ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬರೀಶ್ ನಿಧನ: ಕುಮಾರಸ್ವಾಮಿ ಎದುರಿಸುತ್ತಿರುವ 2ನೇ ಅತ್ಯಂತ ಕಠಿಣ ಸವಾಲು

|
Google Oneindia Kannada News

Recommended Video

Ambareesh : ಡಾ ರಾಜ್ ಸಾವಿನ ನಂತರ ಎಚ್ ದ್ ಕೆ ಎದುರಿಸಿದ ಎರಡನೇ ಸವಾಲು ಅಂಬಿ ಸಾವು | Oneindia Kannada

ಬೆಂಗಳೂರಿನ ಕಂಠೀರವ ಸ್ಟೇಡಿಯಂ, ಮಂಡ್ಯದ ವಿಶ್ವೇಶ್ವರಯ್ಯ ಮೈದಾನದಲ್ಲಿ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಬಂದ ಜನಸಾಗರ, ಅಂಬಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ. ಅಂಬಿ ನಿಧನದಿಂದ, ಕನ್ನಡ ಚಿತ್ರರಂಗ ತನ್ನ ನಾಲ್ಕು ಪ್ರಮುಖ ಕೊಂಡಿಗಳನ್ನು ಕಳಕೊಂಡಂತಾಗಿದೆ.

ಅಂಬರೀಶ್ ಅವರ ಪಾರ್ಥಿವ ಶರೀರ ವಿಶ್ವೇಶ್ವರಯ್ಯ ಮೈದಾನದಿಂದ, ಮತ್ತೆ ಬೆಂಗಳೂರಿನ ಕಂಠೀರವ ಮೈದಾನದತ್ತ ಮತ್ತು ಅಲ್ಲಿಂದ ಕಂಠೀರವ ಸ್ಟುಡಿಯೋದತ್ತ ಸಾಗುತ್ತಿದೆ. ಮೈದಾನದಿಂದ ಸ್ಟುಡಿಯೋವರೆಗಿನ ಸುಮಾರು ಹದಿಮೂರು ಕಿಲೋಮೀಟರ್ ದೂರ, ಪಾರ್ಥಿವ ಶರೀರ ಮೆರವಣಿಗೆಯ ಮೂಲಕ ಸಾಗಲಿದೆ.

In Pics : 'ದಿಗ್ಗಜ'ನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಚಿತ್ರರಂಗ

ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಎಚ್ ಡಿ ಕುಮಾರಸ್ವಾಮಿಯವರು, ತಮ್ಮ ಸಿಎಂ ಅವಧಿಯಲ್ಲಿ ಎದುರಿಸುತ್ತಿರುವ ಎರಡನೇ ಕಠಿಣವಾದ ಸವಾಲಿದು ಎಂದರೆ ತಪ್ಪಾಗಲಾರದು. ಮೊದಲನೇ ಬಾರಿಗೆ ಎಚ್ಡಿಕೆ ಮುಖ್ಯಮಂತ್ರಿಯಾಗಿದ್ದಾಗ ವರನಟ ಡಾ. ರಾಜಕುಮಾರ್ ನಿಧನರಾಗಿದ್ದರು, ಈಗ ಅಂಬರೀಶ್.

Live Updates 'ಅಮರನಾಥ'ನ ಅಂತಿಮ ಯಾನ ಆರಂಭ Live Updates 'ಅಮರನಾಥ'ನ ಅಂತಿಮ ಯಾನ ಆರಂಭ

ಶನಿವಾರ ರಾತ್ರಿ ಅಂಬರೀಶ್ ನಿಧನವಾದ ಹೊತ್ತಿನಿಂದ, ಈಗಿನವರೆಗೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಖುದ್ದು ತಾನೇ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಎಲ್ಲೂ ಶಾಂತಿ ಕದಡದಂತೆ ಕುಮಾರಸ್ವಾಮಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮಂಡ್ಯದಲ್ಲೂ ಅಚ್ಚುಕಟ್ಟಾಗಿ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಕುಮಾರಸ್ವಾಮಿ ನೇತೃತ್ವವಹಿಸಿದ್ದಾರೆ.

ಅಂಬರೀಶ್ ಪಾರ್ಥಿವ ಶರೀರದ ಅಂತಿಮಯಾತ್ರೆ ಆರಂಭವಾಗಿದೆ. ಕೆ ಜಿ ರಸ್ತೆ, ಮಲ್ಲೇಶ್ವರಂ, ಬಿಇಎಲ್ ರಸ್ತೆ, ಯಶವಂತಪುರ, ಗುರುಗುಂಟೆಪಾಳ್ಯದ ಮೂಲಕ ಯಾತ್ರೆ ಸಾಗಲಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಬರೀಶ್ ಅಭಿಮಾನಿಗಳು ಸೇರುವ ಸಾಧ್ಯತೆಯಿದೆ. ಡಾ. ರಾಜ್, ಅಂತಿಮಯಾತ್ರೆಯಲ್ಲಿ ನಡೆದ ಹಿಂಸಾಚಾರ, ಮುಂದೆ ಓದಿ..

ಡಾ. ರಾಜಕುಮಾರ್ ನಿಧನಹೊಂದಿದ್ದರು

ಡಾ. ರಾಜಕುಮಾರ್ ನಿಧನಹೊಂದಿದ್ದರು

ಏಪ್ರಿಲ್ 12, 2006ರಲ್ಲಿ ಡಾ. ರಾಜಕುಮಾರ್ ನಿಧನಹೊಂದಿದ್ದರು. ಆ ವೇಳೆ, ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅಂತಿಮಯಾತ್ರೆಯ ವೇಳೆ, ಕಂಡು ಕೇಳರಿಯದ ಹಿಂಸಾಚಾರ ನಡೆದಿತ್ತು. ಸಮಾಜಘಾತಕ ಗುಂಪೊಂದು ಕಂಡ ಕಂಡಲ್ಲಿ ಕಲ್ಲುತೂರಾಟ ನಡೆಸುತ್ತಿತ್ತು, ರಾಜ್ ಅವರ ಶವವನ್ನು ಹೊತ್ತು ತರುತ್ತಿದ್ದ ವಾಹನದ ಮೇಲೂ ಕಲ್ಲು ತೂರಾಟ ನಡೆಸಿದ್ದರು.

ಅಂದು ಅಂಬರೀಶ್ ಎಂಬ ತಾಕತ್ತು ಇತ್ತು, ಇಂದು ಯಾರಿದ್ದಾರೆ?ಅಂದು ಅಂಬರೀಶ್ ಎಂಬ ತಾಕತ್ತು ಇತ್ತು, ಇಂದು ಯಾರಿದ್ದಾರೆ?

ಮಾಧ್ಯಮಗಳ ಓಬಿ ವಾಹನದ ಮೇಲೂ ಕಲ್ಲುತೂರಾಟ

ಮಾಧ್ಯಮಗಳ ಓಬಿ ವಾಹನದ ಮೇಲೂ ಕಲ್ಲುತೂರಾಟ

ಲಕ್ಷ ಲಕ್ಷ ಸೇರಿದ್ದ ಅಭಿಮಾನಿಗಳು, ತಮ್ಮ ನಟನ ಅಂತಿಮ ದರ್ಶನ ಮಾಡಲು, ಯಾವುದೇ ಸರಿಯಾದ ಕ್ರಮವನ್ನು ಸರಕಾರ ತೆಗೆದುಕೊಂಡಿಲ್ಲ ಎಂದು ಪ್ರತಿಭಟನೆ ಆರಂಭಿಸಿತ್ತು. ನಗರದ ಕೆಲವು ಭಾಗದಲ್ಲಿ ಹಿಂಸಾಚಾರ ಆರಂಭವಾಯಿತು. ಕಂಡ ಕಂಡ ವಾಹನಗಳಿಗೆ ಬೆಂಕಿ ಹಚ್ಚಲಾರಂಭಿಸಿದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಚ್, ಟಿಯರ್ ಗ್ಯಾಸ್ ಆರಂಭಿಸಿದರು. ಮಾಧ್ಯಮಗಳ ಓಬಿ ವಾಹನದ ಮೇಲೂ ಕಲ್ಲುತೂರಲು ಆರಂಭಿಸಿದರು.

ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಕುಮಾರಸ್ವಾಮಿ ಭರವಸೆ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಕುಮಾರಸ್ವಾಮಿ ಭರವಸೆ

ಪೊಲೀಸರು ನಡೆಸಿದ ಗೋಲೀಬಾರಿಗೆ ನಾಲ್ವರು ಸಾವು

ಪೊಲೀಸರು ನಡೆಸಿದ ಗೋಲೀಬಾರಿಗೆ ನಾಲ್ವರು ಸಾವು

ರಾಜ್ ಅವರ ಅಂತಿಮಯಾತ್ರೆ ಕಂಠೀರವ ಸ್ಟುಡಿಯೋದತ್ತ ಬರುತ್ತಿದ್ದಂತೆಯೇ, ಉದ್ರಿಕ್ತರ ದಾಂಧಲೆ ಕಂಟ್ರೋಲ್ ಮಾಡಲು ಸಾಧ್ಯವಾಗದೇ ಹೋಯಿತು. ಆ ವೇಳೆ, ಪೊಲೀಸರು ನಡೆಸಿದ ಗೋಲೀಬಾರಿಗೆ ನಾಲ್ವರು ಸಾವನ್ನಪ್ಪಿದ್ದರೆ, ಒಬ್ಬರು ಪೊಲೀಸರು ಕೂಡಾ ಮೃತ ಪಟ್ಟರು. ಅಂತಿಮಯಾತ್ರೆಯ ವೇಳೆ, ಕುಮಾರಸ್ವಾಮಿ ಸರಕಾರ ತೆಗೆದುಕೊಂಡ, ಕಾನೂನು ಸುವ್ಯವಸ್ಥೆಯ ಬಗ್ಗೆ ಟೀಕೆಯೂ ವ್ಯಕ್ತವಾಗಿತ್ತು.

ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆ

ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆ

ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆ ಎಂದು ರಾಜ್ ಅಂತಿಮಯಾತ್ರೆಯ ವಿದ್ಯಮಾನವನ್ನು ಕುಮಾರಸ್ವಾಮಿ ಬಹಳಷ್ಟು ಬಾರಿ ಉಲ್ಲೇಖಿಸಿದ್ದರು. ಹಿಂದಿನ ಘಟನೆಯಲ್ಲಿ ನಡೆದ ಹಿಂಸಾಚಾರ, ಅವ್ಯವಸ್ಥೆ ಮರುಕಳಿಸದಂತೆ, ಕುಮಾರಸ್ವಾಮಿ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ದಾರೆ. ಖುದ್ದು ತಾವೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಅಂಬರೀಶ್ ಮತ್ತು ಹಿರಿಯ ರಾಜಕಾರಣಿ ಜಾಫರ್ ಷರೀಫ್ ನಿಧನ

ಅಂಬರೀಶ್ ಮತ್ತು ಹಿರಿಯ ರಾಜಕಾರಣಿ ಜಾಫರ್ ಷರೀಫ್ ನಿಧನ

ಭಾನುವಾರ (ನ 25) ಅಂಬರೀಶ್ ಮತ್ತು ಹಿರಿಯ ರಾಜಕಾರಣಿ ಜಾಫರ್ ಷರೀಫ್ ಅವರ ನಿಧನದ ಹಿನ್ನಲೆಯಲ್ಲಿ, ಪೊಲೀಸರು ಅತ್ಯಂತ ಶಿಸ್ತುಬದ್ದವಾಗಿ, ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದರು. ಒಟ್ಟಿನಲ್ಲಿ, ಅಂಬರೀಶ್ ನಿಧನ ಮತ್ತು ಅವರ ಅಂತಿಮಯಾತ್ರೆ ಕುಮಾರಸ್ವಾಮಿವರು, ಮುಖ್ಯಮಂತ್ರಿಯಾಗಿ ತಾವು ಎದುರಿಸುತ್ತಿರುವ ಎರಡನೇ ಕಠಿಣ ಸವಾಲು ಎಂದರೆ ತಪ್ಪಾಗಲಾರದು.

English summary
After death of veteran actor Dr.Rajkumar, now Ambareesh death. Chief Minister Kumaraswamy facing secocnd tough moment. Ambareesh funeral processing may start at around 1PM (Nov 26) from Kanteerva Stadium to Kanteerva Studio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X