ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ಆಸ್ತಿ ಹೆಚ್ಚಳ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ 2ನೇ ಸ್ಥಾನ!

By Nayana
|
Google Oneindia Kannada News

ಬೆಂಗಳೂರು, ಮೇ 09: ಕಳೆದ 2013ರಲ್ಲಿ ಜಯ ಗಳಿಸಿ ಈ ಸಲವೂ ಮರು ಆಯ್ಕೆ ಬಯಸಿರುವ ಸುಮಾರು 184 ಶಾಸಕರ ಆಸ್ತಿ ಇದೀಗ ಸರಾಸರಿ ಶೇ.64ರಷ್ಟು ಹೆಚ್ಚಳವಾಗಿದ್ದು, ಡಿ.ಕೆ.ಶಿವಕುಮಾರ್, ಎಂಟಿಬಿ ನಾಗರಾಜ್, ಶಾಮನೂರು, ಪ್ರಿಯಾ ಕೃಷ್ಣ ಹಾಗೂ ಆರ್.ವಿ.ದೇಶಪಾಂಡೆ ಟಾಪ್ ಫೈವ್ ಪಟ್ಟಿಯಲ್ಲಿದ್ದಾರೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರೆಫಾರ್ಮ್ಸ್ (ಎಡಿಆರ್) ಹಾಗೂ ಕರ್ನಾಟಕ ಎಲೆಕ್ಷನ್ ವಾಚ್ ನಡೆಸಿದ ಜಂಟಿ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ. ಈ ಹಿಂದೆ 2013ರಲ್ಲಿ ಸರಾಸರಿ 26.92 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದ ಶಾಸಕರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ವೇಳೆ ಸಲ್ಲಿಸಿರುವ ಆಸ್ತಿ ಘೋಷಣೆಯಲ್ಲಿ ಸರಾಸರಿ 44.24 ಕೋಟಿ ರೂ.ಗಳ ಒಡೆಯರಾಗಿದ್ದು, ಶಾಸಕರ ಆಸ್ತಿ ಹೆಚ್ಚಳದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ.

ಡಿಕೆಶಿ ಆಸ್ತಿ ಹೆಚ್ಚಾಗಿದ್ದು ಹೇಗೆ? ಅವರೇ ನೀಡಿದ್ದಾರೆ ಉತ್ತರಡಿಕೆಶಿ ಆಸ್ತಿ ಹೆಚ್ಚಾಗಿದ್ದು ಹೇಗೆ? ಅವರೇ ನೀಡಿದ್ದಾರೆ ಉತ್ತರ

ಮರು ಆಯ್ಕೆ ಬಯಸಿದ ಶಾಸಕರ ಆಸ್ತಿ ಹೆಚ್ಚಳದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಒಟ್ಟು 108 ಶಾಸಕರು ಮರು ಆಯ್ಕೆ ಬಯಸಿದ್ದು, 2013ರಲ್ಲಿ ಇದ್ದ ಸರಾಸರಿ ಆಸ್ತಿ 37 ಕೋಟಿ ರೂ.ಗಳಿಂದ ಈಗ ಸರಾಸರಿ 62 ಕೋಟಿ ರೂ.ಗಳಿಗೆ ಮೌಲ್ಯ ಹೆಚ್ಚಿದೆ. ಅಂದರೆ ಪ್ರತಿಯೊಬ್ಬ ಶಾಸಕರ ಸರಾಸರಿ ಆಸ್ತಿ 24 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಇದು ಶೇ.66ರಷ್ಟು ವೃದ್ಧಿಯಾಗಿದೆ.

ADR analysis reveals 64 percent property increase among recontesting MLAs

ಇನ್ನು ಬಿಜೆಪಿಯ 49 ಮಂದಿ ಮರು ಆಯ್ಕೆ ಬಯಸಿದ್ದು, ಇವರ ಆಸ್ತಿ ಸರಾಸರಿ 10 ಕೋಟಿ ರೂ.ಗಳಿಂದ 17 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅಂದರೆ ಸರಾಸರಿ 6.97 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದ್ದು, ಶೇ.65ರಷ್ಟು ಬೆಳವಣಿಗೆ ಹೊಂದಿದ್ದಾರೆ. ಜೆಡಿಎಸ್‌ನ 24 ಮಂದಿ ಮರು ಆಯ್ಕೆ ಬಯಸಿದ್ದು, ಅವರ ಆಸ್ತಿ 14 ಕೋಟಿ ರೂ.ಗಳಿಂದ 21 ಕೋಟಿ ರೂ.ಗಳಿಗೆ ತಲುಪಿದೆ. 7 ಕೋಟಿ ರೂ.ಗಳ ಹೆಚ್ಚು ಆಸ್ತಿ ಹೊಂದಿ, ಶೇ.49ರಷ್ಟು ಬೆಳವಣಿಗೆ ದಾಖಲಿಸಿದ್ದಾರೆ.

ಕಾಂಗ್ರೆಸ್ ಕೋಟ್ಯಧಿಪತಿ ಅಭ್ಯರ್ಥಿಗಳು, ಪ್ರಿಯಾಕೃಷ್ಣ ನಂ. 1ಕಾಂಗ್ರೆಸ್ ಕೋಟ್ಯಧಿಪತಿ ಅಭ್ಯರ್ಥಿಗಳು, ಪ್ರಿಯಾಕೃಷ್ಣ ನಂ. 1

ಇಬ್ಬರು ಪಕ್ಷೇತರರು ಕೂಡ ಮರು ಆಯ್ಕೆ ಬಯಸಿದ್ದು, ಅವರ ಸರಾಸರಿ ಆಸ್ತಿ 1 ಕೋಟಿ ರೂ.ಗಳಿಂದ 1.19 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. 18 ಲಕ್ಷ ರೂ. ಆಸ್ತಿ ಹೆಚ್ಚಳದ ಮೂಲಕ ಶೇ.7ರಷ್ಟು ಅಭಿವೃದ್ಧಿ ಸಾಧನೆ ಮಾಡಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕರ ಆಸ್ತಿ 66 ಲಕ್ಷ ರೂ.ಗಳಿಂದ 77 ಲಕ್ಷ ರೂ.ಗಳಿಗೆ ಹೆಚ್ಚಳವಾಗಿದೆ.

ಒಟ್ಟು 184 ಶಾಸಕರ ಸರಾಸರಿ ಆಸ್ತಿ 26 ಕೋಟಿ ರೂ.ಗಳಿಂದ 44 ಕೋಟಿ ರೂ.ಗಳಿಗೆ ಹೆಚ್ಚಳವಾಗಿದ್ದು, 17 ಕೋಟಿ ರೂ.ಗಳ ಹೆಚ್ಚುವರಿ ಆಸ್ತಿ ಮಾಡಿದ್ದಾರೆ. ಆ ಮೂಲಕ ಶೇ.64ರಷ್ಟು ಹೊಸ ಆಸ್ತಿ ಗಳಿಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಆಸ್ತಿ 251 ಕೋಟಿ ರೂ.ಗಳಿಂದ 840 ಕೋಟಿ ರೂ.ಗಳಿಗೆ ಹೆಚ್ಚಳವಾಗಿದ್ದು, ಸುಮಾರು 588 ಕೋಟಿ ರೂ.ಗಳಷ್ಟು ಆಸ್ತಿ ವೃದ್ಧಿಯಾಗಿದೆ. ಅಂದರೆ ಶೇ.234 ರಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ.

ಕರ್ನಾಟಕ ಚುನಾವಣಾ ಕಣದಲ್ಲಿರುವ ಬಿಜೆಪಿಯ ಕುಬೇರರುಕರ್ನಾಟಕ ಚುನಾವಣಾ ಕಣದಲ್ಲಿರುವ ಬಿಜೆಪಿಯ ಕುಬೇರರು

ಹೊಸಕೇಟೆ ಶಾಸಕ ಎನ್.ನಾಗರಾಜು (ಎಂಟಿಬಿ) ಅವರ ಆಸ್ತಿ 470 ಕೋಟಿ ರೂ.ಗಳಿಂದ 1,015 ಕೋಟಿ ರೂ.ಗಳಿಗೆ ಹೆಚ್ಚಿದ್ದು, ಈ ಅವಧಿಯಲ್ಲಿ 545 ಕೋಟಿ ರೂ.ಗಳ ಆಸ್ತಿ ವೃದ್ಧಿಯಾಗಿದೆ. ಅಂದರೆ ಶೇ.157ರಷ್ಟು ಆಸ್ತಿ ಮೌಲ್ಯ ವೃದ್ಧಿಸಿದೆ.

ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಸ್ತಿ 67 ಕೋಟಿ ರೂ.ಗಳಿಂದ 183 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅಂದರೆ 115 ಕೋಟಿ ರೂ.ಗಳ ಶೇ.170ರಷ್ಟು ಆಸ್ತಿ ವೃದ್ಧಿಯನ್ನು ಶಾಮನೂರು ಆದಾಯ ಘೋಷಣೆಯಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಗೋವಿಂದರಾಜನಗರದ ಶಾಸಕ ಪ್ರಿಯಾಕೃಷ್ಣ ಅವರ ಆಸ್ತಿ 910 ಕೋಟಿ ರೂ.ಗಳಿಂದ 1,020 ಕೋಟಿ ರೂ.ಗಳನ್ನು ತಲುಪಿದ್ದು, 109 ಕೋಟಿ ರೂ.ಗಳ ಹೆಚ್ಚುವರಿ ಆಸ್ತಿ ಸಂಪಾದಿಸಿದ್ದಾರೆ. ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರ ಆಸ್ತಿ 113 ಕೋಟಿ ರೂ.ಗಳಿಂದ 215 ಕೋಟಿ ರೂ.ಗಳಿಗೆ ಏರಿದೆ. ಐದು ವರ್ಷಗಳ ಅವಧಿಯಲ್ಲಿ 101 ಕೋಟಿ ರೂ.ಗಳ ಆಸ್ತಿ ವೃದ್ಧಿಸಿದ್ದು, ಶೇ.89ರಷ್ಟು ಬೆಳವಣಿಗೆ ಸಾಧಿಸಿದ್ದಾರೆ.

English summary
Association for Democratic Reforms has released its analysis report that revealed around 64 percent increase in property of 184 recontesting MLAs comparing the 2013 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X