂದು ಹೇಳಿದೆ.

ಜೊತೆಗೆ, ಬಿಜೆಪಿಯವರಿಗೆ ಮತ್ತೊಮ್ಮೆ ಭ್ರಮನಿರಸನವಾಗಲಿದೆ. #ಆಪರೇಷನ್_ಕಮಲ ಅವರಿಗೆ ತಿರುಗುಬಾಣವಾಗುತ್ತದೆ. ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧವಾಗಿದ್ದಾರೆ. ನಮ್ಮ ಮೈತ್ರಿ ಸರಕಾರ ಸುಭದ್ರವಾಗೇ ಇರುತ್ತದೆ ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.

ಕೊನೇಮಾತು: ಲೋಕಸಭಾ ಚುನಾವಣೆಯ ಬಿಡುವಿಲ್ಲದ ಪ್ರಚಾರದ ಒತ್ತಡದಿಂದ, ಕನಿಷ್ಠ ಪಕ್ಷ ಮೇ 23ರವರೆಗಾದರೂ, ನಮ್ಮ ರಾಜಕಾರಣಿಗಳು ಸುಮ್ಮನೇ ವಿಶ್ರಾಂತಿ ತೆಗೆದುಕೊಳ್ಳಬಹುದು ಅಂದುಕೊಂಡರೆ, ಅದಕ್ಕಿಂತ ದೊಡ್ಡ ಮುಠಾಳತನ ಇನ್ನೊಂದಿಲ್ಲ.

English summary
After Loksabha elections 2019, BJP will loose CBI,IT, ED power, since they will not come to the power again: KPCC tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X