ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ ಪಾಸ್ ದರ ಏರಿಕೆ ನಂತರ ಕೆಎಸ್ಸಾರ್ಟಿಸಿ ಸರದಿ

|
Google Oneindia Kannada News

ಬೆಂಗಳೂರು, ಜೂನ್ 14: ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕಹಿ ಸುದ್ದಿ ಸಿಕ್ಕಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆ ಮಾಡಿ ಆದೇಶ ಹೊರಬಂದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆ.ಎಸ್.ಆರ್.ಟಿ.ಸಿ.) ಕೂಡ ಬಸ್ ಪಾಸ್ ದರವನ್ನು ಏರಿಕೆ ಮಾಡುವ ಮುನ್ಸೂಚನೆ ಸಿಕ್ಕಿದೆ.

ಹೊಸ ದರದ ಅನ್ವಯ ಬಸ್ ಪಾಸ್ ವಿತರಿಸಲಾಗುವುದು ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆ.ಎಸ್.ಆರ್.ಟಿ.ಸಿ.) ಬಸ್ ಪಾಸ್ ದರ ಕೂಡಾ 100 ರೂ.ನಿಂದ 200 ರೂ. ನಷ್ಟು ಏರಿಕೆ ಮಾಡಲಾಗುತ್ತದೆ. ಕಾಲೇಜು ವಿದ್ಯಾರ್ಥಿಗಳಿಗೆ 150 ರೂ., ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಬಸ್ ಪಾಸ್ ದರದಲ್ಲಿ 200 ರೂ. ಏರಿಕೆಯಾಗಲಿದೆ. ಪ್ರೌಢಶಾಲೆ ವಿದ್ಯಾರ್ಥಿಗಳ ಬಸ್ ಪಾಸ್ ದರದಲ್ಲಿ 100 ರೂ. ಏರಿಕೆ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ಹೇಳಿದರು.

ವಿದ್ಯಾರ್ಥಿಗಳ ಪಾಸ್ ದರ ಏರಿಸಿದ ಬಿಎಂಟಿಸಿ ವಿದ್ಯಾರ್ಥಿಗಳ ಪಾಸ್ ದರ ಏರಿಸಿದ ಬಿಎಂಟಿಸಿ

ಕಳೆದ 8 ವರ್ಷಗಳಿಂದ ಬಸ್ ಪಾಸ್ ದರ ಏರಿಕೆ ಮಾಡಿಲ್ಲ. ಸಬ್ಸಿಡಿ ದರದ ಬಸ್ ಪಾಸ್ ಗಳ ಮೊತ್ತದಲ್ಲಿ ಸರ್ಕಾರ 50%, ಆಯಾ ಸಾರಿಗೆ ನಿಗಮ 25%, ವಿದ್ಯಾರ್ಥಿ ವೃಂದ 25% ಭಾರ ಹೊರಬೇಕಾಗಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆಗೆ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.

After BMTC, now KSRTC to increase fare of student bus pass

ಈ ವರ್ಷದಲ್ಲಿ 3.5 ಲಕ್ಷದಿಂದ 4 ಲಕ್ಷದ ತನಕ ಸ್ಮಾರ್ಟ್ ಕಾರ್ಡ್ ನೀಡಲು ಬಿಎಂಟಿಸಿ ಮುಂದಾಗೆ. ಕೆಎಸ್ಸಾರ್ಟಿಸಿಯಿಂದ 6.25 ಲಕ್ಷದಿಂದ 6.5 ಲಕ್ಷ ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಮಾಡಲು ಸಾರಿಗೆ ಸಂಸ್ಥೆ ಮುಂದಾಗಿದೆ.

English summary
The State-run road transport corporations have hiked the fare of student bus passes. After BMTC, now KSRTC to increase fare of student bus pass.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X