• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

15ದಿನದ ನಂತರ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸ್ಥಿತ್ಯಂತರ: ರಾಜಗುರುಗಳ ಭವಿಷ್ಯ

|
   ನರೇಂದ್ರ ಮೋದಿ, ಬಿ ಎಸ್ ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ಭವಿಷ್ಯ | Oneindia Kannada

   ದೇವರು, ದಿಂಡ್ರು, ಭವಿಷ್ಯ, ಜಾತಕಗಳನ್ನು ತುಸು ಹೆಚ್ಚೇ ನಂಬುವ ದೇವೇಗೌಡರ ಕುಟುಂಬಕ್ಕೆ ರಾಜಗುರುಗಳು ನುಡಿದ ಭವಿಷ್ಯ ಚಿಂತೆಯ ವಿಷಯವಾಗಿರುವುದು ಒಂದೆಡೆಯಾದರೆ, ಆಪರೇಶನ್ ಕಮಲದ ಸುದ್ದಿ ಮತ್ತೆ ಸದ್ದು ಮಾಡುತ್ತಿರುವುದು ಇನ್ನೊಂದೆಡೆ.

   ಇನ್ನೇನು ಹದಿನೈದು ದಿನಗಳಲ್ಲಿ (ಡಿಸೆಂಬರ್ 19ರ ನಂತರ) ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಲಿದೆ ಎಂದು ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಭವಿಷ್ಯವನ್ನು ನುಡಿದಿದ್ದಾರೆ. ಆದರೆ, ಇವೆಲ್ಲವೂ, ಕುಮಾರಸ್ವಾಮಿಯವರ ಕಾರ್ಯವೈಖರಿಯ ಮೇಲೆ ನಿಂತಿದೆ ಎಂದು ಗುರೂಜಿ ಹೇಳುವುದನ್ನು ಮರೆಯಲಿಲ್ಲ.

   ಕಾಂಗ್ರೆಸ್-ಜೆಡಿಎಸ್ ಸರಕಾರ ಬೀಳುವ ವಿಶ್ವಾಸ ಬಿಜೆಪಿಯಲ್ಲಿ ಕಾಣಲು ಕಾರಣ ಏನು?

   ರಾಜ್ಯ ಸರಕಾರ, ಕೇಂದ್ರ ಸರಕಾರ, ಪ್ರಧಾನಿ ಮೋದಿ, ಸಿಎಂ ಕುಮಾರಸ್ವಾಮಿ, ಬಿಜೆಪಿ ನಾಯಕ ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಅವರ ಬಗ್ಗೆಯೂ ರಾಜಗುರುಗಳು ಮುಂದೇನಾಗುತ್ತದೆ ಎಂದು ಹೇಳಿದ್ದಾರೆ.

   ಗುರು ಬದಲಾವಣೆಯಾಗಿರುವುದೇ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣ ಎಂದಿರುವ ರಾಜಗುರುಗಳು, ಗುರು ಐದು, ಏಳು ಮತ್ತು ಒಂಬತ್ತನೇ ಮನೆಯಲ್ಲಿ ಒಳ್ಳೆಯದನ್ನು ಮಾಡಿದರೆ. ನಾಲ್ಕು, ಆರು, ಎಂಟು, ಹನ್ನೆರಡು ಗುರುವಿನ ಪಾಲಿಗೆ ಒಳ್ಳೆಯ ಮನೆಗಳಲ್ಲ ಎಂದು ಗುರುಗಳು ಹೇಳಿದ್ದಾರೆ.

   ಮೋದಿ, ರಾಹುಲ್, ಎಚ್ಡಿಕೆ, ಗ್ರಹಣ ಭವಿಷ್ಯ: ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ ಸಂದರ್ಶನ

   ಯಾವ ಜಾಗ ಒಳ್ಳೆಯದಲ್ಲವೋ ಅಲ್ಲಿ ಮುಳ್ಳೂ ಚುಚ್ಚುತ್ತೇ, ಕಲ್ಲಿನ ಏಟೂ ಬೀಳುತ್ತೆ, ನಡೆಯುವವರು ಎಡವುತ್ತಾರೆ, ಹಾಗಾಗಿ ಎಚ್ಚರಿಕೆಯಿಂದ ನಡೆಯಬೇಕೆಂದು, ಪರೋಕ್ಷವಾಗಿ ರಾಜ್ಯ ಮುಖಂಡರುಗಳನ್ನು ಉಲ್ಲೇಖಿಸಿ ರಾಜಗುರುಗಳು ಹೇಳಿದ್ದಾರೆ. ಗುರಗಳ ಭವಿಷ್ಯದ ಸವಿಸ್ತಾರ ಪಾಠವನ್ನು, ಕೆಳಗೆ ಮುಂದುವರಿಸಲಾಗಿದೆ..

   ಕುಮಾರಸ್ವಾಮಿಯವರಿಗೆ ಉತ್ತಮ ಚರಿತ್ರೆಯಿದೆ

   ಕುಮಾರಸ್ವಾಮಿಯವರಿಗೆ ಉತ್ತಮ ಚರಿತ್ರೆಯಿದೆ

   ಕುಮಾರಸ್ವಾಮಿಯವರು ನನ್ನ ಮಗನ ಸಮಾನ, ಅವರು ಯಾರು ಏನೇ ಹೇಳಲಿ, ಅದಕ್ಕೆ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಅವರೊಬ್ಬ ದೊಡ್ಡ ನಾಯಕರು, ಅವರ ಕೆಲಸವನ್ನು ಅವರು ಮಾಡಿಕೊಂಡು ಹೋಗುತ್ತಿರಬೇಕು. ಇದರಿಂದ ಅರ್ಧ ಅಲ್ಲೇ ಅವರು ಬಚಾವ್ ಆಗಿಬಿಡುತ್ತಾರೆ. ಕುಮಾರಸ್ವಾಮಿಯವರಿಗೆ ಉತ್ತಮ ಚರಿತ್ರೆಯಿದೆ, ತೂಕವಾಗಿ ಮಾತನಾಡಿದರೆ, ಸಮಸ್ಯೆ ಅರ್ಧದಲ್ಲೇ ಪರಿಹಾರವಾಗುತ್ತದೆ ಎಂದು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ರಾಜಗುರುಗಳು ಹೇಳಿದ್ದಾರೆ.

   ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಐಕ್ಯಮತ್ಯ ಸಾಧನೆಯಾಗಬೇಕು

   ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಐಕ್ಯಮತ್ಯ ಸಾಧನೆಯಾಗಬೇಕು

   ಮಂತ್ರಿಮಂಡಲದಲ್ಲಿ ಶಿಸ್ತು ಬರಬೇಕು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಐಕ್ಯಮತ್ಯ ಸಾಧನೆಯಾಗಬೇಕು. ಕೋಲನ್ನು ನಾವೇ ವಿರೋಧಿಗಳಿಗೆ ಕೊಡಬಾರದು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಅವರ ಸ್ಥಾನಕ್ಕೆ ತೊಂದರೆ ಬರುವ ಸಾಧ್ಯತೆಯಿದೆ. ಮಾರ್ಚ್ 27, 2019ರ ವರೆಗೆ ಸಮ್ಮಿಶ್ರ ಸರಕಾರವನ್ನು ಹೇಗೋ ಹಾಗೇ ನಡೆಸಿಕೊಂಡು ಹೋದರೆ, ನಂತರ ಇವರ ಕಾರ್ಯಸಾಧನೆ ಸುಲಭವಾಗುತ್ತದೆ - ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ.

   ಜ್ಯೋತಿಷ್ಯ: ಕುಮಾರಸ್ವಾಮಿ ಪಾಲಿನ ಯೋಗದ ದಿನಗಳು ಮುಗಿದು ಹೋದವೆ?

   ಮಾರ್ಚ್ ಅಂತ್ಯದವರೆಗೆ ಸರಕಾರ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ

   ಮಾರ್ಚ್ ಅಂತ್ಯದವರೆಗೆ ಸರಕಾರ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ

   ಮಾರ್ಚ್ ಅಂತ್ಯದವರೆಗೆ ಸರಕಾರ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ, ಕುಮಾರಸ್ವಾಮಿಯವರು ದತ್ತಾತ್ರೇಯ ದೇವರನ್ನು ನಂಬಬೇಕು. ಕುಮಾರಸ್ವಾಮಿಯವರು ತಮ್ಮ ಆರೋಗ್ಯದ ಕಡೆಗೆ ಗಮನಕೊಡಲಿ. ಸನ್ನತ್ತಿಗೆ ಹೋಗಿ, ಚಂದ್ರಲಾ ಪರಮೇಶ್ವರಿಯ (ಯಾದಗಿರಿ ಜಿಲ್ಲೆ) ದರ್ಶನ ಮಾಡಿ, ಪ್ರಾರ್ಥನೆ ಮಾಡಿಕೊಂಡು ಬರಲಿ ಎಂದು ಗುರುಗಳು, ಕುಮಾರಸ್ವಾಮಿಯವರಿಗೆ ಸಲಹೆಯನ್ನು ನೀಡಿದ್ದಾರೆ.

   ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೊನೆಗೊಳಿಸಲಿದೆಯೇ ಜುಲೈ ಚಂದ್ರ ಗ್ರಹಣ?

   ಯಡಿಯೂರಪ್ಪನವರಿಗೆ ಕತ್ತಲು ಕಳೆದು ಬೆಳಕು ಹರಿಯುವ ಸಮಯ

   ಯಡಿಯೂರಪ್ಪನವರಿಗೆ ಕತ್ತಲು ಕಳೆದು ಬೆಳಕು ಹರಿಯುವ ಸಮಯ

   ಗುರು ಬದಲಾವಣೆಯಾಗಿರುವುದರಿಂದ, ಯಡಿಯೂರಪ್ಪನವರಿಗೆ ಯಾವ ರೀತಿಯ ತೊಂದರೆಯೂ ಆಗುವುದಿಲ್ಲ, ಬದಲಿಗೆ ಅವರ ಮುಂದಿನ ಜೀವನ ಚೆನ್ನಾಗಿಯೇ ನಡೆಯುತ್ತದೆ. ಯಡಿಯೂರಪ್ಪನವರಿಗೆ ಕತ್ತಲು ಕಳೆದು ಬೆಳಕು ಹರಿಯುವ ಸಮಯ. ಸಾಧಕರು ಮಾತನಾಡಬಾರದು, ಯಡಿಯೂರಪ್ಪನವರದ್ದೂ ಇದೇ ಸಮಸ್ಯೆ.

   ಡಿ ಕೆ ಶಿವಕುಮಾರ್ ಟ್ರಬಲ್ ಶೂಟರ್ ಅಲ್ಲ, ಅವರು ಟ್ರಬಲ್ ಸೇವರ್

   ಡಿ ಕೆ ಶಿವಕುಮಾರ್ ಟ್ರಬಲ್ ಶೂಟರ್ ಅಲ್ಲ, ಅವರು ಟ್ರಬಲ್ ಸೇವರ್

   ಡಿ ಕೆ ಶಿವಕುಮಾರ್ ಒಬ್ಬ ಟ್ರಬಲ್ ಶೂಟರ್ .. ಇನ್ನೂ ಸನ್ಮಾರ್ಗದಲ್ಲಿ ನಡೆದು, ಬಾಡಿ ಲಾಂಗ್ವೇಜ್ ಬದಲಾಯಿಸಿಕೊಂಡರೆ, ಮುಂದಿನ ಮುಖ್ಯಮಂತ್ರಿಯಾಗುವುದರಲ್ಲಿ ಸಂಶಯನೇ ಇಲ್ಲ. ಚಿಕ್ಕ ವಯಸ್ಸಿನಲ್ಲಿ ಅವರನ್ನು ತಿದ್ದಿದವನು ನಾನೇ.. ದತ್ತಾತ್ರೇಯನಿಗೆ ಡಿಕೆಶಿ ಶರಣಾದರೆ ಎಲ್ಲವೂ ಮಂಗಳವಾಗುತ್ತದೆ.

   ಮೋದಿಯವರಿಗೂ ಕೆಟ್ಟಕಾಲ ಬರುವ ಸಂಭವ

   ಮೋದಿಯವರಿಗೂ ಕೆಟ್ಟಕಾಲ ಬರುವ ಸಂಭವ

   ಡಿಸೆಂಬರ್ 19ರ ನಂತರ ಪ್ರಧಾನಿ ಮೋದಿಯವರಿಗೂ ಕೆಟ್ಟಕಾಲ ಬರುವ ಸಂಭವವಿದೆ. ರಾಷ್ಟ್ರ ರಾಜಕಾರಣದಲ್ಲೂ ಬಹಳ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   After December 19, major political changes may happen in State as well as in Central, a Prediction by Rajaguru Belluru Shankaranarayana Dwarakanatha Guruji.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more